ಸದಸ್ಯ:Sneharavikali1940470/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸ್ನೇಹಾ. ನಾನು ಕ್ರೈಸ್ಟ ಕಾಲೇಜಿನಲ್ಲಿ ಬಿ.ಎಸ್.ಸಿ ಮೊದಲನೇ ಸೆಮೆಸ್ಟರ್ ಅಲ್ಲಿ ಓದುತ್ತಿದ್ದೇನೆ. ನನ್ನ ತಂದೆಯ ಹೆಸರು ರವಿ.ತಾಯಿಯ ಹೆಸರು ವಿಜಯಲಕ್ಷ್ಮಿ. ನನಗೆ ಒಬ್ಬಳು ಸಹೋದರಿ ಇರುವಳು. ಆವಳ ಹೆಸರು ಶಿವಾನಿ. ಅವಳು ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ನಾವೆಲ್ಲರೂ ಬೆಂಗಳೂರಿನಲ್ಲಿ ವಾಸವಾಗಿದ್ದೆವೆ. ನನ್ನ ತಂದೆ ಒಂದು ಖಾಸಗಿ ಕಂಪನಿಯಲ್ಲಿ ಉದೋಗಿಯಾಗಿದ್ದಾರೆ. ನನ್ನ ತಾಯಿ ಗೃಹಿಣಿ. ನಾನು ಓದುವ ಸಲುವಾಗಿ ಕ್ರೈಸ್ಟ ಕಾಲೇಜಿನ ಹತ್ತಿರ ಇರುವ ವಸತಿ ನಿಲಯದಲ್ಲಿ ಇರುತ್ತೇನೆ. ರಜೆ ಇದ್ದಾಗ ನನ್ನ ತಂದೆ ತಾಯಿಯನ್ನು ಬೇಟಿ ಮಾಡಿ ಬರುತ್ತೇನೆ. ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೆ.ಎಲ್.ಇ ಸೊಸಾಯಿಟಿ ಸ್ಕೂಲ್ ನಾಗರಭಾವಿ ಶಾಲೆಯಲ್ಲಿ ಓದಿದ್ದೆನೆ. ನನ್ನ ಪದವಿ ಪೂರ್ಣ ಶಿಕ್ಷಣವನ್ನು ದೀಕ್ಷಾ ಸೆಂಟರ್ ಪಾರ್ ಲರನಿಂಗ್ ಎಂಬ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೆನೆ. ನನ್ನ ವಿದ್ಯಾಬ್ಯಾಸದ ನಂತರ ನಾನು ಶಿಕ್ಷಕಿಯಾಗಲು ಬಯಸಿದ್ದೆನೆ. ಅದರಲ್ಲು ನನಗೆ ರಸಾಯನ ಶಾಸ್ರ ವಿಷಯದ ಶಿಕ್ಷಕಿಯಾಗಬೆಕೆಂಬ ಆಸೆ. ನನಗೆ ಗಣಿತ ವಿಷಯವು ಬಹಳ ಇಷ್ಟ. ಬಿ.ಎಸ್.ಸಿ ಓದಿದ ನಂತರ ನಾನು ಎಮ್.ಎಸ್.ಸಿ ಓದಬೇಕೆಂದುಕೊಂಡಿದ್ದೆನೆ. ಎಮ್.ಎಸ್.ಸಿ ಅನ್ನು ಬಹುಶ ರಸಾಯನ ಶಾಸ್ರದಲ್ಲೆ ಮಾಡಬಹುದು ಅತವಾ ಗಣಿತದಲ್ಲಿ ಮಾಡಬಹುದು. ನಂತರ ನಾನು ಪಿ.ಎಚ್.ಡಿ ಮಾಡಲು ಬಯಸುತ್ತೆನೆ. ನನ್ನ ಹವ್ಯಾಸಗಳು ಡ್ರಾಯಿಂಗ್ ಮತ್ತು ಪೆಂಟಿಗ್, ಸ್ವಿಮಿಂಗ್ ಮಾಡುವುದು ನನಗೆ ತುಂಬಾ ಇಷ್ಟ. ಬಾಸ್ಕೆಟ್ ಬಾಲ್, ಕೆರಂ, ಶೆಟಲ್ ಆಟ ಮುಂತಾದ ಕ್ರೀಡೆಗಳನ್ನು ಆಗಾಗ ಆಡುತ್ತಿರುತ್ತೆನೆ. ನನ್ನ ಬಿಡುವಿನ ವೇಳೆಯಲ್ಲಿ ಹಾಡು ಕೆಳುತ್ತೆನೆ, ನನ್ನ ತಂಗಿಯ ಜೊತೆ ಆಟ ಆಡುತ್ತೆನೆ, ಟಿವಿ ನೊಡುತ್ತೆನೆ, ನನ್ನ ಗೆಳತಿಯರೋಡನೆ ಸಮಯ ಕಳೆಯುತ್ತೆನೆ. ನನಗೆ ಸಿನಿಮಾ ನೊಡುವುದೆಂದರೆ ಬಹಳ ಇಷ್ಟ.

ನನ್ನ ತಂದೆಯ ಅಪ್ಪಾ-ಅಮ್ಮನ ಊರು ಬಿಜಾಪುರದ ಹತ್ತಿರ ಇರುವ ಇಳ ಕಲ್ ಎಂಬ ಊರು. ನನ್ನ ಅಜ್ಜಿ ತಾತನಿಗೆ ೪ ಜನ ಮಕ್ಕಳು. ನನ್ನ ತಂದೆಗೆ ಒಬ್ಬ ಅಣ್ಣ , ಒಬ್ಬಳು ಅಕ್ಕಾ ಹಾಗು ಒಬ್ಬಳು ತಂಗಿ. ನಾನು ಆಗಾಗ ಅಲ್ಲಿ ಹೋಗುತ್ತಿರುತ್ತೆನೆ. ನನ್ನ ತಾಯಿಯ ಊರು ಧಾರವಾಡ. ನನ್ನ ತಾಯಿಗೆ ಇಬ್ಬರು ತಮ್ಮಂದಿರು. ನಾನು ನನ್ನ ಅಜ್ಜಿಯ ಜೊತೆ ಬಹಳ ಹತ್ತಿರವಾಗಿದ್ದೇನೆ. ನಾನು ಊರಿಗೆ ಹೋದಾಗ ನಾನು ಮತ್ತೆ ನನ್ನ ಅಜ್ಜಿ ಚೌಕಾಭಾರ ಆಡುತ್ತೇವೆ, ದೇವಾಲಯಕ್ಕೆ ಹೋಗುತ್ತೇವೆ, ಹಾಗು ನಾನು ಅವರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ. ಅವರು ಕೂಡ ನಮ್ಮ ಮನೆಗೆ ಆಗಾಗ ಬರುತ್ತಿರುತ್ತಾರೆ. ನಾವು ಬಹಳ ಜೋರಾಗಿ ಆಚರಿಸುವ ಹಬ್ಬಾ ದೀಪಾವಳಿ, ವರಮಾಹಾ ಲಕ್ಷ್ಮಿ. ದೀಪಾವಳಿಯ ಸಮಯದಲ್ಲಿ ನಾವು ಲಕ್ಷ್ಮಿಯನ್ನು ಕೂರಿಸಿ ಅಲಂಕಾರವನ್ನು ಮಾಡುತ್ತೇವೆ. ಎಲ್ಲರಿಗೂ ಹೊಸ ಬಟ್ಟೆಯನ್ನು ತರುತ್ತೇವೆ. ಇಡಿ ಮನೆಯನ್ನು ದೀಪಗಳಿಂದ ಅಲಂಕಾರ ಮಾಡುತ್ತೇವೆ. ಆ ಖುಷಿ ಆ ಸಂಬ್ರಮವನ್ನು ನೆನೆಸಿಕೊಂಡರೆ ರೋಮಾಂಚನ. ನನ್ನ ತಂಗಿ ಹಾಗು ನಾನು ಇಬ್ಬರು ಸೇರಿ ನನ್ನ ತಾಯಿಗೆ ಸಹಾಯ ಮಾಡುತ್ತೇವೆ. ನಾನು ಮತ್ತು ನನ್ನ ಕುಟುಂಬದ ಎಲ್ಲಾ ಸದಸ್ಯರೆಲ್ಲರೂ ತಾಯಿ ಲಕ್ಷ್ಮಿಗೆ ಎಲ್ಲರನ್ನೂ ಹರಸಲು ಬೇಡಿಕೊಳ್ಳುತ್ತೆವೆ. ನನಗೆ ಅಡಿಗೆ ಮಾಡಲು ಬರುವುದಿಲ್ಲ ಆದರೆ ನಾನು ಕಲಿಯುತ್ತಿದ್ದೇನೆ. ನನಗೆ ರಜಾ ದಿನಗಳ್ಳಿದ್ದಾಗ ನನ್ನ ಅಮ್ಮನ ಬಳಿ ಹೋಗಿ ಕಲಿಯಲು ಪ್ರಯತ್ನಿಸುತ್ತೇನೆ.

ಬಾಗಲಕೋಟೆ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಇಳಕಲ್ ಸೀರೆ

ನನ್ನ ತಂದೆಯ ಊರು ಬಾಗಲಕೋಟೆ ಜಿಲ್ಲೆಯ ಇಳಕಲ್. ಇಳಕಲ್ ಸೀರೆ ತುಂಬಾ ಪ್ರಸಿದ್ಧವಾಗಿದೆ. ಇಲ್ಲಿ ನೆಯ್ದ ಸೀರೆಗಳನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ, ಆಂದ್ರ ಎಲ್ಲ ರಾಜ್ಯಗಳಲ್ಲಿ ಉಪಯೋಗಿಸುತ್ತಾರೆ. ಇಳಕಲ್ ಅಲ್ಲಿ ಸಿಗುವ ಗುಲಾಬಿ ಬಣ್ಣದ ಗ್ರಾನೈಟ್ ಕಲ್ಲು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.





ಬದಾಮಿಯ ಬನಶಂಕರಿ ಮತ್ತು ಪಟ್ಟದ ಕಲ್ಲು[ಬದಲಾಯಿಸಿ]

ಪಟ್ಟದ ಕಲ್ಲು ವಿರೂಪಾಕ್ಷ ದೇವಾಲಯ
ಬದಾಮಿಯ ಬನಶಂಕರಿ

ಬಾಗಲಕೋಟೆ ಜಿಲ್ಲೆಯ ಸುತ್ತಲೂ ನೋಡಲು ತುಂಬಾ ಐತಿಹಾಸಿಕ ದೇವಾಲಯಗಳಿವೆ. ಬಾಗಲಕೊಟೆ ಜಿಲ್ಲೆಯ ಬನಶಂಕರಿ ಬದಾಮಿಯ ದೇವಾಲಯ ತುಂಬಾ ಹಳೆಯದು ಬನಶಂಕರಿ ದೇವಿಯ ಜಾತ್ರೆ ಸುಮಾರು ಒಂದು ತಿಂಗಳ ಕಾಲ ನಡೆಯುತ್ತದೆ ಬದಾಮಿ ನಂತರ ಕೆಲವೇ ಕಿಲೊಮೀಟರ್ ಮುಂದೆ ಸಾಗಿದರೆ ಸಿಗುವುದೇ ಪಟ್ಟದ ಕಲ್ಲು. ಪಟ್ಟದ ಕಲ್ಲಿನಲ್ಲಿ ತುಂಬಾ ದೊಡ್ಡ ಬಸವಣ್ಣನ ಪ್ರತಿಮೆ ಇದೆ. ಇದು ಸರಳ ಮತ್ತು ಸುಂದರವಾದ ದೇವಾಲಯ.

ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವ೦ಶದ ರಾಜಧಾನಿಯಾಗಿದ್ದಿತು. ಇಲ್ಲಿನ ದೇವಾಲಯಗಳನ್ನು ಚಾಲುಕ್ಯ ವ೦ಶದ ಅರಸರು ಕಟ್ಟಿಸಿದರು. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದು ಕಂಚಿಯ ಕೈಲಾಸನಾಥರ್ ದೇವಾಲಯದಂತೆ ಇದ್ದು ಅದನ್ನು ನೋಡಿ ಸ್ಫೂರ್ತಿಗೊಂಡು ಕಟ್ಟಿಸಲಾಗಿದೆ.ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.

ಚಾಲುಕ್ಯರು ನಿರ್ಮಿಸಿದರೆಂದು ನಂಬಲಾಗಿರುವ ಬಾದಾಮಿಯ ಸಾನಿಧ್ಯದಲ್ಲಿರುವ ಬನಶಂಕರಿ ದೇವಾಲಯವನ್ನು ೭ನೇ ಶತಮಾನದಲ್ಲಿ ಕಟ್ಟಲಾಗಿದೆ. ಈ ಬನಶಂಕರಿ ದೇವಾಲಯದಲ್ಲಿ ದೇವಿಯ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ಕೊರೆಯಲಾಗಿದ್ದು ಆಕೆಯು ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿ ಇರಲು ಪಾದದಡಿ ಸಿಲುಕಿರುವ ರಾಕ್ಷಸನನ್ನು ಸಹಾ ಕಾಣಬಹುದು. ದೇವಿಯು ತನ್ನ ಆಷ್ಟ ಕೈಗಳಲ್ಲಿ ತ್ರಿಶೂಲ, ಘಂಟೆ, ಕಮಲಾಪತ್ರ, ಡಮರುಗ, ಖಡ್ಗ ಮತ್ತು ಪವಿತ್ರ ವೇದ ಬರಹಗಳನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ.














ಉತ್ತರ ಕರ್ನಾಟಕ ಜಾನಪದ ವಸ್ತುಸಂಗ್ರಹಾಲಯ[ಬದಲಾಯಿಸಿ]

ಬಾಗಲಕೋಟೆಯಲ್ಲಿ ಉತ್ತರ ಕರ್ನಾಟಕ ಜಾನಪದ ವಸ್ತುಸಂಗ್ರಹಾಲಯ ಇದೆ. ಈ ಜಾನಪದ ವಸ್ತುಸಂಗ್ರಹಾಲಯದ ಒಳಗೆ ಪ್ರವೇಶಿಸಿದರೆ ನಮಗೆ ಕನ್ನಡ ಸಂಸ್ಕ್ರತಿ ಬಗ್ಗೆ ತಳುವಳಿಕೆ ಮೂಡಿಸುವ ಎಲ್ಲ ಚಿತ್ರಗಳನ್ನು ಪ್ರತಿಮೆಗಳ ಮೂಲಕ ತೋರಿಸಿದ್ದಾರೆ. ಒಂದೊಂದು ಗೊಂಬೆಗಳು ನಮ್ಮ ನಾಡಿನ ಜನರ ಉದ್ಯೊಗಗಳು, ಅವರ ಹವ್ಯಾಸಗಳು ಕ್ರಿಡೆಗಳು, ಉಡುಗೆ ತೊಡುಗೆಗಳ ಬಗ್ಗೆ ಅರಿವು ಮೂಡಿಸುತ್ತೆವೆ. ಇದನ್ನು ನಾವು ನೋಡಿದರೆ ಹಿರಿಯರ ಬಗ್ಗೆ ಅರಿವು ಮೂಡುತ್ತದೆ.



ನಾರಾಯಣಪುರ ಆಣೆಕಟ್ಟು

ನಾರಾಯಣಪುರ ಆಣೆಕಟ್ಟ[ಬದಲಾಯಿಸಿ]

ಕೃಷ್ಣಾ ನದಿಗೆ ಅಡ್ಡಲಾಗಿ ನಾರಾಯಣಪುರ ಆಣೆಕಟ್ಟನ್ನು ನಿರ್ಮಿಸಲಾಗಿದೆ.ಬಸವಸಾಗರ ಜಲಾಶಯ ಸುರಪುರ ನಿಂದ 22 ಕಿ.ಮೀ. ಅಂತರದಲ್ಲಿದೆ. ಬಸವ ಸಾಗರ ಜಲಾಶಯವು ಯಾದಗಿರಿ, ಬಾಗಲಕೋಟೆ,ವಿಜಯಾಪುರ ಜಿಲ್ಲೆಗಳಿಗೆ ವರದಾನವಾಗಿದೆ. ಈ ಆಣೆಕಟ್ಟನಿಂದ ಸಾವಿರಾರು ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗಿದೆ. ದೊಡ್ಡ ಕಾಲುವೆಗಳು, ಹಾಗೂ ಪೈಪಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಇದೊಂದು ಸುಂದರವಾದ ಉಲ್ಲಾಸ ನೀಡುವ ತಾಣವಾಗಿದೆ. ಸರಿಸುಮಾರು ಅರ್ಧ ಕಿ.ಮೀ. ಉದ್ದವಿರುವ ಜಲಾಶಯಬೇಸಿಗೆ ಕಾಲದಲ್ಲಿಯೂ ಸೂಸುವ ಆಹ್ಲಾದಕರ ತಂಗಾಳಿ ವಿಹಾರಿಗಳಿಗೆ ಪ್ರವಾಸಿಗರಿಗೆ ಹಿತಕರ ಅನುಭವ ನೀಡುವ ತಾಣವಾಗಿದೆ.




ಗೊಲಗುಂಬಜ್

ಬಿಜಾಪುರದಲ್ಲಿ ಗೊಲಗುಂಬಜ್[ಬದಲಾಯಿಸಿ]

ಬಿಜಾಪುರದಲ್ಲಿ ಗೊಲಗುಂಬಜ್ ಮಹಮದ್ ಆದಿಲ್ ಷಾಹಾ ಎಂಬ ರಾಜ ನಿರ್ಮಿಸಿದ್ದಾನೆ. ಈ ಗುಂಬಜ್ ವಿಶೇಷತೆ ಏನೆಂದರೆ ಒಂದು ಬಾರಿ ಕೂಗಿದರೆ ಅದು ಏಳು ಬಾರಿ ಪ್ರತಿದ್ವನಿಸುತ್ತೆದೆ. ಇದು ನೋಡಲು ತುಂಬಾ ಸುಂದರವಾಗಿದೆ. ಬಿಜಾಪುರದಲ್ಲಿ ಆದಲ್ ಷಾಹಾ ನಿರ್ಮಿಸಿರುವ ಬಾರಹ ಕಮಾನ್ ಇದೆ. ಇದರಲ್ಲಿ ಹನ್ನೆರಡು ಕಮಾನುಗಳಿವೆ. ನೋಡಲು ತುಂಬಾ ಚೆನ್ನಾಗಿದೆ.

ಗೋಲ್ ಗುಂಬಜ್ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಅದರ ಕಟ್ಟುವಿಕೆಯ ಹೊಣೆ ಹೊತ್ತವನು ಪ್ರಸಿದ್ಧ ವಾಸ್ತುಶಿಲ್ಪಿಯಾದ ಯಾಕುಬ್. ಗೋಲ್ ಗುಂಬಜ್ ನ ತಳಹದಿಯು ೨೦೫ ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು ೧೯೮ ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ.ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲ್ ವಿಸ್ತೀರ್ಣವು ೧೮೩೩೭೩೬ ಚದುರಡಿಗಳು. ಗೋಲ್ ಗುಂಬಜ್, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು.