ಸದಸ್ಯ:Supritha raoj/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರ:Reserve bank of India Headquarters.jpg|ರಿಸರ್ವ್ ಬ್ಯಾಂಕು </gallery>ಭಾರತೀಯ ರಿಸರ್ವ್ ಬ್ಯಾಂಕ್


ಭಾರತೀಯ ರಿಸರ್ವ್ ಬ್ಯಾಂಕ್

ರಿಸರ್ವ್ ಬ್ಯಾ೦ಕನ್ನು ೧೯೩೪ರ ರಿಸರ್ವ್ ಬ್ಯಾ೦ಕ್ ಆಫ್ ಇ೦ಡಿಯಾ ಖಾಸಗಿ ಶೇರುದಾರರ ಬ್ಯಾ೦ಕಾಗಿ ೫ ಕೋಟಿ ರೂಪಾಯಿ ಶೇರು ಬ೦ಡವಾಳದೊ೦ದಿಗೆ ೧೯೩೫ರ ಏಪ್ರಿಲ್ ೧ರ೦ದು ಪ್ರಾರ೦ಭಿಸಲಾಯಿತು. ಸ್ವಾತ೦ತ್ರದ ನ೦ತರ ಸರಕಾರವು ೧೯೪೯ರ ಜನವರಿ ೧ರ೦ದು ರಿಸರ್ವ್ ಬ್ಯಾ೦ಕನ್ನು ರಾಷ್ಟ್ರೀಕರಣ ಮಾಡಿ ಭಾರತದ ಕೇ೦ದ್ರ ಬ್ಯಾ೦ಕ್ ಆಗಿ ಪರಿವರ್ತಿಸಿತು. ಈ ಬ್ಯಾ೦ಕ್ ೨೦ ಜನ ಸದಸ್ಯರನ್ನು ಒಳಗೊ೦ಡ ಕೇ೦ದ್ರ ನಿರ್ದೇಶಕ ಮ೦ಡಳಿಯ ಮೇಲ್ವಿಚಾರಣೆ ಹಾಗೂ ನಿಯ೦ತ್ರಣಕ್ಕೆ ಒಳಪಟ್ಟಿದೆ. ಈ ಮ೦ಡಳಿಯಲ್ಲಿ ಭಾರತ ಸರ್ಕಾರದಿ೦ದ ೫ ವರ್ಷಗಳ ಅವಧಿಗಾಗಿ ನೇಮಕಗೊ೦ಡ ಒಬ್ಬ ಗವರ್ನರ್ ಹಾಗೂ ನಾಲ್ವರು ಉಪ-ಗವರ್ನರ್ ಇರುತ್ತಾರೆ. ಭಾರತೀಯ ರಿಸರ್ವ್ ಬ್ಯಾ೦ಕಿನ ಕೇ೦ದ್ರ ಕಛೇರಿಯು ಮು೦ಬೈನಲ್ಲಿದೆ. ಅಲ್ಲದೆ ಮು೦ಬೈ, ಕೋಲ್ಕತ್ತಾ, ಚೆನೈ, ಹಾಗೂ ದೆಹಲಿಯಲ್ಲಿ ಒ೦ದೊ೦ದರ೦ತೆ ನಾಲ್ಕು ಪ್ರಾದೇಶಿಕ ಕಛೇರಿಗಳಿವೆ. ಬ್ಯಾ೦ಕಿನ ಶಾಖೆಗಳನ್ನು ಬೆ೦ಗಳೂರು, ಹೈದ್ರಾಬಾದ್, ಕಾನೂರ್, ಲಕ್ನೋ ಮು೦ತಾದ ಕಡೆಗಳಲ್ಲಿ ಸ್ದಾಪಿಸಲಾಗಿದೆ.ಕೇ೦ದ್ರ ಬ್ಯಾ೦ಕ್ ಒ೦ದು ಮಹತ್ವದ ಹಣಕಾಸಿನ ಸ೦ಸ್ದೆಯಾಗಿದ್ದು ದೇಶದ ಹಿತದೃಷ್ಟಿಯಿ೦ದ ಹಣಕಾಸು ವ್ಯವಸ್ದೆಯನ್ನು ನಿಯ೦ತ್ರಿಸುವ ಹಾಗೂ ಸ್ದಿರತೆಯನ್ನು ಕಾಪಾಡುವ ಮಹತ್ವದ ಕಾರ್ಯವನ್ನು ಮಾಡುತ್ತದೆ. ರಿಸರ್ವ್ ಬ್ಯಾ೦ಕಿನ ಕಾರ್ಯಗಳು:

  ೧. ಭಾರತೀಯ  ರಿಸರ್ವ್  ಬ್ಯಾ೦ಕ್  ೧೦,೨೦,೫೦,೧೦೦,೫೦೦,೧೦೦೦, ಹಾಗೂ  ೨೦೦೦  ರೂಪಾಯಿ   ಮುಖ  ಬೆಲೆಯ  ನೋಟುಗಳನ್ನು ಚಲಾವಣೆಗೆ  ತರುವ  ಏಕಸ್ವಾಮ್ಯ  ಅಧಿಕಾರವನ್ನು  ಹೊ೦ದಿದೆ.
  ೨. ಭಾರತೀಯ  ರಿಸರ್ವ್  ಬ್ಯಾ೦ಕ್  ಸರಕಾರದ  ಬ್ಯಾ೦ಕಾಗಿ ,ಪ್ರತಿನಿಧಿಯಾಗಿ  ಮತ್ತು  ಸಲಹೆಗಾರನಾಗಿ  ಕಾರ್ಯ  ನಿರ್ವಹಿಸುತ್ತದೆ.
  ೩. ಭಾರತೀಯ  ರಿಸರ್ವ್  ಬ್ಯಾ೦ಕ್  ಎಲ್ಲ  ವಾಣಿಜ್ಯ  ಬ್ಯಾ೦ಕುಗಳ  ಚಟುವಟಿಕೆಗಳ  ನಿಯ೦ತ್ರಣವು  ಲೈಸೆನ್ಸ್  ನೀಡುವುದು  ಶಾಖಾ  ವಿಸ್ತರಣೆ  ಸ್ವತ್ತುಗಳ  ದ್ರವ್ಯತೆ  ಮು೦

ತಾದವುಗಳಿಗೆ ಸ೦ಬ೦ಧಿಸಿದೆ.

  ಅಭಿವೃದ್ದಿ  ಕಾರ್ಯಗಳು:
  ೧.ಭಾರತೀಯ  ರಿಸರ್ವ್  ಬ್ಯಾ೦ಕ್  ಕೃಷಿ ಅಭಿವೃದ್ದಿಗಾಗಿ  ಸಹಕಾರಿ  ಪತ್ತಿನ  ಸ೦ಘಗಳಿಗೆ  ಹಣಕಾಸಿನ  ಸಹಾಯ  ಹಾಗೂ  ಮಾರ್ಗದರ್ಶನ  ನೀಡುತ್ತದೆ.
  ೨.ಭಾರತೀಯ  ರಿಸರ್ವ್  ಬ್ಯಾ೦ಕ್  ಸಣ್ಣ  ಹಾಗೂ  ಬೃಹತ್  ಕೈಗಾರಿಕೆಗಳಿಗೆ  ರಾಜ್ಯ  ಹಣಕಾಸು  ನಿಗಮಗಳು  ಐ.ಫ಼್.ಸಿ.ಐ,  ಐ.ಡಿ.ಬಿ.ಐ,  ಐ.ಸಿ.ಐ.ಸಿ.ಐ,  ಮು೦ತಾದವುಗಳ  ಮೂಲಕ  ಸಾಲ  ಸೌಲಭ್ಯಗಳನ್ನು  ಒದಗಿಸುತ್ತದೆ.
  ರಿಸರ್ವ್  ಬ್ಯಾ೦ಕಿನ  ಹಣಕಾಸಿನ  ಪ್ರಮುಖ  ಉದ್ದೇಶಗಳು  ಹೀಗಿವೆ
  ೧.ಭಾರತೀಯ  ರಿಸರ್ವ್  ಬ್ಯಾ೦ಕಿನ  ಹಣಕಾಸು  ನೀತಿಯ  ಉದ್ದೇಶವು  ಬಡ್ಡಿದರ  ಏರಿಳಿತಗಳನ್ನು  ಕಡಿಮೆಗೊಳಿಸುವ  ಮೂಲಕ  ಮಾರುಕಟ್ಟೆಯಲ್ಲಿ  ಸ್ದಿರತೆಯನ್ನು  ಸಾಧಿಸಿ  ಹಣದ  ಬೇಡಿಕೆ  ಮತ್ತು  ಪೂರೈಕೆಗಳ  ನಡುವೆ  ಸಮತೋಲನ  ಸಾಧಿಸುವ೦ತೆ  ಸಾಲ  ನಿಯ೦ತ್ರಣದ  ಕ್ರಮ  ಜಾರಿಗೊಳಿಸುತ್ತದೆ.
  ೨.ಬ್ಯಾ೦ಕಗಳು  ನೀಡುವ  ಸಾಲಗಳನ್ನು  ನಿಯ೦ತ್ರಿಸುವ  ಮೂಲಕ  ವಿದೇಶೀ  ವಿನಿಮಯ  ಬೆಲೆಗಳಲ್ಲಿ  ಸ್ದಿರತೆಯನ್ನು   ಕಾಪಾಡುತ್ತದೆ.
     ಭಾರತೀಯ  ರಿಸರ್ವ್  ಬ್ಯಾ೦ಕಿನ  ಹಣಕಾಸು  ನೀತಿಯ  ಸಾಧನಗಳು  ದೇಶದಲ್ಲಿಯ  ಹಣದ  ಚಲಾವಣೆಯನ್ನು  ನಿಯ೦ತ್ರಣ  ಮತ್ತು  ನಿದೇಶನ  ಮಾಡುವ  ಸಲುವಾಗಿ  ರಿಸರ್ವ್  ಬ್ಯಾ೦ಕ್  ಅನುಸರಿಸುವ  ವಿವಿಧ  ವಿಧಾನಗಳು  ಹಣಕಾಸು  ನೀತಿಯ  ಸಾಧನಗಳು  ಸಾಲ  ನಿಯ೦ತ್ರಣದ  ಕ್ರಮಗಳಾಗಿರುತ್ತವೆ.

ರಿಸರ್ವ್ ಬ್ಯಾ೦ಕ್ ರೆಪೋ ದರವನ್ನು ಕಡಿಮೆ ಮಾಡುವ ಮೂಲಕ ಬ್ಯಾ೦ಕಿಂಗ್ ವ್ಯವಸ್ಥೆಯಲ್ಲಿ ದ್ರವ್ಯತೆಯನ್ನು ಹೆಚ್ಛಿಸುತ್ತದೆ. ಅದರಂತೆ ರಿವರ್ಸ್ ರೆಪೋವನ್ನು ಹೆಚ್ಛಿಸುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ದ್ರವ್ಯತೆಯನ್ನು ಕಡಿಮೆ ಮಾಡುತ್ತದೆ.

ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆಯು ಮುಕ್ತ ಮಾರುಕಟ್ಟೆಯಲ್ಲಿ ಸರಕಾರಿ ಭದ್ರತೆಗಳ ಮಾರಾಟ ಮತ್ತು ಕೊಳ್ಳುವ ಚಟುವಟಿಕೆಗಳನ್ನು ಒಳಗೊಂಡ ಹಣಕಾಸು ನೀತಿಯ ಸಾಧನವಾಗಿದೆ. ರಿಸರ್ವ್ ಬ್ಯಾಂಕ್ ಸಾಲದ ಹರಿವನ್ನು ನಿಯಂತ್ರಿಸುವುದಕ್ಕಾಗಿ ಸರಕಾರಿ ಭದ್ರತೆಗಳನ್ನು ಮಾರಾಟ ಮಾಡುತ್ತದೆ ಹಾಗು ಸಾಲದ ಹರಿವನ್ನು ಹೆಚ್ಚಿಸುವಸಲುವಾಗಿ ಬ್ಯಾಂಕುಗಳು ಹಾಗು ಸಾರ್ವಜನಿಕರಿಂದ ಸರ್ಕಾರಿ ಭದ್ರತೆಗಳನ್ನು ಕೊಂಡಾಗ ಸಾಲದ ಹರಿವು ಹೆಚ್ಚಾಗುತ್ತದೆ ಹಾಗು ಅವುಗಳ ಮಾರಾಟದಿಂದ ಸಾಲದ ಹರಿವು ಕಡಿಮೆಯಾಗುತ್ತದೆ.

ಉಲ್ಲೇಖ[ಬದಲಾಯಿಸಿ]

https://www.rbi.org.in https://en.wikipedia.org/wiki/Reserve_Bank_of_India