ಸದಸ್ಯ:Sukrutha Jois/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾರಾಯಣ್ ಮೇಘಾಜಿ ಲೋಖಂಡೇ(1848-1897) ಭಾರತದ ಕಾರ್ಮಿಕ ಚಳುವಳಿಯ ಪ್ರವರ್ತಕರಾಗಿದ್ದರು. ೧೯ ನೇ ಶತಮಾನದಲ್ಲಿ ಜವಳಿ ಗಿರಣಿಗಳ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವುದಕ್ಕಾಗಿ ಮಾತ್ರವಲ್ಲ, ಜಾತಿ ಮತ್ತು ಕೋಮು ವಿವಾದಾಂಶಗಳ ಬಗ್ಗೆ ಧೈರ್ಯದ ಪ್ರಯತ್ನಗಳನ್ನೂ ಅವರು ನಡೆಸಿದ್ದರು. ೨೦೦೫ ರಲ್ಲಿ ಭಾರತ ಸರ್ಕಾರ ತನ್ನ ಛಾಯಾಚಿತ್ರದೊಂದಿಗೆ ಅಂಚೆ ಚೀಟಿಯನ್ನು ಜಾರಿಗೊಳಿಸಿತು.


ಹೆಸರು  : ನಾರಾಯಣ್ ಮೇಘಾಜಿ ಲೋಖಂಡೆ

ಹುಟ್ಟಿದ ವರ್ಷ :೧೮೪೮

ಸ್ಥಳ  : ಮಹಾರಾಷ್ಟ್ರ, ಭಾರತ

ಮರಣ  : ೧೮೯೭ ಮುಂಬೈ, ಭಾರತ

ಭಾರತದ ಚಳವಳಿ ಟ್ರೇಡ್ ಯೂನಿಯನ್ ಚಳುವಳಿ

ಸಾಮಾಜಿಕ ಕೊಡುಗೆ [ಮೂಲ][ಬದಲಾಯಿಸಿ]

ನಾರಾಯಣ್ ಮೇಘಾಜಿ ಲೋಖಂಡೇ ಅವರು ಜ್ಯೋತಿರಾವ್ ಪುಲೆ ಪ್ರಮುಖ ಸಹೋದ್ಯೋಗಿಯಾಗಿದ್ದರು.[೧] ಲೋಖಂಡೇ ಭಾರತದ ಟ್ರೇಡ್ ಯೂನಿಯನ್ ಚಳವಳಿಯ ಪಿತಾಮಹ ಎಂದು ಮೆಚ್ಚುಗೆ ಪಡೆದಿದ್ದಾರೆ. 1880 ರಿಂದ ಅವರು "ಧೀನಬಂಧು ನಿರ್ವಹಣೆಯನ್ನು ವಹಿಸಿಕೊಂಡರು, ಇದು ಬಾಂಬೆಯಿಂದ ಪ್ರಕಟಿಸಲ್ಪಟ್ಟಿತು. ಲೋಖಾಂಡೆಯ ಜೊತೆಯಲ್ಲಿ ಜ್ಯೋತಿರಾವ್ ಸಹ ಬಾಂಬೆಯ ಜವಳಿ ಕಾರ್ಮಿಕರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಜೋತಿರಾವ್ ಮತ್ತು ಅವನ ಸಹೋದ್ಯೋಗಿಗಳು ಭಲೇಕರ್ ಮತ್ತು ಲೋಖಂಡೆ ರೈತರು ಮತ್ತು ಕಾರ್ಮಿಕರನ್ನು ಸಂಘಟಿಸಲು ಪ್ರಯತ್ನಿಸುವ ಮೊದಲು, ಅವರ ಅಸಮಾಧಾನವನ್ನು ಪರಿಹರಿಸಲು ಯಾವುದೇ ಸಂಘಟನೆಯಿಂದ ಅಂತಹ ಯಾವುದೇ ಪ್ರಯತ್ನ ಮಾಡಲಿಲ್ಲ. [2] ಫುಲೆ ಲೋಕಂಡೇ ಸಹಾಯದಿಂದ 'ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಶನ್' ಎಂಬ ಮೊದಲ ಇಂಡಿಯನ್ ವರ್ಕರ್ಸ್ ಸಂಘಟನೆಯನ್ನು ಪ್ರಾರಂಭಿಸಿದರು.

ಕೆಲವು ನಿಯಮಗಳು[ಬದಲಾಯಿಸಿ]

ಗಿರಣಿ ಕಾರ್ಮಿಕರಿಗೆ ಲೋಖಾoಡೆಯವರು ಕೆಲ‍ವು ನಿಯಮಗಳು ಜಾರಿಗೊಳಿಸಿದರು:

  1. ಮಿಲ್ ಕಾರ್ಮಿಕರಿಗೆ ಬಾನುವಾರದಂದು ರಜೆ ನೀಡಬೇಕು.
  2. ಮಧ್ಯಾಹ್ನ, ಕಾರ್ಮಿಕರಿಗೆ ಅರ್ಧ ಗಂಟೆ ಬಿಡುವಿನ ಅರ್ಹತೆ ನೀಡಲೇಬೇಕು.
  3. ಈ ಗಿರಣಿಯು ಬೆಳಗ್ಗೆ ೬:೩೦ ರಿಂದ ಕೆಲಸ ಮಾಡಲು ಮತ್ತು ಸೂರ್ಯಾಸ್ತಕ್ಕು ಮುನ್ನ ಮುಚ್ಚಬೇಕು.
  4. ಕಾರ್ಮಿಕರ ಸಂಬಳವನ್ನು ಪ್ರತಿ ತಿಂಗಳ ೧೫ ರೊಳಗೆ ನೀಡಬೇಕು.

ಬ್ರಿಟಿಷ್ ರಾಜರಿಂದ ಅವರು ರಾವ್ ಬಹದ್ದೂರ್ ಎಂಬ ಪ್ರಶಸ್ತಿಯನ್ನು ಪಡೆದರು.


ಸರ್ಕಾರದಿಂದ ಪ್ರಶಂಸೆ[ಬದಲಾಯಿಸಿ]

ಮೇ ೩, ೨೦೦೫ ರಲ್ಲಿ, ಭಾರತ ಸರ್ಕಾರ ಅವರ ಕೆಲಸವನ್ನು ನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

ಉಲ್ಲೇಖಗಳು[ಬದಲಾಯಿಸಿ]

  1. tpht://www.bspindia.org/mahatma-jotirao-phule.php