ವಿಷಯಕ್ಕೆ ಹೋಗು

ಸದಸ್ಯ:Shruti Hegde/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಪ್ಲಿ ಫಾಲ್ಸ್

[ಬದಲಾಯಿಸಿ]

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉತ್ತರÀಕನ್ನಡದ ಅದ್ಭುತ ಜಲಪಾತಗಳಲ್ಲಿ ನಿಪ್ಲಿ ಜಲಪಾತ ಕೂಡಾ ಒಂದಾಗಿದೆ. ಇದು ಸಿದ್ದಾಪುರ ತಾಲ್ಲೂಕಿನಿಂದ ಸುಮಾರು ೧೦ಕಿಲೋಮೀಟರ್ ದೂರದಲ್ಲಿರುವ ನಿಪ್ಲಿ ಎಂಬ ಹಳ್ಳಿಯಲ್ಲಿದೆ. ಉತ್ತರಕನ್ನಡದ ಪ್ರವಾಸಿ ಸ್ಥಳಗಳಲ್ಲಿ ಒಂದು ಉತ್ತಮ ಪ್ರೇಕ್ಷಣೀಯ ಸ್ಥಳವಾಗಿ ನಿಪ್ಲಿ ಜಲಪಾತವು ಜನರ ಮನಸೆಳೆದಿದೆ. ಇಲ್ಲಿನ ಸುತ್ತ ಮುತ್ತಲಿನ ಪ್ರದೇಶವು ಅದ್ಭುತವಾಗಿದ್ದು ಹೋಸುದಾರ್ಮ ಎಂಬ ಅಣೆಕಟ್ಟನ್ನು ಈ ನದಿಗೆ ಕಟ್ಟಲಾಗಿದೆ. ಈ ಅಣೆಕಟ್ಟಿನ ಹಿನ್ನೀರು ಈ ಜಲಪಾತದ ಹುಟ್ಟಿಗೆ ಕಾರಣವಾಗಿದೆ. ಸುತ್ತಲಿನ ಪ್ರದೇಶ ಹಸಿರಿನಿಂದ ಕೂಡಿದೆ. ವಿಶೇಷವೆಂದರೆ ಮಕ್ಕಳಿಂದ ಹಿಡಿದು ವಯಸ್ಕರತನಕ ಎಲ್ಲರೂ ಕುಟುಂಬ ಸಮೇತರಾಗಿ ಈ ಪ್ರೇಕ್ಷಣೀಯ ಸ್ಥಳಕ್ಕೆ ಆಗಮಿಸಿ ಜಲಪಾತದ ಸೊಬಗನ್ನು ಸವಿಯಬಹುದು. ಹಾಗೂ ಜಲಪಾತವಾದರೂ ಕೂಡಾ ಸುರಕ್ಷಿತವಾಗಿರುವುದ ಜನರಿಗೆ ಖುಷಿಯ ವಿಷಯ. ಈ ಸ್ಥಳದ ಉತ್ತಮ ಜಾಗವೆಂದರೆ ಹೊಸೂರ್ ಅಣೆಕಟ್ಟಿನ ಹಿನ್ನೀರು. ಇಲ್ಲಿ ನಾವು ಯಾವುದೇ ಅಪಾಯವಿಲ್ಲದೇ ಈಜಬಹುದು. ಈಜಲು ತಿಳಿದಿಲ್ಲದ ಜನರು ಸಹ ನೀರಿನೊಂದಿಗೆ ಸುರಕ್ಷಿತವಾಗಿ ಆಟವಾಡಬಹುದು. ಹಾಗೆಯೇ ನೀರಿನ ಮಧ್ಯದಲ್ಲಿ ನಿಂತು ಫೋಟೋಕೂಡಾ ತೆಗೆದುಕೊಳ್ಳಬಹುದು. ಫೋಟೋಗ್ರಾಫರ್ ಅಥವಾ ಫೋಟೋಗೆ ಅತ್ಯುತ್ತಮ ಸ್ಥಳವಾಗಿದೆ ಈ ಜಲಪಾತ.

ನಿಪ್ಲಿ ಜಲಪಾತವನ್ನು ತಲುಪುವುದು ಹೇಗೆ

[ಬದಲಾಯಿಸಿ]

ಉತ್ತರ ಕನ್ನಡದ ತಾಲ್ಲೂಕಿನಲ್ಲಲಿ ಒಂದಾದ ಸಿದ್ದಾಪುರದಿಂದ ೧೦ ಕಿ.ಮೀ ದೂರದಲಿರುವ ನಿಪ್ಲಿ ಫಾಲ್ಸ್. ಸಿದ್ದಾಪುರದಿಂದ ಮಾವಿನನಂಗಡಿ ಮಾರ್ಗವನ್ನು ತೆಗೆದುಕೊಳ್ಳಬೇಕು. ಅಲ್ಲಿಂದ ಮುಂದೆ ಸಾಗಿ ಸುಮಾರು ೬ ಕಿಲೋಮೀಟರ್ ಗೆ ಎಡುಕಟ್ಟಾ ಎಂಬ ಊರಿನ ರಸ್ತೆಯ ಎಡಕ್ಕೆ ಸಾಗಬೇಕು. ಅಲ್ಲಿಂದ ಸುಮರು ೨ ಕಿಲೋಮೀಟರ್‌ಗೆ ನಿಪ್ಲಿ ಜಲಪಾತವನ್ನು ತಲುಪಬಹುದು. ಪ್ರವಾಸಿಗರಿಗೆ ಹತ್ತಿರದ ರೈಲ್ವೆ ನಿಲ್ದಾಣವು ಬೆಂಗಳೂರು ಮಾರ್ಗದ ರೈಲ್ವೆ ಹಳಿ. ಹಾಗೇಯೇ ಮೈಸೂರು ತಾಳ್ಗುಪ್ಪದ ರೈಲ್ವೇ ಹಳಿ.  ಈ ಜಲಪಾತವು ತಾಳ್ಗುಪ್ಪದಿಂದ ಕೇವಲ ೧೬ ಕಿಲೋಮೀಟರ್ ದೂರದಲ್ಲಿದೆ. ತಾಳ್ಗುಪ್ಪದಿಂದ ಜೋಗ ಜಲಪಾತದ ( ಬೆಂಗಳೂರು ಹೊನ್ನಾವರ ರಸ್ತೆ) ತೆಗೆದುಕೊಳ್ಳಬೇಕು.  ಹಾಗೂ ಅಡುಕಟ್ಟದಲ್ಲಿ ೮ ಕಿಲೋಮೀಟರ್ ನಂತರ ಹಲ್ಗೇರಿ ಊರಿನ ರಸ್ತೆಯಲ್ಲಿ ತೆರಳಬೇಕು. ನಿಪ್ಲಿ ಜಲಪಾತವು ಅಡುಕಟ್ಟದಿಂದ ೮ ಕಿಲೋ ಮೀಟರ್ ದೂರದಲ್ಲಿ ಕಾಣ ಸಿಗುತ್ತದೆ. ನಿಪ್ಲಿ ಫಾಲ್ಸ್ ನಲ್ಲಿ ವಾಹನ ನಿಲುಗಡೆಗೆಂದೇ ಉಚಿತವಾದ ಪಾರ್ಕಿಂಗ್ ವ್ಯವಸ್ಥೆ ಕೂಡಾ ಇದೆ. ಆದ್ದರಿಂದ ಪ್ರವಾಸಿಗಳು ಜಲಪಾತದ ಸಮೀಪವೇ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬಹುದು. ಹಾಗೆಯೇ ನಿಪ್ಲಿ ಫಾಲ್ಸ್ ಮತ್ತು ಹಸೂರು ಅಣೆಕಟ್ಟಿನ ಚಿತ್ರವನ್ನು ಸೆರೆ ಹಿಡಿಯಲು ಯಾವುದೇ ಪ್ರವೇಶ ಶುಲ್ಕವನ್ನು ನಿಗದಿಸಿಲ್ಲ. ಆದ್ದರಿಂದ ಪ್ರವಾಸಿಗರು ತಮಗೆ ಬೇಕಾದಷ್ಟು ಪೋಟೋಗಳನ್ನು ಸೆರೆ ಹಿಡಿಯಬಹುದು. ಉಪಹಾರ ಅಥವಾ ಸಣ್ಣ ತಿನಿಸುಗಳನ್ನು ಖರೀದಿಸಲು ಸಣ್ಣದಾದ ಗೂಡು ಅಂಗಡಿಯಿದೆ. ಅಲ್ಲಿ ತಂಪು ಪಾನೀಯಗಳು ಹಾಗೆಯೇ ತಿಂಡಿ ತಿನಿಸುಗಳನ್ನು ಖರೀದಿಸಬಹುದು. ಪ್ರವಾಸಿಗರಿಗಾಗಿಯೇ ತ್ವರಿತವಾದ ಆಹಾರ ಕೇಂದ್ರವೂ ಕೂಡಾ ನಿಪ್ಲಿ ಜಲಪಾತದಲ್ಲಿ ಲಭ್ಯವಿದೆ.

ಉಳಿಯಲು ಹತ್ತಿರದ ರೆಸಾರ್ಟ್

[ಬದಲಾಯಿಸಿ]

ಇಬ್ಬನಿ ಹೋಮ್ ಸ್ಟೇ : ಇದು ನಿಪ್ಲಿ ಫಾಲ್ಸ್ ನಿಂದ ಸುಮಾರು ೯ ಕಿಲೋ ಮೀಟರ್ ದೂರದಲ್ಲಿದೆ. ಜೋಗ ಜಲಪಾತದ ಬಳಿ ಪ್ರಕೃತಿ ಯಾತ್ರಿ ನಿವಾಸವಿದೆ, ಹಾಗೂ ಹಿಲ್ಸ್ ವ್ಯೂ ಸ್ಟೇ, ಮುತ್ತಗ ಸ್ಟೇ ಈ ರೀತಿಯ ಹೋಮ್ ಸಸ್ಟೇ ಗಳು ತುಂಬ ಕಣ ಸಿಗುತ್ತವೆ. ಎಲ್ಲಾ ರೆಸರ‍್ಟ್ ಮತ್ತು ಸ್ಟೇಗಳು ನಿಲ್ಪಿ ಜಲಪಾತಕ್ಕೆ ಸುಮಾರು ೨೦ ಕಿಲೋ ಮೀಟರ್ ದೂರದಲ್ಲಿವೆ.

ಜಲಪಾತವನ್ನು ಭೇಟಿ ಮಾಡುವ ಸಮಯ

[ಬದಲಾಯಿಸಿ]

ಹುಸೂರ್ ಅಣೆಕಟ್ಟಿನ ಹಿಮ್ಮುಖ ನೀರಿನ ಹರಿವು ಯಾವಾಗಲೂ ಇರುತ್ತದೆ. ಈಜಲು ಬಯಸುವವರು ಹುಸೂರ್ ಅಣೆಕಟ್ಟಿನಲ್ಲಿ ಯಾವಾಗಲೂ ನೀರು ತುಂಬಿರುತ್ತದೆ. ಜಲಪಾತದ ಸೌಂದರ್ಯವನ್ನು ಪಡೆಯಲು ಇಚ್ಛಿಸುವವರು ಜೂನ್ - ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸ ಕೈಗೊಳ್ಳುವುದು ಉತ್ತಮ.