ಸದಸ್ಯ:Soundarya~knwiki/sandbox
ಪರಿಪೂರ್ಣ ಯೋಗಕ್ಕೆ ಪರಿಕರಗಳ ಆಸರೆ
ಪರಿಪೂರ್ಣ ಆರೋಗ್ಯದ ಚಿಂತನೆ ಇಂದಿನದಲ್ಲ. ಹಿಂದಿನಿಂದಲೂ ಕುರಿತು ಅನೇಕರು ಆಳವಾದ ಅಧ್ಯಾಯನ ಮಾಡಿದ್ದಾರೆ. ಈ ದಿಶೆಯಲ್ಲಿ ೨೦೦೦ ವರ್ಷಕ್ಕೂ ಹಿಂದಿನ ಪತಂಜಲಿ ಮಹರ್ಷಿಗಳ ಯೋಗ ಸೂತ್ರಗಳು ಇಂದಿಗೂ ಪ್ರಸ್ತುತ. ಪರಿಪೂರ್ಣ ಆರೋಗ್ಯಕ್ಕೆ ಯೋಗ ಸೂತ್ರ ಸುಸೂತ್ರ. ಪರಿಪೂರ್ಣ ಆರೋಗ್ಯದಿಂದ ಉತ್ತಮ ವ್ಯಕ್ತಿತ್ವ ಸಹಜ ಸಕಾರವಾಗುತ್ತದೆ. ಪರಿಪೂರ್ಣ ಆರೋಗ್ಯದಿಂದ ಮಾನವನ ಜೀವಮಾನ ಕಾಲಮಾಪನದಿಂದಷ್ಟೆ ಅಲ್ಲ ಗುಣಮಾಪನದಿಂದಲೂ ಉಜ್ವಲವಾಗುತ್ತದೆ. ಇಂತಹ ಪರಿಪೂರ್ಣ ಆರೋಗ್ಯವನ್ನು ಪಡೆಯಲು ಸಾಧ್ಯವೇ? ಕ್ರಿ.ಪೂ. ೨೫೦ ಸುಮಾರಿನಲ್ಲಿ ಪತಂಜಲಿ ಮಹರ್ಷಿ ತಳಹದಿಯುಳ್ಳ ೧೯೬ ಸೂತ್ರಗಳ ಮುಖೇನ ಪರಿಹಾರವನ್ನು ಸೂಚಿಸುತ್ತಾರೆ. ಯೋಗದ ಅರ್ಥವ್ಯಾಪ್ತಿ ಬಹಳ ವಿಶಾಲವಾದುದು. ಅನೇಕ ವಿಧವಾಗಿ ಯೋಗ ಶಬ್ದವನ್ನು ಬಣ್ಣಿಸಬಹುದು. ಮಹರ್ಷಿ ಪತಂಜಲಿಗಳ ಯೋಗ ಸೂತ್ರದಲ್ಲಿ ಹೇಳಿರುವ ವ್ಯಾಖ್ಯೆ "ಯೋಗಂಃ ಚಿತ್ತ ವ್ಯಕ್ತಿ ನಿರೋದಂ"
ಈ ವ್ಯಾಖ್ಯೆ ಬಹು ವಿಶಿಷ್ಟವಾದುದು. ಅತ್ಯಂತ ವಯಜ್ಞಾನಿಕವಾದ, ನಿಖಾರವಾದ ಯಾವುದೇ ವಿಧವಾದ ದ್ವಂದ್ವಗಳಿಗೆ ಎಡೆ ಇಲ್ಲದ ಮತ್ತು ವಿಶ್ವವ್ಯಾಪಿಯಾಗಿ ಪ್ರತಿಯೊಬ್ಬರು ಒಪ್ಪತಕ್ಕ ಒಂದು ಒಳ್ಳೆಯ ಲಕ್ಷಣವನ್ನು ಪತಂಜಲಿಗಳು ಗುರುತಿಸಿರುತ್ತಾರೆ.
ಚಿತ್ತ ವ್ರತ್ತಿ ನಿರೋಧಂ
ಚಿತ್ತ ಎಂದರೆ ನಮ್ಮ ಮನಸ್ಸು. ಇಲ್ಲಿ ಅನೇಕ ಆಲೋಚನೆಗಳು ಏಳುತ್ತಿರುತ್ತವೆ. ಅವಕ್ಕೆ ವ್ರತ್ತಿಗಳು ಎನ್ನುತ್ತೇವೆ. ತಿಳಿಯ ನೀರಿನ ಕೊಳದ ಮೇಲೆ ಒಂದು ಎಲೆಯನ್ನು ಅಥವಾ ಕಲ್ಲನ್ನು ಹಾಕಿದರೆ ಅಲೆಗಳು ಏಳುತ್ತಲೇ ಇರುತ್ತವೆ. ಅಂತೆಯೇ ಆಲೋಚನಾ ತರಂಗಗಳು ಏಳುತ್ತಲೇ ಇರುತ್ತವೆ. ನಾವು ಏನಾದರು ನೋಡುತ್ತೇವೆ, ಕೇಳುತ್ತೇವೆ, ಮುಟ್ಟುತ್ತೇವೆ, ವಾಸನೆ ನೋಡುತ್ತೇವೆ, ಮತ್ತು ರುಚಿಯನ್ನು ನೋಡುತ್ತೇವೆ. ಇವು ತನ್ನದೇ ಆದ ರೀತಿಯಲ್ಲಿ ಆಗಾಗ್ಗೆ ಏಳುತ್ತಲೇ ಇರುತ್ತವೆ. ಈ ಕಾರಣದಿಂದ ಮನಸ್ಸು ತನ್ನದೇ ಆದಂತಹ ಮಾನಸಿಕ ಸಮಯದ ವ್ಯಕ್ತಿಯಲ್ಲಿ ಸದಾ ಇರುತ್ತದೆ.