ಸದಸ್ಯ:Sumukha g hegde/ನನ್ನ ಪ್ರಯೋಗಪುಟ4

ವಿಕಿಪೀಡಿಯ ಇಂದ
Jump to navigation Jump to search

ಚಂದ್ರನಾಥ ಸ್ವಾಮಿ ಬಸದಿ ಬಜರ್ಕಳ, ಮೂಡಾರು

ಸ್ಥಳ[ಬದಲಾಯಿಸಿ]

ಬಜರ್ಕಳ ಶ್ರೀಚಂದ್ರನಾಥ ಸ್ವಾಮಿ ಬಸದಿಯು ಕಾರ್ಕಳ ತಾಲೂಕಿನ ಬಜಗೋಳಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಬಜಗೋಳಿಯ ಕೆರವಾಸೆ ರೋಡಿನ ಪಕ್ಕದಲ್ಲಿದೆ.

ಇತಿಹಾಸ[ಬದಲಾಯಿಸಿ]

೨೦೧೦ನೇ ಇಸವಿಯಲ್ಲಿ ಪೂರ್ಣ ಜೀರ್ಣೋದ್ಧಾರಗೊಂಡ ಈ ಬಸದಿಯಲ್ಲಿ ಸುಮಾರು ಎರಡು ಅಡಿ ಎತ್ತರದ ಮೂಲನಾಯಕ ಬಿಂಬ ಆರಾಧಿಸಲ್ಪಡುವಂತೆ ಇಲ್ಲಿ ವಿಶಿಷ್ಟವೆನಿಸುವ ಬ್ರಹ್ಮಯಕ್ಷನು ಶಸ್ತ್ರ ಸಮೇತನಾಗಿ ಅಶ್ವಾರೂಢನಾಗಿದ್ದಾನೆ. ಈ ಜಿನಬಿಂಬವು ಸುಮಾರು ೧೨ನೇ ಶತಮಾನದಿಂದ ಹೇಳಬಹುದು.

ವಿಶೇಷ[ಬದಲಾಯಿಸಿ]

ಜಿನಾಲಯಗಳಂತೆ ಇಲ್ಲಿಯೂ ಶ್ರೀ ಪದ್ಮಾವತಿ ದೇವಿಯ ಪೂಜೆ ನಡೆಯುತ್ತದೆ. ದೇವಿಯ ಬಿಂಬವು ಪೂರ್ವಾಭಿಮುಖವಾಗಿದ್ದು ಸೂರ್ಯನ ಮೊದಲ ಕಿರಣ ಗಳು ಇಲ್ಲಿಯೇ ಬೀಳುತ್ತವೆ. ಇವೆಲ್ಲವುಗಳನ್ನು ನೋಡಿದಾಗ ಇಲ್ಲಿ ಒಂದು ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ವಿಶೇಷ ಸನ್ನಿಧಾನವಿರುವಂತೆ ಅನುಭವವಾಗುತ್ತದೆ.ಜತೆಯಲ್ಲಿ ಅಸ್ತ್ರವನ್ನು ಹಿಡಿದಿರುವ ಯಕ್ಷಿಯು ಕುದುರೆಯ ಮೇಲೆ ಕುಳಿತುಕೊಂಡು ತಮ್ಮನ್ನು ನೋಡುತ್ತಿದ್ದಾರೆ. ಕಿರೀಟಧಾರಿಗಳಾಗಿದ್ದರೆ. ವೀರಾವೇಶದ ಮುಖಭಾವವನ್ನು ಹೊಂದಿದ್ದಾರೆ. ಇವರು ವಿಶೇಷ ಕಾರಣಿಕ ಶಕ್ತಿಯನ್ನು ಹೊಂದಿದ್ದಾರೆ ಎಂದು ನಂಬಿರುವ ಇಲ್ಲಿನ ಜನರು ಅವರನ್ನು ಬಹಳ ಭಯ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ಇವರಿರ್ವರು ಕ್ಷಿಪ್ರವಾಗಿ ಶುಭಫಲವನ್ನು ನೀಡುವರು. ಇವರ ಶಕ್ತಿಯ ಪ್ರಾಬಲ್ಯದಿಂದಾಗಿಯೇ ತೀರಾ ಹಿಂದುಳಿದ ಈ ಪರಿಸರವು ಈಗ ವಿಶೇಷ ಆಕರ್ಷಣೆಯಿಂದ ಕಂಗೊಳಿಸುತ್ತಿದೆ. ದಾರಿಯಾಗಿ ಹೋಗುವ ಪ್ರಯಾಣಿಕರು ಬಸದಿಯ ಎದುರಿಗೆ ನಿಂತು ಪ್ರಾರ್ಥನೆ ಮಾಡುವ ಕ್ರಮ ವಿಶೇಷವಾಗಿದೆ. [೧]

ಪ್ರಾಂಗಣ[ಬದಲಾಯಿಸಿ]

ಸುತ್ತಲೂ ಭದ್ರವಾದ ಕಾಂಕ್ರಿಟ್‌ನ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿದೆ. ಬಸದಿಯ ಮಾಡಿಗೆ ಹಂಚುಗಳನ್ನು ಹಾಸಿ ಬದಿಗಳನ್ನು ಕಾಂಕ್ರೀಟ್‌ನಿಂದ ಸುರಕ್ಷಿತಗೊಳಿಸಲಾಗಿದೆ. ಬಸದಿಯ ಅನುಷ್ಠಾನಕ್ಕೆ ಏರುವಲ್ಲಿ ಬಸದಿಯ ಮುಖ್ಯ ಕಟ್ಟಡದ ಪ್ರವೇಶ ದ್ವಾರದ ಎರಡೂ ಬದಿಗಳಲ್ಲಿ ಸುಂದರವಾದ ದ್ವಾರಪಾಲಕರ ವರ್ಣಚಿತ್ರಗಳಿವೆ. ಮುಂದೆ ಹೋದಾಗ ಸಿಗುವ ಪ್ರಾರ್ಥನಾ ಮಂಟಪದಲ್ಲಿ ಗಂಟೆ, ಜಯಗಂಟೆಗಳನ್ನು ತೂಗುಹಾಕಲಾಗಿದೆ. ಇದಕ್ಕಿಂತ ಮುಂದೆ ಇರುವ ತೀರ್ಥಂಕರ ಮಂಟಪದಲ್ಲಿ ಮತ್ತು ಗಂಧಕುಟಿಯಲ್ಲಿ ಪವಿತ್ರವಾದ ಕೆಲವು ಜಿನಬಿಂಬಗಳು. ಚತುರ್ವಿಂಶತಿ ತೀರ್ಥಂಕರರನ್ನು ಹೊಂದಿರುವ ಒಂದು ಬಿಂಬವಿದೆ. ಶಕ್ತಿಯ ಬ್ರಹ್ಮ ಯಕ್ಷ-ಯಕ್ಷಿಯರ ಶಿಲಾಬಿಂಬ ಇದರ ಎಡ-ಬಲಗಳಲ್ಲಿವೆ. ಕಂಬಗಳಂತಹ ರಚನೆ ಮತ್ತು ಮೇಲ್ಗಡೆಯಿರುವ ಮಕರ ಮರಗಳು ಹಾಗೂ ಅವುಗಳ ಬಾಯಿಯಿಂದ ಹೊರಟ ಸುರುಳಿಯಾಕಾರದನ್ನು ಹೊಂದಿರುವ ಮಕರ ತೋರಣವನ್ನು ಕಾಣಬಹುದಾಗಿದೆ. ಬಸದಿಯ ಮೇಲ್ಗಡೆಯಿರುವ ಕೀರ್ತಿಮುಖವಿದೆ. ಬಸದಿಯ ಮುಂಭಾಗದಲ್ಲಿ ಬ್ರಹ್ಮಸ್ಥಾನವಿದೆ. ಈ ಜಿನಾಲಯಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜೈನಮಠಾಧೀಶರು ಚಿತ್ತೈಸಿದ್ದಾರೆ. ಇದು ಕಾರ್ಕಳ ಶ್ರೀ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಜೀರ್ಣೋದ್ಧಾರ ಸಂದರ್ಭದಲ್ಲಿ ಕ್ಷೇತ್ರಪಾಲನಿಗೂ ಹೊಸದೊಂದು ಗುಡಿಯನ್ನು ನಿರ್ಮಿಸಿ ಆರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಕ್ಷೇತ್ರಪಾಲನ ನೂತನವಾದ ಸುಂದರ ಶಿಲಾಮೂರ್ತಿ ಮತ್ತು ಕೆಲವು ಗುಂಡುಕಲ್ಲುಗಳನ್ನು ಇಲ್ಲಿ ಕಾಣಬಹುದು.ಈ ಬಸದಿಗೆ ಪ್ರತ್ಯೇಕವಾದ ತೀರ್ಥ ಬಾವಿಯಿದ್ದು ಪರಿಸರದಲ್ಲಿ ಧಾರಾಳ ನೀರಿನ ಆಶ್ರಯವಿರುವುದರಿಂದ ಮುಂದೆ ಕಲಾಭವನ ಕಲ್ಯಾಣಮಂಟಪ ಇತ್ಯಾದಿಗಳನ್ನು ಇಲ್ಲಿ ನಿರ್ಮಿಸಬಹುದು.

ಉಲ್ಲೇಖ[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (1 ed.). ಮಂಜೂಶ್ರೀ ಪ್ರಿಂಟರ್ಸ್. p. 62-63.