ಸದಸ್ಯ:Sudheerbs/ನನ್ನ ಪ್ರಯೋಗಪುಟ1
ಝೀಕಾ ವೈರಸ್ | |
---|---|
ಕಾರಣಗಳು | ಮುಖ್ಯವಾಗಿ ಸೊಳ್ಳೆಗಳಿಂದ |
ಝೀಕಾ ವೈರಸ್ ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ಒಂದು ಬಗೆಯ ರೋಗವಾಗಿದೆ. ಡೆಂಗ್ಯೂ, ಚಿಕನ್ ಗೂನ್ಯಾ ಜ್ವರವನ್ನು ಹರಡುವ ಸೊಳ್ಳೆಗಳಾದ ಈಡಿಸ್ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.ಝೀಕಾ ವೈರಸ್ ಫ್ಲವಿವಿರಿಡೆ ಎಂಬ ವೈರಸ್ ಗಳ ಕುಟುಂಬಕ್ಕೆ ಸೇರಿದ್ದಾಗಿದೆ. ಈ ವೈರಸ್ ಮೊದಲ ಬಾರಿಗೆ ಕಂಡು ಬಂದ ಉಗಾಂಡಾದಲ್ಲಿರುವ ಝೀಕಾ ಕಾಡುಗಳಲ್ಲಿ ಕಂಡು ಬಂದಿದದ್ದರಿಂದ ಝೀಕಾ ವೈರಸ್ ಎಂಬ ಹೆಸರನ್ನು ಇಡಲಾಗಿದೆ.
ಲಕ್ಷಣಗಳು
[ಬದಲಾಯಿಸಿ]ತೀವ್ರ ಜ್ಚರ, ಮೈ ಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪು ರಕ್ತಮಿಶ್ರಿತ ಗುಳ್ಳೆಗಳು ಇವು ಸೋಂಕು ಪೀಡಿತರಲ್ಲಿ ಕಂಡು ಬರುವ ಪ್ರಮುಖ ಲಕ್ಷಣಗಳಾಗಿವೆ.
ಹರಡುವಿಕೆ
[ಬದಲಾಯಿಸಿ]ಝೀಕಾ ವೈರಸ್ ಹರಡುವಿಕೆಯಲ್ಲಿ ಸೊಳ್ಳೆಗಳು ಮುಖ್ಯ ಪಾತ್ರ ವಹಿಸುತ್ತವಾದರೂ, ಇತರ ವಿಧಾನಗಳಿಂದಲೂ ಈ ರೋಗ ಹರಡುತ್ತದೆ. ಆ ಹರಡುವಿಕೆ ವಿಧಗಳನ್ನು ಕೆಳಗ ಪಟ್ಟಿ ಮಾಡಲಾಗಿದೆ.
- ಸೊಳ್ಳೆಗಳಿಂದ
- ಲೈಂಗಿಕ ಸಂಪರ್ಕದಿಂದ
- ಗರ್ಭಿಣಿಯರಲ್ಲಿ
- ರಕ್ತದ ಮೂಲಕ.
ಸೊಳ್ಳೆಗಳಿಂದ
[ಬದಲಾಯಿಸಿ]ಝೀಕಾ ವೈರಸ್ ಮುಖ್ಯವಾಗಿ ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುತ್ತದೆ, ಇದು ಹೆಚ್ಚಾಗಿ ಹಗಲಿನ ವೇಳೆಯಲ್ಲಿ ಸಕ್ರಿಯವಾಗಿರುತ್ತದೆ. ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ರಕ್ತವನ್ನು ಸೇವಿಸುವುದು ಮುಖ್ಯವಾಗಿರುತ್ತದೆ.