ಸದಸ್ಯ:Sushma90/sandbox
ಗೋಚರ
ನನ್ನ ಹೆಸರು ಸುಷ್ಮಾ ಬಿ. ಕುಲಾಲ್. ಮಂಗಳೂರು ಸಮೀಪದ ಕಿನ್ನಿಗೋಳಿ ಎಂಬಲ್ಲಿ ವಾಸ್ತವ್ಯ ಇರುವ ನಾನು ಬಾಲಚಂದ್ರ ಕುಲಾಲ್ ಮತ್ತು ಜಯಶ್ರೀ ದಂಪತಿಗಳ ಏಕೈಕ ಪುತ್ರಿ. ಚಿಕ್ಕದಾಗಿ ಚೊಕ್ಕವಾಗಿರುವ ಸುಖೀ ಕುಟುಂಬ ನಮ್ಮದು. ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ಮು ಮೇರಿವೇಲ್ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಹಾಗೆಯೇ ನನ್ನ ಪದವಿಪೂರ್ವ ಶಿಕ್ಷಣವನ್ನು ವಾಣಿಜ್ಯ ವಿಭಾಗದಲ್ಲಿ ಶೇಖಡಾ ೯೩% ಅಂಕಗಳೊಂದಿಗೆ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದೇನೆ.
ನನ್ನ ಅತಿಯಾಸಕ್ತಿಯ ಕ್ಷೇತ್ರವೆಂದರೆ ಚಿತ್ರಕಲೆ. ಪ್ರಕೃತಿ ರಮಣೀಯತೆಯನ್ನು ಮತ್ತು ಮನದೊಳಗಿನ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ಚಿತ್ರಕಲೆಯು ನನಗೆ ನೆರವಾಗಿದೆ. ಇದೀಗ ಮಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಯಾಗಿರುವ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅತ್ಯುತ್ತಮ ಚಾರ್ಟರ್ಡ್ ಅಕೌಂಟಂಟ್ ಆಗುವ ಅದಮ್ಯ ಗುರಿಯನ್ನು ಹೊಂದಿದ್ದೇನೆ