ಸದಸ್ಯ:Sneha padmayyagowda/ನನ್ನ ಪ್ರಯೋಗಪುಟ01
ಜಯರಾಂ ಕೆ ಮುಂಡಾಜೆ
[ಬದಲಾಯಿಸಿ]ರಂಗ ಕಲಾವಿದ ಜಯರಾಂ ಕೆ ಮುಂಡಾಜೆ. ತನ್ನ ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಅತೀವವಾಗಿ ಪ್ರೀತಿಸುವ ಕಲಾಪ್ರತಿಭೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಜಯರಾಂ ಕೆ. ಎಲ್ಲರಿಂದಲೂ ಪ್ರೀತಿಯಿಂದ “ಮಾಸ್ಟುç” ಎಂದೇ ಕರೆಯಿಸಿಕೊಳ್ಳುವರು. ಭಜನೆ, ಭಾಷಣ, ಜನಪದ ಕುಣಿತ, ತಾಳಮದ್ದಳೆ, ಪ್ರಸಾದನ, ಕವನ ರಚನೆ, ಪಾಡ್ದನ ಹೇಳುವುದು, ನಾಟಕ ರಚನೆ, ನಿರ್ದೆಶನ, ಏಕಪಾತ್ರಾಭಿನಯ ಹೀಗೆ ಹತ್ತು ಹಲವು ರೀತಿಯ ಕಲಾ ಪ್ರತಿಭೆಗಳನ್ನು ಒಳಗೊಂಡ ಸಮ್ಮಿಲನ ಎಂದರೆ ತಪ್ಪಿಲ್ಲ.
ಶಿಕ್ಷಣ
[ಬದಲಾಯಿಸಿ]ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಂಡಾಜೆಯಲ್ಲಿ ಪೂರೈಸಿ, ಪದವಿಪೂರ್ವ ಶಿಕ್ಷಣ ಹಾಗೂ ಚಿತ್ರಕಲಾ ಅಧ್ಯಾಪಕ ತರಬೇತಿಯನ್ನು ಉಡುಪಿಯಲ್ಲಿ ಪಡೆದರು.
ಸಾಧನೆ
[ಬದಲಾಯಿಸಿ]ಇವರು ೫ ವರ್ಷ ವಯಸ್ಸಿನಲ್ಲಿದ್ದಾಗಲೆ ನಾಟಕದಲ್ಲಿ ಕೌಶಿಕನ ಪಾತ್ರ ಮಾಡಿ ಜನರಿಂದ ಮೆಚ್ಚುಗೆ ಗಳಿಸಿದರು. ನಂತರ “ಭೂಲೋಕದಲ್ಲಿ ಯಮರಾಜ” ಅನ್ನುವ ನಾಟಕದಲ್ಲಿ ಯಮನ ಪಾತ್ರದಲ್ಲಿ ನಟಿಸಿದ್ದರು. ಶಾಲಾ ದಿನಗಳಲ್ಲೇ ಹಾಡು, ನಾಟಕ, ಕ್ರೀಡೆ, ಯಕ್ಷಗಾನ ಕ್ಷೇತ್ರಗಳಲ್ಲಿ ಸಾಧನೆ ಗೈದಿದ್ದಾರೆ.ಲಾವಣಿ ಹಾಗೂ ಏಕಪಾತ್ರಭಿನಯದಲ್ಲಿ ಮೈಸೂರು ವಿಭಾಗ ಮಟ್ಟದಲ್ಲಿ ಕಲಾಪ್ರದರ್ಶನ ನೀಡಿದ್ದಾರೆ. ಯುವಜನ ಮೇಳದಲ್ಲಿ ೯ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತುಳುನಾಡಿನ ವೈವಿದ್ಯಮಯ ಕಲಾಪ್ರಕಾರಗಳನ್ನೆಲ್ಲ ಒಗ್ಗೂಡಿಸಿ ‘ತುಳುನಾಡ ವೈಭವ’ ಕಾರ್ಯಕ್ರಮದ ಮೂಲಕ ಜನರ ಮೆಚ್ಚಿಗೆಗ ಪಾತ್ರವಾದವರು. ನೂರಕ್ಕೂ ಹೆಚ್ಚು ನಾಟಕದಲ್ಲಿ ಸ್ತಿçà ಪಾತ್ರಧಾರಿಯಾಗಿ, ಹಾಸ್ಯ ಕಲಾವಿದನಾಗಿ ಅಭಿನಯಿಸಿದ್ದಾರೆ. ಯಕ್ಷಗಾನದಲ್ಲೂ ಸ್ತ್ರೀ ವೇಷ ಪಾತ್ರ ನಿರ್ವಹಿಸುವಲ್ಲಿ ಎತ್ತಿದ ಕೈ. ಈವರೆಗೂ ಹಲವು ನಾಟಕಗಳಿಗೆ ನಿರ್ದೇಶನ ಮಾಡಿ ಕಥೆಗಳನ್ನೂ ಬರೆದಿದ್ದಾರೆ.
ವೃತ್ತಿ
[ಬದಲಾಯಿಸಿ]ಹಲವು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ. ಭಾಷಣಗಾರರಾಗಿ, ಹಾಡುಗಾರರಾಗಿ, ಕುಣಿತ ಭಜನಾ ತಂಡದ ಸದಸ್ಯನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಶಟಲ್ ಬ್ಯಾಡ್ಮಿಟನ್ ಆಡುವ ಕ್ರೀಡಾಪಟುವು ಹೌದು. ಕೇವಲ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಮುಂಡಾಜೆಯಲ್ಲಿ “ಕಲಾಕುಂಚ” ಎಂಬ ಮನೆಪಾಠ ಕೇಂದ್ರದ ಮೂಲಕ ವಿದ್ಯಾದಾನ ಮಾಡುತ್ತಿದ್ದಾರೆ. ಚಿತ್ರಕಲೆ, ಚಿತ್ರವಿನ್ಯಾಸ, ಹಲಗೆ ಬರಹದಲ್ಲಿ ತೊಡಗಿರುವ ಇವರು ಉಜಿರೆಯ ಅನುಗ್ರಹ ಶಾಲೆಯಲ್ಲಿ ಕಲಾ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಈ ಸತ್ಕಾರ್ಯಕ್ಕೆ ಉತ್ತೇಜನ ನೀಡುತ್ತಾ ಬಂದಿರುವವರು ಮುಂಡಾಜೆಯ ಯುವಕ ಮಂಡಲ ಹಾಗೂ ಯಂಗ್ ಚಾಲೆಂಜರ್ಸ ಕ್ರೀಡಾ ಸಂಘ.
ಪ್ರಶಸ್ತಿ
[ಬದಲಾಯಿಸಿ]ಕಲೆಯನ್ನು ಮೈತುಂಬಿಸಿಕೊಂಡಿರುವ ಇವರಿಗೆ ರಾಜ್ಯಮಟ್ಟದ ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಲೂಕು ಮಟ್ಟದ ಅತ್ಯುತ್ತಮ ಯುವ ಕಲಾವಿದ ಪ್ರಶಸ್ತಿ, ರಾಜ್ಯ ಮಟ್ಟದ ಯುವಜನ ಮೇಳದಲ್ಲಿ “ಎಚ್ಚಮ ನಾಯಕ” ಏಕಪಾತ್ರಭಿನಯಕ್ಕೆ ರಾಜ್ಯ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ದೊರಕಿವೆ.