ಸದಸ್ಯ:Sonal Jeppu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ. ನನ್ನ ಹೆಸರು ಸೋನಲ್. ನಾನು ಮಂಗಳೂರಿನ ಬಿಜೈ ಎಂಬಲ್ಲಿ ವಾಸಿಸುತ್ತದ್ದೇನೆ. ನಾನು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿಯನ್ನು ಓದುತ್ತದ್ದೇನೆ. ನಾನು ೧೫ ಜೂನ್ ೧೯೯೬ರಂದು ಮಂಗಳೂರಿನ ಜೆಪ್ಪುವಿನಲ್ಲಿ ಜನಿಸಿದೆನು. ನಾನು ಈಗ ನನ್ನ ತಂದೆ, ತಾಯಿ ಹಾಗೂ ತಮ್ಮನ ಜೊತೆ ವಾಸಿಸುತ್ತಿದ್ದೇನೆ. ನನ್ನ ಬಾಲ್ಯದ ಶಿಕ್ಷಣವನ್ನು ಜೆರೋಸಾ ಶಾಲೆಯಲ್ಲಿ ಪಡೆದೆನು. ನಂತರ ಕೆನರಾಪ್ರೌಡಶಾಲೆ ಹಾಗೂ ಮಹೇಶ್ ಪದವಿಪೂವ‍ ಕಾಲೇಜಿನಲ್ಲಿ ಮಾಡಿದೆನು. ನನಗೆ ಬೈಯೋಟೆಕ್ನಾಲಜಿ ಎಂಬ ವಿಷಯದಲ್ಲಿ ಅಪಾರವಾದ ಆಸಕ್ತಿಯಿದೆ. ಮುಂದೆ ಈ ವಿಷಯದಲ್ಲಿ ಎಂ.ಎಸ್.ಸಿ ಪಡೆದು ಆ ವಿಷಯದ ಶಿಕ್ಷಕಿಯಾಗಲು ಬಯಸುತ್ತೇನೆ. ನಾನು ಬಿಡುವಿನ ವೇಳೆಯಲ್ಲಿ ಮನೆಕೆಲಸವನ್ನು ಮಾಡುವುದರ ಮೂಲಕ ನನ್ನ ತಾಯಿಗೆ ಸಹಕರಿಸುತ್ತೇನೆ. ನನಗೆ ಕ್ರೀಡೆಗಳಲ್ಲಿ ಕೇರಂ ಆಡಲು ಇಷ್ಟ. ಟೆನಿಸ್ ಹಾಗೂ ಕ್ರಿಕೆಟ್ ಆಟಗಳನ್ನು ಬಹುವಾಗಿ ಇಷ್ಟಪಟ್ಟು ನೋಡುತ್ತೇನೆ. ನನ್ನ ಮನೆಯ ಮುಂದಿನ ಜಾಗದಲ್ಲಿ ಹೂದೋಟವನ್ನು ಮಾಡುವುದರ ಮೂಲಕ ಪರಿಸರದ ರಕ್ಷಣೆಗೆ ನನ್ನಿಂದಾದಷ್ಟು ಸಹಾಯವನ್ನು ಮಾಡುತ್ತೇನೆ. ನಾನು ಕನ್ನಡ ವಿಕಿಪೀಡಿಯಾಕ್ಕೆ ನನ್ನಿಂದಾದಷ್ಟು ಕೊಡುಗೆಯನ್ನು ನೀಡಲು ಬಯಸುತ್ತೇನೆ.ಧನ್ಯವಾದಗಳು.