ಸದಸ್ಯ:Sush Hegde/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಲ್ ಎರ್ಲಿಕ್[ಬದಲಾಯಿಸಿ]

ಪೀಠಿಕೆ[ಬದಲಾಯಿಸಿ]

ಕಾಯಿಲೆ ಕಸಾಲೆಗಳು ಮಾನವನ ಭೂಮಿಯಲ್ಲಿ ಉದಯಿಸಿದಾರಾಭ್ಯ ಇರುವಂತೆಯೆ, ಅವುಗಳ ಚಿಕಿತ್ಸಾ ವಿಧಾನಗಳೂ ಇದ್ದಿರಬೇಕು. ಆದರೆ ಅವುಗಳ ಬಗೆಗೆ ಇದ್ದ ಮೂಢನಂಬಿಕೆ,ಕಂದಾಚಾರ ಮತ್ತು ಅಂಧ ಶ್ರದ್ಧೆಗಳಿಂದ ಬಹಳ ಸಮಯ ಹೆಚ್ಚಿನ ಪ್ರಗತಿ ಸಾಧ್ಯವಾಗಿರಲಿಲ್ಲ .ದೈವ, ಭೂತಗಳ ಆರಾಧಕರಾದ ಪೂಜಾರಿ, ಅರ್ಚಕ, ಮಂತ್ರವಾದಿಗಳ ಮಾಯಾಮಾಟಗಳೇ ಚಿಕಿತ್ಸಾ ವಿಧಾನವಾಗಿದ್ದವು. ಕ್ರಿಸ್ತಶಕ ಆರಂಭದ ಸಮಯಕ್ಕೆ ಗ್ರೀಕ್ ವೈದ್ಯ- ತತ್ವಜ್ಞಾನಿ ಗೇಲನ್(ಕ್ರಿ.ಶ ೧೩೧-೨೧೦) ನಾರು,ಬೇರು,ಎಲೆ,ತೊಗಟೆ, ಕನಿಜ, ಪ್ರಾಣಿಗಳ ಅವಯವಗಳಿಂದ ತಯಾರಿಸಿದ ಮದ್ದುಗಳನ್ನು ಬಳಕೆಗೆ ತಂದನು. ಬಹುಮಟ್ಟಿಗೆ ಮತ-ಧರ್ಮ ತತ್ವಗಳಾಧಾರದಿಂದ ತಯಾರಾಗುತ್ತಿದ್ದ ಈ ಬಗೆಯ ಮದ್ದುಗಳು ಮುಂದೆ ಸಾವಿರಾರು ವರ್ಷ ಬಳಕೆಯಲ್ಲಿದ್ದವು. ಗೆಲೇನ್ ಬರೆದದ್ದೇ ವೇದವಾಕ್ಯವೆಂದು ವೈದ್ಯರು ಸಹಾ ಬಳಸುತ್ತಿದ್ದರು. ಗೇಲೆನ್ ನ ಈ ಮಾಂತ್ರಕ ಮೋಡಿಗೆ ಮೊದಲು ಲಗ್ಗೆ ಹಾಕಿದವರು ೧೫ನೇ ಶತಮಾನದಲ್ಲಿದ್ದ ವೈದ್ಯ -ಮಾಂತ್ರಿಕ ಪ್ಯಾರಾ ಸೆಲ್ಸನ್ (೧೪೯೩-೧೫೪೧).ಅವನ ಚಿಕಿತ್ಸಾ ವಿಧಾನಗಳು ವೈಚಾರಿಕ ನೆಲೆಗಟ್ಟಿನಿಂದ ತಯಾರಾಗುತ್ತಿದ್ದ ವೆಂದಿದ್ದರೂ, ಮಾಂತ್ರಿಕ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸಿರಲಿಲ್ಲಾ. ಈ ದಿಸೆಯಲ್ಲಿ ಅವನು ನೀಡಿದ ಕೊಡುಗೆಯೆಂದರೆ, ಪ್ರತಿಯೊಂದು ಕಾಯಿಲೆಯನ್ನು ವಾಸಿಮಾಡುವ ಚಿಕಿತ್ಸೆ ವಿಧಾನಗಳನ್ನು ಕಂಡುಹಿಡಿಯಲು ಸಾಧ್ಯ, ಮತ್ತು ಅವುಗಳ ನಿವಾರಣೆಗೆ ನಿಶ್ಚಿತವಾದ ಒಂದು ಮದ್ದು ಇದ್ದೇ ಇರುತ್ತದೆ. ಎಂಬ ತತ್ವ, ಸಿಫಿಲಿಸ್ ರೋಗಕ್ಕೆ ಕಾರಣವಾದ ರೋಗಾಣುವಿನ್ನೂ ಪತ್ತೆಯಾಗಿದ್ದರೂ ಪಾದರಸದ ಸಂಯುಕ್ತಗಳಿಂದ ಮದ್ದನ್ನು ಈ ತತ್ವದ ಆಧಾರದಿಂದ ತಯಾರಿಸಿದ್ದ. ಅವನ ಅನಿಸಿಕೆಗಳು ತಾತ್ವಿಕವಾಗಿ ಸರಿಯಾದವೆನಿಸಿದರೂ, ೧೯ನೇ ಶತಮಾನದ ಅಂತ್ಯದವರೆಗೂ ಹೆಚ್ಚಿನ ಪ್ರಗತಿಯಾಗಿರಲಿಲ್ಲ .ಜರ್ಮನಿಯ ಪಾಲ್ ಎರ್ಲಿಖ್ (೧೮೫೪-೧೯೧೫) ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಿ ಯಶಸ್ವಿಯಾದವರು.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಪಾಲ್ ಎರ್ಲಿಖ್ ಜನಿಸಿದ್ದು ಜರ್ಮನಿಯ ಸಲೇಸಿಂಯಾ ಪ್ರಾಂತದ ಬಡ ಯಹೂದಿಯರ ಕುಟುಂಬವೊಂದರಲ್ಲಿ ಕ್ರಿ.ಶ ೧೮೫೪ರಲ್ಲಿ. ಶಾಲಾ ದಿನಗಳಲ್ಲಿ ಕಲಿಯುವುದರಲ್ಲಿ ಹೆಚ್ಚಿನ ಬುದ್ಧಿವಂತಿಕೆ ಅವನಲ್ಲಿ ಇದ್ದಂತೆ ಕಾಣಿಸಲಿಲ್ಲ. ಆದರೆ ಪ್ರೌಢಶಾಲಾ ದಿನಗಳಲ್ಲಿ ಬರೆದ ಪ್ರಬಂಧ ‘ಜೀವನದ ಒಂದು ಕನಸೇ?’ ಅವನ ಮಾನಸಿಕ ಬೆಳವಣಿಗೆಯು ಉನ್ನತ ವೈಚಾರಿಕ ಮಟ್ಟದಲ್ಲಿ ಇರುವುದನ್ನು ಸಾರುವಂತೆರುತ್ತಿತ್ತು. ಮುಂದೆ ಲೀಫ್ ಜಿಗ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ತರಬೇತಿ ಪಡೆದು ವೈದ್ಯರಾದರು. ೨೪ನೆಯ ವಯಸ್ಸಿನಲ್ಲಿ ಬರ್ಲಿನ್ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯನಾಗಿ ಸೇರಿಕೊಂಡರು. ರೋಗಗಳ ಚಿಕಿತ್ಸೆಯ ಜವಾಬ್ದಾರಿ ಗಿಂತಲೂ ಪ್ರಯೋಗಶಾಲೆಯ ಕಾರ್ಯವಿಧಾನಗಳಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ ಇರುವಂತಿತ್ತು. ಆ ವಿಭಾಗದಲ್ಲೇ ಕೆಲಸ ಮುಂದುವರೆಸಲು ಹೆಚ್ಚಿನ ಪ್ರೋತ್ಸಾಹ ಮತ್ತು ಅನುಕೂಲತೆಗಳು ಒದಗಿಬಂದಿದ್ದು ಅವರ ಸುದೈವವೆನ್ನಬೇಕು.

ಸಂಶೋಧನೆ[ಬದಲಾಯಿಸಿ]

ಬಣ್ಣ ವಸ್ತುಗಳ ಅಧ್ಯಯನದ ಎರ್ಲಿಖ್ ರ ವಿಶೇಷ ಆಸಕ್ತಿಯ ವಿಷಯ. ರಕ್ತದ ವಿವಿಧ ಜೀವಕಣಗಳ ಅಧ್ಯಯನದಲ್ಲಿ ವಿವಿಧ ಬಣ್ಣಗಳನ್ನು ಬಳಸಿಕೊಂಡು ಅವುಗಳ ಗುಣಲಕ್ಷಣಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು. ಬಿಳಿಯ ರಕ್ತಕಣಗಳಲ್ಲಿ ಕೆಲವು ರೀತಿಯ ಬಣ್ಣಗಳನ್ನು ಹೀರಿಕೊಳ್ಳುವಂತೆ ಮಾಡಿ, ಅವು ತಮ್ಮ ವಿಶಿಷ್ಟ ಗುಣಲಕ್ಷಣಗಳು ಪ್ರಕಟವಾಗುವಂತೆ ಮಾಡಿದ್ದು ಅವರ ಬುದ್ಧಿಕುಶಲತೆಗಳ ಪ್ರತೀಕವೆನ್ನುವಂತಿತ್ತು . ಅವರ ಮುಂದಿನ ಪ್ರಯೋಗ ರೋಗಾಣುಗಳಿಗೆ ಬಣ್ಣ ಪ್ರಯತ್ನ .ಈ ದಿಸೆಯಲ್ಲಿ ಕ್ಷಯ ರೋಗಿಯ ಕಫವನ್ನು ಗಾಜಿನ ಪೆಟ್ಟಿಗೆಗೆ ಅಂಟಿಸಿ. ಅದರ ಮೇಲೆ ಅನಿಲಿಸ್ ಬಣ್ಣವನ್ನು ಸುರಿದು ಅದು ಭದ್ರವಾಗಿ ಅಂಟಿಕೊಳ್ಳುವಂತೆ ಮಾಡಿದರು. ಕ್ಷಯ ರೋಗಾಣುಗಳು ಆ ಕೆಂಪು ಬಣ್ಣವನ್ನು ಇಷ್ಟಪಟ್ಟು, ಆಯ್ದುಕೊಂಡು ತಮ್ಮೊಳಗೆ ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಗುಣವನ್ನು ಪ್ರದರ್ಶಿಸಿದವು. ಈ ಸಂದರ್ಭದಲ್ಲೇ ಕ್ಷಯ ರೋಗಾಣುಗಳನ್ನು ಕಂಡುಹಿಡಿದ ಹಾಬರ್ಟ್ ಕೋಹರ್ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದ್ದರಿಂದ. ಅವುಗಳ ನೈಜ ಸ್ವರೂಪವನ್ನು ತಿಳಿಯುವುದಕ್ಕೆ ಅನುಕೂಲವಾಯಿತು. ಈ ವಿಧಾನವನ್ನು ಮುಂದೆ ಇತರ ರೋಗಾಣುಗಳ ಅಧ್ಯಯನಕ್ಕೂ ಬಳಸಿಕೊಂಡರು. ವಿವಿಧ ರೀತಿಯ ರೋಗಾಣುಗಳು ಬೇರೆ ಬೇರೆ ಬಣ್ಣಗಳನ್ನು ಹೀರಿಕೊಳ್ಳುವುದರಿಂದ ಅವುಗಳನ್ನು ಪತ್ತೆ ಹೆಚ್ಚುವುದರಲ್ಲಿ ಒಂದು ಹೊಸ ಆಯಾಮವನ್ನು ಕಂಡುಹಿಡಿದಂತಾಯಿತು. ಎರ್ಲಿಖರ ಸಂಶೋಧನಾ ಸಾಮರ್ಥ್ಯವನ್ನು ಗ್ರಹಿಸಿದ ಜರ್ಮನ್ ಸರ್ಕಾರ ತಮ್ಮ ಲಸಿಕೆ ತಯಾರಿಕಾ ಸಂಸ್ಥೆಯ ನಿರ್ದೇಶಕರಾಗಿ ನೇಮಿಸಿತು(೧೮೯೬). ಅಲ್ಲಿ ಹಲವು ಚಿತ್ತಾಕರ್ಷಕ ಸಂಶೋಧನೆಗಳನ್ನು ಕೈಗೊಂಡರು. ಬೆಂಜಿನ್ ಎಂಬ ರಸಾಯನಿಕ ರಚನೆ ಅಷ್ಟಕೋನಾಕೃತಿಯ ಉಂಗುರದಂತಿದ್ದು ಅದರ ಪಕ್ಕದಲ್ಲಿ ಕೆಲವು ಕಡೆ ಸರಪಳಿಯಂತೆ ಕೊಂಡಿಗಳಿರುತ್ತವೆ. ಜೀವಕೋಶಗಳೊಳಗಿರುವ ನಡು ಬೀಜ ಮತ್ತು ಅದರ ಸುತ್ತಲಿರುವ ಗ್ರಾಹಕರು, ಬೆಂಜಿನ್ ಉಂಗುರದ ಕೃತಿಗೆ ಹೋಲಿಕೆಯಾಗುವಂತಿದೆ ಎಂಬ ಊಹೆ ಎರ್ಲಿಖ್ ಹೊಳೆಯಿತು. ಜೀವಕೋಶಕ್ಕೆ ಆಹಾರ ವಸ್ತುಗಳನ್ನು ಸ್ವೀಕರಿಸುವುದು ಗ್ರಾಹಕಗಳ ಕೆಲಸ¸. ‘ಆಹಾರ ವಸ್ತುಗಳ ಬದಲು ರೋಗಜನಕ, ಇಲ್ಲವೇ ಇತರ ವಿಷಕರ ವಸ್ತುಗಳು ಜೀವಕೋಶಗಳು ಒಳಗೆ ಸೇರುವಂತೆ ಮಾಡಿದರೆ ಅವು ಗ್ರಾಹಕಗಳನ್ನೇ ನಾಶ ಮಾಡಬಹುದು, ನಾಶವಾದ ಗ್ರಾಹಕಗಳ ಮಟ್ಟವನ್ನು ಸರಿದೂಗಿಸಲು ಇನ್ನೂ ಹೆಚ್ಚು ಪ್ರಮಾಣದಲ್ಲಿ ಗ್ರಾಹಕಗಳು ಉತ್ಪಾದನೆಯಾಗುತ್ತವೆ; ಅವು ವಿಫಲ ಸಂಖ್ಯೆಯಲ್ಲಿ ತಯಾರಾದಾಗ ಜೀವಕೋಶ ವೆಲ್ಲ ತುಂಬಿ ತುಳುಕಿ ಹೊರಚೆಲ್ಲಿ ರಕ್ತಪ್ರವಾಹದಲ್ಲಿ ಅಲೆದಾಡುವಂತಾಗುತ್ತದೆ. ಅವೇ ರೋಧವಸ್ತುಗಳಾಗಿ ಕಾರ್ಯ ನಿರ್ವಹಿಸಿ ರೋಗಗಳ ನಿರೋಧದ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಬಹುದು’ ಈ ಸಿದ್ಧಾಂತವನ್ನು ನಿರೂಪಿಸಿ ಕಾರ್ಯರೂಪಕ್ಕೆ ತಿಳಿಸಿದವರು ಪಾಲ್ ಎರ್ಲಿಖ್. ಗಂಟಲು ಮಾರಿ, ಧನುರ್ವಾಯು ಮುಂತಾದವುಗಳ ನಿರೋಧಕವಾಗಿ ಈಗ ಬಳಕೆಯಲ್ಲಿರುವ ಟಾಕ್ಸ್ ಯಿಡ್ ಲಸಿಕೆಗಳು ಈ ಸಿದ್ಧಾಂತದ ಆಧಾರದ ಮೇಲೆ ಈಗಲೂ ತಯಾರಾಗುತ್ತಿವೆ ಎಂದರೆ ಎರ್ಲಿಖ್ ರ ಸಂಶೋಧನೆಯ ಮಹತ್ವದ ಅರಿವಾಗಬಹುದು.ಹದಿನೈದನೇ ಶತಮಾನದಲ್ಲಿ ಪ್ಯಾರಾಸೆಲ್ಸಸ್ ನಿರೂಪಿಸಿದ ತತ್ವ ಆಧಾರದಂತೆಯೇ ಎರ್ಲಿಕ್ ರೋಗಾಣುಗಳಿಗೆ ನೇರವಾಗಿ ‘ಗುಂಡಿಕ್ಕಿ ಕೊಲ್ಲುವ’ ಸಿದ್ಧಾಂತವನ್ನು ಗ್ರಹಿಸಿದ ಮುಂದಿನ ಯೋಜನೆ, ಕ್ಷಯರೋಗಾಣು ಒಂದು ಬಣ್ಣವನ್ನು ಆಯ್ದು ಸ್ವೀಕರಿಸುವ ಲಕ್ಷಣ ಹೊಂದಿರುವಂತೆಯೇ, ಅದಕ್ಕೆ ಮಾರಕವಾಗಬಹುದಾದ ಮದ್ದನ್ನು ಆಕರ್ಷಿಸುವಂತೆ ಮಾಡಬಹುದೆಂದು ಅವರು ಊಹಿಸಿದರು. ಆಫ್ರಿಕಾದ ‘ನಿದ್ದೆ ಜ್ವರಕ್ಕೆ’ ಕಾರಣವಾದ ಟ್ರಿಪ್‌ನೋಮ ರೋಗಾಣುಗಳ ವಿರುದ್ಧ ಟ್ರಿಪಾನ್ರೆಡ್ ಎಂಬ ಮದ್ದನ್ನು ಪ್ರಯೋಗಿಸಿದಾಗ ಅವರಿಗೆ ಯಶಸ್ಸು ದೊರೆಯಿತು. ಈ ತತ್ವವನ್ನೇ ಮುಂದೆ ಸಿಫಿಲಿಸ್ ರೋಗಕ್ಕೆ ಅನ್ವಯಿಸಿದರು. ಆ ದಿಸೆಯಲ್ಲಿ ಹಲವಾರು ನಮೂನೆಯ ಮದ್ದುಗಳನ್ನು ನೂರಾರು ಪ್ರಯೋಗಗಳಲ್ಲಿ ಬಳಸಿದರು. ಈ ಪ್ರಯೋಗದ ಸರಣಿ ೬೦೫ ಸಾರಿ ಜರುಗಿದರೂ ಯಶಸ್ಸು ದೊರಕದೆ, ಸಹದ್ಯೋಗಿಗಳುವಿರೋಧಿಸಿದರು, ಕೊನೆಯಾದ ಕೊನೆಯದಾಗಿ ಜರುಗಿದ ೬೦೬ ನೇ ಸಾರಿ ಪ್ರಯತ್ನ ಸಫಲವಾಯಿತು .ಅದಕ್ಕೆ ಬಳಸಿದ ಅರ್ಸೇನಿಕ್ ನ ಸಂಯುಕ್ತ ಸಲ್ ವಾರ್ಸಾಗೆ ೬೦೬ ಎಂದೇ ಹೆಸರಾಯಿತ. ಇನ್ನು ಉತ್ತಮಪಡಿಸಲು ೯೧೪ ಸಾರಿ ಪ್ರಯೋಗ ನಡೆಸಿ ನಿಯೋಸಾಲ್ ವಾರ್ಸನ್ ಎಂಬ ಮದ್ದನ್ನು ಅಂತಿಮವಾಗಿ ಕಂಡುಹಿಡಿದರು. ಯಶಸ್ಸಿನ ಪ್ರತಿಫಲವಾಗಿ ೧೯೦೮ರ ನೊಬೆಲ್ ಪಾರಿತೋಷಕ ಎರ್ಲಿಕ್ ದೊರೆಯಿತು.ರೋಗಾಣುಗಳ ವಿನಾಶಕ್ಕೆ ಸಾವಯವ ರಾಸಾಯನಿಕಗಳನ್ನು ‘ಮಾಂತ್ರಿಕ ಗುಂಡುಗಳ’ಆಗಿ ಬಳಸಿ ಯಶಸ್ಸು ಪಡೆದವರಲ್ಲಿ ಎರ್ಲಿಖರೆ ಮೊದಲನೆಯವರು . ಅವರು ನಿರೂಪಿಸಿದ’ಪಕ್ಕ ಸರಪಳಿ ಸಿದ್ದಾಂತ’ ಡೈ ಅಜೋ ಪ್ರತಿಕ್ರಿಯೆ,ನಿಯೋಸಾಲ್ವಾರ್ಸಾನ್ ಮುಂತಾದವು ವೈದ್ಯಕೀಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ. ಅವರಿಗೆ ಯಾವುದೇ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪದವಿ ದೊರಕಿರಲಿಲ್ಲ . ಪ್ರಯೋಗಗಳ ಯಶಸ್ಸಿಗೆ ಅಸೂಯೆಪಟ್ಟ ಮೇಲಧಿಕಾರಿಗಳ ಕಿರುಕುಳ ಅನುಭವ ಕ್ಷಯ ರೋಗಾಣು ಅಧ್ಯನ ಸಮಯದಲ್ಲೇ ಅಂಟಿಕೊಂಡು ನರಳಿದರೂ ಸಹಾ, ಎರ್ಲಿಖ್ ವಿಚಲಿತರಾಗದೆ, ವೈದ್ಯಕೀಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಅರವತ್ತೋದು ವರ್ಷಗಳ ಕಾಲ ಜೀವನ ನೇಡೆಸಿದ ಪಾಲ್ ಎರ್ಲಿಖ್ ೧೯೧೫ ರಲ್ಲಿ ನಿಧನರಾದರು.