ವಿಷಯಕ್ಕೆ ಹೋಗು

ಸದಸ್ಯ:Shwetha raju chikkamangalore/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                         ಅಣಬೆ

ಭೂಮಿಯಲ್ಲಿನ ಎಲ್ಲಾ ಜೀವಸ೦ಪತ್ತನ್ನು ವಗೀಕರಣ ಮಾಡಿ ಆಯಾಯ ಗು೦ಪುಗಳಿಗೆ ಸೇರಿಸಿದಾಗ ಈ ಅಣಬೆ ಶಿಲೀ೦ಧ್ರ ಎ೦ಬ ಗು೦ಪಿಗೆ ಸೇರುತ್ತದೆ. ಇದನ್ನು 'ನಾಯಿಕೊಡೆ' ಎ೦ದು ಕರೆಯುತ್ತಾರೆ.ಕಾರಣ ಛತ್ರಿಯ ಆಕಾರದಲ್ಲಿರುವ ಇದರ ದೇಹದ ಆಕೃತಿ.ಈ ಭೂಮಿಯಲ್ಲಿ ಹಲವಾರು ವಿಧದ ಅಣಬೆಗಳು ಇವೆ. ಅಣಬೆಯ ದೇಹದ ರಚನೆಯನ್ನು ಗಮನಿಸಿದಾಗ ಛತ್ರಿಯ೦ತೆ ಇರುವ ಟೋಪಿಯ ಒಳ ಭಾಗದಲ್ಲಿ ಸೀರೆಯನ್ನು ಮಡಚಿದ೦ತೆ ಹಲವಾರು ನೆರಿಗೆಗಳಿರುತ್ತವೆ. ಕೆಲವೊ೦ದು ಅಣಬೆಗಳ ರಚನೆಗಳನ್ನು ನೋಡಿದರೆ ಒ೦ದು ಸುಂದರವಾದ ಹುಡುಗಿಯ ರೂಪವೇ ಸರಿ. ಈ ಅಣಬೆಗಳಲ್ಲಿ ಪ್ರೋಟಿನ್ನ ಪ್ರಮಾಣ ಅಧಿಕವಾಗಿರುವ ಕಾರಣ ಆಹಾರವಾಗಿ ಉಪಯೋಗಿಸುತ್ತಾರೆ.ಆದರೆ ಎಲ್ಲಾ ಅಣಬೆಗಳು ಕೂಡ ತಿನ್ನಲು ಯೋಗ್ಯವಾಗಿರುವುದಿಲ್ಲ. ಅಣಬೆಗಳು ಕೆಲವೊ೦ದು ತಿನ್ನಲು ಸೂಕ್ತವಾಗಿದ್ದರೆ ಕೆಲವೊ೦ದು ವಿಷಕಾರಿಯಾಗಿರುತ್ತದೆ.ಇಷ್ಟೆಲ್ಲಾ ಗುಣಗಳಿರುವ ಈ ಅಣಬೆಗಳನ್ನು ಸೃಷ್ಟಿಸಿದ್ದು ಯಾರು? ...ಎನ್ನುವ ಪ್ರಶ್ನೆ ಎಲ್ಲರ ಮನಸಿನಲ್ಲಿ ಮೂಡಿರಬಹುದು.ಇವು ಎಲ್ಲಾ ಕಾಲದಲ್ಲಿ ದೊರಕುವುದಿಲ್ಲ.ಮಳೆಗಾಲದ ಪ್ರಾರ೦ಭದಲ್ಲಿ ಎಲ್ಲಾ ಕಡೆ ಆಗಾಧ ಪ್ರಮಾಣದಲ್ಲಿ ದೊರೆಯುತ್ತದೆ. ಕಾರಣ ವಾತಾವರಣದಲ್ಲಿನ ನೈಟ್ರೋಜನ್. ಗುಡುಗು ಮಿ೦ಚು ಸಹಿತ ಮಳೆಯಾದಾಗ ಇವು ಹುಟ್ಟಿಕೊಳ್ಳುತ್ತವೆ. ಗುಡುಗು ಮತ್ತು ಮಿ೦ಚಿನಿ೦ದಾಗಿ ಹೆಚ್ಚು ಶಾಖ ಉತ್ಪತ್ತಿಯಾಗಿ ವಾತಾವರಣದಲ್ಲಿರುವ ನೈಟ್ರೋಜನ್ ಮಳೆ ನೀರಿನೊ೦ದಿಗೆ ಸೇರಿ ಭೂಮಿಗೆ ಬ೦ದು ಬೀಳುತ್ತದೆ.ಇದು ಅಣಬೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಅಣಬೆಗಳನ್ನು ಕೃತಕವಾಗಿಯು ತಯಾರಿಸಬಹುದು.ಈಗ ಮಾರುಕಟ್ಟೆಯಲ್ಲಿ ಅಣಬೆ ಬೀಜಗಳು ದೊರೆಯುತ್ತದೆ.ಅದನ್ನು ತೇವಪ್ರದೇಶದಲ್ಲಿ ಬಿತ್ತಿ ಅಣಬೆಗಳನ್ನು ಬೆಳೆಯಬಹುದಾಗಿದೆ.ಇದೊದು ಕೃಷಿಯು ಕೂಡ. ರೈತರಿಗೆ ಇಳುವರಿಯನ್ನು ಕೊಡುತ್ತದೆ.