ಸದಸ್ಯ:Shwethaanthony/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮೈಸೂರು ದಸರ'

ಮೈಸೂರು ನಗರ ಕರ್ನಾಟಕದ ಸಾಂಸ್ಕ್ರತಿಕ ನಗರ. ದಸರ ಹಬ್ಬವು ಹಲವೆಡೆ ಹಲವು ರೀತಿಯಲ್ಲಿ ಆಚರಿಸಿದರೆ ಮೈಸೂರು ದಸರ ವಿಶಿಷ್ಟವಾದುದು. ರಾಜಮಹಾರಾಜರ ಕಾಲದಿಂದಲೂ ಅದ್ದೂರಿಯ ಜಂಬೂಸವಾರಿ ಮೈಸೂರಿನಲ್ಲಿ ‌‌‌‌‍‍‍‍ನಡೆದುಬಂದಿದೆ. ಈಗಲೂ ದೇಶ-ವಿದೇಶಗಳಿಂದ ಪ್ರಖ್ಯಾತ ಜಂಬೂಸವಾರಿಯನ್ನು ವೀಕ್ಷಿಸಲು ಜನಸಾಗರ ಹರಿದುಬರುತ್ತದೆ.ವಿಜಯದಶಮಿಯ ಹಿಂದಿನ ದಿನವಾದ ಆಯುಧಪೂಜೆಯಂದು ಅಂಬಾವಿಲಾಸ ಅರಮನೆಯಲ್ಲಿ ಖಾಸಗೀ ದರ್ಬಾರು ನಡೆಯುತ್ತದೆ. ರಾಜಮನೆತನದ ವಂಶಸ್ಥರಿಂದ ಪೂಜೆ-ಪುರಸ್ಕಾರಗಳು ನಡೆಯುತ್ತವೆ. ವಿಜಯದಶಮಿಯ ಮುಂಜಾನೆ ಚಿನ್ನದ ಅಂಬಾರಿಗೆ ಪೂಜೆಯನ್ನು ಸಲ್ಲಿಸಿ ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತ ಅಂಬಾರಿಯನ್ನು ಪಟ್ಟದ ಆನೆಯ ಮೇಲೆ ಜಾಗ್ರತೆಯಿಂದ ಕೂರಿಸಿದ ಜಂಬೂಸವಾರಿ ಮುಂದೆ ಸಾಗುತ್ತದೆ. ಅರಮನೆಯ ಮುಂಬಾಗಿಲಿನಿಂದ ಬನ್ನೀಮಂಟಪದವರೆಗೂ ಚಿನ್ನದ ಅಂಬಾರಿಯೊಂದಿಗೆ ಹಲವಾರು ಜಾನಪದ ಕಲಾವಿದರು ಹಾಗೂ ವಿವಿಧ ಸ್ಥಳದ ಭಿತ್ತಿಚಿತ್ರಗಳು ಸುಮಾರು ೪ ಕಿ.ಮೀ. ಸವಾರಿಯನ್ನು ನಡೆಸುತ್ತವೆ.