ವಿಷಯಕ್ಕೆ ಹೋಗು

ಸದಸ್ಯ:Shruthineeraya/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಡಿಮಜಲು

[ಬದಲಾಯಿಸಿ]

ಈ ಕಲೆಯು ಕರ್ನಾಟಕದ ರಾಯಚೂರು,ಬಳ್ಳಾರಿ,ದಾರವಾಡ,ಬಿಜಾಪುರ,ಬೆಳಗಾಂ,ಶಿವಮೊಗ್ಗ,ಗುಲ್ಬರ್ಗ,ಬೀದರ್,ಚಿತ್ತದುರ್ಗ,ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂಡುಬರುತ್ತದೆ.ಕರಡಿಮಜಲು ಅನೇಕ ಜನವರ್ಗಕ್ಕೆ ಸೇರಿರುವುದರಿಂದ ಇದು ನಿರ್ದಿಷ್ಟ ಜಾತಿಯೊಂದಕ್ಕೆ ಸೀಮಿತವಾದ ಕಲೆಯಾಗಿಲ್ಲ.ಕರಡಿಮಜಲು ಅಥವಾ ಕರಡೆಮೇಳ ಎಂಬ ಹೆಸರಿನ ಈ ಕಲೆ 'ಕರಡೆ' ಎಂಬ ಪ್ರಮುಖ ವಾದ್ಯ ವಿಶೇಷವಾದುದು.ಪದಕೋಶಗಳಲ್ಲಿ ಕರಡೆ,ಕರಡಿ ಎಂಬ ಪದಗಳಿದ್ದು ಅದಕ್ಕೆ ಒಂದು ವಾದ್ಯ ವಿಶೇಷ ಎಂಬ ಅರ್ಥವಿದೆ.ಕರಟಿ,ಕರಟಿಪ್ಪಕ್ರ,ಎನ್ನುವ ಪದಗಳು ತಮಿಳಿನಲ್ಲಿದ್ದು ಅದಕ್ಕೆ ಕರಡಿಯಂತೆ ನಾದ ಮಾಡುವ ವಾದನ ಎನ್ನುವರ್ಥವಿದೆ. ತುಳುವಿನಲ್ಲಿ 'ಕರಡೆ' ಎನ್ನುವುದು 'ದುಡಿ' ನುಡಿತದ ಒಂದು ತಾಳಗತಿ.ಕರಡಿ/ಡೆ ಪದಕ್ಕೆ ನಿಖರವಾದ ನಿಷ್ಪತ್ತಿಯನ್ನು ಭಾಷಿಕ ನೆಲೆಯಲ್ಲಿ ಹುಡುಕುವುದು ಕಷ್ಟ.ಅದು ಅನುಕರಣ ಪದವಾಗಿರುವ ಸಾಧ್ಯತೆಯೇ ಹೆಚ್ಚು.ಶಿಷ್ಟ ಸಾಹಿತ್ಯದಲ್ಲಿ 'ಕರಡಿ,ಯ ಉಲ್ಲೇಖವಿದೆ.ಕನ್ನಡ ವಾಕ್ಯಗಳಲ್ಲಿ ಸಂಸ್ಕೃತ ಅನ್ವಯಗಳನ್ನು ಸೇರಿಸಿದರೆ 'ಉತ್ತುಂಗ ಮದ್ದಳೆಯ ಜಯುಗರ ಧ್ವನಿಗಳವೋಲ್' ಎಂಬುದು ಕೇಶೀರಾಜನ ಅಭಿಪ್ರಾಯ .ಮಧುಕೇಶ್ವರನ ಪೂಜಾ ಸಮಯದಲ್ಲಿ ಕರಡೆಗಳ ವಾದನವಿತ್ತೆಂದು ಚಾಮರಸನು ಮೆರವಣಿಗೆಯ ಮುಂದಿರುವ ವಾದ್ಯ ಸಮೂಹದಲ್ಲಿ ಕರಡೆಯಿರುತ್ತಿತ್ತೆಂದು ಪದ್ಮರಾಜ ಪುರಾಣವೂ ತಿಳಿಸುತ್ತದೆ.ಚೆನ್ನಬಸವ ಪುರಾಣ ಸಿಂಗಿ ರಾಜಪುರಾಣ ಸಿದ್ದರಾಜ ಚರಿತೆ ,ಧರ್ಮಾಮ್ರತಗಳ ಪುಷ್ಟೀಕರಣ ಇದರೊಂದಿಗೆ 'ಗದಾಯುದ್ದದಲ್ಲಿ'ರನ್ನನು 'ಕರಡೆ'ಯನ್ನು ಉಲ್ಲೇಖಿಸಿರುವುದರಿಂದ ಆ ಕಾಲಕ್ಕೆ ಕರಡೆ ಒಂದು ಪ್ರಮುಖ ವಾದ್ಯ ವಿಶೇಷವಾಗಿತ್ತೆಂಬುದರಲ್ಲಿ ಅನುಮಾನವಿಲ್ಲ. ಹೀಗೆ ಕರಡೆಯ ಇತಿಹಾಸವು ೯ನೇ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಈ ವಾದ್ಯವನ್ನು ಕಟ್ಟಿಗೆಯಿಂದ ತಯಾರಿಸುತ್ತಾರೆ.ಟೊನಪಿ, ಸೀಹೊನ್ನೆ,ತೆರೆದ ಬುಗುರಿ ಮರಗಳಿಂದ ಪಡಗ ತಯಾರಿಸುತ್ತಾರೆ.ಒಂದು ಗೇಣು ಒಳಾಯ ಎರಡು ಗೇಣು ಉದ್ದ ಇರುವ,ನಡುವೆ ಚೊಳ್ಳದ ಮರವನ್ನು ಹದ ಮಾಡಲಾಗುತ್ತದೆ.ಆಡಿನ ಚರ್ಮವನ್ನು ಒಂದು ಕಾಲು ಅಡಿಯಷ್ಟು ಕೊಯ್ದು ಎರಡೂಬದಿಗಳಿಗೆ ಹೊಂದಿಸುತ್ತಾರೆ. ಹೀಗೆ ಹೊಂದಿಸುವಾಗ ಮೂರುಅಂಗುಲಕ್ಕೆ ಒಂದರಂತೆ ಸುತ್ತಲೂ ಹೆಜ್ಜೆ ಕೊರೆಯಲಾಗುವುದು.ಆ ರಂದ್ರಗಳಿಗೆ ಹೊಂದುವಂತಹ ನೂಲಿನ ಹುರಿಯನ್ನು ಶ್ರತಿಗೆ ಹೊಂದುವಂತೆ ಕಬ್ಬಿಣದ ಬಳೆ ಸೇರಿಸಿ ಶಿವದಾರದಿಂದ ಹೊಲಿಯುವವರು. ಆಗ ಬಳೆ ಸರಿಯಾದ ಸ್ಥಾನದಲ್ಲಿ ಕುಳಿತು ವಾದ್ಯ ನುಡಿಸಲು ಅನುಕೂಲವಾಗುತ್ತದೆ.ಕರಡೆಯನ್ನು ನುಡಿಸುವ ಕೋಲಗಳಲ್ಲಿ ಎಡಗಯಿಯಲ್ಲಿ ಕೋಲು ಒಂದು ಗೇಣು ಉದ್ದ ಹಾಗು ಕಿರುಬೆರಳಿನಷ್ಟು ದಪ್ಪ ಇರುತ್ತದೆ.ಅದೇ ರೀತಿ ಬಲಗಯಿಯ ಕೋಲು ಕಿರುಬೆರಳ ಗಾತ್ರಕ್ಕಿಂತ ದೊಡ್ಡದಾಗಿರುತ್ತದೆ.ಕರಡೆಯೊಂದಿಗೆ ತಾಳ ದಿಮ್ಮು ಶಹನಾಯಿ ಶ್ರತಿ ಮೊದಲಾದ ವಿಶೇಷ ವಾದ್ಯ ಪರಿಕರಗಳಿರುತ್ತವೆ.ಮುಖ್ಯವಾಗಿ ಹಬ್ಬ ಜಾತ್ರೆ ಗಣೇಶೊತ್ಸವ ಮದುವೆ, ಹಾಗೂ ಎಲ್ಲಾ ರೀತಿಯ ಧಾರ್ಮಿಕ ಉತ್ಸವಗಳಲ್ಲಿ ಕರಡಿ ಮಜಲು ನಡೆಯುತ್ತದೆ.ವೀರಗಾಸೆ ಅಥವಾ ಪುರವಂತಿಕೆಯ ಮೇಳಕ್ಕೆ ರೌದ್ರತೆಯನ್ನು ಒದಗಿಸುವುದಕ್ಕಾಗಿಯೂ ಈ ವಾದ್ಯವನ್ನು ಬಳಸಲಾಗುತ್ತದೆ.ಮೇಳದ ವೇಷಭೂಷಣಗಳು ಸರಳವಾಗಿಯೇ ಇರುತ್ತದೆ. ಸರ್ವೆ ಸಾಮಾನ್ಯವಾಗಿ ಕಲಾವಿದರು ಒಂಭತ್ತು ಮಮದಿಯಿರುತ್ತದೆ. ಅವರಲ್ಲಿ ಆರು ಜನ ಹಿಮ್ಮೇಳ ವಾದ್ಯದವರಾದರೆ ಇಬ್ಬರು ಶಹನಾಯಿ ವಾದಕರು ಹಾಗೂ ಒಬ್ಬ ಶ್ರತಿಗಾರ.ತಂಡದ ಒಂಬತ್ತ ಜನರೂ ತಲೆಗೆ ರೇಷ್ಮೆ ಪಟ್ಟಿ,ತಿಳಿನೇಲಿ ಹಾಗೂ ಹಸಿರುಮಿಶ್ರತ ಅಂಗಿ,ಸೊಂಟಕ್ಕೆ ಕೆಂಪು ವಸ್ತೃ,ಹಸಿರು ದಡಿಯ ಇವು ಕಲಾವಿದರ ವೇಷಭೂಷಣಗಳು .ಕರಡಿ ಮೇಳದ ಹೆಚ್ಚುಗಾರಿಕೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು.ಅವುಗಳೆಂದರೆ ೧.ಎದುರು-ಬದುರು ೨ವ್ರತ್ತಾಕಾರ ೩ಅಧಚಂದ್ರಾಕ್ರತಿ.

ಎದುರು-ಬದುರು; ಪಲ್ಲಕ್ಕಿ,ಉತ್ಸವ ,ಜಾತ್ರೆ,ಮದುವೆ ಇತ್ಯಾದಿ  ಸಮಾರಂಭಗಳಲ್ಲಿ  ಎದುರು-ಬದುರು  ಹೆಚ್ಚುಗಾರಿಕೆಯಿರುತ್ತದೆ.ಎದುರು ಬದುರು ನಡೆಯುತ್ತ  ಹೆಜ್ಜೆ ಹಾಕುವುದು ಇದರ ವ್ಯೆಶಿಷ್ಟ. 
 ವ್ರತ್ತಾಕಾರ; ವೀರಗಾಸೆಯ ಸಂಧರ್ಭದಲ್ಲಿ  ವೀರಗಾಸೆಯವರನ್ನು  ನಡುವೆ ನಿಲ್ಲಿಸಿ  ಸುತ್ತುವರೆದು  ಕರಡೆ ಮಜಲು  ಮೇಳದವರಿರುತ್ತಾರೆ.ಒಡಪುಗಳಿಗೆ  ಅನುಗುಣವಾಗಿ  ಕರಡೆ ಮಜಲಿನ ನುಡಿತವಿರುತ್ತದೆ.
   ಜಾನಪದ ಶಾಸ್ತೀಯ; ಕರಡಿಮೇಳವು  ಜಾನಪದ ಮತ್ತು ಶಾಸ್ತೀಯ  ಕಲೆಗಳ ನಡುವೆ ಕೊಂಡಿಯಂತಿದೆ.ಇದು ಖಷಿತ  ಶಾಸ್ತೀಯ  ಲೆಕ್ಕಾಚಾರದಿಂದ  ತಾಳಗಳನ್ನರಿಸುತ್ತದೆ.ಕರ್ನಾಟಕ  ಸಂಗೀತದ ಕಾಳಗಳ  ನುಡಿತ ಈ ಕಲೆಯಲ್ಲಿ  ಕಂಡುಬರುತ್ತದೆ.ಕರ್ನಾಟಕೀಯ ಪದ್ದತಿಯಲ್ಲಿ  ವಾದಕ  ಹುಸಿ ಪೆಟ್ಟು  ಬಾರಿಸುತ್ತ  ತಾಳದ ಆವ್ರತ್ತಿ ಸೂಚಿಸಿದರೆ ಕರಡಿಯಲ್ಲಿ ಅದಿಲ್ಲ,ಇಲ್ಲಿ  ಸನಾದಿವಾದನ ಯಾವುದಾದರೊಂದು ರಾಗದ ಸ್ವರಗುಚ್ಚವನ್ನು  ತಅಳದ  ಆವ್ರತ್ತಿಗೆ ಹೊಂದಿಸಿ 'ಲೇರ'ಊದುತ್ತಾನೆ.ಕರ್ನಾಟಕೀಯ  ತಾಳಗಳು  ಜಾತಿಗನುಗುಣವಾಗಿ  ಬೇರೆ ಬೇರಯಾದರೆ  ಕರಡೆಯ  ತಾಳಗಳು  ಒಂದೇ ರೀತಿಯಿರುತ್ತವೆ. ಹೀಗಾಗಿ ಇತ್ತೀಚೆಗೆ  ಈ ಕಲೆಗೆ ಹಿಂದೂಸ್ತಾನಿಯ  ಪ್ರಭಾವವಾಗಿರುವುದನ್ನು  ವಿದ್ವಾಂಸರು ಗುರುತಿಸುತ್ತಾರೆ.
  ಒಟ್ಟಾರೆ ಇದೊಂದು  ಸಮೂಹ ವಾದ್ಯಮೇಳ,ಹಲವು ರೀತಿಯ ವಾದ್ಯ,ಹಲವು ಗತಿ ಗತ್ತು  ಹಾಗೂ ಹಲವು ಹೆಜ್ಜೆಗಳಿಂದ  ಲಘುವಾಗಿ  ನರ್ತಿಸುತ್ತಾ  ನುಡಿಸಲಾಗುವ ಈ ಸಮೂಹ ವಾದ್ಯಗಾನ  ಉತ್ತರ  ಕರ್ನಾಟಕದ ಒಂದು ಪ್ರಮುಖ  ಕಲಾವಿಶೇಷ.ದಕ್ಕಿಣಭಾಗದ'ಚಿಟ್ ಮೇಳ ' ಇದಕ್ಕೆ ಸಂವಾದಿಯಾದ ಇನ್ನೊಂದು ಮೇಳ.

ಉಲ್ಲೇಖ

[ಬದಲಾಯಿಸಿ]

ಕರ್ನಾಟಕ ಜನಪದ ಕಲೆಗಳ ಕೋಶ ಸಂಪಾದಕರು=ಹಿ.ಚಿ. ಬೋರಲಿಂಗಯ್ಯ,ಪ್ರಸಾರಾಂಗ ಕನ್ನಡ ವಶ್ವ ವಿದ್ಯಾಲಯ, ವಿದ್ಯಾರಣ್ಯ ಪುಟ ಸಂಖ್ಯೆ=೨೦೫