ವಿಷಯಕ್ಕೆ ಹೋಗು

ಸದಸ್ಯ:Sunithap.95/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರದಕ್ಷಿಣೆ

ಭಾರತೀಯ ಸಮಾಜದಲ್ಲಿ ಬೇರೂರಿರುವ ಕೆಲವು ಅನಿಷ್ಟ ಪದ್ಧತಿಗಳಲ್ಲಿ ವರದಕ್ಷಿಣೆಯೂ ಒಂದು. ಇದರಿಂದ ಬಾಧೆಗೊಳಗಾಗುವರು ಹೆಣ್ಣುಮಕ್ಕಳನ್ನು ಹೆತ್ತ ತಂದೆತಾಯಿಯವರು ಸಮಾಜಕ್ಕೆ ಇದು ಒಂದು ಶಾಪವಾಗಿ ಪರಿಣಮಿಸಿ ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ದಿನನಿತ್ಯವೆಂಬಂತೆ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದಾರೆ. ಈ ಮರಣವಾದರೂ ಬಲಾತ್ಕಾರದ್ದಾಗಿದೆ. ಇದೇಕೆ ಹೀಗೆ ಎಂದು ಅಲೋಚಿಸುವಷ್ಟೂ ಸಮಾಜ ಕೆಲಸಮಾಡಲಾಗಿಲ್ಲ. ಹಿಂದೆ ಮದುವೆಯಾದ ಹುಡುಗನಿಗೆ ಕನ್ಯೆಯ ತಂದೆ ವರದಕ್ಷಿಣೆಯ ರೂಪದಲ್ಲಿ ಹೊನ್ನು ಹಣ ಮೊದಲಾದವನ್ನು ಕೊಡುತ್ತಿದ್ದನೆಂಬುದನ್ನೆ ಆಧರಿಸಿ ಇಂದಿನ ದಿನಗಳಲ್ಲಿ ವರನ ತಂದೆತಾಯಿಯರು ಹೆಣ್ಣು ಹೆತ್ತವರ ಸುಲಿಗೆ ಮಾಡುವುದು ಸರ್ವೇ ಸಾಧಾರಣವಾಗಿದೆ. ವರದಕ್ಷಿಣೆ ತೆಗೆದುಕೊಳ್ಳಬಾರದು ಎಂಬ ಕಾನೂನು ಇದ್ದರೂ ಪದ್ಧತಿಯ ಅನುಷ್ಠಾನದಿಂದ ಹೆಣ್ಣಿನ ಗೌರವಕ್ಕೆ ಕುಂದುಂಟಾಗಿದೆ. ಮೊದಲಿಗೆ ಹೆಣ್ಣು ವಿದ್ಯಾಭ್ಯಾಸ ಮಾದುತ್ತಿದ್ದುದು ತೀರಾ ಕಡಿಮೆ. ಆದರೆ ಇಂದು ಹಾಗೇನಿಲ್ಲ. ಗಂಡಿನಷ್ಟೆ ಹೆಣ್ಣು ವಿದ್ಯಾಭ್ಯಾಸ ಮಾಡುತ್ತಿದ್ದು ಸಮಾಜದಲ್ಲಿ ಗಂಡಿಗಿರುವಷ್ಟೇ ಸ್ಥಾನಮಾನವನ್ನು ಪಡೆದಿದ್ದಾಳೆ. ಯಾವುದೇ ಕ್ಷೇತ್ರದಲ್ಲಿ ಹೆಣ್ನಿಗೆ ಸರಿಸಮ ಪಾಲು ಇದೆ. ಇಂಥ ಪರಿಸ್ಥಿತಿ ಇರುವಾಗಲೂ ಗಂಡು ಹೆತ್ತವರು ಹಣಕ್ಕಾಗಿಯೇ ಹೆಣ್ಣನ್ನು ತಂದುಕೊಳ್ಳುವುದು ಹೆಣ್ಣು ಗಂಡಿಗಿಂತಲೂ ಕೀಳು ಎಂಬ ಭಾವನೆ ಉಂಟಾಗಲು ಕಾರಣವಾಗಿದೆ. ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು.

ಮಧುವಿನ ತಂದೆತಾಯಿಗಳು ಮಗಳ ಮದುವೆಗಾಗಿಯೇ ಹಣ ಜೋಡಿಸುವುದು ಕಡುಕಷ್ಟವಾಗಿರುವಾಗ ವರದಕ್ಷಿಣೆಗೆ ದುಡ್ಡು ಹೊಂದಿಸಲು ಪಡುವ ಕಷ್ಟ ಎಷ್ಟೆಂದು ಹೇಳತೀರದು. ಒಂದು ವೇಳೆ ಅವರು ವರನ ತಮ್ದೆಗೆ ಮದುವೆ ಸಮಯದಲ್ಲಿ ವರದಕ್ಷಿಣೆ ಕೊಡುತ್ತೇನೆ ಎಂದು ಹೇಳಿ ಅದು ಕೊಡಲಾಗದೆ ಹೋದಾಗ ಪರಿತಪಿಸುತ್ತಾರೆ. ಇದೇ ನೆಪ ಮಾಡಿಕೊಂಡು ಹೆಣ್ಣನ್ನು ಗಂಡಿನ ಮನೆಯವರು ಅವಳನ್ನು ಮದುವೆ ಮಾದಿಕೊಂಡಿದ್ದರೂ ವರದಕ್ಷಿಣೆ ಹಣ ತರುವವರೆಗೂ ನಮ್ಮ ಮನೆಯಲ್ಲಿ ಇರಲು ಅವಕಾಶವಿಲ್ಲ ಎಂದು ಹಿಂದಕ್ಕೆ ಅಟ್ಟುತ್ತಾರೆ. ಆಗ ಹೆಣ್ಣಿನ ಪಾಡು ಹೇಳತೀರದು.

ವರದಕ್ಷಿಣೆ ವಿರುದ್ಧ ಜನರು ಸಹರಿಸಬೇಕಾದುದು ತೀರಾ ಅಗತ್ಯವಾಗಿದೆ. ಸರ್ಕಾರ ಕಾನೂನು ತಂದಿದ್ದರೂ ಯುವಕರು ವರದಕ್ಷಿಣೆ ಹಾತೊರೆಯುವುದು ತಪ್ಪಿಲ್ಲ. ಹಣವನ್ನಷ್ಟೆ ಅಲ್ಲದೆ ಸ್ಕೂಟರ್, ಟಿ.ವಿ, ಸೈಟು, ಮನೆ, ಕಾರು, ಇಂಥವನ್ನೆಲ್ಲ ಬಯಸುತ್ತಾರೆ. ಇದು ತಪ್ಪಬೇಕು ವರದಕ್ಷಿಣೆ ಪದ್ಧತಿ ನಿರ್ಮೂಲನವಾಗಲು ಯವಜನರೇ ಮುಂದಾಗಬೇಕು. ವರದಕ್ಷಿಣೆ ಕೈಬಿಡಲು ಸಮೂಹ ಮಾಧ್ಯಮಗಳು ಜನರಲ್ಲಿ ಪ್ರೇರಣೆ ಉಂಟುಮಾಡುವಂತೆ ಕೆಲಸಮಾಡಬೇಕಾಗಿದೆ. ಪತ್ರಿಕೆಗಲಲ್ಲಿ ಲೇಖನ, ದೂರದರ್ಶನದಲ್ಲಿ ನಾಟಕ, ಚರ್ಚೆಗಳ ಪ್ರಸಾರ, ಆಕಾಶವಾಣಿ ಮೂಲಕ ಪ್ರಸಾರಗಳು, ಚಲನಚಿತ್ರಗಳ ನಿರ್ಮಾಣ ಇವು ಜನರನ್ನು ಸುಶಿಕ್ಷಿತರನ್ನಾಗಿ ಮಾಡಲು ನೆರವಾಗುತ್ತವೆ.


ಒಟ್ಟಿನಲ್ಲಿ ಆಧುನಿಅಕ ಸಮಾಜದ ಒಂದು ಕಳೆಗಿಡದಂತಿರುವ ವರದಕ್ಷಿಣೆ ಪದ್ಧತಿ ನಿರ್ಮೂಲವಾಗದೆ ಕುಟುಂಬಗಳ ಜೀವನ ಸುಗಮವಾಗುವುದಿಲ್ಲ. ಕುಟುಂಬಗಳು ಕ್ಷೇಮದಿಂದಿರದೆ ಹೋದರೆ ಸಮಾಜವೂ ರೋಗರುಜಿನಗಳ ಬೀಡಾಗುತ್ತದೆ. ಆದುದರಿಂದ ವರದಕ್ಷಿಣೆ ಪದ್ಧತಿ ಎಂಬ ಭೂತವನ್ನು ಹೋಗಲಾಡಿಸುವುದು ಅನಿವಾರ್ಯವಾಗಿದೆ.