ಸದಸ್ಯ:SoNy J/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                          ===$$$$====ಅನಿಲಗಳು===$$$$===

ನಿಮಗೆ ಈಗಾಗಲೇ ಘನ,ದ್ರವ ಮತ್ತು ಅನಿಲಗಳ ಗುಣಗಳು ಚಿರಪರಿಚಿತವಾಗಿವೆ. ಘನಗಳು ನಿರ್ದಿಶ್ಟ ಆಕಾರ ಮತ್ತು ಗಾತ್ರಗಳಿವೆ. ದ್ರವಗಳಿಗೆ ನಿರ್ದಿಶ್ಟ ಗಾತ್ರವಿದ್ದು,ಸಂಗ್ರಾಹಕಗಳ ಆಕಾರವನ್ನು ಪಡೆಯುತ್ತವೆ. ಆದರೆ ಅನಿಲಗಳು ನಿರ್ದಿಶ್ಟ ಆಕಾರವನ್ನಾಗಲಿ, ನಿರ್ದಿಶ್ಟ ಗಾತ್ರವನ್ನಾಗಲೀ ಹೊಂದಿಲ್ಲ. ಎಶ್ಟು ವಿಚಿತ್ರ ವಸ್ತುಗಳಿವು !

            ಅನಿಲಗಳು ಅತಿ ಸರಳ ಮತ್ತು ಕುತೂಹಲ ಕೆರಳಿಸುವ ದ್ರವ್ಯದ ಸ್ಥಿತಿ . ಜೀವಮಾನವೆಲ್ಲಾ ನಾವು ಈ ಅನಿಲ ಸಾಗರದಲ್ಲೇ  ಮುಳುಗಿರುತ್ತೇವೆ. ಇಂತಹ ಅನಿಲಗಳು ನಿರ್ದಿಶ್ಟ ಪರಿಸ್ಥಿತಿಗಳಲ್ಲಿ ಹೇಗೆ ವರ್ತಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ.

ಅನಿಲದ ಮುಖ್ಯ ಲಕ್ಷಣಗಳು: ೧. ಅನಿಲಗಳು ಅತಿ ಹೆಚ್ಚು ಸಂಪೀಡನೆಗೊಗಾಗುತ್ತದೆ. ೨. ಅನಿಲಗಳು ಎಲ್ಲಾ ದಿಕ್ಕುಗಳಲ್ಲೂ ಸಮಪ್ರಮಾಣದಲ್ಲಿ ಒತ್ತಡವನ್ನುಂಟು ಮಾಡುತ್ತದೆ. ೩. ಬಾಹ್ಯ ಯಾಂತ್ರಿಕ ಸಹಾಯವಿಲ್ಲದೆ ಅನಿಲಗಳು ಎಲ್ಲಾ ಪ್ರಮಾಣದಲ್ಲೂ ಸಮಾಜಾತ ಮಿಶ್ರಣಗಳಾಗುತ್ತವೆ. ೪. ಇತರ ಎರಡು ದ್ರವ್ಯದ ಸ್ಥಿತಿಗಳಿಗಿಂತ ಅನಿಲಗಳ ಸಾಂದ್ರತೆ ಕಡಿಮೆ

 ನೀವು ಈಗ ಅಧ್ಯಯನ ಮಾಡಲಿರುವ ಅನಿಲ ನಿಯಮಗಳು,ಹಲವಾರು ಶತಮಾನದವರೆಗೆ ಅನಿಲಗಳ ಭೌತಗುಣಗಳ ಮೇಲಿನ ಸಂಶೋಧನೆಯ ಫಲಗಳಾಗಿವೆ.

ಸ್ಥಿರ ಒತ್ತಡದಲ್ಲಿ ಅನಿಲಗಳ ಗಾತ್ರ ಮತ್ತು ತಾಪಗಳ ನಡುವಿನ ಸಂಬಂಧ ಚಾರ್ಲ್ಸ್(೧೭೮೭ರಲ್ಲಿ) ಮತ್ತು ಗೇ ಲುಸಾಕ್ (೧೮೦೮ರಲ್ಲಿ) ಸ್ವತಂತ್ರವಾಗಿ, ಬಿಸಿ ಅನಿಲ ಬಲೂನ್ ತಂತ್ರಜ್ಛಾನವನ್ನು ಅಭಿವ್ರಧಿಪಡಿಸಲು ಅನೇಕ ಪ್ರಯೋಗಗಳನ್ನು ನಿರ್ಮಿಸಿದರು. ನಿರ್ದಿಶ್ಟ ರಾಶಿಯ ಅನಿಲವು ಸ್ಥಿರ ಒತ್ತಡದಲ್ಲಿ ,ತಾಪ ಬದಲಾದಂ ತೆ ಗಾತ್ರದಲ್ಲೂ ಬದಲಾವಣೆಗೊಳ್ಳುತ್ತದೆ ಎನ್ನುವುದನ್ನು ಚಾರ್ಲ್ಸ್ ಕ್ಂಡುಕೊಂಡರು.ಸ್ಥಿರ ಒತ್ತಡದಲ್ಲಿ ಪ್ರತಿ ಒಂದು ಡಿಗ್ರ್ ತಾಪ ಏರಿದಂತೆ ೨೭೩ ಕೆ ತಾಪದಲ್ಲಿ ಅನಿಲದ ಮೂಲಗಾತ್ರದ ೧/೨೭೩ ರಶ್ಟು ಗಾತ್ರ ಹೆಚ್ಚಳವಾಗುತ್ತದೆ ಎಂದು ಚಾರ್ಲ್ಸ್ ಮತ್ತು ಗೇ ಲುಸಾಕ್ ಕಂಡುಕೊಂಡರು.