ಸದಸ್ಯ:Skeerthana 1315339

ವಿಕಿಪೀಡಿಯ ಇಂದ
Jump to navigation Jump to search

==ಕರ್ಕಟೀ==


      ಕರ್ಕಟೀ ಎಂಬ ಒಬ್ಬ ರಾಕ್ಷಸಿ. ಅವಳು ಬಹಳ ಹಿಂದೆ ಹಿಮಾಲಯದ ಉತ್ತರಭಾಗದಲ್ಲಿ ವಾಸಿಸುತ್ತಿದ್ದಳು. ಈ ರಾಕ್ಷಾಸಿಗೆ ತಿನ್ನಲು ಸಾಕಷ್ಟು ಆಹಾರವಿಲ್ಲದೇ ಕಂಗೆಟ್ಟಳು. ತನ್ನ ಹಸಿವನ್ನು ನಿವಾರಣೆ ಮಾಡಲು ಹಿಮಾಲಯ ಪರ್ವತದಲ್ಲಿ ಒಂಟಿಕಾಲಿನಲ್ಲಿ ನಿಂತು ಹಗಲಿನಲ್ಲಿ ಸೂರ್ಯನನ್ನು, ರಾತ್ರಿಯಲ್ಲಿ ಚಂದ್ರನನ್ನು ದ್ರುಷ್ಟಿಸುತ್ತಾ ಉಗ್ರವಾದ ತಪಸ್ಸು ಮಾಡಿದಳು. ಈ ತಪಸ್ಸು ಒಂದು ಸಾವಿರ ವರ್ಷಗಳವರೆಗೂ ಮುಂದುವರೆಯಿತು. ಕೊನೆಗೆ ಬ್ರಹ್ಮ ಪ್ರತ್ಯಕ್ಷನಾಗಿ "ಏನು ವರ ಬೇಕೋ ಕೇಳಿಕೋ" ಎಂದನು. ಆಗ ರಾಕ್ಷಸಿ " ನಾನು ಕಾಯಿಲೆಯ ರೂಪದ ಗಟ್ಟಿಯಾದ ಒಂದು ಸೂಜಿಯಾಗಲು ಇಷ್ಟಪಡುತ್ತೇನೆ" ಎಂದಳು. ಬ್ರಹ್ಮ, "ಹಾಗೆಯೇ ಆಗಲಿ, ನಿನ್ನ ಸೂಚಿಕಾ ಎಂಬ ಹೆಸರಿಗೆ "ವಿ" ಪ್ರತ್ಯಯ ಸೇರಿ ವಿಸೂಚಿ (ಸೆಳೇವಿನ ಕಾಲರಾ ದೇವತೆ) ಎಂದಾಗಲಿ, ಇದರಿಂದ ನಿಸ್ಸಾರವಾದ ಆಹಾರವನ್ನು ತಿನ್ನುವವರನ್ನು, ಕ್ರೂರಿಗಳನ್ನು, ಕಠಿಣ ಹ್ರುದಯಿಗಳನ್ನು ನೀನು. ಇಂಥವರ ದೇಹದೊಳಗೆ ಪ್ರವೇಶಿಸಿ ಹಾನಿಯುಂಟು ಮಾಡು. ನೀನು ಕೆಟ್ಟದ್ದು, ಒಳ್ಳೆಯದು ಇವೆರಡರ ಮೇಲೂ ಪರಿಣಾಮ ಬೀರು. ಆದರೆ ಒಳ್ಳೆಯ ಸ್ವಭಾವದವರನ್ನು ಕೊಲ್ಲಕೂಡದು. ಆದ್ದರಿಂದ ಮರಣದಿಂದ ರಕ್ಷಿಸಲು "ಓಂ, ಹ್ರಾಂ, ಹ್ರೀಂ, ಶ್ರೀಂ, ವಿಷ್ಣು ಶಕ್ತಿಯೇ ನಮಂ, ಭಗವತಿ ವಿಷ್ಣು ಶಕ್ತಿ ಏಹಿ, ಏನಾಂ ಹರ ಹರಃ ದೇಹಿ ಹನ ಹನಃ ಪಚಪಚಃ ಮಥ ಮಥಃ ಉತ್ಸಾದಯ ಉತ್ಸಾದಯಃ ದೊರೆ ಕುರುಕುರು ಸ್ವಾಹಾ ವಿಷೂಚಿಕೆ, ತ್ವಂ ಹಿಮವತಂ ಗಚ್ಚಾ, ಜೀವಸರಹ ಚಂದ್ರಮಂದಲಂ ಗತಾಸಿ ಸ್ವಾಹಾ ಎಂಬ ಮಂತ್ರವನ್ನು ಉಪಯೋಗಿಸು ಎಂದು ರಾಕ್ಷಸಿಗೆ ತಿಳಿಸಿದರು.


     ಅದರಂತೆ ಕರ್ಕಟೀಯ ಒಂದು ಸೂಚಜಿಯ ಆಕಾರವನ್ನು ಪಡೆದಳು ನಂತರ ಬಳಲಿ ಕ್ರುಶರಾದವರ ದೇಹದೊಳಗೆ ನೊಣದ ಸೂಚಜಿಯ ರೂಪದಲ್ಲಿ ಪ್ರವೇಶಿಸಿ ಕಾಲರಾ ರೋಗವನ್ನು ಮತ್ತು ಬಳಲಿದವರ ದೇಹದೊಳಗೆ ಕಾಲರಾವನ್ನು ಹರಡಲು ಪ್ರಾರಂಭಿಸಿದಳು. ಹೀಗೆ ಎರಡು ಆಕಾರಗಳನ್ನು ಪಡೆದು ಲೆಕ್ಕವಿಲ್ಲದಷ್ಟು ಜನರನ್ನು ಕೊಂದಳು. ಕೊನೆಗೆ ಈ ಕೆಲಸ ಅವಳಿಗೆ ತುಂಬಾ ಜಿಗುಪ್ಸೆಯುಂಟು ಮಾಡುತ್ತದೆ. ತನ್ನ ಹಿಂದಿನ ಆಕಾರವು ಜ್ಞಾಪಕಕ್ಕೆ ಬಂದಾಗ ಈ ಸೂಚಿಯ ಜನ್ಮ ಹೇಸಿಗೆಯಾಯಿತು. ಕರ್ಕಟೀಯು ಮತ್ತೊಮ್ಮೆ ಹಿಮಾಲಯದ ತಪ್ಪಲಿಗೆ ಹೋಗಿ ಒಂದು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದಳು. ಬ್ರಹ್ಮ ಪ್ರತ್ಯಕ್ಷನಾಗಿ ಮತ್ತೊಮ್ಮೆ "ಮಗಳೇ ಕರ್ಕಟಿ, ನಿನ್ನ ಹ್ರುದಯದಲ್ಲಿ ತುಂಬಿರುವ ಗಾಢಾಂಧಕಾರವೆಲ್ಲ ಹೊಂದಿರುವೆ, ನಿನ್ನ ಹಿಂದಿನ ಮೂಲ ರೂಪವನ್ನು ಪಡೆದುಕೊಂಡು ಈ ಪ್ರಪಂಚದಲ್ಲಿ ಅವಿವೇಕಿಗಳನ್ನು ಮೂಢರನ್ನು ದುಷ್ಟ ಜಾಗಗಳಲ್ಲಿ ವಾಸಿಸಿವಂಥವರನ್ನು ತಿನ್ನುತ್ತಾ ತಿರುಗಾಡು" ಎಂದನ.
    ಕರ್ಕಟೀಯು ಮತ್ತೊಮ್ಮೆ ರಾಕ್ಷಸಿಯ ಆಕಾರವನ್ನು ತಾಳಿದಳು ಕೊನೆಗೆ ಆಕೆಯ ಮನಸ್ಸು ಚಂಚಲಗೊಂಡಿತು, ಆಗ ಆಕೆ ಪ್ರಾಪಂಚಿಕ ವಸ್ತುಗಳನ್ನು ನೆನಸಿಕೊಂಡಾಗ ಹಸಿವು ಹೆಚ್ಚಾಯಿತು. ಆದರೆ ಬ್ರಹ್ಮ ಕ್ರೂರವಾದ ವಸ್ತುಗಳೇ ನನ್ನ ಆಹಾರವೆಂದು ಹೇಳಿದ್ದಾನೆ. ಅದನ್ನೇ ಪಡೆಯಬೇಕು ಎಂದು ಜ್ಞಾಪಿಸಿಕೊಂಡಳು. ನಂತರ ಅವಳು ಹಿಮಾಲಯದ ಕಾಡಿಗೆ ಹೊರಟಳು. ಆ ಕಾಡಿನಲ್ಲಿ ಕಾಡು ಜನರು ವಾಸಿಸುತ್ತಿದ್ದರು. ಅಂದಿನ ಕತ್ತಲಿನ ರಾತ್ರಿಯಲ್ಲಿ ಕಾಡು ಜನರ ರಾಜ ಮತ್ತು ಮಂತ್ರಿಗಳಿಬ್ಬರೂ ಕರ್ಕಟೀಯು ಕುಳಿತಿದ್ದ ಜಾಗಕ್ಕೆ ಬಂದರು. ಕರ್ಕಟೀಯು ಇವರನ್ನು ನೋಡಿ ಇವರು ದುಷ್ಟರೋ ಅಥವಾ ಸಜ್ಜನರೋ ಮೊದಲು ತಿಳಿಯಬೇಕು" ಎಂದು ಯೋಚಿಸಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದಳು.

"ನೀವು ಯಾರು? ಆದ್ಯಾತ್ಮ ಜ್ಞಾನವುಳ್ಳ ಋಷಿಗಳೇ? ತಿಳುವಳಿಕೆ ಇಲ್ಲದ ಅವಿವೇಕಿಗಳೇ? ಬೇಗ ಹೇಳಿ" ಎಂದು ಆರ್ಭಟಿಸುತ್ತಾಳೆ. ಈ ಶಬ್ದವನ್ನು ಕೇಳಿದ ರಾಜ ಮತ್ತು ಆ ಕಾಡಿನ ಜನರು ಕಣ್ಣಿಗೆ ಕಾಣದೆ ಇರುವ ದೆವ್ವವೇ? ಎಲ್ಲಿ ಕುಳಿತಿರುವೆ? ನಿನ್ನ ಶಕ್ತಿ ಇಲ್ಲದ ದೇಹವನ್ನು ನೋಡಬಹುದೆ? ಹೆಣ್ಣು ಜಈರುಂಡೆಯ ಶಬ್ದದಂತಿರುವ ನಿನ್ನ ಕೂಗಿಗೆ ಹೆದರಿದವರಾರು? ಎಂದರು. ಈ ಮಾತುಗಳನ್ನು ಕೇಳಿದ ಕರ್ಕಟೀಯು ತನ್ನ ಕೋರೆಗಳನ್ನು ತೋರಿಸುತ್ತಾ ಗಟ್ಟಿಯಾಗಿ ಅರುಚುತ್ತಾ, ಅವರು ಹೆದರುವಂತೆ ಬೆಳಕನ್ನುಂಟು ಮಾಡಿದಳು. ಆ ಬೆಳಕಿನಡೆಗೆ ಗಟ್ಟಿಯಾಗಿ ನಗುತ್ತಿರುವ ಅವಳ ಭಯಂಕರವಾದ ಆಕ್ರುತಿಯನ್ನು ಕಂಡು ಆ ಕಾಡಿನ ಜನರು ಸ್ವಲ್ಪವೂ ವಿಚಲಿತರಾಗಲಿಲ್ಲ. ಮಂತ್ರಿಯು ಅವಳತ್ತ ತಿರುಗಿ " ಏ ರಾಕ್ಷಸಿತಯೇ, ನಿನ್ನ ಮೋಸಗಳು ನಮ್ಮ ಮೇಲೆ ಯಾವ ಪರಿಣಾಮ ಬೀರಲಿಲ್ಲ. ನಿನ್ನಂಥ ಸಾವಿರಾರು ಸೊಳ್ಳೆಗಳು ನಮ್ಮೆದುರಿಗೆ ಬಂದರೂ ಅದು ಕೇವಲ ಗಾಳಿಯ ಎದುರಿನ ತರಗೆಲೆಯಂತೆ ಮಾತ್ರ. ನೀನು ಆಹಾರಕೋಸ್ಕರ ನಟಿಸುತ್ತಿರುವೆ. ನಿನಗೆ ಏನು ಬೇಕು ಹೇಳು? ನಾವು ನಿನ್ನನ್ನು ತ್ರುಪ್ತಿಪಡಿಸುತ್ತೇವೆ- ಎಂದರು.

   ಕರ್ಕಟೀಯು ಈ ಪರಾಕ್ರಮಿಗಳ ಮುಂದೆ ತನ್ನ ಶಕ್ತಿಯು ನಿಷ್ಟ ಯೋಜನವೆಂದು ಭಾವಿಸಿದಳು. ಅವರು ಋಷಿಗಳಿರಬೇಕೆಂದು ಯೋಚಿಸಿ "ಓ ಮಹಾನಾಯಕರೇ, ನೀವುಗಳಾರು? ಸತ್ಯವನ್ನು ಹೇಳಿರಿ" ಎಂದಳು, ಮತ್ತೊಮ್ಮೆ ಮಂತ್ರಿಯು ಮುಂದೆ ಬಂದು ಈತ ಈ ಕಾಡಿಗೆ ರಾಜ: ನಾನು ಈತನ ಮಂತ್ರಿ. ನಾವು ರಾತ್ರಿ ವೇಳೆಯಲ್ಲಿ ತಿರುಗಾಟಕ್ಕೆ ಬಂದು ನಿನ್ನಂಥ ದುಷ್ಟರನ್ನು ಶಿಕ್ಷಿಸುತ್ತೇವೆ"- ಎಂದನು. 
  ರಾಕ್ಷಸಿಯು ಇವರ ಮಾತುಗಳನ್ನು ಮೆಚ್ಚಿ "ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ನೀವು ಅದಕ್ಕೆ ತಕ್ಕ ಉತ್ತರಗಳನ್ನು ಕೊಟ್ಟರೆ ಬದುಕಿ ಉಳಿಯುತ್ತೀರಿ" ಎಂದಳು ಅದಕ್ಕೆ ರಾಜ ಒಪ್ಪಿಕೊಂಡನು. ರಾಕ್ಷಸಿ ಅವರನ್ನು ಕೇಳಿದ ಪ್ರಶ್ನೆಗಳು ಹೀಗೆವೆ.

೧. ಯಾವ ಅಣುವಿನಲ್ಲಿ ಯಾವುದು ಏಕಕಾಲದಲ್ಲಿ ಕನಿಷ್ಟ ಘಟಕವೂ. ಆನೇಕವೂ ಆಗಿರುತ್ತದೆ? ಅನೇಕ ಸಮುದ್ರದ ಗುಳ್ಳೆಗಳಂತೆ ಈ ವಿಶ್ವಗಳು ಹುಟ್ಟುತ್ತವೇಯೇ? ನಾಶವಾಗುತ್ತವೆಯೇ? ೨. ಆಕಾರ ಹಾಗೂ ನಿರಾಕಾರದಂತೆ ಯಾವುದು ಬೆಳಗುತ್ತದೆ? ೩. ಏನೋ ಆಗಿರುವುದು ಮತ್ತು ಏನೂ ಅಗಿಲ್ಲದಿರುವುದು ಯಾವುದು ? ೪. ಒಂದೇ ಕಾಲದಲ್ಲಿ ಚರಾ ಹಾಗೂ ಅಚರವಾಗಿರುವುದು ಯಾವುದು? ೫. ಶೂನ್ಯದಿಂದ ಆಕಾರ ತಳೆದಿರುವುದು ಯಾವುದು? ೬. ಯಾವುದು ಚಲಿಸುತ್ತಿರುವುದು ಹಾಗೂ ಅದೇ ಕಾಲದಲ್ಲಿ ಕಲ್ಲಿನಂತೆ ನಿಶ್ಚಲವಾಗಿರುವುದು ? ೭. ಆಕಾಶದಲ್ಲಿ ಚಿತ್ರಗಳನ್ನು ಬರೆಯುವವರು ಯಾರು ? ೮. ಬೀಜದಲ್ಲಿ ವ್ರುಕ್ಷ ಅಡಗಿರುವಂತೆ ಯಾವ ಬೀಜದಲ್ಲಿ ಈ ವಿಶ್ವ ಅಡಗಿದೆ? ೯. ಸಾಗರದಿಂದ ಅಲೆಯನ್ನು ಹಾಗೂ ನೊರೆಯನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆ ಈ ಜಗತ್ತಿನಲ್ಲಿ ಜೀವ ಹಾಗೀ ನಿರ್ಜೀವಗಳನ್ನು ಯಾವ ವಸ್ತುವಿನಿಂದ ಹೇಗೆ ಅಗಲಿಸದೇ ಇರಬಹುದು? ೧೦. ನೀರಿನಿಂದ ದ್ರವ ಹೇಗೆ ಪ್ರತ್ಯೇಕವಲ್ಲವೋ ಹಾಗೆ ದ್ವೈತವಾಗಿದ್ದು ಪ್ರತ್ಯೇಕವಾಗಿರದ ವಸ್ತು ಯಾವುದು?


                 ಈ ಪ್ರಶ್ನೆಗಳಿಗೆ ರಾಜನ ಉತ್ತರ ಹೀಗೆವೆ:

೧. ಹೇ ರಾಕ್ಷಸಿಯೆ 'ನೀನು ನಮ್ಮ ಮುಂದೆ ರೂಪಕ ಶಬ್ದಗಳಲ್ಲಿ ಇಟ್ಟಂಥ ವೇದಗಳನ್ನು ಬಲ್ಲಂಥ ಋಷಿಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಾಗುವಂಥ ಪ್ರಶ್ನೆಗಳು ಮಹತ್ವವಾದ ಜೇವಿಯನ್ನು ಕುರಿತಿವೆ. ಅಣುವೇ ಈ ಮಹಾಶಕ್ತಿಯಾಗಿದ್ದು ನಮ್ಮ ಮನಸ್ಸು ಹಾಗೂ ಇಂದ್ರಿಯಗಳ ಎಲ್ಲ ಜ್ಞಾನಗಳಿಗೂ ಅತೀತವಾದುದು. ಅದಕ್ಕೆ ಕ್ರಿಯೆಯನ್ನು ಮಾಡುವ ಅಂಗಗಳಿಲ್ಲದಿರುವುದರಿಂದ ಅದು ಆಕಾಶದಂತೆ ಅಪ್ರಕಟವಾದುದು. ಅದು ಮನಸ್ಸಿಗೆ ಮಾತ್ರ ಅನುಭವವೇದ್ಯವಾಗುವಂಥ ಈ ಪರಮಾಣುವಿನಲ್ಲಿ ನಶ್ವರತೆಯ ಕಾರಣದಿಂದಾಗಿ ವಿಶ್ವಗಳ ಕೋಟಿ ಕೋಟಿ ಗುಳ್ಳೆಗಳು ಉದ್ಬವವಾಗುತ್ತದವೆ. ೨. ನಿಗುಣ ಹಾಗೂ ನಿರಾಕಾರನಾದ ಈ ಪರಮಾತ್ಮ ಎಲ್ಲವನ್ನೂ ವ್ಯಾಪಿಸಿದ್ದಾನೆ. ಈ ಮಹಾಶಕ್ತಿ, ಬ್ರಹ್ಮ, ಶುದ್ಧ ಜ್ಞಾನವಾಗಿದ್ದಾನೆ ( ಜ್ಞಾನರೂಪ) ಇದೇ ಆಕಾಶ ಮತ್ತು ನಿರಾಕಾಶ. ೩. ಇದನ್ನು ವಿವರಿಸಲಾಗದೇ ಇರುವುದರಿಂದ ಈ ಪರಮಾತ್ಮ ಶೂನ್ಯವಾದವನು. ಅಂದರೆ ಅದು ಸಾಧ್ಯವಾದುದರಿಂದ ಅದು ಏನೋ ಆಗಿದೆ. ೪. ಗೋಚರವಾಗುವ ಎಲ್ಲ ವಸ್ತುಗಳಲ್ಲಿಯೂ ವ್ಯಾಪಿಸಿರುವುದರಿಂದ ಈ ಪರಮಾತ್ನನಿಗೆ ಚಲನೆಯ ಶಕ್ತಿ ಇದೆ. ಆದರೆ ಈತ ಭಾವರಹಿತವಾದುದರಿಂದ ಮತ್ತು ಅನಂತವ್ಯಾಪಿಯಾದುದರಿಂದ ಅದು ಅಚಲವೂ ಆಗಿದೆ. ೫. ಈ ಪರಬ್ರಹ್ಮ ಅಗೋಚರನಾದುದರಿಂದ ಆತನಿಗೆ ಅಸ್ತಿತ್ವವಿಲ್ಲ. ಒಳ್ಳೆಯದೆಲ್ಲವರ ಸಾರಸರ್ವಸ್ವವೂ ಅದೆ ಆಗಿರುವುದರಿಂದ ಅದಕ್ಕೆ ಅಸ್ತಿತ್ವವಿದೆ. ೬. ಈ ಪರಮಾತ್ನನೇ ಚಲನೆಯ ಅಥವಾ ಕ್ರಿಯೆಯೆ ಪ್ರಕಾಶವಾಗಿದ್ದಾನೆ. ಅದರಲ್ಲಿ ಕಾಣಿಸುವ ಯಾವುದೇ ಅಂಶಗಳಿದೇ ಇರುವುದರಿಂದ ಅದು ಬೇರೇನೂ ಎಂದು ತಿಳಿಯದೇ ಇರುವುದರಿಂದ ಕಲ್ಲಿನಷ್ಟೆ ಜಡವಾದದು. ೭. ಶುಭ್ರ ಆಕಾಶದಲ್ಲಿ ಈ ಪರಬ್ರಹ್ಮ ವಿಶ್ವದ ಚಿತ್ರಗಳನ್ನು ಬರೆಯುತ್ತಾನೆ. ೮. ಪರಮಾಣುವಿನಲ್ಲಿ ಅಸ್ತಿತ್ವವಿದೆ. ೯. ಗೋಚರವಾಗುತ್ತಿರುವ ಈ ಪ್ರಪಂಚವನ್ನು ಪರಮಾತ್ಮನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಆದುದರಿಂದ ಈ ನಿರಾಕಾರ ಪರಮಾತ್ಮನಿಂದ ಬೇರೆ ಯಾವುದೂ ಇಲ್ಲ. ೧೦. ಈ ಲೋಕಗಳು ತೋರಿಕೆಗೆ ಬೇರೆಬೇರೆಯಾಗಿ ಕಂಡರೂ ಇವೆಲ್ಲ ಅದೇ ಪರಮಾತ್ಮನ ವಿವಿಧ ತೋರಿಕೆಗಳು, ಆದ್ದರಿಂದ ಈ ದೈತ್ಯಭಾವನೆ ಇಂಥದು.

     ಹೀಗೆ ಉತ್ತರಿಸಿದ ರಾಜನು ಈ ರೂಪವನ್ನು ಬದಲಿಸಿ ಬೇರೆ ರೂಪದಲ್ಲಿ ಅರಮನೆಗೆ ಬರಬೇಕೆಂದು ಕೇಳಿಕೊಂಡನು. ಆಗ ಅರಮನೆಗೆ ಬಂದರೆ ಏನು ಕೊಡುವೆಯೆಂದು ಅವಳು ಕೇಳಿದಳು. ರಾಜನು ಅದಕ್ಕೊಂದು ದಾರಿ ಮಾಡುತ್ತೇನೆ. ನೀನು ಸುಂದರವಾಗಿ ಸ್ತ್ರೀರೂಪ ಧರಿಸಿ, ಆಭರಣಗಳನ್ನು ಧರಿಸಿ ಸ್ಪಲ್ಪಕಾಲ ನಮ್ಮ ಅರಮನೆಯಲ್ಲೆ ಇರು. ನಾನು ಅರಮನೆಯಲ್ಲಿ ದುಷ್ಟರು, ಪಾಪಿಗಳನ್ನು ಒಟ್ಟಿಗೆ ಸೇರಿಸಿ ಅವರೆಲ್ಲರನ್ನೂ ನಿನಗೆ ಕೊಡುತ್ತೇನೆ. ನಂತರ ನಿನ್ನ ನಿಜರೂಪವನ್ನು ತಾಳಿ ಅವರನ್ನು ಪರ್ವತದ ತುದಿಗೆ ತೆಗೆದುಕೊಂಡು ಹೋಗಿ ನುಂಗಬಹುದು, ಧರ್ಮಕ್ಕಾಗಿ ನಡೆಸಿದ ಕೊಲೆಯು ಪಾಪರಹಿತವಾದುದು, ಆದರೆ ಇದು ಕರುಣೆಗೆ ಸಮಾನವಾದದು ಧ್ಯಾನದ ಬಗೆಗಿನ ಆಸಕ್ತಿ ಕಡಿಮೆಯಾದ ನಂತರ ನನ್ನ ಬಳಿಗೆ ದುಷ್ಟರೊಡನೆ ಪ್ರೇಮವು ಉಂಟಾದರೆ ಅದನ್ನು ಬೇರ್ಪಡಿಸುವುದು ಬಲುಕಷ್ಟವಾಗುತ್ತದೆ ಎಂದನು.

ಕರ್ಕಟೀಯು ರಾಜರ ಮಾತನ್ನು ಮನ್ನಿಸಿದಳು. ಎಲ್ಲರೂ ಅರಮನೆಯನ್ನು ತಲುಪಿದರು. ಆರು ದಿನಗಳ ಒಳಗಾಗಿ ಸಾವಿರ ಗಟ್ಟಲೆ ಕೋಲ್ಲಬೇಕಾದಂಥ ದುಷ್ಟವ್ಯಕ್ತಿಗಳನ್ನು, ತಮ್ಮ ರಾಜ್ಯದಿಂದಲೂ, ಪಕ್ಕದ ರಾಜ್ಯಘಟಕಗಳಿಂದಲೂ ಹಿಡಿದು ತಂದು ಕರ್ಕಟೀಗೆ ಒಪ್ಪಿಸಿದರು. ಒಂದು ರಾತ್ರಿ ಕರ್ಕಟೀಯು ತನ್ನ ನಿಜರೂಪವನ್ನು ಧರಿಸಿ ಕೊಲ್ಲಬೇಕಾಗಿದ್ದ ಎಲ್ಲ ದುಷ್ಟ ಜನರನ್ನು ಒಟ್ಟಿಗೆ ಸೇರಿಸಿ ಅವರೆಲ್ಲರನ್ನೂ ಹಿಮಾಲಯದ ತುದಿಗೆ ತೆಗೆದುಕೊಂಡು ಹೋದಳು.

Indian School.pngThis user is a member of WikiProject Education in India