ಸದಸ್ಯ:Sneha 1310274/sandbox

ವಿಕಿಪೀಡಿಯ ಇಂದ
Jump to navigation Jump to search

2)ನಿಯಮಾವಳಿಗಳ ಪತ್ರ/ಲಿಖಿತ ಕಟ್ಟಳೆಗಳು

ಕಂಪನಿಯ ಲಿಖಿತ ಕಟ್ಟಳೆಗಳೆಂದರೆ ಕಂಪನಿಯ ಆಂತರಿಕ ಆಡಳಿತವನ್ನು ನಿಯಂತ್ರಿಸಲು ರೂಪಿಸಲಾದ ನಿಯಮಾವಳಿಗಳಾಗಿವೆ. ಇದು ಜ್ಞಾಪನ ಪತ್ರದ ಉಪ ವಿಧಿಗಳನ್ನು ಒಳಗೊಂಡಿರುವ ಒಂದು ದಾಖಲೆ. ಇದು ಜ್ಞಾಪನ ಪತ್ರದ ವಿಧಿ ವಿಧಾನಗಳನ್ನು ಮೀರುವಂತಿಲ್ಲ. ಸಾರ್ವಜನಿಕ ಕಂಪನಿಯು ಕಂಪನಿಗಳ ಕಾಯದೆಯ ಅನೂಸೂಚಿ ಪಟ್ಟಿ 'ಎ' ಯನ್ನು ಅಳವಡಿಸಿಕೊಳ್ಳಬಹುದು. ಅನೂಸೂಚಿ ಪಟ್ಟಿ 'ಎ' ಕಂಪನಿಯ ಆಂತರಿಕ ಆಡಳಿತವನ್ನು ನಿಯಂತ್ರಿಸುವ ನಿಯಮಾವಳಿಗಳನ್ನು ಒಳಗೊಂಡಿರುತ್ತದೆ. ಕಂಪನಿಯ ಪಟ್ಟಿ 'ಎ' ಯನ್ನು ಅಳವಡಿಸಿಕೊಂಡರೆ ಪ್ರತ್ಯೇಕ ನಿಯಮಾವಳಿಗಳನ್ನು ತಯಾರಿಸುವ ಅವಶ್ಯಕತೆ ಇರುವುದಿಲ್ಲ. ಯಾವ ಕಂಪನಿಗಳು ಪಟ್ಟಿ 'ಎ' ಯನ್ನು ಆಳವಡಿಸಿಕೊಳ್ಳುವುದಿಲ್ಲ. ಅವು ನಿಯಮಾವಳಿಗಳ ಪಟ್ಟಿಯನ್ನು ತಯಾರಿಸಿ ಜ್ಞಾಪನ ಪತ್ರಕ್ಕೆ ಸಹಿ ಹಾಕಿದ ಎಲ್ಲಾ ಸದಸ್ಯರು ನಿಯಮಾವಳಿಗಳ ಪತ್ರಕ್ಕೆ ಸಹಿ ಮಾಡಿ ಅಗತ್ಯವಾದ ಚೀಟಿ ಹಚ್ಚಿ ನೋಂದಣಾಧಿಕಾರಿಗಳಿಗೆ ಕಳುಹಿಸಿಕೊಡಬೇಕು.

3) ನಿಯೋಜಿತ ನಿರ್ದೇಶಕ ಸಮ್ಮತಿ ಪತ್ರ

ಜ್ಞಾಪನ ಪತ್ರ ಹಾಗು ಲಿಖಿತ ಕಟ್ಟಳೆಗಳ ಪತ್ರಗಳನ್ನು ಹೊರತು ಪಡಿಸಿ, ನಿಯೋಜಿತ ನಿರ್ದೇಶಕರ ಬರಹದ ಮೂಲಕ ಒಪ್ಪಿಗೆ ಪತ್ರವನ್ನೂ ಪಡೆದುಕೊಳ್ಳಬೇಕು. ಅವರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಒಪ್ಪಿಕೊಂಡು ಅರ್ಹತಾ ಶೇರುಗಳನ್ನು ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಖರೀದಿಸಲು ಒಪ್ಪಿಕೊಂಡಿರುವುದು ಕಡ್ಡಾಯವಾಗಿರುತ್ತದೆ. ಅರ್ಹತಾ ಶೇರುಗಳೆಂದರೆ ಕಂಪನಿಯಲ್ಲಿ ನಿಯೋಜಿತ ನಿರ್ದೇಶಕರು ಕಡ್ಡಾಯವಾಗಿ ಒಂದಿಷ್ಟು ಶೇರುಗಳನ್ನು ಖರೀದಿಸಲು ಮಾಡಿದ ವಾಗ್ದಾನ, ನಿಯೋಜಿತ ನಿರ್ದೇಶಕರು ವಾಗ್ದಾನ ಮಾಡಿದ ಶೇರುಗಳ ಮೊತ್ತವನ್ನು ಕಂಪನಿಯು ವ್ಯವಹಾರ ಆರಂಭಿಸುವ ಮೊದಲೇ ಭರಿಸಬೇಕು. ನಿಯೋಜಿತ ಕಂಪನಿಯಲ್ಲಿ ನಿರ್ದೇಶಕರು ಆಸಕ್ತಿ ಹೊಂದಿದ್ದಾರೆ ಎನ್ನುವ ಅಂಶವನ್ನು ಖಚಿತ ಪಡಿಸಿಕೊಳ್ಳುವುದು ಈ ಕಲಮಿನ ಉದ್ದೇದಶವಾಗಿದೆ.

4) ಒಪ್ಪಂದಗಳು

ನಿರ್ವಾಹಕ ನಿರ್ದೇಶಕರು ಅಥವಾ ಪೂರ್ಣಾವಧಿ ನಿರ್ದೇಶಕರು ಅಥವಾ ಪ್ರಬಂಧಕರನ್ನು ಆಯ್ಕೆ ಮಾಡಿದ್ದರೆ ಇನ್ನೊಂದು ಕರಾರು ಪತ್ರವನ್ನು ತಯಾರಿಸಬೇಕಾಗುತ್ತದೆ. ಈ ಒಪ್ಪಂದ ಪತ್ರವಮನ್ನು ಕಂಪನಿಯ ನೋಂದಣಿ ವೇಳೆಯಲ್ಲಿ ನೋಂದಣಿ ಅಧಿಕಾರಿಗೆ ನೀಡಬೇಕಾಗುತ್ತದೆ.

5) ಶಾಸನಬದ್ದ ಘೋಷಣೆ

ಕಾನೂನಿನ್ವಯ ಕೈಗೊಳ್ಳಬೇಕಾದ ಎಲ್ಲ ವಿಧಾನಗಳನ್ನು ಅನುಸರಿಸಲಾಗಿದೆ ಎಂದು ಸಂಸ್ಥೆಯು ಒಂದು ಶಾಸನ ಬದ್ದ ಘೋಷಣೆ ಮಾಡಬೇಕಾಗುತ್ತದೆ. ಈ ಘೋಷಣೆ ಪತ್ರಕ್ಕೆ ಉಚ್ಛ ನ್ಯಾಯಾಲಯದ ವಕೀಲ ಅಥವಾ ಸರ್ವೋಚ್ಛ ನ್ಯಾಯಾಲಯದ ವಕೀಲ, ಅಥವಾ ಲೆಕ್ಕ ಪರಿಶೋಧಕ ಅಥವಾ ಕಂಪನಿಯ ಕಾರ್ಯದರ್ಶಿಗಳು ಸಹಿ ಹಾಕಬೇಕು.

6) ಶುಲ್ಕ ಸಂದಾಯ

ಮೇಲೆ ತಿಳಿಸಿದ ಎಲ್ಲಾ ದಸ್ತಾವೇಜುಗಳೊಂದಿಗೆ ನಿರ್ದಿಷ್ಟ ಪಡಿಸಿದ ನೋಂದಣಿ ಶುಲ್ಕವನ್ನು ಭರಿಸಬೇಕು. ನೋಂದಣಿ ಶುಲ್ಕವು ಅಧಿಕೃತ ಬಂಡವಾಳದ ಮೇಲೆ ಅವಲಂಬಿತವಾಗಿರುತ್ತದೆ.

ನೋಂದಣಿ ಹಂತ

ಪ್ರವರ್ತನೆಯ ಹಂತ ಮುಕ್ತಾಯವಾದ ನಂತರ ಪ್ರವರ್ತಕರು ಕಂಪನಿಯ ನೋಂದಣಿಗೆ ಅರ್ಜಿಯನ್ನು ತಯಾರಿಸುತ್ತಾರೆ. ಪ್ರವರ್ತಕರು ಕಂಪಣಿಯನ್ನು ಅಸ್ತಿತ್ವಕ್ಕೆ ತರಲು ಅದು ಯಾವ ರಾಜ್ಯದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆಯೋ ಆ ರಾಜ್ಯದ ನೋಂದಣಾಧಿಕಾರಿಗಳಲ್ಲಿ ನೋಂದಣಿ ಮಾಡಿಸಬೇಕು. ಕಂಪನಿಯನ್ನು ನೋಂದಾಯಿಸಲು ಅರ್ಜಿಯೊಂದಿಗೆ ಈ ಕೆಳಗಿನ ದಸ್ತಾವೇಜುಗಳನ್ನು ಕಳುಹಿಸಿಕೊಡಬೇಕು.ಸಂಸ್ಥೆಯ ಜ್ಞಾಪನ ಪತ್ರ, ಇದಕ್ಕೆ ಅವಶ್ಯವಿರುವ ಅಂಚೆಚೀಟಿಯನ್ನು ಅಂಟಿಸಬೇಕು. ಸಾರ್ವಜನಿಕ ಕಂಪನಿಯಾಗಿದ್ದರೆ ಕನಿಷ್ಠ ೭ ಸದಸ್ಯರಿಂದ ಸಹಿಯಾಗಬೇಕು. ಖಾಸಗಿ ಕಂಪನಿಯಾಗಿದ್ದರೆ ಕನಿಷ್ಠ ಎರಡು ಸದಸ್ಯರಿಂದ ಸಹಿಯಾಗಬೇಕು. ಸದಸ್ಯರು ಅವರ ಪೂರ್ಣ ವಿಳಾಸ, ವೃತ್ತಿ ಮತ್ತು ಖರೀದಿಸಿದ ಶೇರುಗಳ ಸಂಖ್ಯೆಯನ್ನು ನಮೂದಿಸಬೇಕು. ಸಂಸ್ಥೆಯ ಲಿಖಿತ ಕಟ್ಟಳೆಗಳು, ಇವುಗಳಿಗೂ ಸಹ ಅಗತ್ಯವಿರುವ ಅಂಚೆ ಚೀಟಿಗಳನ್ನು ಅಂಟಿಸಬೇಕು ಮತ್ತು ಜ್ಞಾಪಕ ಪತ್ರದಂತೆ ಸಹಿ ಮಾಡಿರಬೇಕು. ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಒಪ್ಪಿಗೆ ಬಗ್ಗೆ ನಿರ್ದೇಶಕರ ಸಮ್ಮತಿ ಪತ್ರ ಹಾಗೂ ಅವರ ಅರ್ಹತಾ ಶೇರುಗಳನ್ನು ಖರೀದಿಸುವ ಬಗ್ಗೆ ವಾಗ್ದಾನ ಪತ್ರ. ಪೂರ್ಣಾವಧಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಒಪ್ಪಿಗೆ ನೀಡಿಧ ವ್ಯಕ್ತಿಗಳ ಪಟ್ಟಿ. ನೋಂದಣಿ ಅಧಿಕಾರಿಯಿಂದ ಪಡೆದ ಕಂಪನಿಯ ಹೆಸರಿನ ಒಂದು ಪ್ರತಿ. ನೋಂದಣಿ ಶುಲ್ಕ ಸಂದಾಯ ಮಾಡಿದ ಬಗ್ಗೆ ಖಚಿತ ಪುರಾವೆ.

ಕಂಪನಿಯ ನೋಂದಣಿಗೆ ಸಂಬಂಧಿಸಿದ ಎಲ್ಲಾ ದಸ್ತಾವೇಜುಗಳು ಕ್ರಮಬದ್ಧವಾಗಿ, ಶಾಸನಬದ್ಧವಾಗಿವೆ ಎಂಬುದನ್ನು ನೋಂದಣಾಧಿಕಾರಿಗಳು ಖಚೆತಪಡಿಸಿಕೊಳ್ಳುತ್ತಾರೆ. ಆದರೆ ನೋಂದಣಾಧಿಕಾರಿಗಳು ಕಂಪನಿಯ ಬಗ್ಗೆ ವಿವರವಾದ ಶೋಧನೆ ಮಾಡುವ ಅವಶ್ಯಕತೆ ಇರುವುದಿಲ್ಲ. ನೋಂದಣಾಧಿಕಾರಿಗಳು ದಸ್ತಾವೇಜುಗಳ ಬಗ್ಗೆ ತೃಪ್ತಿ ಎನಿಸಿದರೆ ಆ ಕಂಪನಿಯ ಹೆಸರನ್ನು ನೋಂದಣಿ ಪುಸ್ತಕದಲ್ಲಿ ದಾಖಲು ಮಾಡಿ ಸಂಯೋಜನಾ ಪತ್ರವನ್ನು ಕೊಡುವರು. ಈ ಪತ್ರ ಪಡೆದ ನಂತರ ಕಂಪನಿಯು ಜನ್ಮ ತಾಳುತ್ತದೆ. ಇದು ಒಂದು ಕಂಪನಿಗೆ ನೀಡುವ ಜನನ ಪ್ರಮಾಣ ಪತ್ರ ಎಂದು ಹೇಳಬಹುದು.

ನೋಂದಣಿ ಪತ್ರದಲ್ಲಿ ನಮೂದಿಸಿದ ದಿನಾಂಕದಿಂದ ಕಂಪನಿಯು ಒಂದು ಶಾಸನ ಬದ್ಧ ನಿರಂತರ ಅಸ್ತಿತ್ವದಲ್ಲಿರುವ ಸಂಸ್ಥೆಯಾಗುತ್ತದೆ.ಅಲ್ಲಿಂದ ಕಂಪನಿಯು ತನ್ನ ಹೆಸರಿನಲ್ಲಿ ಕರಾರುಗಳನ್ನು ಮಾಡುವುದು ನಂತರದಲ್ಲಿ ಯಾವುದೇ ಲೋಪ ದೋಷಗಳು ಕಂಡು ಬಂದಲ್ಲಿ ಕಂಪನಿಯ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಆದರಿಂದ ನೋಂದಣಿಯ ಪತ್ರವು ಕಂಪನಿಯ ಅಸ್ತಿತ್ವಕ್ಕೆ ಒಂದು ಖಚಿತ ಪುರಾವೆಯಾಗಿದೆ. ಕಂಪನಿಯು ದುರುದ್ದೇಶದಿಂದ ನೋಂದಣಿಯಾಗಿದ್ದರೂ ಅದರ ಜನನವನ್ನು ಪ್ರಶ್ನಿಸುವಂತಿಲ್ಲ. ಇದಕ್ಕೆ ಒಂದೇ ಪರಿಹಾರ ಕಂಪನಿಯ ವಿಸರ್ಜನೆ.

 ಕಂಪನಿಯ ನೋಂದಣಿ ಪ್ರಮಾಣ ಪತ್ರ ಪಡೆದ ನಂತರ ಖಾಸಗಿ ಕಂಪನಿಯು ಅದರ ವ್ಯವಹಾರವನ್ನು ಪ್ರಾರಂಭಿಸಬಹುದು, ಖಾಸಗಿ ಕಂಪನಿಗೆ ಬೇಕಾದ ಬಂಡವಾಳವನ್ನು ಗೆಳೆಯರು ಮತ್ತು ಸಂಬಂಧಿಕರಿಂದ ಅಥವಾ ಖಾಸಗಿ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಂಡು ವ್ಯವಹಾರವನ್ನು ಪ್ರಾರಂಭಿಸಬಹುದು. ಆದರೆ ಸಾರ್ವಜನಿಕ ಕಂಪನಿಯು ಮತ್ತೆರಡು ಹಂತಗಳನ್ನು ಪೂರೈಸಬೇಕಾಗುತ್ತದೆ.

ಬಂಡವಾಳವನ್ನು ಸಂಗ್ರಹಿಸುವ ಹಂತ
ಸಾರ್ವಜನಿಕ ಕಂಪನಿ ವ್ಯವಹಾರದ ಚಟುವಟಿಕೆಗಳನ್ನು ಆರಂಭಿಸಲು ಅಗತ್ಯವಾದ ಬಂಡವಾಳವನ್ನು ಸಾರ್ವಜನಿಕರಿಗೆ ಶೇರು ಹಾಗೂ ಸಾಲ ಪತ್ರಗಳನ್ನು ಹಂಚಿಕೆ ಮಾಡುತ್ತಾರೆ. ಇದಕ್ಕಾಗಿ ಕಂಪನಿಯು ಸಾರ್ವಜನಿಕರಿಗೆ ಮಾಹಿತಿ ಪತ್ರವನ್ನು ನೀಡುವುದು, ಮಾಹಿತಿ ಅಥವಾ ಅಹ್ವಾನ ಪತ್ರಿಕೆ ಎಂದರೆ ಸಾರ್ವಜನಿಕರಿಂದ ಶೇರುಗಳಿಗಾಗಿ ವಂತಿಕೆಯನ್ನು ಅಹ್ವಾನಿಸುವ ಇಲ್ಲವೆ ಅವರಿಗೆ ಸಾಲ ಪತ್ರಗಳನ್ನು ಖರೀದಿಸುವಂತೆ ಪ್ರೇರೇಪಿಸುವ ಯಾವುದೇ ನೋಟೀಸು,ಸುತ್ತೋಲೆ, ಜಾಹಿರಾತು ಅಥವಾ ಇನ್ನಿತರ ಯಾವುದೇ ಕಾಗದ ಪತ್ರಕ್ಕೆ ಪರಿಚಯ ಅಥವಾ ಮಾಹಿತಿ ಪತ್ರಿಕೆ ಎನ್ನುವರು. ಸಾರ್ವಜನಿಕರಿಂದ ಬಂಡವಾಳವನ್ನು ಸಂಗ್ರಹಿಸಲು ಕೆಳಕಂಡ ಹಂತಗಳನ್ನು ಪೂರೈಸಬೇಕಾಗುತ್ತದೆ.

೧> ಭಾರತೀಯ ಶೇರು ವಿನಿಮಯ ಕೇಂದ್ರದ ಅನುಮತಿ :

    ಇದು ಭದ್ರತಾ ಪತ್ರಗಳಲ್ಲಿನ ಹೂಡಿಕೆದಾರರನ್ನು ರಕ್ಷಿಸುತ್ತದೆ, ಆದ್ದರಿಂದ ಸಂಸ್ಥೆಯು ಸಾರ್ವಜನಿಕರಿಂದ ಬಂಡವಾಳವನ್ನು ಸಂಗ್ರಹಿಸುವ ಪೂರ್ವದಲ್ಲಿ ಸೇಬಿಯ ಅನುಮತಿ ಅವಶ್ಯಕವಾಗಿದೆ.

೨> ಪರಿಚಯ ಪತ್ರಿಕೆ ಸಲ್ಲಿಕೆ :

   ಪರಿಚಯ ಪತ್ರಿಕೆ ಅಥವಾ ಹೇಳಿಕೆ ಪತ್ರವನ್ನು ನೋಂದಣಾಧಿಕಾರಿಗಳಿಗೆ ಕಳುಹಿಸಿ ಕೊಡಬೇಕು, ಇದು ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಆಹ್ವಾನ ಪತ್ರಿಕೆಯಾಗಿದೆ, ಈ ಪತ್ರಿಕೆಯಲ್ಲಿ ಯಾವುದೇ ತಪ್ಪು ಗ್ರಹಿಕೆಗಳಿರಬಾರದು, ಏಕೆಂದರೆ ಸಾರ್ವಜನಿಕರು ಪರಿಚಯ ಪತ್ರಿಕೆಯನ್ನು ನಂಬಿ ವಂತಿಕೆಯನ್ನು ಸಲ್ಲಿಸುವರು.

೩> ಬ್ಯಾಂಕು ಮತ್ತು ದಳ್ಳಾಳಿಗಳ ನೇಮಕಾತಿ:

  ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು ಒಂದು ಸಾಹಸದ ಕಾರ್ಯವಾಗಿದೆ, ಅರ್ಜಿ ಹಣವನ್ನು ಸೂಚಿಸುವ ಬ್ಯಾಂಕು ಸ್ವೀಕರಿಸುತ್ತದೆ, ಬ್ಯಾಂಕು ಸಾರ್ವಜನಿಕರನ್ನು ಶೇರುಗಳನ್ನು ಖರೀದಿಸುವಂತೆ ಪ್ರೋತ್ಸಾಹಿಸುತ್ತದೆ, ಸಾರ್ವಜನಿಕರಿಂದ ಯೋಗ್ಯ ಪತ್ರಿಕೆಯೆ ದೊರೆಯದಿದ್ದರೆ ಕಂಪನಿಯು ದಳ್ಳಾಳಿಗಳನ್ನು ನೇಮಿಸುತ್ತದೆ.

೪> ಕನಿಷ್ಠ ವಂತಿಕೆ:

  ಕಂಪನಿಗಳು ಪ್ರಾರಂಭದಲ್ಲಿ ಸಂಪನ್ಲೂಲಗಳ ಕೊರತೆಯನ್ನು ತಡೆಯಲು ಕಂಪನಿಯು ತನ್ನ ಶೇರುಗಳನ್ನು ಸಾರ್ವಜನಿಕರಿಗೆ ಹಂಚುವ ಮುನ್ನ ಸಾರ್ವಜನಿಕರಿಂದ ಕನಿಷ್ಠ ಮೊತ್ತದ ಬಂಡವಾಳವನ್ನು ವಂತಿಕೆಯಾಗಿ ಪಡೆದುಕೊಳ್ಳಬೇಕು.ಇದಕ್ಕೆ "ಕನಿಷ್ಠ ವಂತಿಕೆ" ಎಂದು ಕರೆಯುತಾರೆ, ಕನಿಷ್ಠ ವಂತಿಕೆಯ ಮಿತಿಯು ಬಿಡುಗಡೆ ಬಂಡವಾಳದ ಪ್ರತಿಶತ 90% ರಷ್ಟು ಆಗಿರುತ್ತದೆ, ಒಂದು ವೇಳೆ ಬಂಡವಾಳದ ಪ್ರತಿಶತ 90 ಕ್ಕೆ ಕಡಿಮೆ ವಂತಿಕೆ ಸಂಗ್ರಹಿಸಿದರೆ ಶೇರುಗಳನ್ನು ಹಂಚಿಕೆ ಮಾಡಲು ಸಾಧ್ಯಾವಿಲ್ಲ, ಅರ್ಜಿದಾರರಿಗೆ ಹಿಂದುರುಗಿಸ ಬೇಕಾಗವುದು.

೫> ಶೇರು ವಿನಿಮಯ ಕೇಂದ್ರಕ್ಕೆ ಅರ್ಜಿ :

  ಭಾರತದಲ್ಲಿರುವ ಯಾವುದಾದರೂ ಒಂದು ಶೇರು ವಿನಿಮಯ ಕೇಂದ್ರಕ್ಕೆ ತಮ್ಮ ಕಂಪನಿಯ ಶೇರುಗಳನ್ನು ಮತ್ತು ಸಾಲಪತ್ರಗಳನ್ನು ವ್ಯವಹರಿಸಲು ಅನುಮತಿ ಕೋರಿ ಒಂದು ಅರ್ಜಿಯನ್ನು ಕಳುಹಿಸಬೇಕು, ಒಂದು ವೇಳೆ ಶೇರು ವಿನಿಮಯ ಕೇಂದ್ರವು ಅನುಮತಿಯನ್ನು ನಿರಾಕರಿಸಿದ್ದಲ್ಲಿ ಅರ್ಜಿ ಜೊತೆಗೆ ಸ್ವೀಕರಿಸಿದ ಹಣವನ್ನು ಮುಂದಿನ ಎಂಟು ದಿನಗಳೊಳಗಾಗಿ ಅರ್ಜಿದಾರಿಗೆ ಹಿಂದಿರುಗಿಸಬೇಕು.

೬> ಶೇರುಗಳ ಹಂಚಿಕೆ :

 ಶೇರುಗಳು ಅರ್ಜಿದಾರರಿಗೆ ಕಡಿಮೆ ಅಥವಾ ಶೇರುಗಳನ್ನು ಹಂಚಿಕೆ ಮಾಡದಿದ್ದಲ್ಲಿ ಉಳಿದ ಹಣವನ್ನು ಮರು ಸಂದಾಯ ಮಾಡುವುದು ಅಥವಾ ಬರತಕ್ಕೆ ಹಂಚಿಕೆ ಹಣಕ್ಕೆ ಹೊಂದಾಣಿಕೆ ಮಾಡುವುದು, ಯಾವ ಅರ್ಜಿದಾರರಿಗೆ ಶೇರುಗಖ ಹಂಚಿಕೆಯಾಗಿರುವುದಿಲ್ಲವೋ ಅವರಿಗೆ ವಿಷಾದಕರ ಪತ್ರವನ್ನು ಅರ್ಜಿ ಹಣದೊಂದಿಗೆ ಕಳುಹಿಸಿಕೊಡಬೇಕು, ಶೇರುಗಳ ಹಂಚಿಕೆ ಮಾಡಿದ ಬಗ್ಗೆ ಕಂಪನಿ ನೋಂದಣಾಧಿಕಾರಿಗಳಿಗೆ 30 ದಿನಗಳೊಳಗಾಗಿ ಮಾಹಿತಿಯನ್ನು ಒದಗಿಸಬೇಕು, ಒಂದು ವೇಳೆ ಕರೆ ಪತ್ರವನ್ನು ಸಾರ್ವಜನಿಕರಿಗೆ ನೀಡಿದೆ ವಂತಿಕೆಯನ್ನು ಗೆಳೆಯರು, ಸಂಬಂಧಿಕರು ಅಥವಾ ಖಾಸಗಿಯಾಗಿ ಸಂಗ್ರಹಿಸಿದ್ದಲ್ಲಿ ಕಂಪನಿಯ ನೋಂದಣಾಧಿಕಾರಿಗಳಿಗೆ ಶೇರು ಹಂಚಿಕೆಯ ಮೂರು ದಿನಗಳ ಮೊದಲೇ ಹೇಳಿಕೆ ಪತ್ರವನ್ನು ನೀಡಬೇಕು.
 ವ್ಯವಹಾರವನ್ನು ಪ್ರಾರಂಭಿಸುವ ಹಂತ

ಕನಿಷ್ಠ ವಂತಿಕೆ ಸಂಗ್ರಹಿಸಿದ ನಂತರ ಸಾರ್ವಜನಿಕ ಕಂಪನಿಯು ಪ್ರಾರಂಭಿಸುವ ಅನುಮತಿ ಪತ್ರಕ್ಕೆ ನೋಂದಣಾಧಿಕಾರಿಗಳಿಗೆ ಒಂದು ಪತ್ರವನ್ನು ಕಳುಹಿಸಬೇಕು, ವ್ಯವಹಾರದ ಪ್ರಾರಂಭಿಸಲು ಅನುಮತಿ ಪತ್ರವನ್ನು ಪಡೆದುಕೊಳ್ಳಲು ಈ ಕೆಳಗಿನ ದಸ್ತಾವೇಜುಗಳನ್ನು ಕಂಪನಿಯ ನೋಂದಣಾಧಿಕಾರಿಗಳಿಗೆ ಕಳುಹಿಸಿಕೊಡಬೇಕು. ೧> ಪರಿಚಯ ಪತ್ರಿಕೆಯಲ್ಲಿ ನಮೂದಿಸಿದ ಕನಿಷ್ಠ ವಂತಿಕೆ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಘೋಷಾಣಾ ಪತ್ರ, ೨> ಕಂಪನಿಯ ನಿರ್ದೇಶಕರು ತಮ್ಮ ಅರ್ಹತಾ ಶೇರುಗಳನ್ನು ಖರೀದಿಸಿ ಅವುಗಳಿಗೆ ಇತರ ಶೇರುದಾರರಂತೆ ಹಣ ಸಂದಾಯ ಮಾಡಿದ್ದಾರೆ ಎಂದು ಘೋಷಣಾ ಪತ್ರ, ೩> ಕಂಪನಿಯ ಶೇರುಗಳ ವಿನಿಮಯಕ್ಕೆ ವಿನಿಮಯ ಕೇಂದ್ರದ ನಿರಾಕರಣೆಯಾದಲ್ಲಿ ಶೇರುಗಳು ಅರ್ಜಿದಾರರಿಗೆ ಯಾವುದೇ ಕೊಡತಕ್ಕೆ ಬಾಕಿ ಇರುವುದಿಲ್ಲ ಎಂದು ಘೋಷಣಾ ಪತ್ರ, ೪> ವ್ಯವಹಾರವನ್ನು ಪ್ರಾರಂಭಿಸಲು ಕೈಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕಂಪನಿಯು ಕಾನೂನಿನ್ವಯ ಕೈಗೊಳ್ಳಲಾಗಿದೆ ಎಂದು ಘೋಷಣಾ ಪತ್ರ,

ಕೂಡು ಬಂಡವಾಳ ಸಂಸ್ಥೆಯ ಅನುಕೂಲತೆಗಳು 

೧> ಬೃಹತ್ ಬಂಡವಾಳ :

   ಕೈಗಾರಿಕೆ ಮತ್ತು ವಾಣಿಜ್ಯದ ವ್ಯವಹಾರಗಳಿಗೆ ಬೃಹತ್ ಪ್ರಮಾಣದ ಬಂಡವಾಳವು ಕೂಡು ಬಂಡವಾಳ ಸಂಸ್ಥೆಗಳಿಂದ ದೊರೆಯುತ್ತದೆ, ಇದು ಏಕ ವ್ಯಕ್ತಿ ಅಥವಾ ಪಾಲುಗಾರಿಕೆ ಸಂಸ್ಥೆಗಳಿಂದ ಸಾಧ್ಯವಿಲ್ಲ, ಕೂಡು ಬಂಡವಾಳ ಸಂಸ್ಥೆ ಅಸಂಖ್ಯಾತ ಸದಸ್ಯರಿಂದ ದೊಡ್ದ ಪ್ರಮಾಣದ ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುವುದು, ಬೃಹತ್ ಬಂಡವಾಳದಿಂದ ದೊಡ್ದ ಪ್ರಮಾಣದ ಉತ್ಪಾದನೆಯನ್ನು ಮಾಡಲು ಸಾಧ್ಯವಾಗುವುದು.

೨> ನಿರಂತರ ಅಸ್ತಿತ್ವ :

   ಕಾನೂನಿನ ದೃಷ್ಠಿಯಿಂದ ಕಂಪನಿಯು ಪ್ರತ್ಯೇಕ ವ್ಯಕ್ತಿಯಾದ್ದರಿಂದ ಸದಸ್ಯರಿಂದ ಭಿನ್ನವಾಗಿದೆ, ಇದು ಶಾಸನ ಬದ್ಧ ನೋಂದಾಯಿತ ಸಂಸ್ಥೆಯಾಗಿರುವುದರಿಂದ ನಿರಂತರವಾಗಿ ಅಸ್ತಿತ್ವದಲ್ಲಿ ಇರುತ್ತದೆ.

೩> ನಿಯಮಿತ ಹೊಣೆಗಾರಿಕೆ :

  ಈ ಸಂಸ್ಥೆಯ ಸದಸ್ಯರ ಹೊಣೆಗಾರಿಕೆಯು ಅವರು ಖರೀದಿಸಿದ ಶೇರುಗಳ ಮುಖ ಬೆಲೆಗೆ ಮಾತ್ರ ಸೀಮಿತವಾಗಿರುತ್ತದೆ, ಕಂಪನಿಯು ಹಾನಿಗೊಳಗಾದರೂ ಸದಸ್ಯರ ಖಾಸಗಿ ಆಸ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ, ಸೀಮಿತ ಹೊಣೆಗಾರಿಕೆಯಿಂದ ಬೃಹತ್ ಪ್ರಮಾಣದ ಬಂಡವಾಳ ಸಂಗ್ರಹಣೆಗೆ ಸಾಧ್ಯವಾಗುತ್ತದೆ.

೪> ಶೇರುಗಳ ವರ್ಗಾವಣೆ :

  ಸಂಸ್ಥೆಯ ಸದಸ್ಯರು ತಮ್ಮ ಶೇರುಗಳನ್ನು ಇತರರಿಗೆ ವರ್ಗಾಯಿಸುವ ಹಕ್ಕನ್ನು ಹೊಂದಿರುತ್ತಾರೆ, ಸದಸ್ಯರು ಶೇರುಗಳನ್ನು ಯೋಗ್ಯ ಬೆಲೆಗೆ ಶೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು, ಇದು ಕೈಗಾರಿಕೆ ಹಾಗೂ ವಾಣಿಜ್ಯ ಬೆಳವಣಿಗೆಯನ್ನು ಪ್ರಚೋದಿಸುತ್ತದೆ.

೫> ಅನಿಯಮಿತ ಸದಸ್ಯತ್ವ :

  ಸಾರ್ವಜನಿಕ ಸಂಸ್ಥೆಗಳಲ್ಲಿ ಸದಸ್ಯರ ಸಂಖ್ಯೆ ಅಪರಿಮಿತವಾಗಿರುತ್ತದೆ, ಆದ್ದರಿಂದ ಇವರಿಂದ ಬೃಹತ್ ಪ್ರಮಾಣದ ಬಂಡವಾಳವನ್ನು ಸಂಗ್ರಹಿಸಿ ಸದಸ್ಯರ ಹಾನಿಯನ್ನು ಮಿತಗೊಳಿಸುತ್ತದೆ.

೬> ಉಳಿತಾಯ ಮತ್ತು ಹೂಡಿಕೆ :

  ಸಾರ್ವಜನಿಕರಿಂದ ಸಣ್ಣ ಪ್ರಮಾಣದ ಹೂಡಿಕೆಯನ್ನು ಸಂಗ್ರಹಿಸಿ ಬೃಹತ್ ಕೈಗಾರಿಕೆಗಳಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ, ಇದು ಸಾರ್ವಜನಿಕರಿಗೆ ಉಳಿತಾಯದೊಂದಿಗೆ ಲಾಭವನ್ನು ನೀಡುತ್ತದೆ,ಆದರೆ ಇದು ಎಲ್ಲಾ ಉಳಿತಾಯದಾರರಿಗೆ ಇನ್ನು ತಲುಪಿರುವುದಿಲ್ಲ.

ಕೂಡು ಬಂಡವಾಳ ಸಂಸ್ಥೆಯ ಅನಾನುಕೂಲತೆಗಳು

1) ನಿರ್ಣಯದಲ್ಲಿ ವಿಳಂಬತೆ: ಸಂಸ್ಥೆಯ ಮಹತ್ವದ ವಿಷಯಗಳ ನಿರ್ಣಯಗಳನ್ನು ಕೈಗೂಳ್ಳಲು ನಿರ್ದೇಶಕರ ಅಥವಾ ಶೇರುದಾರರ ಸಭೆಯನ್ನು ಕರೆಯಬೇಕಾಗುವುದು. ಇದರಿಂದ ವೇಳೆಯ ವ್ಯಯವಾಗಿ ನಿರ್ಣಯ ಕೈಗೂಳ್ಳುವಲ್ಲಿ ವಿಳಂಭವಾಗುತ್ತದೆ. ಕಂಪನಿಯ ಆಡಳಿತವು ಅದಕ್ಷ ಅಧಿಕಾರಿಗಳ ಕೈಯಲ್ಲಿರಬಹುದಾದ್ದರಿಂದ ಅವರು ಕಂಪನಿಯ ಅಭಿವೃದ್ಧಿಗೆ ನಿರಾಸಕ್ತಿ ತೋರುವರು. 2)ಜವಾಬ್ದಾರಿ ಮತ್ತು ಆಸಕ್ತಿಯ ಕೊರತೆ: ಸಂಸ್ಥೆಯ ಆಡಳಿತ ನಿರ್ವಹಣೆಯಲ್ಲಿ ವೈಯಕ್ತಿಕ ಗಮನದ ಕೊರತೆ ಇರುತ್ತದೆ. ಶೇರುದಾರರಿಗೆ ನೇರವಾದ ನಿಯಂತ್ರಣ ಇಲ್ಲದಿರುವುದರಿಂದ ಆಸಕ್ತಿಯ ಕೊರತೆ ಇರುತ್ತದೆ. ಕಂಪನಿಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಕೇವಲ ಸಂಬಳಕ್ಕಾಗಿ ಕೆಲಸಮಾಡುವ ಸಾಧ್ಯತೆಗಳಿರುತ್ತವೆ. ಇದರಿಂದ ಕಂಪನಿಯು ನಷ್ಟವನ್ನು ಅನುಭವಿಸಬೇಕಾಗುತ್ತದೆ. 3)ಅದಕ್ಷ ಆಡಳಿತ; ಸಂಸ್ಥೆಯ ವ್ಯವಹಾರ ನಿರ್ವಹಣೆಯಲ್ಲಿ ಭಾಗವಹಿಸುವವರು ಕೇವಲ ತಾವು ಸಂಬಳವನ್ನು ಪಡೆಯುವಲ್ಲಿ ಆಸಕ್ತರಾಗಿರುತ್ತಾರೆವ ವಿನಃ ಸಂಸ್ಥೆಯ ಅಭಿವೃದ್ಧಿ ಶ್ರಮಿಸುವುದಿಲ್ಲ. ಇದರೊಂದಿಗೆ ಆಸ್ತಿ, ವಸ್ತು ಮತ್ತು ಹಣಕಾಸಿನ ದುರ್ಬಳಕೆ ಮಾಡಿ ಶೇರುದಾರರ ಹಿತಾಸಕ್ತಿಯನ್ನು ಬಲಿ ಕೊಡುವರು. 4)ಸಟ್ಟಾ ವ್ಯಾಪಾರಕ್ಕೆ ಪ್ರೋತ್ಸಾಹ: ಸಂಸ್ತೆಯ ನಿರ್ದೇಶಕರು ತಮಗೆ ಲಾಭವಾಗುವ ರೀತಿಯಲ್ಲಿ ಶೇರುಗಳ ಕ್ರಯ-ವಿಕ್ರಯ ಮಾಡುವುದರಿಂದ ಅವುಗಳ ಬೆಲೆಗಳಲ್ಲಿ ಏರಿಳಿತ ಉಂಟಾಗುವುವು. ಇದರಿಂದ ಉದ್ದಿಮೆಗಳಿಗೆ ಮತ್ತು ಉಳಿತಾಯಗಾರರಿಗೆ ತೂಂದರೆಯಾಗಿ ಶೇರುಗಳ ಸಟ್ಟಾ ವ್ಯಾಪಾರಕ್ಕೆ ಪ್ರೋತ್ಸಾಹ ಉಂಟಾಗುವುದು. 5)ಅತಿಯಾದ ಕಾನೂನಿನ ನಿಯಮಗಳು: ಇದರಲ್ಲಿ ಅತಿಯಾದ ಕಾನೂನಿನ ತೊಡಕುಗಳಿವೆ. ಸಭೆ, ಮತದಾನ, ಲೆಕ್ಕಪರಿಶೋಧನೆಗಳಿಗೆ ಶಾಸನ ಬದ್ಧ ನಿರ್ಬಂಧಗಳಿವೆ. 6)ವ್ಯವಹಾರದ ಗೌಪ್ಯತೆ ಅಸಾಧ್ಯ: ಸಂಸ್ಥೆಯ ವ್ಯವಹಾರವು ಅನೇಕ ಜನರಿಂದ ನಿರ್ವಹಿಸಲ್ಪಡುತ್ತದೆ ಮತ್ತು ಸಂಸ್ಥೆಯ ಕಾಗದ ಪತ್ರಗಳನ್ನು ಸಾರ್ವಜನಿಕರು ಪರಿಶೀಲನೆ ಮಾಡುವವುದರಿಂದ ವ್ಯವಹಾರ ಗೌಪ್ಯತೆಯನ್ನು ಕಾಯ್ದುಕೊಂಡು ಹೋಗಲು ಅಸಾಧ್ಯವಾಗುವುದು.