ವಿಷಯಕ್ಕೆ ಹೋಗು

ಸದಸ್ಯ:Shruti Hegde/ನನ್ನ ಪ್ರಯೋಗಪುಟ02

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುರೇಗಾರ ಜಲಪಾತ

[ಬದಲಾಯಿಸಿ]

ಮುರೇಗಾರ್ ಜಲಪಾತವು ಉತ್ತರ ಕನ್ನಡದ ಜಲಪಾತಗಳಲ್ಲಿ ಒಂದು. ಈ ಜಲಪಾತವು ದಟ್ಟವಾದ ಅರಣ್ಯಗಳ ಮಧ್ಯದ ಪ್ರದೇಶದಲ್ಲಿ ಹರಿಯುತ್ತದೆ. ಉತ್ತರ ಕನ್ನಡದ ತಾಲ್ಲೂಕಿನಲ್ಲಿ ಒಂದಾದ ಶಿರಸಿ ( ಸಿರ್ಸಿ ) ಯಿಂದ ೨೧ ಕಿಲೋ ಮೀಟರ್ ದೂರದಲ್ಲಿದೆ. ಯಾವುದೇ ಅಪಾಯ ಸ್ಥಳವನ್ನು ಹೊಂದಿರದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಮುರೇಗಾರ್ ಜಲಪಾತವೂ ಒಂದು. ಸುತ್ತ ಮುತ್ತಲಿನ ಪ್ರದೇಶವು ಜಲಪಾತಕ್ಕೆ ಸ್ವರ್ಗದ ಸೌಂದರ್ಯವನ್ನು ನೀಡುತ್ತದೆ. ಹಾಗೂ ಈ ಮುರೇಗಾರ್ ಜಲಪಾತವು ನೋಡುಗರಿಗೆ ಸಂತೋಷವನ್ನು ನೀಡುತ್ತದೆ.

ಮುರೇಗರ್ ಜಲಪಾತವನ್ನು ತಲುಪುವುದು ಹೇಗೆ

[ಬದಲಾಯಿಸಿ]

ಮುರೇಗಾರ್ ಜಲಪಾತವು ಸಿರ್ಸಿ ಯಿಂದ ೨೧ ಕಿಲೋ ಮೀಟರ್ ದೂರವಿದೆ. ಸಿರ್ಸಿ ಯಿಂದ ಹುಲ್ಲೇಕಲ್ ಊರನ್ನು ಸಾಗುವ ರಸ್ತೆಯ ಮಾರ್ಗದಲ್ಲಿ ಸಾಗಿ ೯ ಕಿಲೋ ಮೀಟರ್ ದೂರದಲ್ಲಿ ಸಾಲ್ಕಣಿ ಎಂಬ ಊರು ಸಿಗುವುದು. ಸಾಲ್ಕಣಿಯಿಂದ ಹಾದು ಹೋಗುವ ಹುಲ್ಲೆಕಲ್ ರಸ್ತೆಯ ಮರ್ಗವಾಗಿಯೇ ಮುರೇಗಾರ್ ಜಲಪತಕ್ಕೆ ಸಾಗಬೇಕು. ಅಲ್ಲಿ ೬ ಕಿಲೋ ಮೀಟರ್ ಗೆ ಬಲಕ್ಕೆ ತಿರುಗ ಬೇಕು. ನಂತರದಲ್ಲಿ ಪ್ರವಾಸಿಗರಿಗಾಗಿಯೇ  ಮುರೇಗಾರ್ ಫಾಲ್ಸ್ ನ ಸೈನ್ ಬೋರ್ಡ್ ಒಂದನ್ನು ನಿರ್ಮಿಸಲಾಗಿದೆ. ಅದರ ಮೂಲಕ ಮುರೇಗಾರ್ ಜಲಪಾತವನ್ನು ತಲುಪ ಬಹುದು.

ಮುರೇಗಾರ್ ಫಾಲ್ಸ್ ಎಂದು ಹೆಸರು ಬಂದದ್ದು ಹೇಗೆ

[ಬದಲಾಯಿಸಿ]

ಸಾಲ್ಕಣಿಯಿಂದ ಹುಲ್ಲೇಕಲ್ ಮಾರ್ಗದಲ್ಲಿ ಮುಂದೆ ಸಿಗುವ ಊರು ಮುರೇಗಾರ್. ಇದೊಂದು ಚಿಕ್ಕ ಗ್ರಾಮ. ಇಲ್ಲಿ ಊರಿನ ಮಧ್ಯದಲ್ಲಿ ಕಂಡು ಬರುವುದೇ ಈ ಜಲಪಾತ. ಊರಿನ ಮಾರ್ಗÀದಲ್ಲಿ ಸ್ವಚ್ಛಂದವಾಗಿ ಸ್ವಚ್ಛ ಮನಸ್ಸಿನಿಂದ ಹರಿಯುವ ಈ ನದಿಗೆ ಉರಿನದೇ ಹೆಸರು ಬಂದಿದೆ. ಊರಿನ ಮಧ್ಯದಲ್ಲಿ ತನ್ನ ಪಾಡಿಗೆ ತಾನು ಸರಾಗವಾಗಿ ಶಾಂತ ರೀತಿಯಿಂದ ಹರಿಯುತ್ತದೆ. ಆದ್ದರಿಂದ ಈ ಜಲಪತಕ್ಕೆ ಊರಿನ ಹೆಸರಿನಿಂದಲೇ ಮೂರೇಗಾರ್ ಜಲಪಾತ ಎಂಬ ಹೆಸರು ಬಂದಿದೆ.

ಉಳಿಯುವ ವ್ಯವಸ್ಥೆ

[ಬದಲಾಯಿಸಿ]

ಹತ್ತಿರದಲ್ಲಿ ಯಾವುದೇ ರೆಸಾರ್ಟ್ ಗಳಿಲ್ಲ. ಹೋಮ್ ಸ್ಟೇ ಗಳೂ ಇಲ್ಲವಾದ್ದರಿಂದ, ಉಳಿಯಬೇಕಾದರೆ ಸಿರ್ಸಿ ಯನ್ನೇ ತಲುಪಬೇಕು. ಸಿರ್ಸಿ ಯಲ್ಲಿ ಹಲವಾರು ಹೋಟೆಲ್‌ಗಳೂ ರೆಸಾರ್ಟ್ಗಳು ಸಿಗುವುದು.

ಊಟ ಉಪಪಹಾರ

[ಬದಲಾಯಿಸಿ]

ಊರಿನ ಮಧ್ಯದಲ್ಲಿ ಹರಿಯುವುದರಿಂದ ಯಾವುದೇ ಗೂಡು ಅಂಗಡಿಗಳಾಗಲೀ, ಉಟೋಪಚಾರಗಳಿಗಾಗಿ ಯವುದೇ ಹೋಟೆಲ್ಗಳಾಗಲೀ ಸಿಗುವುದಿಲ್ಲ. ಆದ್ದರಿಂದದ ಪ್ರವಾಸಿಗರು ಮಧ್ಯಾಹ್ನಕ್ಕಾಗಿ ಊಟದ ಬುತ್ತಿಯನ್ನು ಕೊಂಡೊಯ್ಯುವುದು ಉತ್ತಮ. ಸುತ್ತಲು ಹಚ್ಚ ಹಸಿರು, ಸುತ್ತಲೂ ಕಾಡು, ಹಾಗೂ ಮರಗಿಡಗಳಿಂದ ತುಂಬಿರುವುದರಿAದ ಕುಳಿತು ಊಟಮಾಡಲು ಮರದ ನೆರಳುಗಳು ಸಿಗುತ್ತವೆ. ಕುಟುಂಬ ಸಮೇತರಾಗಿ ತೆರಳಿ ಮೋಜು ವiಸ್ತಿಯಿಂದ ಖುಷಿ ಕಾಣಲು ಉತ್ತಮ ಸ್ಥಳ ಇದಾಗಿದೆ. ಹಾಗೂ ಸುತ್ತಲೂ ಸ್ವಚ್ಛತೆಯನ್ನು ಜನರು ಕಾಪಾಡಿಕೊಂಡು ಬಂದಿದ್ದಾರೆ. ಯಾವುದೇ ಅಪಾಯಕಾರಿ ಸ್ಥಳಗಳು ಇಲ್ಲವಾದ್ದರಿಂದ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರೂ ಖುಷಿಯಿಂದ ನೀರಿನಲ್ಲಿ ಆಟವಾಡಬಹುದು.

ಮುರೇಗಾರ್ ಜಲಪಾತಕ್ಕೆ ಹೋಗುವ ಸಮಯ

[ಬದಲಾಯಿಸಿ]

ಆಗಸ್ಟ್ ತಿಂಗಳನ್ನು ಹೊರತು ಪಡಿಸಿ ಬೇರೆ ಎಲ್ಲ ಸಮಯದಲ್ಲಿಯೂ ಈ ಜಲಪಾತಕ್ಕೆ ತೆರಳಬಹುದು. ಹಾಗಾಗಿಯೂ ಈ ಜಲಪಾತವನ್ನು ವೀಕ್ಷಿಸಲು ಉತ್ತಮ ಸಮಯವೆಂದರೆ ಸಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳು.