ಸದಸ್ಯ:Swaaaaathi/sandbox

ವಿಕಿಪೀಡಿಯ ಇಂದ
Jump to navigation Jump to search

ಬ್ಯಾಂಕ್ ಮತ್ತು ಪೇಮೆಂಟ್ ಬ್ಯಾಂಕ್ ಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ಪೇಮೆಂಟ್ ಬ್ಯಾಂಕ್ ಕೇವಲ ಹಣಕಾಸು ವ್ಯವಹಾರವನ್ನು ಮಾತ್ರ ಮಾಡುತ್ತದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಸತ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹೊಸ ನೀತಿಯೊಂದಕ್ಕೆ ಒಪ್ಪಿಗೆ ನೀಡಿದೆ. ಅಂಚೆ ಇಲಾಖೆ, ರಿಲಯನ್ಸ್‌ ಇಂಡಸ್ಟ್ರೀಸ್‌, ಆದಿತ್ಯ ಬಿರ್ಲಾ ವೊಡಾಫೋನ್‌ ಮತ್ತು ಏರ್‌ ಟೆಲ್‌ ಸೇರಿದಂತೆ ಒಟ್ಟು 11 ಸಂಸ್ಥೆಗಳಿಗೆ ಪೇಮೆಂಟ್ ಬ್ಯಾಂಕ್ ತೆರೆಯಲು ಅವಕಾಶ ದೊರೆತಿದೆ.[ಚಿನ್ನ ಉಳಿತಾಯ ಖಾತೆ ತೆರೆಯುವುದು ಹೇಗೆ?] ಪೇಮೆಂಟ್ ಬ್ಯಾಂಕ್ ಮತ್ತು ವಾಣಿಜ್ಯ ಬ್ಯಾಂಕಿಂಗ್ ವ್ಯವಸ್ಥೆ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಾದದ್ದು ಅತ್ಯಗತ್ಯ.

ಪೇಮೇಂಟ್ ಬ್ಯಾಂಕ್ ಗಳು ಸಾಲ ನೀಡಲ್ಲ ಸಾಲ ನೀಡಿಕೆಯೇ ವಾಣಿಜ್ಯ ಬ್ಯಾಂಕ್ ಗಳ ಪ್ರಮುಖ ಕೆಲಸ. ಆದರೆ ಪೇಮೆಂಟ್ ಬ್ಯಾಂಕ್ ಗಳು ಯಾವ ಬಗೆಯ ಸಾಲ ನೀಡಿಕೆ ಕೆಲಸವನ್ನು ಮಾಡುವುದಿಲ್ಲ.

  • ಒಂದು ಲಕ್ಷ ರು. ಡಿಪಾಸಿಟ್ ಪೇಮೆಂಟ್ ಬ್ಯಾಂಕ್ ಗಳಿಗೆ ಕಟ್ಟು ನಿಟ್ಟಿನ ನಿರ್ದೇಶನಗಳಿರುತ್ತದ. ಅಂದರೆ ಒಂದು ಲಕ್ಷ ರು. ಗೂ ಅಧಿಕ ಡಿಪಾಸಿಟ್ ಸಂಗ್ರಹ ಸಹ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಸೆಮಿ-ಅರ್ಬನ್ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪೇಮೆಂಟ್ ಬ್ಯಾಂಕ್ ಗಳು ಕೆಲಸ ಮಾಡುತ್ತವೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
  • ಕ್ರೆಡಿಟ್ ಕಾರ್ಡ್ ನೀಡಿಕೆ ಸಾಧ್ಯವಿಲ್ಲ ಪೇಮೆಂಟ್ ಬ್ಯಾಂಕ್ ಗಳಿಗೆ ಕ್ರೆಡಿಟ್ ಕಾರ್ಡ್ ನೀಡುವ ಅಧಿಕಾರ ಇರುವುದಿಲ್ಲ. ಇವು ಕೆಲವು ನಿಯಮಗಳಿಗೆ ಬದ್ಧವಾಗಿ ಡೆಬಿಟ್ ಕಾರ್ಡ್ ನೀಡಬಹುದು.
  • ವಾಣಿಜ್ಯ ವ್ಯವಹಾರ ಪೇಮೆಂಟ್ ಬ್ಯಾಂಕ್ ಗಳು ಉಳಿದ ವಾಣಿಜ್ಯ ಬ್ಯಾಂಕ್ ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ವ್ಯವಹಾರದ ಸೇತಯವೆಯಾಗಿಯೂ ಕಾರ್ಯ ನಿರ್ವಹಿಸಬಹುದು.
  • ನೂರು ಕೋಟಿ ರು. ಕನಿಷ್ಠ ಬಂಡವಾಳ ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಕನಿಷ್ಠ ನೂರು ಕೋಟಿ. ರು. ಬಂಡವಾಳ ಹೂಡಿಕೆ ಮಾಡಬೇಕು. ಬಂಡವಾಳದ ಒಟ್ಟು ಮೊತ್ತದಲ್ಲಿ ಶೇ. 40 ಕ್ಕಿಂತ ಕಡಿಮೆ ಪ್ರಮಾಣದ ಹಣವನ್ನು ಕಂಪನಿ ಹಾಕುವಂತಿಲ್ಲ. ವಾಣಿಜ್ಯ ಬ್ಯಾಂಕ್ ಗಳಿಗೆ ಹೋಲಿಸಿದರೆ ಇವುಗಳ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆ ಎಂದೇ ಹೇಳಬಹುದು.
  • ಬ್ಯಾಂಕ್ ಗಳಲ್ಲಿ ವಿದೇಶಿ ಹೂಡಿಕೆ ಈ ಬ್ಯಾಂಕ್ ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಸಾಧ್ಯವಾದರೆ ಅದು ವಿದೇಶಿ ನೇರ ಬಂಡವಾಳ(ಎಫ್ ಡಿಐ) ನೀತಿಯನ್ನೇ ಅನುಸರಿಸಬೇಕಾಗುತ್ತದೆ.
  • ಗ್ರಾಹಕರ ಸೇವಾ ಕೇಂದ್ರ ಗ್ರಾಹಕರಿಗೆ ತಲೆದೋರುವ ಸಮಸ್ಯೆಗಳನ್ನು ಅರಿಯಲು, ಅವರ ದೂರುಗಳಿಗೆ ಸ್ಪಂದಿಸಲು ಗ್ರಾಹಕರ ಸೇವಾ ಕೇಂದ್ರಗಳನ್ನು ಪೇಮೆಂಟ್ ಬ್ಯಾಂಕ್ ಗಳು ತೆರೆಯಬೇಕಾಗುತ್ತದೆ.
  • ಹಣಕಾಸಿನ ಹಂಚಿಕೆ ಪೇಮೆಂಟ್ ಬ್ಯಾಂಕ್ ಗಳು ಹಣಕಾಸಿನ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಮೆ, ಮ್ಯೂಚುವಲ್ ಫಂಡ್ ಯೋಜನೆಗಳನ್ನು ಜನರಿಗೆ ನೀಡುವ ಅಧಿಕಾರ ಹೊಂದಿರುತ್ತವೆ.