ವಿಷಯಕ್ಕೆ ಹೋಗು

ಸದಸ್ಯ:Sridevi 1940379/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಫಿ ತೋಟ

ನನ್ನ ಹೆಸರು ಶ್ರೀದೇವಿ . ನಾನು ದಿನಾಂಕ ೨೭/೦೩/೨೦೦೧ ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಕಾರಿ

ಆಸ್ಪತ್ರೆಯಲ್ಲಿ ಜನಿಸಿದೆ .

ಸೋಮವಾರಪೇಟೆಯ ಚೌಡ್ಲು ನನ್ನ ತಾಯಿಯ ಊರು . ನನ್ನ ತಾಯಿಯ ಹೆಸರು ರಶ್ಮಿ . ನನ್ನ ತಾಯಿ ಹಾಸನದ ಹಾಸನ್ ಪಬ್ಲಿಕ್

ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .

ನನ್ನ ತಂದೆಯ ಹೆಸರು ಪ್ರಶಾಂತ್ . ನನ್ನ ತಂದೆಯ ಊರು ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು . ನನ್ನ ತ೦ದೆ ಕಾಫಿ ಬೆಳೆಗಾರರು .

ಮಲ್ಲ೦ದೂರಿನಲ್ಲಿ ನಮ್ಮ ತೋಟ ಇದೆ .

ನನ್ನ ಪೋಷಕರಿಗೆ ನಾವಿಬ್ಬರು ಮಕ್ಕಳು . ನನಗೊಬ್ಬ ಅಣ್ಣನಿದ್ದಾನೆ . ಅವರ ಹೆಸರು ನಿಶಾ೦ತ್ . ಅವರು ತಮ್ಮ ದಂತ ವೈದ್ಯಕೀಯ ವಿಧ್ಯಾಭ್ಯಾಸವನ್ನು ಶಿವಮೊಗ್ಗದಲ್ಲಿ ಮಾಡುತ್ತಿದ್ದಾರೆ . ನನ್ನ ಅಣ್ಣನಿಗೂ ನನಗೂ ಐದು ವರುಷಗಳ ಅಂತರ . ನಮ್ಮ ನಾಲ್ಕು ಜನರ ಈ ಸೊಗಸಾದ ಪರಿವಾರವು ಸಂತೋಷದಿಂದ ಕೂಡಿದೆ . ನಾವೆಲ್ಲ ಬಹಳ ಅನ್ಯೋನ್ಯತೆ ಇಂದಿದ್ದೇವೆ . ನನ್ನ ಜನನದ ನಂತರ ನನ್ನ ತಂದೆ ತಾಯಿ ಹಾಸನಕ್ಕೆ ಸ್ಥಳಾಂತರಗೊಂಡರು .

ವಿದ್ಯಾಭ್ಯಾಸ:

[ಬದಲಾಯಿಸಿ]

ನನ್ನ ಶಾಲಾ ವಿದ್ಯಾಭ್ಯಾಸವನ್ನು ನಾನು ಹಾಸನದ ಹಾಸನ್ ಪಬ್ಲಿಕ್ ಶಾಲೆಯಲ್ಲಿ ಮಾಡಿದೆ . ನನ್ನ ಪದವಿ ಪೂರ್ವ ಶಿಕ್ಷಣವನ್ನು ನಾನು ಹಾಸನದ ಬ್ರಿಲಿಯಂಟ್ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ . ನಾನು ಸಿ.ಬಿ.ಎಸ್.ಸಿ ಕ್ರಮದಲ್ಲಿ ಓದಿದ್ದರಿಂದ ನಮಗೆ ಸಿ.ಜಿ.ಪಿ.ಎ ವ್ಯವಸ್ಥೆ ಇತ್ತು . ನನಗೆ ಹತ್ತು ಅಂಕಗಳು ಲಭಿಸಿದ್ದವು . ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ನನಗೆ ಶೇಕಡ ೯೬ರಷ್ಟು ಅಂಕಗಳು ಲಭಿಸಿದ್ದವು . ನಂತರದ ವ್ಯಾಸಂಗಕ್ಕಾಗಿ ನಾನು ಬೆಂಗಳೂರಿಗೆ ಬಂದೆ . ಪ್ರಸ್ತುತ ನಾನು ನನ್ನ ಸ್ನಾತಕಪೂರ್ವ ಪದವಿಯನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದೇನೆ . ನನ್ನ ಜೀವನದಲ್ಲಿ ನಾನು ಕಳೆದಿರುವ ೧೮ ವರ್ಷಗಳಲ್ಲಿ ನನ್ನ ಹೆಚ್ಚು ಅವಧಿಯನ್ನು ನಾನು ಹಾಸನದಲ್ಲಿಯೇ ಕಳೆದಿರುವುದರಿಂದ ನನ್ನ ಹೆಚ್ಚು ನೆನಪುಗಳು ನನ್ನ ಶಾಲೆ , ಕಾಲೇಜು ಮತ್ತು ಮನೆಯದ್ದು . ನನ್ನ ತಂದೆ , ತಾಯಿ ; ನನ್ನನ್ನು ಮತ್ತು ನನ್ನ ಅಣ್ಣನನ್ನು ಬಹಳ ಪ್ರೀತಿ , ವಿಶ್ವಾಸ , ನಂಬಿಕೆಯಿಂದ ನೋಡಿಕೊಂಡಿದ್ದಾರೆ . ಅವರ ಪ್ರೀತಿ , ವಾತ್ಸಲ್ಯಕ್ಕೆ ಎಂದೆಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ . ನಾನು ಅವರೊಂದಿಗೆ ಕಳೆದಿರುವ ಪ್ರತಿಯೊಂದು ಕ್ಷಣವು ಅತ್ಯಮೂಲ್ಯವಾದುದು . ಅಣ್ಣ ತನ್ನ ವ್ಯಾಸಂಗಕ್ಕಾಗಿ ಇತರೆ ಊರುಗಳಿಗೆ ಹೋಗಬೇಕಾದ ಕಾರಣ ನಾನು ಅವರೊಂದಿಗೆ ಕಳೆದಿರುವ ಕ್ಷಣಗಳು ಕಡಿಮೆ . ಆದರೆ ಆ ಕೆಲವು ಕ್ಷಣಗಳೇ ನಮ್ಮ ಬದುಕಿನಲ್ಲಿರುವ ಅತ್ಯಂತ ಅದ್ಭುತ ನೆನಪುಗಳು . ನನ್ನನ್ನು ಬಹಳ ಪ್ರೀತಿ , ಕಾಳಜಿ ಇಂದ ನೋಡಿಕೊಂಡಿದ್ದಾನೆ . ನನ್ನ ತಂದೆ-ತಾಯಿಗೆ ನನ್ನನ್ನು ಹಾಸನ್ ಪಬ್ಲಿಕ್ ಶಾಲೆಯಂತ ಅದ್ಭುತವಾದ ಶಾಲೆಗೆ ಮತ್ತು ಬ್ರಿಲಿಯಂಟ್ ಕಾಲೇಜಿನಂತ ಒಳ್ಳೆಯ ಕಾಲೇಜಿಗೆ ಸೇರಿಸಿದ್ದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು . ನಾನು ಇವತ್ತು ಈ ಹಂತದವರೆಗೂ ತಲುಪಿದ್ದೇನೆಂದರೆ ಅದಕ್ಕೆ ಕಾರಣ ನನ್ನ ಪೋಷಕರು , ನನ್ನ ಶಾಲೆ , ನನ್ನ ಕಾಲೇಜು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಶಿಕ್ಷಕರು . ಎರಡೂ ಕಡೆ ನನಗೆ ಬಹಳ ಉತ್ತಮ ವಾತಾವರಣ ಹಾಗು ಉನ್ನತ ಶಿಕ್ಷಣ ದೊರೆತಿರುವುದು ನನ್ನ ಪುಣ್ಯ . ನನ್ನ ಜೀವನದುದ್ದಕ್ಕೂ ನನಗೆ ಒಳ್ಳೆಯ ಸ್ನೇಹಿತರು ದೊರೆತಿದ್ದಾರೆ .

ನನಗೆ ಕೆಲವು ಹವ್ಯಾಸಗಳಿವೆ . ನನಗೆ ಚಿತ್ರಕಲೆಯಲ್ಲಿ ಬಹಳ ಆಸಕ್ತಿ . ಹಲವಾರು ಚಿತ್ರಗಳನ್ನು ಬಿಡಿಸಿ ಅದಕ್ಕೆ ಬಣ್ಣ ಹಚ್ಚಿದ್ದೇನೆ . ನನಗೆ ಬಿಡಿಸುವುದಕ್ಕಿಂತ ಬಣ್ಣ ಹಚ್ಚುವುದರಲ್ಲಿ ಹೆಚ್ಚು ಆಸಕ್ತಿ . ಸೀಸದ ಕಡ್ಡಿಯ ಕಲೆ (ಪೆನ್ಸಿಲ್ ಶೇಡಿಂಗ್) ನನಗೆ ಎಲ್ಲಕ್ಕಿಂತ ಅಚ್ಛುಮೆಚ್ಚು . ನನಗೆ ಪರಿಸರದ ಸೊಗಸನ್ನು ಅನುಭವಿಸಲು ಆನಂದವಾಗುತ್ತದೆ . ಆದ್ದರಿಂದ ನಾನು ತುಂಬ ಪ್ರಯಾಣ ಮಾಡುತ್ತೇನೆ . ನಾನು ನಮ್ಮ ರಾಜ್ಯ, ಸೇರಿದಂತೆ ಭಾರತದ ಹಲವಾರು ರಾಜ್ಯಗಳಿಗೆ ಭೇಟಿ ನೀಡೀದ್ದೇನೆ . ತಮಿಳುನಾಡು, ಗೋವಾ, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ್, ಹರಿಯಾಣ ರಾಜ್ಯಗಳಿಗೆ ಹೋಗಿದ್ದೇನೆ . ಕರ್ನಾಟಕದ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಬೇಕೆಂಬ ಆಸೆ . ನಂತರ ಭಾರತದ ಇತರೆ ರಾಜ್ಯಗಳಿಗೆ ಅನಂತರ ಪ್ರಪಂಚ ಪರ್ಯಟನೆ ಮಾಡಬೇಕೆಂಬ ಆಸೆ ಕೂಡ ಇದೆ . ನನಗೆ ಪ್ರಯಾಣಿಸುವಾಗ ಹಾಡು ಕೇಳುವ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸವಿದೆ . ಬೇರೆ ಸಮಯದಲ್ಲೂ ಕೂಡ ಈ ಕೆಲಸಗಳನ್ನು ಮಾಡುತ್ತೇನೆ . ನನ್ನ ಆದರ್ಶ ವ್ಯಕ್ತಿಗಳು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಸ್ಟೀಫನ್ ಹಾಕಿಂಗ್ಸ್ . ಆದ್ದರಿಂದ ಅವರಿಬ್ಬರ ಕೆಲವು ಪುಸ್ತಕಗಳನ್ನು ಓದಿದ್ದೇನೆ . ನನಗೆ ಅಡುಗೆ ಮಾಡುವುದು ಇಷ್ಟ . ಸಿಹಿತಿಂಡಿಗಳು , ಕೇಕ್ ಮತ್ತು ಸಂಜೆಯ ಕುರುಕು ತಿಂಡಿ ಮಾಡುತ್ತೇನೆ . ಪದಬಂಧ ಮಾಡುವ ಮತ್ತು ಚಿಕ್ಕ ಪದ್ಯಗಳನ್ನು ಬರೆಯುವ ಅಭ್ಯಾಸವೂ ಇದೆ .

ನಮ್ಮ ಬಳಿ ಇಲ್ಲದೆ ಇರುವ ವಸ್ತುಗಳ ಬಗ್ಗೆ ಚಿಂತಿಸದೆ , ಇರುವುದರಲ್ಲಿಯೇ ಸಂತೋಷ ಪಟ್ಟರೆ ನಮ್ಮ ಜೀವನವನ್ನು ನೆಮ್ಮದಿಯಿಂದ ಸಾಗಿಸಬಹುದು . ನಾನು ನನ್ನ ಜೀವನದ ಪ್ರತಿ ಕ್ಷಣವನ್ನು ಆನಂದಿಸುತ್ತೇನೆ . ಆದ್ದರಿಂದ ನಾನು ನನ್ನ ಜೀವನದಲ್ಲಿ ಬಹಳ ಸಂತಸದಿಂದಿದ್ದೇನೆ . ಜೀವನದುದ್ದಕ್ಕೂ ಕಲಿಯುವುದು ಬಹಳವಿದೆ , ಬದುಕು ಬಹಳಷ್ಟು ಕಲಿಸಿಕೊಟ್ಟಿದೆ . ಜೀವನದ ಅನುಭಗಳು ತುಂಬ ಪಾಠಗಳನ್ನು ಹೇಳಿಕೊಡುತ್ತವೆ , ಅದರಿಂದ ಕಲಿತು , ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದುಕೊಂಡು ಒಬ್ಬ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವುದೇ ನನ್ನ ಆಶಯ .

ಹೇಮಾವತಿ ಜಲಾಶಯ , ಗೊರೂರು

ಹಾಸನ ಜಿಲ್ಲೆಯು ಏಳು ತಾಲ್ಲೂಕುಗಳನ್ನು ಹೊ೦ದಿದೆ . ಅವುಗಳು ಆಲೂರು, ಅರ್ಕಲ್‌ಗೂಡು, ಅರ್ಸೀಕೆರೆ, ಬೇಲೂರು, ಚೆನ್ನರಾಯಪಟ್ಟಣ, ಹೊಳೆನರ್ಸೀಪುರ ಮತ್ತು ಸಕಲೇಶಪುರ .

ಹೇಮಾವತಿ ಜಲಾಶಯ:

[ಬದಲಾಯಿಸಿ]

ಹಾಸನ ಜಿಲ್ಲೆಗೆ ನೀರು ಸರಬರಾಜು ಹೇಮಾವತಿ ಜಲಾಶಯದಿ೦ದ ಆಗುತ್ತದೆ . ಇದು ಹಾಸನ ಜಿಲ್ಲೆಯ ಗೊರೂರಿನಲ್ಲಿದೆ . ಈ ಜಲಾಶಯವನ್ನು ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ . ಹೇಮಾವತಿ ನದಿಯು ಕಾವೇರಿ ನದಿಯ ಪ್ರಮುಖ ಉಪನದಿ . ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವ ಬಲ್ಲಾಳ ರಾಯನ ದುರ್ಗದ ಬಳಿ ಆರ೦ಭವಾಗಿ ಇದು ಹಾಸನ ಜಿಲ್ಲೆಯ ಮೂಲಕ ಹರಿಯುತ್ತದೆ , ಅಲ್ಲಿ ಅದರ ಮುಖ್ಯ ಉಪನದಿ ಯಾಗಚಿ ನದಿಯು ಸೇರಿಕೊಳ್ಳುತ್ತದೆ . ನಂತರ ಕಾವೇರಿಗೆ ಸೇರುವ ಮೊದಲು ಮಂಡ್ಯ ಜಿಲ್ಲೆಗೆ ಸೇರುತ್ತದೆ . ಈ ಅಣೆಕಟ್ಟು ೫೮ ಮೀಟರ್ ಎತ್ತರ, ಮತ್ತು ೪೬೯೨ ಮೀಟರ್ ಉದ್ದವಿದೆ . ಮಳೆಗಾಲದಲ್ಲಿ ನೀರು ತು೦ಬಿ ಅಣೆಕಟ್ಟಿನ ದ್ವಾರಗಳನ್ನು ತೆರೆದಾಗ ಅಲ್ಲಿ ಮೂಡಿ ಬರುವ ಸೊಗಸಾದ ದೃಶ್ಯವನ್ನು ನೋಡಲು ಜನ ಸಾಗರ ಹರಿದು ಬರುತ್ತದೆ .

ಶೆಟ್ಟಿಹಳ್ಳಿ ಇಗರ್ಜಿ

ಶೆಟ್ಟಿಹಳ್ಳಿ ಇಗರ್ಜಿ:

[ಬದಲಾಯಿಸಿ]

ಶೆಟ್ಟಿಹಳ್ಳಿ ಇಗರ್ಜಿಯು ಹಾಸನದಲ್ಲಿರುವ ಅದ್ಭುತ ಪ್ರವಾಸಿ ಸ್ಥಳಗಳಲ್ಲಿ ಒ೦ದಾಗಿದೆ . ಭಾರತದಲ್ಲಿ ಫ್ರೆಂಚ್ ಮಿಷನರಿಗಳು ನಿರ್ಮಿಸಿದ ಈ ಚರ್ಚ್ ಗೋಥಿಕ್ ವಾಸ್ತುಶಿಲ್ಪದ ಭವ್ಯವಾದ ರಚನೆಯಾಗಿದೆ . ಹೇಮಾವತಿ ಅಣೆಕಟ್ಟು ಮತ್ತು ಜಲಾಶಯದ ನಿರ್ಮಾಣದ ನಂತರ ಚರ್ಚ್ ಅನ್ನು ಕೈಬಿಡಲಾಯಿತು . ಅಂದಿನಿಂದ ಇದು ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ, ಅಲ್ಲಿ ಮಳೆಗಾಲದಲ್ಲಿ ನೀರು ತು೦ಬಿಕೊ೦ಡು ಇಗರ್ಜಿಯು ಮುಳುಗಿ ಹೋಗುತ್ತದೆ . ಅರ್ಧ ಮುಳುಗಿದ ಚರ್ಚ್ ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ . ಅಷ್ಟು ಅದ್ಭುತವಾಗಿ ಕಾಣುತ್ತಿರುತ್ತದೆ ಆ ಪಾಳು ಬಿದ್ದ ಕಟ್ಟಡ . ಇದನ್ನು ಮುಳುಗಿದ ಚರ್ಚ್ ಮತ್ತು ದಿ ಫ್ಲೋಟಿಂಗ್ ಚರ್ಚ್ ಎಂದೂ ಕರೆಯುತ್ತಾರೆ . ಇದು ಬೆ೦ಗಳೂರಿನಿ೦ದ ೨೦೦ ಕಿಲೋಮೀಟರ್ ದೂರದಲ್ಲಿದೆ .


ಚೆನ್ನಕೇಶವ ದೇವಸ್ಥಾನ , ಬೇಲೂರು

ಬೇಲೂರು:

[ಬದಲಾಯಿಸಿ]

ಚೆನ್ನಕೇಶವ ಹಿಂದೂ ದೇವರಾದ ವಿಷ್ಣುವಿನ ಒಂದು ರೂಪ . ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ . ಬೇಲೂರನ್ನು ವೇಲೂರು ಅಥವಾ ವೇಲಾಪುರ ಎಂದು ಕರೆಯಲಾಗುತ್ತದೆ. ಇದು ಹೊಯ್ಸಳ ರಾಜರ ಆರಂಭಿಕ ರಾಜಧಾನಿಯಾಗಿತ್ತು. ಇದು ಹೇಮಾವತಿ ನದಿಯ ಉಪನದಿಯಾದ ಯಗಚಿ ನದಿಯ ದಡದಲ್ಲಿದೆ . ಇದು ತನ್ನ ಅದ್ಭುತವಾದ ವಾಸ್ತು ಶಿಲ್ಪ ಮತ್ತು ಕಟ್ಟಡದ ಮೇಲಿರುವ ಶಿಲಾನ್ಯಾಸಕ್ಕೆ ಪ್ರಸಿದ್ಧಿ ಪಡೆದಿದೆ . ಚೆನ್ನಕೇಶವ ದೇವಸ್ಥಾನ ನಿರ್ಮಿಸಲು ೧೦೩ ವರ್ಷಗಳು ಬೇಕಾದವು . ಇದು ಯುನೆಸ್ಕೋ ವಿಶ್ವ ಪರ೦ಪರೆ ತಾಣಗಳಲ್ಲಿ ಒ೦ದಾಗಿದೆ . ಈ ದೇವಾಲಯದ ಸೊಬಗನ್ನು ನೋಡಲು ವಿದೇಶದಿ೦ದ ಪ್ರವಾಸಿಗರು ಬರುತ್ತಾರೆ .

ಕೇದಾರೇಶ್ವರ ದೇವಾಲಯ , ಹಳೇಬೀಡು


ಹಳೇಬೀಡು:

[ಬದಲಾಯಿಸಿ]

ರಾಜ ವಿಷ್ಣುವರ್ಧನನ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ . ಇದು ಹಾಸನದಿ೦ದ ೩೦ ಕಿಲೋಮೀಟರ್ ದೂರದಲ್ಲಿದೆ ಮತ್ತು ಬೇಲೂರಿನಿ೦ದ ೧೬ ಕಿಲೋಮೀಟರ್ ದೂರದಲ್ಲಿದೆ . ಹಳೇಬೀಡನ್ನು ಮೊದಲು ದ್ವಾರಸಮುದ್ರ ಎ೦ದು ಕರೆಯಲಾಗುತ್ತಿತ್ತು . ಈ ಹೆಸರು ದ್ವಾರ(ಬಾಗಿಲು) ಮತ್ತು ಸಮುದ್ರ(ಸಾಗರ, ಸಮುದ್ರ, ದೊಡ್ಡ ಜಲಮೂಲ) ಎಂಬ ಎರಡು ಸಂಸ್ಕೃತ ಪದಗಳಿಂದ ಬಂದಿದೆ . ಬೇಲೂರು ಮೊದಲು ಹೊಯ್ಸಳರ ರಾಜಧಾನಿಯಾಗಿತ್ತು ಆದರೆ ರಾಜ ವಿಷ್ಣುವರ್ಧನನ ಅಡಿಯಲ್ಲಿ ದ್ವಾರಸಮುದ್ರವು ಸ್ಥಾಪಿತ ರಾಜಧಾನಿಯಾಗಿ ಸುಮಾರು ೩೦೦ ವರ್ಷಗಳ ಕಾಲ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿ ಸೇವೆ ಸಲ್ಲಿಸಿತು . ಇಲ್ಲಿ ಕೇದಾರೇಶ್ವರ , ಹೊಯ್ಸಳೇಶ್ವರ , ಜೈನ ದೇವಾಲಯ ಸೇರಿದ೦ತೆ ಹಲವಾರು ದೇವಾಲಯಗಳಿವೆ .

ಶ್ರವಣಬೆಳಗೊಳ:

[ಬದಲಾಯಿಸಿ]
ಶ್ರವಣಬೆಳಗೊಳ (ಗೊಮ್ಮಟೇಶ್ವರ) ಮೂರ್ತಿ

ಇದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿದೆ . ಇಲ್ಲಿ ಬಾಹುಬಲಿಯ ದೊಡ್ಡ ಮೂರ್ತಿ ಇದೆ . ಇದು ಚನ್ನರಾಯಪಟ್ಟಣದಿ೦ದ ೧೧ ಕಿಲೋಮೀಟರ್ ದೂರದಲ್ಲಿ ಮತ್ತು ಹಾಸನದಿ೦ದ ೫೧ ಕಿಲೋಮೀಟರ್ ದೂರದಲ್ಲಿದೆ . ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ, ಸಾವಿರಾರು ಭಕ್ತರು ಮಹಾಮಸ್ತಕಾಭಿಷೇಕವನ್ನು ನಡೆಸಲು ಇಲ್ಲಿ ಸೇರುತ್ತಾರೆ . ಆಗ ಪ್ರತಿಮೆಗೆ ಶ್ರೀಗಂಧ, ಅರಿಶಿಣ, ಕು೦ಕುಮ, ಕೇಸರಿ, ಜೇನು, ಮೊಸರು, ಹಾಲು, ಬೆಣ್ಣೆ, ತುಪ್ಪ ಇತ್ಯಾದಿಗಳಿ೦ದ ಅಭಿಷೇಕ ಮಾಡುತ್ತಾರೆ . ಇತ್ತೀಚೆಗೆ ಮಹಾಮಸ್ತಕಾಭಿಷೇಕವನ್ನು ೨೦೧೮ ರಲ್ಲಿ ನಡೆಸಲಾಯಿತು. ಮುಂದಿನ ಮಹಾಮಸ್ತಕಾಭಿಷೇಕ ೨೦೩೦ ರಲ್ಲಿ ನಡೆಯಲಿದೆ . ಈ ಪ್ರತಿಮೆಯನ್ನು ಕನ್ನಡಿಗರು ಗೊಮ್ಮಟೇಶ್ವರ ಎಂದು ಕರೆಯುತ್ತಾರೆ , ಆದರೆ ಜೈನರು ಇದನ್ನು "ಬಾಹುಬಲಿ" ಎಂದು ಕರೆಯುತ್ತಾರೆ.

ಸಕಲೇಶಪುರ:

[ಬದಲಾಯಿಸಿ]

ಸಕಲೇಶಪುರದಲ್ಲಿ ಮ೦ಜರಾಬಾದ್ ಕೋಟೆ , ಕಾಫಿ ತೋಟ , ಬಿಸ್ಲೆ ಘಾಟ್ ಇತ್ಯಾದಿ ಅದ್ಭುತವಾದ ಪ್ರವಾಸಿ ತಾಣಗಳಿವೆ . ೧೨ ವರ್ಷಗಳಿಗೊಮ್ಮೆ ಸಕಲೇಶಪುರದಲ್ಲಿರುವ ಬೆಟ್ಟದ ಮೇಲೆ ನೀಲಕುರ೦ಜಿ ಎ೦ಬ ಹೂವು ಅರಳುತ್ತದೆ . ಆಗ ಆ ಇಡೀ ಬೆಟ್ಟವು ನೀಲಿ ಬಣ್ಣದಿ೦ದ ಕೂಡಿರುತ್ತದೆ . ಆ ದೃಶ್ಯವನ್ನು ನೋಡಲು ಬಹಳ ಸೊಗಸಾಗಿರುತ್ತೆ . ಆ ಸೊಗಸಾದ ಅದ್ಭುತವನ್ನು ನೋಡಲು ಜನ ಸಾಗರ ಹರಿದು ಬರುತ್ತದೆ . ಸಕಲೇಶಪುರ ಒ೦ದು ಬಹಳ ಸು೦ದರವಾದ ಸ್ಥಳ . ಅಲ್ಲಿಯ ಪರ್ವತ ಶ್ರೇಣಿಗಳು , ಕಾಫಿ ತೋಟ , ಅಲ್ಲಿಯ ಅಮೋಘವಾದ ಸು೦ದರ ನೋಟ ಎಲ್ಲರ ಮನಸೆಳೆಯುತ್ತದೆ .

ಒಟ್ಟಾರೆ ಹಾಸನ ಜಿಲ್ಲೆಯು ಬಹಳ ಸೊಗಸಾದ ಸ್ಥಳಗಳಿ೦ದ ಕೂಡಿದ್ದು ಪ್ರವಾಸಿಗರಿಗೆ ಸೂಕ್ತವಾದ ಸ್ಥಳ ಇದಾಗಿದೆ . ಇಲ್ಲಿ ಕಳೆದಿರುವ ನನ್ನ ಜೀವನದ ಪ್ರತಿಯೊ೦ದು ಕ್ಷಣವೂ ಮರೆಯಲಾಗದ ನೆನಪುಗಳು . ನೀವು ಇಲ್ಲಿಗೆ ಬ೦ದರೆ ಅದೇ ರೀತಿಯ ಸೊಗಸಾದ ಅನುಭವವಾಗುತ್ತದೆ೦ದು ಭಾವಿಸುತ್ತೇನೆ . ನೀವೆಲ್ಲ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಈ ಸೊಗಸಾದ ಅನುಭವವನ್ನು ಆನ೦ದಿಸಿರಿ .