ಸದಸ್ಯ:Soundarya k

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ರೆಡ್ ಸೀ' ಸಮುದ್ರದಲ್ಲಿ ಜೀವಶಾಸ್ತ್ರಜ್ಞರ ಅಂತರಾಷ್ಟ್ರೀಯ ತಂಡವೊಂದು ಪ್ರಕಾಶಮಾನ ಜೀವಿಯ ಹೊಸ ಜೀವರಾಶಿಯನ್ನು ಪತ್ತೆ ಹಚ್ಚಿದೆ.

ಒಂದೇ ರೀತಿಯ ದೇಹ ಹೊಂದಿರುವ ಈ ಜೀವಿಗಳಲ್ಲಿ ದೇಹದ ವಿವಿಧ ಭಾಗಗಳು ಪ್ರಕಾಶಿಸುವುದರ ಆಧಾರದ ಮೇಲೆ ಈ ಜೀವರಾಶಿಯ ವಿವಿಧ ಜೀವಿಗಳನ್ನು ಪ್ರತ್ಯೇಕಿಸಬಹುದಾಗಿ ಸಂಶೋಧಕರು ತಿಳಿಸಿದ್ದಾರೆ.

ರೆಡಿ ಸೀ ದಕ್ಷಿಣ ಭಾಗದ ಹವಳ ಬಂಡೆಗಳ ಜೀವ ವೈವಿಧ್ಯವನ್ನು ಸಂಶೋಧಿಸುವಾಗ ಜೀವಶಾಸ್ತ್ರಜ್ಞರು ಈ 'ಹೊಳೆಯುವ ಲಾಟೀನು' ಎಂದು ಹೆಸರಿಸಲಾಗಿರುವ ಜೀವಿಯನ್ನು ಪತ್ತೆ ಹಚ್ಚಿದ್ದಾರೆ.

ಇವುಗಳ ಹತ್ತಿರದ ಸಂಬಂಧದ ಜೀವಿಗಳು ತಿಳಿ ನೀರಿನಲ್ಲಿ ಏಕಾಂಗಿಯಾಗಿ ವಾಸಿಸಿದರೆ ನೂತನವಾಗಿ ಕಂಡುಹಿಡಿಯಲಾಗಿರುವ ಈ ರೆಡ್ ಸೀ ಜೀವಿಗಳು ವಸಾಹತನ್ನು ನಿರ್ಮಿಸಿ ಹಸಿರು ಬಣ್ಣದಿಂದ ಕಂಗೊಳಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

'ಪ್ಲಸ ಒನ್' ಜರ್ನಲ್ ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.