ಸದಸ್ಯ:Suchana gowda/sandbox
ಸಂವಹನ
ಸಂವಹನ ವೆಂದರೆ ಅಸ್ತಿತ್ವದಲ್ಲಿರುವ ಒಂದು ವಸ್ತು ವಿನಿಂದ ಇನ್ನೊಂದಕ್ಕೆ ಮಾಹಿತಿ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಸಂಪರ್ಕವೆಂದೂ ಸಹ ಹೇಳುವ ಇದು ತಿಳಿವಳಿಕೆಯನ್ನು ಮನದಟ್ಟು ಮಾಡುವ ಕಾರ್ಯವೂ ಆಗಿದೆ. ಸಂವಹನ ಪ್ರಕ್ರಿಯೆಗಳೆಂದರೆ ಸಂಕೇತಗಳ ಸಂಚಯ ಮತ್ತು ಸಂಕೇತ ಶಾಸ್ತ್ರದ ನಿಯಮಗಳೊಂದಿಗೆ, ಕನಿಷ್ಠ ಎರಡು ಪ್ರತಿನಿಧಿತ್ವಗಳ ನಡುವಿನ ಸಂಕೇತ-ಆಧರಿಸಿದ ಸಂಪರ್ಕದ ಕೊಂಡಿಯಾಗಿದೆ. ಸಾಮಾನ್ಯವಾಗಿ ಸಂವಹನವು ಮಾತು, ಬರಹ, ಇಲ್ಲವೆ ಸಂಜ್ಞೆಯ ಮೂಲಕ ಮಾಹಿತಿ ಅಥವಾ ವಿಚಾರ, ಅಭಿಪ್ರಾಯಗಳನ್ನು "ತಿಳಿಯಪಡಿಸುವುದು ಅಥವಾ ವಿನಿಮಯ ಮಾಡಿಕೊಳ್ಳುವುದಾಗಿದೆ". ಏಕ-ಮುಖೀಯ ಸಂವಹನದ ವೇಳೆಯಲ್ಲೂ ಸಹ, ಪರಸ್ಪರ ಅಂಗೀಕರಿಸಿದ ಗುರಿ ಅಥವಾ ದಿಕ್ಕಿನೆಡೆಗೆ (ಮಾಹಿತಿ) ಭಾವನೆ-ವಿಚಾರಗಳು, ಅನಿಸಿಕೆಗಳು ಅಥವಾ ಅಭಿಪ್ರಾಯಗಳ (ಸಶಕ್ತ) ವಿನಿಮಯವಾಗಿದೆ. ಇದು ಪ್ರಗತಿಯಲ್ಲಿರುವ ದ್ವಿಮುಖ/ಮಾರ್ಗ ಪ್ರಕ್ರಿಯೆಯಿಂದ ಸಂವಹನವನ್ನು ಉತ್ತಮಪಡಿಸಿ ಗ್ರಹಿಸಬಹುದಾಗಿದೆ.[೧]
ಸಂವಹನದಲ್ಲಿರುವ ಮಾಹಿತಿಯನ್ನು ಗುರ್ತಿಸಿ , ಅದೇ ಮಾರ್ಗ ಅಥವಾ ಮಾಧ್ಯಮದ ಮೂಲಕ ಕಳುಹಿಸುವ ಮತ್ತು ಸ್ವೀಕರಿಸುವವನಿಗೆ ಮಾಹಿತಿಯನ್ನು ತಲುಪಿಸುವ ಪ್ರಕ್ರಿಯೆಯಾಗಿದೆ. ಸಂದೇಶ ಸ್ವೀಕರಿಸಿದ ಬಳಿಕ ಅದನ್ನು ವಿಶ್ಲೇಷಿಸಿ, ಕಳುಹಿಸಿದವನಿಗೆ ಮರಳಿ ಪ್ರತಿಕ್ರಿಯೆ ನೀಡುವುದೇ ಸಂಪರ್ಕಸಾಧಕದ ಗುರಿಯಾಗಿದೆ. ಎಲ್ಲಾ ಪ್ರಕಾರದ ಸಂವಹನಕ್ಕೂ ಕಳುಹಿಸುವವ, ಸಂದೇಶ, ಮತ್ತು ಸ್ವೀಕರಿಸುವವ ಎಂದು ಮೂರು ಅಂಶಗಳ ಅಗತ್ಯವಿದೆ. ಸಂವಹನ ನಡೆಯಬೇಕಾದರೆ ಮೇಲಿನ ಈ ಎಲ್ಲಾ ಅಂಶಗಳು ಸಾಮಾನ್ಯಪ್ರದೇಶ ವ್ಯಾಪ್ತಿ ಹೊಂದಿರಬೇಕಾಗುತ್ತದೆ. ಶ್ರವಣ-ಕೇಳುವುದಕ್ಕೆ ಸಂಬಂಧಿಸಿದಂತೆ, ಧ್ವನಿ ಮಾಧ್ಯಮದ ಮಾತು, ಹಾಡು, ಮತ್ತು ಶೈಲಿ ಅಥವಾ ಮಾತಲ್ಲದ ಆಂಗಿಕ ಭಾಷೆ, ಸಂಕೇತ , ಪೂರಕ ಭಾಷೆ, ಸ್ಪರ್ಶ, ಕಣ್ಣ ನೋಟ, ಮತ್ತು ಬರಹದಂತಹವನ್ನೂ ಸಂವಹನ ಎನ್ನಬಹುದು.ಈ ಸಂಪರ್ಕ ಸಾಧನಗಳ ಮೂಲಕ ಸಂವಹನದ ವ್ಯಾಪಕತೆ ಹೆಚ್ಚುತ್ತದೆ
ಮಾಹಿತಿ ಸಂವಹನ ಕ್ರಾಂತಿ
ಕಾಲಾಂತರದಲ್ಲಿ, ತಂತ್ರಜ್ಞಾನವು ಅಭಿವೃದ್ಧಿಯಾದಂತೆ ಸಂವಹನದ ಹೊಸ ಪ್ರಕಾರಗಳು ಹುಟ್ಟಿಕೊಂಡವಲ್ಲದೆ, ಅದರ ಕುರಿತಂತೆ ಹೊಸ ಚಿಂತನಾ ಲಹರಿ,ಆಲೋಚನೆಗಳು ವಿನ್ಯಾಸಗೊಂಡವು. ತಂತ್ರಜ್ಞಾನದ ಪ್ರಗತಿಯ ವೇಗವು ಸಂವಹನದ ಪ್ರಕ್ರಿಯೆಗಳನ್ನು ಕ್ರಾಂತಿಕಾರಕ ರೀತಿಯಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಿತು. ಸಂವಹನವು ಈ ಕೆಳಗಿನ ಮೂರು ಕ್ರಾಂತಿಕಾರಕ ಹಂತಗಳ ಮೂಲಕ ಹೇಗೆ ರೂಪಾಂತರಗೊಂಡಿತು ಎನ್ನುವುದನ್ನು ಸಂಶೋಧಕರು ಹೀಗೆ ವಿಭಜಿಸಿದ್ದಾರೆ:
1ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯ ಅವಧಿಯಲ್ಲಿ, ಚಿತ್ರಸಂಕೇತಗಳೊಂದಿಗೆ ಮೊದಲ ಬರಹದ ಸಂವಹನ ಪ್ರಾರಂಭವಾಯಿತು. ಈ ಬರಹಗಳನ್ನು ಕಲ್ಲಿನಲ್ಲಿ ಕೆತ್ತಲಾಗಿತ್ತು, ಅವುಗಳನ್ನು ವರ್ಗಾಯಿಸಲು/ಬೇರೆಡೆಗೆ ಸಾಗಿಸಲು ತುಂಬಾ ಪ್ರಯಾಸದಾಯಕವಾಗಿತ್ತು. ಆ ಯುಗದಲ್ಲಿನ ಬರಹದ ಈ ಸಂವಹನವನ್ನು ಸುಲಭವಾಗಿ ಸಾಗಿಸುವಂತಿರಲಿಲ್ಲ, ಆದರೂ ಅವುಗಳು ಬಳಕೆಯಲ್ಲಿದ್ದವು.
2ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯಲ್ಲಿ, ಕಾಗದ, ಪಪೈರಸ್, ಜೇಡಿಮಣ್ಣು, ಮೇಣ ಇತ್ಯಾದಿಗಳ ಮೇಲೆ ಬರೆಯಲು ಪ್ರಾರಂಭಿಸಿದರು. ಸಮಾನ ರೂಪದ ಅಕ್ಷರಗಳ ಬಳಕೆಯಿಂದ, ದೂರ ದೂರದ ಪ್ರದೇಶಗಳವರೆಗೂ ಈ ಭಾಷೆಯ ಏಕರೂಪತೆಯನ್ನು ಅಂಗೀಕರಿಸಲಾಯಿತು. ಇದಾದ ಸ್ವಲ್ಪ ಸಮಯದ ನಂತರ ಗುಟನ್ಬರ್ಗ್ ಮುದ್ರಣ ಯಂತ್ರದ ಬಳಕೆಗೆ ಕಾರಣನಾದನು. ಅದನ್ನು ಬಳಸಿ ಗುಟನ್ಬರ್ಗ್, ಮೊದಲು ಬೈಬಲ್ ಗ್ರಂಥ ಮುದ್ರಿಸಿದನು. ಆ ಸಮಯದಲ್ಲಿ ವಿಶ್ವದೆಲ್ಲೆಡೆ ಬರಹಗಳನ್ನು ಇತರರು ವೀಕ್ಷಿಸಲು/ಓದಲು ವರ್ಗಾಯಿಸಬಹುದಾಗಿತ್ತು. ಈಗ ಬರಹ ಸಂವಹನವನ್ನು ದಾಖಲಿಸಬಹುದಾಗಿದೆ ಮತ್ತು ವರ್ಗಾಯಿಸಬಹುದಾಗಿದೆ.
3ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯ ಅವಧಿಯಲ್ಲಿ, ಮಾಹಿತಿಯನ್ನು ನಿಯಂತ್ರಿತ ತರಂಗಗಳು ಮತ್ತು ಇಲೆಕ್ಟ್ರಾನಿಕ್ ಸಂಕೇತಗಳ ಮೂಲಕ ವರ್ಗಾಹಿಸಲಾಗುತ್ತದೆ.
ಸಂವಹನವೆಂದರೆ, ಅದರ ಅರ್ಥವೇ ತಿಳಿಸುವಂತೆ ಸಾಮಾನ್ಯ ತಿಳಿವಳಿಕೆಯನ್ನು ಹುಟ್ಟುಹಾಕುವ, ಮಾಹಿತಿ ಹಂಚುವ ಮತ್ತು ರವಾನಿಸುವ ಪ್ರಕ್ರಿಯೆಯಾಗಿದೆ. ಅಂತರ್ ವ್ಯಕ್ತಿಯ ಮತ್ತು ವ್ಯಕ್ತಿಗಳ ನಡುವಿನ ಪ್ರಕ್ರಿಯೆಯಾದ ಶ್ರವಣ, ವೀಕ್ಷಣೆ, ಸಂಭಾಷಣೆ, ಪ್ರಶ್ನಿಸುವಿಕೆ, ವಿಶ್ಲೇಷಿಸುವ, ಮತ್ತು ಮೌಲ್ಯೀಕರಣದಲ್ಲಿರುವ ಕೌಶಲ್ಯಗಳ ಪ್ರಮಾಣದ ಮಾಹಿತಿಯ ಅಗತ್ಯ ಈ ಪ್ರಕ್ರಿಯೆಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಸಂವಹನದ ಸಹಯೋಗ ಮತ್ತು ಸಹಕಾರದೊಂದಿಗೆ ಸಂಭವಿಸುತ್ತದೆ.[೨]
ಯಶಸ್ವಿ ಸಂವಹನಕ್ಕೆ ಹಲವಾರು ಸಾಮಾನ್ಯ ಸಮಸ್ಯೆಗಳಿವೆ. ಅವುಗಳಲ್ಲಿ ಮಿತಿಮೀರಿದ ಸಂದೇಶ (ವ್ಯಕ್ತಿಯು ಒಂದೇ ಸಮಯದಲ್ಲಿ ಹಲವಾರು ಸಂದೇಶಗಳನ್ನು ಸ್ವೀಕರಿಸಿದಾಗ) ಮತ್ತು ಸಂದೇಶದ ಸಂಕೀರ್ಣತೆ ಯು ಎರಡು ಪ್ರಮುಖ ಸಾಮಾನ್ಯ ಸಮಸ್ಯೆಗಳಾಗಿವೆ.[೩] ಸಂವಹನವು ಒಂದು ನಿರಂತರ ಪ್ರಕ್ರಿಯೆಯಾಗಿದೆ.