ಸದಸ್ಯ:Spandana.P.T.1940363/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
nanna nagarada hemme
ವಿಧಾನ ಸೌಧ- ನನ್ನ ನಗರದ ಹೆಮ್ಮೆ
nanna kanasu
ಹಾರ್ಲಿ ಡೇವಿಡ್ಸನ್-ನನ್ನ ಕನಸು

    ನನ್ನ ಹೆಸರು ಸ್ಪಂದನ. ನನ್ನ ತಾಯಿ ಪಂಕಜ ಜಿ. ಹಾಗೂ ತಂದೆ ತ್ಯಾಗರಾಜ್ ಎಸ್. ನಾನು ಕ್ಲೂನಿ ಕಾನ್ವೆಂಟ್ ಶಾಲೆಯಲ್ಲಿ 10ನೇ ತರಗತಿಯವರೆಗೆ ಓದಿದೆ. ನಂತರ ಎಂ.ಇ.ಎಸ್. ಕಾಲೇಜಿನಲ್ಲಿ ಪಿ.ಯು.ಸಿ. ಯನ್ನು ಮುಗಿಸಿದೆ. ವಿಜ್ಞಾನದ ಅವಿಭಾಜ್ಯವಾಗಿರುವ ಅಂಗವಾಗಿರುವ  ಭೌತಶಾಸ್ತ್ರ ವಿಷಯದಲ್ಲಿ ನನಗೆ ಅತೀವ ಆಸಕ್ತಿ ಇರುವುದರಿಂದ, ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಎಸ್.ಸಿ. ಯನ್ನು ಓದಲು ನಿರ್ಧರಿಸಿದೆ. 
ಕಲೆ- ನನ್ನ ಪ್ರೀತಿ
ಉಚ್ಛ ನ್ಯಾಯಾಲಯ

ಧರ್ಮರಾಯ ಸ್ವಾಮಿ ದೇವಸ್ಥಾನ
ಕುಂಬಾರಿಕೆ – ನಾನು ಕಲಿಯಬೇಕಿರುವ ನನ್ನ ಕುಲಕಸುಬು
ಲಾಲ್ ಭಾಗ್
ನನ್ನ ನಗರದ ರಸ್ತೆ ನೋಟ

ನನಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಇದೆ. ಒಂದು ಬಣ್ಣ ಹಾಗೂ ಇನ್ನೊಂದು ಬಣ್ಣದ ಜೊತೆಗೆ ಸೇರಿ ಹೊಸ ಬಣ್ಣ ಬರುವ ಸ್ವರ್ಗ ಸದೃಶ ಕೆಲಸ ಮಾಡುವುದು ನನಗೆ ಬಹಳ ಆಸಕ್ತಿದಾಯಕ ವಿಚಾರ. ನನ್ನ ಚಿಕ್ಕವಳಿರುವಾಗ ಪ್ರತಿ ರಾತ್ರಿ ಮಲಗುವ ಮೊದಲು ನನ್ನ ತಾಯಿ ಕಥೆ ಹೇಳುತ್ತಾ ಮಲಗಿಸುತ್ತಿದ್ದರು. ಇದು ನನ್ನ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿತ್ತಲ್ಲದೇ, ಓದುವ ಹವ್ಯಾಸ ತಾನಾಗೇ ನನ್ನಲ್ಲಿ ಮೊಳೆಯುತ್ತಾ ಹೋಯಿತು. ಇದು ನನಗೆ ಕಥೆ ಓದಲು ಮತ್ತು ಬರೆಯಲು ಪ್ರರೇಪಿಸಿತು. ಆರಂಭದಲ್ಲಿ ಕೈಗೆ ಸಿಕ್ಕ ಎಲ್ಲಾ ನಿಯತಕಾಲಿಕಗಳನ್ನು, ಸಚಿತ್ರ ಪುಸ್ತಕಗಳನ್ನು ಓದುತ್ತಿದ್ದೆ. ಈಗ ನಾನು ಅನೇಕ ಆಂಗ್ಲ ಪುಸ್ತಕಗಳನ್ನು ಓದಿದ್ದೇನೆ. ಮುಂದೆ ಕನ್ನಡ ಪುಸ್ತಕಗಳನ್ನು ಓದುವ ಇಚ್ಛೆ ಹೊಂದಿದ್ದೇನೆ. ನಾನು ಪುಟ್ಟ ಪುಟ್ಟ ಕವನಗಳನ್ನೂ ಬರೆಯುತ್ತೇನೆ. ಈ ಪುಟ್ಟ ಕವನಗಳ ಪುಟ್ಟ ಭಾಗಗಳನ್ನು ಮಾತ್ರ ಎಲ್ಲರ ಜೊತೆಗೆ ಹಂಚಿಕೊಳ್ಳುತ್ತೇನೆ. ನನಗೆ ಪ್ರಪಂಚದ ಎಲ್ಲಾ ಸ್ಥಳಗಳ ಬಗ್ಗೆ ತಿಳಿದುಕೊಂಡು ಆ ಸ್ಥಳಗಳ ಗಾಳಿಯನ್ನು ತುಂಬಿಸಿಕೊಂಡು, ಅದರಲ್ಲಿಯೇ ತೇಲಬೇಕೆಂಬ ದೊಡ್ಡ ಕನಸಿದೆ. ಇಂಥ ಪಯಣಗಳನ್ನು ಬೇರೆ ಯಾರೊಂದಿಗೂ ಮಾಡದೆ, ಒಬ್ಬೊಂಟಿಯಾಗಿ ಮಾಡಬೇಕೆಂಬ ಹೆಬ್ಬಯಕೆ ಇದೆ.

ನಾನು ಒಮ್ಮೊಮ್ಮೆ ಒಬ್ಬಳೇ ಇರುವಾಗ ನನ್ನ ಗೆಳತಿ ಗೆಳೆಯರು ಅದನ್ನು ಒಂಟಿತನವೆಂದು ಭಾವಿಸುತ್ತಾರೆ. ಆದರೆ ನಾನು ಏಕಾಂತದ ಏಕ ಅಲೆಯಲ್ಲಿ ಕುಣಿದು ಕುಪ್ಪಳಿಸುತ್ತಿರುತ್ತೇನೆ. ಇದು ನನಗೆ ನನ್ನ ಬಾಲ್ಯದ ಒಂಟಿತನ ಕಲಿಸಿಕೊಟ್ಟ ಪಾಠ. ಅನೇಕ ಸಂದರ್ಭಗಳಲ್ಲಿ ವಿಜ್ಞಾನದ ವಿದ್ಯಾರ್ಥಿಗಳನ್ನು ಕೇವಲ ಪಠ್ಯ ಕೇಂದ್ರಿತ ಮನಸ್ಥಿತಿಯವರೆಂದು ಹೇಳುವುದು ಸಾಮಾನ್ಯವಾಗಿರುತ್ತದೆ. ಆದರೆ ನಾನು ಈ ಹೇಳಿಕೆಗೆ ಅಪವಾದವಾಗಿದ್ದೇನೆಂಬುದು ನನ್ನ ತಿಳುವಳಿಕೆ. ನನ್ನ ಓದುವ ಹವ್ಯಾಸ ಹಾಗೂ ಬಣ್ಣಗಳ ಬಗೆಗಿನ ಬೆರಗು ಇವು ಜೀವನವನ್ನು ವಿಶಿಷ್ಟವಾಗಿ ನೋಡುವ ಕಲಿಕೆಯನ್ನು ಅಭ್ಯಾಸ ಮಾಡಿಸಿವೆ.

ಸಾಮಾನ್ಯವಾಗಿ ಹದಿಹರೆಯದ ಸ್ನೇಹಿತರನ್ನು ನಕರಾತ್ಮಕವಾಗಿಯೇ ಸಮಾಜವು ಪರಿಗಣಿಸುತ್ತದೆ. ಆದರೆ ನನಗೆ ಶಾಲಾ ದಿನಗಳಲ್ಲಿ ದೊರೆತ ಸ್ನೇಹಿತೆಯರು ನನ್ನ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನೇ ವಹಿಸಿರುತ್ತಾರೆ. ಅವರುಗಳು ತಾವು ಯಾವ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬುದನ್ನು ಪ್ರೌಢ ಶಾಲಾ ಹಂತದಲ್ಲೇ ನಿರ್ಣಯಿಸಿಕೊಂಡಿದ್ದದ್ದು, ನಾನು ನನ್ನ ಜೀವನದ ಬಗ್ಗೆ ಒಂದು ನಿಖರತೆಯನ್ನು ಪಡೆಯಲು ಸಾಧ್ಯವಾಗಿಸಿತು. ನಮ್ಮೆಲರದು ಬೇರೆ ಬೇರೆ ಕ್ಷೇತ್ರಗಳಾದರೂ, ಅದು ನಮ್ಮ ಗೆಳೆತನದ ಗಟ್ಟಿತನಕ್ಕೆ ಪೂರಕವಾಗಿಯೇ ಒದಗಿಬಂದದ್ದು ನಿಜಕ್ಕೂ ಸೋಜಿಗದ ವಿಚಾರವೇ ಆಗಿದೆ. ಎಲ್ಲರೂ ಬದುಕನ್ನು ಕಟ್ಟಿಕೊಳ್ಳುತ್ತಿರುವ ಈ ದಿನಗಳಲ್ಲಿ ನಮ್ಮದೇ ಲೋಕಗಳನ್ನ ಸೃಷ್ಟಿಸಿಕೊಂಡಿದ್ದೇವೆ. ಬೇರೆ ಬೇರೆಯಾಗಿ ಬದುಕುತ್ತಿದ್ದೇವೆ. ನಿಯತವಾಗಿ ಭೇಟಿಯಾಗಲು ಯಾರ ಬಳಿಯೂ ಸಮಯವೇ ಇಲ್ಲ. ಆದರೆ ನಮಗೆ ಸಾಮಾಜಿಕ ಮಾಧ್ಯಮ(ಸೋಷಿಯಲ್ ಮೀಡಿಯಾ) ವರವಾಗಿ ನಮ್ಮೆಲ್ಲರನ್ನೂ ಬೆಸೆದೇ ಇಟ್ಟಿದೆ. ನಾವೆಲ್ಲರೂ ಕೇವಲ ನಮ್ಮ ವಯೋ ಸಹಜ ತುಮುಲಗಳನ್ನು ಹಂಚಿಕೊಳ್ಳಲು ನಮ್ಮ ಸಮಯವನ್ನು ಪೋಲು ಮಾಡುತ್ತಿಲ್ಲ. ಬದಲಿಗೆ ನಮಗೆ ಇಷ್ಟೆಲ್ಲ ಸಾಧ್ಯತೆಗಳನ್ನು ಸೃಷ್ಟಿಸಿರುವ ಈ ಭೂಮಿಯ ಬಗೆಗೆ ಚರ್ಚಿಸುತ್ತೇವೆ. ಇದಕ್ಕೆ ಬಂದೊದಗಿರುವ ಸ್ಥಿತಿಯ ಬಗ್ಗೆ ಬೇಸರದ ಮಾತುಗಳನ್ನು ಹಂಚಿಕೊಳ್ಳುತ್ತೇವೆ. ಈ ಸ್ಥಿತಿಯಿಂದ ನಮ್ಮ ಭೂಮಿಯನ್ನು ಪಾರುಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತೇವೆ. ನಾವು ನಿಂತಿರುವ ಕ್ಷೇತ್ರಗಳಿಂದ ಸಾಧ್ಯವಾಗಬಹುದಾದ ಪರಿಹಾರವನ್ನು ಒಬ್ಬರಿಗೊಬ್ಬರು ಸೂಚಿಸಿಕೊಳ್ಳುತ್ತೇವೆ.

ಎಂತಹ ಘೋರವಾದ ದಿನಗಳನ್ನು ನಮ್ಮ ಭೂಮಿ ಎದುರಿಸಬೇಕು ಎಂಬುದನ್ನು ನೆನೆದೊಡನೆ ನಿಜಕ್ಕೂ ಹೆದರಿಕೆಯಾಗುತ್ತದೆ. ಇದು ಮಳೆಗಾಲವಾದರೂ, ಮಳೆಯ ಸುಳಿವೇ ಇಲ್ಲದ ದಿನಗಳಲ್ಲಿ ಬದುಕುತ್ತಿದ್ದೇವೆ. ನೀರಿಗೆ ಜನರು ಬಡಿದಾಡುತ್ತಿರುವುದನ್ನು ನೋಡಿದರೆ, ನಾವೇ ತಂದುಕೊಂಡ ಸ್ಥಿತಿಯಲ್ಲವೇ ಇದು ಎನಿಸುತ್ತದೆ. ನಮ್ಮ ಆಸ್ಟ್ರೋ ಭೌತಶಾಸ್ತ್ರಗಳೆಲ್ಲ ಭೂಮಿಯ ಸನಿಹದಲ್ಲಿರೋ ಗ್ರಹಗಳನ್ನೆಲ್ಲ ಹುಡುಕುವುದಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದಾರೆ. ಆದರೆ ಭೂಮಿಯನ್ನೇ ಹುಡುಕುವುದಕ್ಕೆ ಯಾರು ಪ್ರಯತ್ನ ಮಾಡುತ್ತಿಲ್ಲ. ಯಾಕೆಂದರೆ ಭೂಮಿಯಷ್ಟೇ ವೈಶಿಶ್ಟ್ಯವಾದ ಯಾವುದೇ ಇತರೆ ಗ್ರಹವಿಲ್ಲವೆಂಬುದು ನಮಗೆ ಗೊತ್ತು. ಈ ಮಾತುಗಳನ್ನು ಹೇಳಿರುವ ನಾಗೇಶ ಹೆಗಡೆಯವರ 'ಇರುವುದೊಂದೇ ಭೂಮಿ' ಎಂಬ ಲೇಖನ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿ ಉಳಿದುಕೊಂಡಿದೆ. ವಾಹನಗಳ ಕರ್ಕಶ ಶಬ್ದ, ಗಾಳಿಯ ಮಾಲಿನ್ಯ, ನಗರ ಜೀವನದ ಏಕತಾನತೆ, ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಳ್ಳಲು ಸದಾ ಓಡುವ ಮನಸ್ಥಿತಿ ನನ್ನನ್ನು ಮರುಭೂಮಿಯಂತೆ ಮಾಡಿದೆ. ನನ್ನ ಕಾಲಿನ ಮೇಲೆ ನಿಂತ ಐದಾರು ವರ್ಷಗಳ ನಂತರ ಯಾವುದಾದರೂ ಹಳ್ಳಿಯ ಪ್ರದೇಶಕ್ಕೆ ಹೋಗಿ, ಭೌತಶಾಸ್ತ್ರವನ್ನು ಮಕ್ಕಳಿಗೆ ಹತ್ತಿರವಾಗಿಸಿ, ನನ್ನ ಕುತೂಹಲಕ್ಕೆ ಕಾರಣವಾಗಿರುವ ವಿಷಯಗಳ ಬಗ್ಗೆ ಸಂಶೋಧನೆ ಮಾಡುತ್ತಾ, ದೇಶ ವಿದೇಶಗಳನ್ನು ನನ್ನ ಪ್ರಿಯವಾದ ಹಾರ್ಲಿ ಡೇವಿಡ್ಸನ್ ಬೈಕಿನಲ್ಲಿ ಸುತ್ತುತ್ತಾ, ನಾಟಕಗಳನ್ನು ಬರೆಯುತ್ತಾ, ಚಿತ್ರಗಳನ್ನು ಬಿಡಿಸುತ್ತಾ, ಪದ್ಯಗಳನ್ನು ಬರೆಯುತ್ತಾ, ನನ್ನ ಕುತೂಹಲವನ್ನು ಹಸಿರಾಗಿಯೇ, ಹೊಸದಾಗಿಯೇ ಇಟ್ಟುಕೊಳ್ಳುವ ಪ್ರಯತ್ನದಲ್ಲಿಯೇ ನನ್ನ ಜೀವನವನ್ನು ನಡೆಸುವ ದೊಡ್ಡ ಆಸೆಯನ್ನು ಹೊಂದಿರುವ ಪುಟ್ಟ ಹುಡುಗಿ ನಾನು.

ಕೋಟೆ
ನನ್ನ ಈಗಿನ ಕಾಲೇಜು
ಬೆಂಗಳೂರು ಅರಮನೆ