ವಿಷಯಕ್ಕೆ ಹೋಗು

ಸದಸ್ಯ:Sridhar subramanyam/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದುಃಖದ ಮಳೆರಾಯ.........

ಓ ನನ್ನ ದುಃಖದ ಮಳೆರಾಯ ನಿನ್ನು ಏಕೆ ಹೀಗೆ ಮಾಡುವೆಯಾ, ನಿನಗೆ ಸ್ವಲ್ಪವಾದರೂ ಜನರ ಮೇಲೆ ಕಿಂಚತು ಕರುಣೇ ಇಲ್ಲವೆ. ಜಗತ್ತಿನಲ್ಲಿ ನಿನನ್ನು ನಂಬಿದಷ್ಟು ತನ್ನ ಹೆತ್ತ ತಾಯಿನ್ನ ಸಹ ನಂಬುತ್ತಿಲ್ಲ. ನಿನ್ನು ಏಕೆ ರೀತಿ ಮಾಡುವೆಯಾ ನನಗೆ ಅರ್ಥವಾಗುತ್ತಿಲ್ಲ, ಜನರಿಗೆ ಹೊಟ್ಟೆ ಮೇಲೆ ತಂಪಾರಿಸುವಂತೆ ಮಾಡು ಮಳೆರಾಯ, ಯಾಕೆ ನೀ ಮೌನವಾಗಿ ಆಕಾಶ ದಲ್ಲಿ ಕುಳಿತುಕೊಂಡಿರುವೆಯಾ, ನಿನಗೆ ಬೇಸರವಾಗುತ್ತಿಲ್ಲವೆ, ರೈತರ ಜೊತೆಗೆ ಸ್ವಲ್ಪ ಆಟ ಹಾಡುವುದಕಾದರೂ ಧರೆಗಿಳಿದು ಖುಷಿ ತಂದುಕೊಂಡು, ನೀ ಬರುವುದರಿಂದ ರೈತನು ಸಾವಿರರು ಜನಕ್ಕೆ ಅನ್ನ ನೀಡುತ್ತಾನೆ. ರೈತನ್ನು ಸ್ವಾರ್ಥ ಸ್ವಾಭಾವದವನಲ್ಲ, ಬೆಳೆದಿರುವ ಭತ್ತದಲ್ಲಿ ಹಂಚಿಕೊಂಡು ತಿನ್ನುವ ಸ್ವಾಭಿಮಾನ ಬಣದವರು. ಮೌನವಾಗಿ ಕುಳಿತುಕೊಂಡಿರುವೆಯ ನೀ ಬಂದರೆ ಒಂದು ಕಡೆ ಸುರಿದರೆ, ಮತ್ತೊಂದು ಕಡೆ ಯಾಕೆ ಸುರಿಯುತ್ತಿಲ್ಲ ಎಂಬ ಪ್ರಶ್ನೆ ನನ್ನದಾಗುತ್ತೆ.

ನಮ್ಮ ಜನರು ಒಮ್ಮಮ್ಮೆ ಮಾತನಾಡಿಕೊಳ್ಳುತ್ತಾರೆ ರೈತ ನಂಬಿದವರು ಕೆಟ್ಟವರಿಲ್ಲ, ಮಳೆರಾಯ ನಂಬಿದವರು ಕೆಟ್ಟಿದ್ದಾರೆ. ಎಂದು ಅವರ ಮಾತಿಗೆ ನಿನಗೆ ಎನ್ನಾದರೂ ಕೋಪವೆ ಹಾಗೇನಾದರು ಇದರೆ ಹೇಳು ನಮ್ಮ ಜನರಿಗೆ ಹೇಳುವೆ.

ನಮ್ಮ ರೈತರು ನಿನ್ನ ಕೆಳಗೆ ಇಳಿಸುವುದಕ್ಕೆ ಹಗಲು ರಾತ್ರಿ ನಿಮ್ಮಗೆ ಜಪ್ಪಿಸುತ್ತಾ, ನೀ ಬರಲೆಂದು ವಾಸುದೇವ (ಕತೆ)ಗಳಿಗೆ ವಿವಾಹ ಮಾಡಿಸುವುದು, ಕಪ್ಪೆ ತೆಲೆಯ ಮೇಲೆ ಎತ್ತಿಕೊಂಡು ಮನೆ ಮನೆಗೆ ತೆರಳಿ ನಿನನ್ನು ನಾಮ ವಚನಗಳ ಹೇಳುತ್ತಾ, ಹಬ್ಬಹರಿದಿನಗಳಲ್ಲಿ ಮೊದಲ ಪೊಜೆ ಮತ್ತು ನೈವೇದ್ಯ ಇದ್ದರೆ ಮೊದಲು ನಿಮ್ಮಗೆ ಆದ ನಂತರ ನಮ್ಮದಾಗುತ್ತದೆ. ರೈತರು ಎಷ್ಟೇ ಭೈದರು ಮೊದಲ ನೈವೇದ್ಯ ನಿಮ್ಮಗೆ ನೀಡಿದ ನಂತರ ತಾವು ತಿನ್ನುವ ಸ್ವಾಭಾವ ಗುಣದವರು, ಇಂತಹ ರೈತರ ಮೇಲೆ ಸ್ವಲ್ಪವಾದರೂ ನಿಮ್ಮಗೆ ಏಳಷ್ಟು ಕರುಣೆ ಇಲ್ಲವೆ.

ಒಮೂಮ್ಮೆ ನೀ ಧರೆಗಿಳಿದರೆ ದೇಶ ಕೊಚ್ಚಿಕೊಂಡು ಹೋಗುವಂತೆ ಧರೆಯಿಳಿತಿಯಾ, ಯಾಕೆ ನಿನಗೆ ಅಷ್ಟು ಕೋಪ ಹೇಳು ಮಳೆರಾಯ ಹೇಳು, ಇತ್ತಿಚೀಗೆ ದಕ್ಷಿಣ ಕನ್ನಡ ಭಾರಿ ಮಳೆಯಿಂದ ಎಷ್ಟೊ ಮಕ್ಕಳು ಸಾವನ್ನಪಿದ್ದಾರೆ. ಯಾಕೆ ಜನರ ಮೇಲೆ ಅಷ್ಟು ಕೋಪ ನಿನಗೆ ಜನರು ಪೂಜಿಸುವುದು ತಪ್ಪ, ಹೇಳು ರಾಯರೆ ಹೇಳು ನನ್ನ ಪ್ರಶ್ನೆಗೆ ಉತ್ತರ ನೀಡು ಯಾಕೆ ನೀ ಮೌನವಾಗಿ ಕುಳಿತುಕೊಂಡಿಯಾ.

 ರೈತನ ಕರುಳಿನ ಕೂಗು ಒಮ್ಮೆಯಾದರೂ ನಿಮ್ಮಗೆ ಕೇಳುತ್ತಿಲ್ಲವೆ, ಪಡೆಯಲಾರದ ಕಷ್ಟಗಳು ಪಡೆದು ದುಃಖಿತನಾಗಿದ್ದಾನೆ.  ನಿನ್ನ ನಂಬಿಕೊಂಡು ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಮನೆಯವರು ಬೀದಿಗಿಳಿಯುತ್ತಿದ್ದಾರೆ. ಆ ರೀತಿ ಕಾಣುವುದು  ನಿನಗೆ ಇಷ್ಟವೇ  ಹಾಗದಾರೆ  ಯಾವುದೂ ಮುಖವಾಡ ದಾರಿಸಿಕೊಂಡು ಪ್ರವಾಹ ಅಥವಾ ಭೊಕಂಪವಾಗಿ ಬಂದು ನಮ್ಮನ್ನು ಒಮ್ಮೆಲೆ ಕರೆದುಕೊಂಡು ಹೋಗಿ ಬಿಡು ಹಾಗ ನಿನಗೆ ತೃಪ್ತಿಯಾಗುತ್ತದೆ. ಓ ನನ್ನ ಮಳೆರಾಯ ಓ ನನ್ನ ಮಳೆರಾಯ ನಿನಗೆ ಏನುಬೇಕು ಹೇಳು ನನ್ನಿಂದ ಹಾಗದಿದ್ದಾರೆ, ನನ್ನ ರೈತರಿಂದ ಕೊಡುಸುವೆ, ಹೇಳು ನಿನ್ನು ಮೌನವಾಗಿ ಕುಳಿತುಕೊಳ್ಳಬೇಡ ಸಂಕೋಚದಿಂದ ಕೇಳು, ನಿಮ್ಮಗೆ ದುಃಖಕ್ಕೆ ಇಡುಮಾಡದಂತೆ ನಾವು ಕೋಡುವೆ ಓ ನನ್ನ  ಮಳೆರಾಯ, ನನ್ನ ರೈತನಿಗೆ ನಿನ್ನಿಂದ ಯಾವ ಕಷ್ಟ ಕೊಡದೆ ಹಾಗೇ ನೀ ಧರಗಿಳಿಯೊ ಓ ನನ್ನ ಮಳೆರಾಯ ಓ ನನ್ನ ಮಳೆರಾಯ.


ಮಳೆ