ಸದಸ್ಯ:Soniya169

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಸೋನಿಯ.ಎ. ನನ್ನ ತಂದೆಯ ಹೆಸರು ಆನಂದನ್. ಎನ್. ನನ್ನ ತಾಯಿಯ ಹೆಸರು ನಿರ್ಮಲ. ಎಮ್. ನನ್ನ ತಂಗಿಯ ಹೆಸರು ಸಂಗೀತ .ಎ .ಅವಳು ಕ್ರೈಸ್ಟ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ನಾನು ೧೪ನೇ ನವೆಂಬರ್ ೧೯೯೭, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಜನಿಸಿದ್ದೇನೆ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೆಸ್. ಜಿ.ಪಾಳ್ಯದಲ್ಲಿರುವ ಕ್ರಿಸ್ತ ವಿದ್ಯಾಲಯ ಎಂಬ ಶಾಲೆಯಲ್ಲಿ ಪೂರ್ಣಗೊಳಿಸಿದೆ. ನನ್ನ ಪತಿಯ ಹೆಸರು ಅಶೋಕ್ ನನ್ನ ಮಗನ ಹೆಸರು ರಿತ್ವಿಕ್.

ಕರ್ನಾಟಕ

ನಾನು ಹತ್ತನೇ ತರಗತಿ ಮುಗಿಸಿದ ನಂತರ ನನಗೆ ಮದುವೆ ಮಾಡಲಾಯಿತು ಕೆಲವು ಕುಟುಂಬದ ಸಮಸ್ಯೆಯ ಕಾರಣಗಳಿಂದ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಯಲಿಲ್ಲ ನಂತರ ನನ್ನ ಮಗನ ಜನನದ ಅನಂತರ ಹೇಗಾದರೂ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂಬ ದೃಢ ನಿರ್ಧಾರದಿಂದ ನಾನು ಮನೆಯಲ್ಲಿಯೇ ಓದಲು ಆರಂಭಿಸಿದೆ . ಓದುವ ಮೇಲೆ ನನಗಿದ್ದ ಆಸಕ್ತಿಯನ್ನು ಉಮ್ಮಸ್ಸನ್ನು ಹೇಗಾದರೂ ಓದಬೇಕೆಂಬ ದೃಢ ನಿರ್ಧಾರವನ್ನು ನೋಡಿ ನನ್ನ ಪತಿಯೂ ಸಹ ಇದಕ್ಕೆ ಸಹಕರಿಸಿದರು ನೀನು ಚೆನ್ನಾಗಿ ಓದಿ ಮುಂದೆ ಬರಬೇಕೆಂದು ನಾನು ಆಶಿಸುತ್ತೇನೆ ಎಂದರು. ನಂತರ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ನನಗೆ ನನ್ನ ಸೆಕೆಂಡ್ ಪಿಯುಸಿ ಪಕ್ಷಿಯನ್ನು ಬರೆಯಲು ಅನುಮತಿ ಸಿಕ್ಕಿತ್ತು. ನಾನು ಎನ್ರೋಲ್ಮೆಂಟ್ ಕ್ಯಾಂಡಿಡೇಟ್ ಆಗಿ ಪರೀಕ್ಷೆ ಬರೆಯಲು ದಾಖಲಾತಿಯನ್ನು ಪಡೆದೆನು ನಂತರ ನಾನು ಮನೆಯಲ್ಲಿಯೇ ಓದಲು ಆರಂಭಿಸಿದೆನು. ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಂತರ ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಸಬೇಕೆಂಬ ನಿರ್ಧಾರಕ್ಕೆ ಬಂದೆನು.

ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿಯನ್ನು ಸಿ.ಎಂ.ಇ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನಾನು ಶಾಲೆಯಲ್ಲಿ ಓದುತ್ತಿರುವಾಗ ಅನೇಕ ಬಹುಮಾನಗಳನ್ನು ಗಳಿಸಿದ್ದೇನೆ. ಅಷ್ಟೇ ಅಲ್ಲದೆ ನನಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ನಟಿ ಎಂಬ ಬಹುಮಾನವೂ ಸಹ ದೊರಕಿದೆ.

ನನ್ನ ಪ್ರವಾಸ[ಬದಲಾಯಿಸಿ]

ನಾನು ಹತ್ತನೆಯ ತರಗತಿಯಲ್ಲಿ ಓದುತ್ತಿರುವಾಗ ನಮ್ಮ ಶಾಲೆಯಲ್ಲಿ ನಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ತಮಿಳುನಾಡಿನ ಕನ್ಯಾಕುಮಾರಿ ಎಂಬ ಸ್ಥಳಕ್ಕೆ ಪ್ರವಾಸಕ್ಕಾಗಿ ಕರೆದುಕೊಂಡು ಹೋದರು. ಅದು ಪ್ರವಾಸಿಗರ ಕಣ್ಸೆಳೆಯುವ ಸ್ಥಳವಾಗಿತ್ತು. ನಾವು ಅಲ್ಲಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿದೆವು. ಅಲ್ಲಿನ "ಗೋಲ್ಡನ್ ಟೆಂಪಲ್" ಎಂಬ ದೇವಸ್ಥಾನ ನನಗೆ ಬಹಳ ಇಷ್ಟವಾಯಿತು ನಾನು ಅಲ್ಲಿನ ಸಂಸ್ಕೃತಿಗಳ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕೊಂಡೆನು. ಅಲ್ಲಿ ನಾನು ಸ್ವಾಮಿ ವಿವೇಕಾನಂದ ಮತ್ತು ತಿರುವಳ್ಳುವರ್ ಅವರ ಅದ್ಭುತ ಪ್ರತಿಮೆಯನ್ನು ನೋಡಿ ಬೇರೆಗಾದೆನು. ಅಲ್ಲಿ ನಾನು ಸ್ವಾಮಿ ವಿವೇಕಾನಂದರ ಅವರ ಜೀವನ ಚಿತ್ರದ ಪುಸ್ತಕವನ್ನು ಕೊಂಡುಕೊಂಡೆನು ಅದು ಈಗಲೂ ಸಹ ನನಗೆ ನೆಚ್ಚಿದ ಪುಸ್ತಕಗಳಲ್ಲಿ ಒಂದಾಗಿದೆ.

ಗಣಕಯಂತ್ರ ವಿಭಾಗ

ಇಂದಿನ ಮಕ್ಕಳು ನಾಳಿನ ಪ್ರಜೆಗಳು ಒಂದು ಒಳ್ಳೆಯ ಮತ್ತು ಪ್ರಾಮಾಣಿಕ ಪ್ರಜೆಗಳನ್ನು ಸಜ್ಜುಗೊಳಿಸಲು ಒಂದು ಆದರ್ಶ ಶಿಕ್ಷಕರಿಂದ ಮಾತ್ರ ಸಾಧ್ಯವಾಗುತ್ತದೆ ಅಂತಹ ಶಿಕ್ಷಕರು ನನಗೂ ಸಿಕ್ಕಿದ್ದಾರೆ. ಅವರ ಹೆಸರು ಸರವಣ ಕುಮಾರ್ ಅವರು ನನಗೆ ಗಣಕ ಯಂತ್ರ ವಿಷಯವನ್ನು ಬೋಧಿಸುತ್ತಾರೆ ಗಣಕಯಂತ್ರ ವಿಷಯವನ್ನು ತುಂಬಾ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಾರೆ ಮತ್ತು ಅಸಾಮಾನ್ಯವಾದ ರೀತಿಯಲ್ಲಿ ಉಪನ್ಯಾಸವನ್ನು ಕೂಡ ಮಾಡುತ್ತಾರೆ ಅವರು ಒಂದು ಆದರ್ಶ ಉಪನ್ಯಾಸಕರಿಗೆ ಉದಾಹರಣೆಯಾಗುತ್ತಾರೆ ಎಂದು ಹೇಳಬಹುದು. ನನ್ನಂತಹ ವಿದ್ಯಾರ್ಥಿಗಳು ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ನಮ್ಮ ಮುಂದಿನ ಯೋಜನೆಗೆ ಸಹಾಯ ಮಾಡುವ ಮನೋಭಾವ ಉಳ್ಳವರಾಗಿದ್ದಾರೆ.

ನನ್ನ ಕನಸು[ಬದಲಾಯಿಸಿ]

ನಾನು ಗಣಕಯಂತ್ರ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ. ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳು ಈ ಕ್ಷೇತ್ರದಲ್ಲಿ ಬಹಳ ಉನ್ನತವಾದ ಸ್ಥಾನವನ್ನು ತಲುಪಿದ್ದಾರೆ. ನನಗೂ ಸಹ ಈ ಕ್ಷೇತ್ರದಲ್ಲಿ ಉನ್ನತ ಸ್ಥಾನ ತಲುಪಬೇಕೆಂಬ ಆಸಕ್ತಿ ಇದೆ. ಏನಾದರೂ ಹೊಸ ವಿಷಯವನ್ನು ಆವಿಷ್ಕಾರ ಮಾಡಬೇಕೆಂಬ ಆಸಕ್ತಿ ಇದೆ. ನನ್ನ ಹೊಸ ಆವಿಷ್ಕಾರ ಜನರಿಗೆ ಉಪಯುಕ್ತವಾಗಬೇಕೆಂದು ಬಯಸುತ್ತೇನೆ. ಅಷ್ಟೇ ಅಲ್ಲದೆ ನನಗೆ ಹಲವಾರು ಸಾಧನೆಗಳನ್ನು ಮಾಡುವ ಆಸೆ. ನನಗೆ ವಿಶ್ವದ ಏಳು ಅದ್ಭುತಗಳ ಸ್ಥಳಗಳಿಗೆ ಭೇಟಿ ಕೊಟ್ಟು ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ. ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ .ಇದರ ಜೊತೆಗೆ ನಾನು ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿಯ ಸಂಗ್ರಹ ಮಾಡುವ ಕನಸಿದೆ.

ಗಣಕಯಂತ್ರ

ನನ್ನ ಆಸಕ್ತಿನನಗೆ ರುಚಿಕರವಾದ ಅಡುಗೆ ಮಾಡುವುದರಲ್ಲಿ ಬಹಳ ಇಷ್ಟವಿದೆ ಅಷ್ಟೇ ಅಲ್ಲದೆ ನಾನು ಭಾರತದ ವಿಭಿನ್ನ ರಾಜ್ಯಗಳ ಸಾಂಪ್ರದಾಯಿಕ ಅಡುಗೆಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ಪುಸ್ತಕಗಳನ್ನು ಓದುವ ಹವ್ಯಾಸವಿದೆ. ಬಿಡುವಿನ ಸಮಯದಲ್ಲಿ ನಾನು ಗಣಕ ಯಂತ್ರ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಹವ್ಯಾಸವಿದೆ.