ಸದಸ್ಯ:SujanaS1940561/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸುಜನಾ. ನನ್ನ ತಂದೆಯ ಹೆಸರು ಶಿವಮೂರ್ತಿ. ನನ್ನ ತಾಯಿಯ ಹೆಸರು ವಸಂತ.

ನನ್ನ ತಂದೆಯ ಊರು ಮಂಡ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊಸಹಳ್ಳಿ

ಶಿವನಸಮುದ್ರ

ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯ ಎಂಬ ಹೆಸರು 'ಮಾಂಡವ್ಯ ಋಷಿ'ಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವು ಮೈಸೂರು ಮತ್ತು ಬೆಂಗಳೂರುನಗರಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮(೮೮೭೩೦೭ ಪುರುಷರು, ೮೭೪೪೧೧ ಮಹಿಳೆಯರು). ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಇಲ್ಲಿನ ಜನರು ನೇರ ನುಡಿಗೆ, ಹೃದಯವಂತಿಕೆಗೆ ಹೆಸರಾದವರು. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿನಿರ್ದೇಶಿತವಾಗಿದೆ



ನಮ್ಮ ಊರಿನ ಪಕ್ಕದಲ್ಲಿ ಶಿವನ ಸಮುದ್ರ ಜಲಪಾತ ಇದೇ. ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಇಲ್ಲಿ ೧೯೦೨ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಒಂದನ್ನು ಸ್ಥಾಪಿಸಲಾಯಿತು.ಇಡೀ ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು.ಇಷ್ಟೇ ಅಲ್ಲದೆ,ಈ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ ಮೊದಲ ಬಾರಿಗೆ ಕೋಲರಕ್ಕೆ ವಿದ್ಯುತ್ತನ್ನು ಕಳೆಸಲಾಗಿತ್ತು.

ಶಿಂಷಾ ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. ಮಧ್ಯರಂಗ ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. ಬೆಂಗಳೂರು-ಕೊಳ್ಳೇಗಾಲ ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.

ಗಗನ ಚುಕ್ಕಿ

ಶಿವನಸಮುದ್ರವೆಂಬ ದ್ವೀಪದ ಊರಿಗೆ ಹೋದಾಗ ಪ್ರವಾಸಿಗರು ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳಿಗೆ ತಪ್ಪದೆ ಭೇಟಿ ಕೊಡಬೇಕು. ಇವು ಶಿವನ ಸಮುದ್ರದ ಜಲಾಪಾತಗಳು ಇಬ್ಭಾಗವಾಗುವುದರಿಂದ ಉಂಟಾಗುತ್ತದೆ. 200 ಅಡಿಗಳಿಂದ ಲಂಬಕೋನದಲ್ಲಿ ಧುಮುಕುವ ಈ ಜಲಪಾತಗಳು ಒಂದಕ್ಕೊಂದು ವಿರುದ್ಧವಾಗಿದ್ದು ಗಗನಚುಕ್ಕಿ ಜಲಪಾತವು ಪಶ್ಚಿಮದಲ್ಲಿದ್ದು, ಭರಚುಕ್ಕಿಯು ಪೂರ್ವದಲ್ಲಿದೆ. ಇದನ್ನು ನೋಡಲು ಮಳೆಗಾಲದಲ್ಲಿನ ಜುಲೈ ಮತ್ತು ಅಕ್ಟೋಬರ್ ಮಾಸಗಳು ಸಕಾಲವಾಗಿದೆ.

ಭರಚುಕ್ಕಿ

ಪ್ರವಾಸಿಗರು ಹತ್ತಿರದಿಂದ ನೋಡಿದರೆ ಭರಚುಕ್ಕಿ ಜಲಪಾತವು ಇಕ್ಕಟ್ಟಾದ ಕಲ್ಲಿನ ಕೊರಕಲುಗಳ ಮಧ್ಯೆ ಹರಿಯುತ್ತದೆ, ಅಲ್ಲದೆ ಇದು ಗಗನಚುಕ್ಕಿ ಜಲಪಾತಕ್ಕಿಂತ ಅಗಲವಾಗಿರುವುದನ್ನು ಕಾಣಬಹುದು.ಈ ಊರಿನ  ಜಲಪಾತಗಳು ಮೊದಲನೆಯದಾಗಿ ಸಾಹಸ ದೋಣಿ ನಡೆಸುವವರಿಗೆ ಮೆಚ್ಚಿನ ತಾಣವಾಗಿದೆ. ಎರಡನೆಯದು ಇಲ್ಲಿನ ವೀಕ್ಷಣಾ ಗೋಪುರ ಮತ್ತು ಪ್ರಾಚೀನ ದರ್ಗಾ ಇಲ್ಲಿನ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಚಾರಣ ಕೈಗೊಳ್ಳಬಹುದು. ಆದರೆ ಗಗನ ಚುಕ್ಕಿ ಮತ್ತು ಭರಚುಕ್ಕಿ ಜಲಪಾತದ ನೀರಿನಲ್ಲಿ ಈಜಾಡುವುದು ಕ್ಷೇಮವಲ್ಲ.



ನನ್ನ ತಾಯಿಯ ಊರು ಮೈಸೂರು ಜಿಲ್ಲೆಯ ಸೋಮನಾಥ ಪುರ. ಕರ್ನಾಟಕ ರಾಜ್ಯವು ಪ್ರವಾಸೋದ್ಯಮದಲ್ಲಿ ಅದರಲ್ಲೂ ವಿಶೇಷವಾಗಿ ಶಿಲ್ಪಕಲೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹೊಯ್ಸಳ, ರಾಷ್ಟ್ರಕೂಟ, ಗಂಗರು, ಚೋಳರು ಹೀಗೆ ಹಲವು ಸಾಮ್ರಾಜ್ಯಗಳು ಕಾಲದ ಹಲವು ಭಾಗಗಳಲ್ಲಿ ಆಳಿದ ಸಮಯದಲ್ಲಿ ನಮ್ಮ ನಾಡಿಗೆ ಶಿಲ್ಪಕಲೆಯ ಮೂಲಕ ಅಪಾರವಾದ ಕೊಡುಗೆಯನ್ನೆ ಬಿಟ್ಟು ಹೋಗಿದ್ದಾರೆ.

ಕರ್ನಾಟಕದಲ್ಲಿ ಶಿಲ್ಪ ಕಲೆಗೆ ಹೆಸರು ಪಡೆದ ಸ್ಥಳಗಳ ಕುರಿತು ಹೇಳುತ್ತ ಸಾಗಿದರೆ ದೊಡ್ಡ ಪಟ್ಟಿಯೆ ಬೆಳೆಯುತ್ತದೆ. ಬೇಲೂರು, ಹಳೇಬೀಡು, ಮಹಾಕೂಟ, ಪಟ್ಟದಕಲ್ಲು, ಹಂಪಿ, ಐಹೊಳೆ, ಬಾದಾಮಿ, ಬನವಾಸಿ ಹೀಗೆ ಹತ್ತು ಹಲವು ಸ್ಥಳಗಳ ಹೆಸರುಗಳು ಮನದಲ್ಲಿ ಪುಟ ಪುಟನೆ ಪುಟಿದು ಬಿಡುತ್ತವೆ.

ಆದರೆ ಇಷ್ಟೆಲ್ಲ ಪ್ರಸಿದ್ಧ ಐತಿಹಾಸಿಕ ಪ್ರಸಿದ್ಧಿ ತಾಣಗಳ ಹೊರತಾಗಿಯೂ ನಮ್ಮ ನಾಡಿನಲ್ಲಿ ಇನ್ನೂ ಅನೇಕ ಸ್ಥಳಗಳು ತಮ್ಮಲ್ಲಿ ವಿಶಿಷ್ಟವಾದ ಶಿಲ್ಪಕಲೆಯುಳ್ಳ ರಚನೆಗಳನ್ನು ಹೊಂದಿವೆ. ಸಿಮಿತ ಜನರಿಗೆ ಮಾತ್ರ ತಿಳಿದಿರುವ ಈ ಸ್ಥಳಗಳು ಬಹುತೇಕ ಜನರಿಗೆ ತಿಳಿದಿಲ್ಲ. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ಸೋಮನಾಥಪುರ.

ಚೆನ್ನಕೇಶವ ದೇವಸ್ಥಾನ










ನನ್ನ ಹೆಸರು ಸುಜನ.ನಾನು ೨೨ ಆಗಸ್ಟ್ ೨೦೦೧ರಲ್ಲಿ ಜನಿಸಿದ್ದೇನೆ.ನನ್ನ ಜನ್ಮಸ್ಥಳ ಮೈಸೂರು.ನನ್ನ ತಾಯಿಯ ಹೆಸರು ವಸಂತ ಹಾಗೂ ನನ್ನ ತಂದೆಯ ಹೆಸರು ಶಿವಮೂರ್ತಿ .ಸಹೋದರಿಯ ಹೆಸರು ಮೇಘನ ಅವಳು ಬಿಕಾಂ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ.

ನಾನು ನನ್ನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಚಿನ್ಮಯ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ಮಾಡಿದೆ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೯೨.೬೪% ಶೇಕಡಾವನ್ನು ಪಡೆದೆ ಹಾಗೂ ನನ್ನ ಮುಂದಿನ ಶಿಕ್ಷಣವನ್ನು ಕ್ರೈಸ್ ಜೂನಿಯರ್ ಕಾಲೇಜಿನಲ್ಲಿ ಮುಂದುವರಿಸಿದೆ.ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ೮೨.೬೭% ಶೇಕಡ ಪಡೆದು ಉತ್ತೀರ್ಣವಾಗಿದ್ದೇನೆ.ನಾನು ಈಗ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ.ನನ್ನ ಜೀವನದಲ್ಲಿ ಬಹಳ ಇಷ್ಟವಾದ ವ್ಯಕ್ತಿ ಎಂದರೆ ನನ್ನ ತಂದೆ.ಅವರೇ ನನಗೆ ಸ್ಫೂರ್ತಿ.

ನೃತ್ಯ ಮಾಡುವುದು ನನ್ನ ಹವ್ಯಾಸ.ಹವ್ಯಾಸ ಎನ್ನುವುದಕ್ಕಿಂತ ಅದು ನನ್ನ ಜೀವನದ ಒಂದು ಅಂಶ ಎಂದರೆ ತಪ್ಪಾಗುವುದಿಲ್ಲ.ಬಾಲ್ಯದಿಂದಲೂ ನೃತ್ಯ ತರಗತಿಗಳಿಗೆ ಹೋಗುತ್ತಿದ್ದೇನೆ.ಭರತನಾಟ್ಯವನ್ನು ಐದು ವರ್ಷಗಳ ಕಾಲ ಕಲಿತಿದ್ದೇನೆ.ಶಾಲಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದೇನೆ,ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೇನೆ.ಹಾಗೆಯೇ ಹಾಡುವುದು ಎಂದರೆ ನನಗೆ ಇಷ್ಟ.ಗುಂಪು ಗಾಯನದಲ್ಲಿ ಭಾಗವಹಿಸಲು ನನಗೆ ಆಸಕ್ತಿ ಇದೆ.ಕನ್ನಡದ ಬಗ್ಗೆ ಅಪಾರವಾದ ಪ್ರೀತಿ ನನಗೆ.ನನ್ನ ಕಾಲೇಜಿನಲ್ಲಿ ಇದ್ದ ಶಿಕ್ಷಕರಿಂದ ಕನ್ನಡದ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ.ಕನ್ನಡದ ಸಾಹಿತ್ಯ ಹಾಗೂ ಅದರ ಬಗ್ಗೆ ಇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಬಹಳ ಖುಷಿಯಾಗುತ್ತದೆ. ನನಗೆ ಕ್ರಿಕೆಟ್ ನೋಡುವುದು ಎಂದರೆ ಬಹಳ ಆನಂದ.ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ನನ್ನ ಅಚ್ಚುಮೆಚ್ಚಿನ ಆಟಗಾರ.

ಭಗವದ್ಗೀತೆಯನ್ನು ಮೂರು ವರ್ಷಗಳ ಕಾಲ ಅಭ್ಯಾಸವನ್ನು ಮಾಡಿ,ಆರು ಅಧ್ಯಾಯಗಳನ್ನು ಮುಗಿಸಿದ್ದೇನೆ.ಭಗವದ್ಗೀತೆಯ ಪರೀಕ್ಷೆಗಳನ್ನು ಬರೆದು ಪ್ರಶಸ್ತಿ ಪತ್ರವನ್ನು ಹಾಗೂ ಪುಸ್ತಕಗಳನ್ನು ಪಡೆದಿದ್ದೇನೆ.ಯಾವುದೇ ಕೆಲಸವನ್ನು ಆಸಕ್ತಿಯಿಂದ ಮಾಡಬೇಕು.ಅದನ್ನು ಕಷ್ಟಪಟ್ಟು,ಶ್ರಮದಿಂದ ಮಾಡಬೇಕು.ಆಗಲೇ ನಮಗೆ ತೃಪ್ತಿಯಾಗುತ್ತದೆ ಎಂದು ನಂಬಿದ್ದೇನೆ.ನನ್ನ ತಂದೆ ತಾಯಿಗೆ ಒಳ್ಳೆಯ ಹೆಸರನ್ನು ತಂದು ಕೊಡುವುದು ನನ್ನ ಆಸೆ.ಮುಂದಿನ ದಿನಗಳಲ್ಲಿ ಕಷ್ಟಪಟ್ಟು ಓದಿ ಸಾಧನೆ ಮಾಡಬೇಕು ಎಂಬುದು ನನ್ನ ಗುರಿ.ನೃತ್ಯ ಅಲ್ಲದೆ ಚಿತ್ರ ಬಿಡಿಸುವುದು,ಅಡುಗೆ ಮಾಡುವುದನ್ನು ಕಲಿಯುವುದು ನನ್ನ ಇತರ ಹವ್ಯಾಸಗಳು.ಎಲ್ಲಾ ತರಹದ ವಿಷಯಗಳನ್ನು ಕಲಿತು ಕೊಳ್ಳುವುದರಲ್ಲಿ ನನಗೆ ಆಸಕ್ತಿ ಇದೆ ಹಾಗೆಯೇ ಎಷ್ಟು ಕಲಿತರೂ ಸಾಲದು.ರಿಸರ್ಚ್ ಮಾಡಬೇಕು ಎಂಬುದು ನನ್ನ ಆಸೆ.ಹಾಗೆಯೇ ನನ್ನ ಸಮಯವನ್ನು ಅದಕ್ಕಾಗಿ ಉಪಯೋಗಿಸಿಕೊಂಡು ಉತ್ತೀರ್ಣವಾಗಬೇಕೆಂಬುದು ನನ್ನ ಬಯಕೆ.