ಸದಸ್ಯ:Smitha V Kamath 28896/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                 ಡ್ರೊಸೊಫಿಲ ಮೆಲನೊಗಾಸ್ಟ್ರ್ ನ ಜೀವನ ಚಕ್ರ
            
        ಪರಿಚಯ : 
        ಡ್ರೊಸೊಫಿಲ ಮೆಲನೊಗಾಸ್ಟ್ರ್ ನನ್ನು ಸಾಮಾನ್ಯವಾಗಿ ಹಣ್ಣುನೊಣ (ಫ಼್ರುಇತ್ ಫ಼್ಲ್ಯ್) ಎ೦ದು ಕರೆಯಲಾಗುತ್ತದೆ.ಈ ಜೀವಿಯು ಪ್ರಯೋಗಾಲಯದಲ್ಲಿ ಸ೦ಶೋಧನೆ ನಡೆಸಲು ಸೂಕ್ತವಾಗಿರುತ್ತದೆ .
        ಡ್ರೊಸೊಫಿಲ ಮೆಲನೊಗಾಸ್ಟ್ರ್ ನನ್ನು ಉಪಯೋಗಿಸುವುದರಿ೦ದ ಪದಡೆಯಬಹುದಾದ ಅನುಕೂಲಗಳು ಹೀಗಿವೆ:
                      ೧) ಸುಲಭವಾಗಿ ಇವನ್ನು ಬೆಳೆಸಬಹುದು
                      ೨)ಸಣ್ಣ ಪೀಳಿಗೆಯ ಸಮಯ
                      ೩)ಸಮೃದ್ಧ ತಳಿಗಾರರು
                      ೪)ಸಣ್ಣ ಗಾತ್ರ
        ಜೀವನ ಚಕ್ರ :
        ಡ್ರೊಸೊಫಿಲ ಮೆಲನೊಗಾಸ್ಟ್ರ್ ನ ಜೀವನ ಚಕ್ರವು ನಾಲ್ಕು ಹ೦ತದಲ್ಲಿ ಕ೦ಡುಬರುತ್ತದೆ:
       ೧] ಮೊಟ್ಟೆ : ಒಂದು ಫಲವತ್ತಾದ ವಯಸ್ಕ ನೊಣ 'ಪ್ಯುಪ'ಹ೦ತದಿ೦ದ ಹೊರಬ೦ದ ಎರಡನೇ ದಿನ ಮೊಟ್ಟೆಗಳನ್ನು ಇಡಲು ಆರ೦ಭಿಸುತ್ತದೆ. ಪ್ರತಿ ಮೊಟ್ಟೆಯ ಉದ್ದ 0.05 ಮಿಮೀ ಆಗಿದೆ;
        ಆಕಾರದಲ್ಲಿ ಅಂಡಾಕಾರವಾಗಿ ಹಾಗೂ ಬಿಳಿ ಬಣ್ಣ ಹೊ೦ದಿದೆ.ಮೊಟ್ಟೆಯ ಭ್ರೂಣೀಯ ಅಭಿವೃದ್ಧಿಯು ಸಾಮಾನ್ಯವಾಗಿ ಒ೦ದು ದಿನ ತೆಗೆದುಕೊಳ್ಳುತ್ತದೆ.ಈ ಅಭಿವ್ರದ್ದಿಯು ೨೫ ಡಿಗ್ರೀಯಲ್ಲಿ 
        ನಡೆಯುತ್ತದೆ. ಮೊಟ್ಟೆ ಹೊಡೆದು ಹೊರಗೆ ಬಂದು ಹೊಸಜೀವನವನ್ನು 'ಲಾರ್ವ'ಹ೦ತದಲ್ಲಿ ಕಳೆಯುತ್ತದೆ.
       ೨] ಲಾರ್ವ : ಲಾರ್ವಾ ಬಿಳಿ,ವಿಭಜಿತ ಮತ್ತು ಹುಳದ ಹಾಗೆ.ಇದರ ಕಿರಿದಾದ ತಲೆ ಪ್ರದೇಶದಲ್ಲಿ ಕಪ್ಪು ಬಾಯಿ ಭಾಗಗಳು ಕಾಣಸಿಗುತ್ತವೆ.ಇವುಗಳಿಗೆ ಕಣ್ಣುಗಳಿಲ್ಲ,ಉಪಾಂಗಗಳು ಹೊಂದಿರುವುದಿಲ್ಲ,
        ಮತ್ತು ಇವು 'ಟ್ರೆಕಿಯ'ಮೂಲಕ ಉಸಿರಾಡುತ್ತವೆ.ಈ ಜೀವನ ಚಕ್ರವು ಕ್ಷಿಪ್ರ ತಿನ್ನುವ ಮತ್ತು ಬೆಳೆಯುವ ರೀತಿಯನ್ನು ಹೊ೦ದಿದೆ. ಈ ಹ೦ತದಲ್ಲಿ ೩ ಉಪ ಹ೦ತಗಳಿವೆ. ಈ ಉಪ ಹ೦ತಗಳನ್ನು
       'ಇನ್ಸ್ಟಾರ್'ಎ೦ದು ಕರೆಯಲಾಗುತ್ತದೆ. ಅಂತಿಮ'ಇನ್ಸ್ಟಾರ್'ಹಂತದ ಸಂದರ್ಭದಲ್ಲಿ ಆ ಹುಳುವು ಒಣ ಸ್ಥಳಕ್ಕೆ ಸೇರಿ 'ಪ್ಯುಪ'ವಾಗಿ ಬದಲಾಗುತ್ತದೆ.ಈ ಲಾರ್ವ ಹ೦ತವು ಸುಮಾರು ೪ ದಿನಗಳ 
       ಕಾಲ ಇರುತ್ತದೆ. ಅಂತಿಮ'ಇನ್ಸ್ಟಾರ್' ಸುಮಾರು ೪.೫ಮಿಮೀ ಉದ್ದವಿರುತ್ತದೆ.
       ೩] ಪ್ಯುಪ : ಸಂಕೀರ್ಣ ಅಂಗಾಂಶ ಪುನಸ್ಸಂಘಟನೆ ಇಲ್ಲಿ ಕ೦ಡುಬರುತ್ತದೆ.೪ ದಿನಗಳಲ್ಲಿ ಅದು ನೊಣ ರೂಪವನ್ನು ತಾಳುತ್ತದೆ.
       ೪] ನೊಣ : ಇದನ್ನು 'ಇಮಗೊ'ಎ೦ದು ಕರೆಯಲಾಗುತ್ತದೆ.  ಇದು ಸಂತಾನೋತ್ಪತ್ತಿ ಹಂತವೆ೦ದು ಪರಿಗಣಿಸಲಾಗುತ್ತದೆ.ಮೊದಲಿಗೆ ಇವುಗಳು ಉದ್ದವಾಗಿದ್ದು ಅದರ ರೆಕ್ಕೆಗಳು
        ಬೆಳೆದಿರುವುದಿಲ್ಲ.ಸುಮಾರು ಒ೦ದು ಗ೦ಟೆಯಲ್ಲಿ ಅದು ಸರಿಯಾಗಿ ಬೆಳೆಯುತ್ತದೆ. ಇದರ ಸರಾಸರಿ ಆಯುಷ್ಯ ಸುಮಾರು ೩೭ ದಿನಗಳು.