ಸದಸ್ಯ:Shruthineeraya/ನನ್ನ ಪ್ರಯೋಗಪುಟ
ಚನ್ನಪ್ಪ ಉತ್ತಂಗಿ
[ಬದಲಾಯಿಸಿ]*ರೆವರೆಂಡ್ ಚೆನ್ನಪ್ಪ ಉತ್ತಂಗಿಯವರು "ಉತ್ತಂಗಿ ಚನ್ನಪ್ಪ" ಎಂದು ಖ್ಯಾತರಾಗಿದ್ದರು. ಅವರು 28.10.1881 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ದಾನಿಯೇನಿಲಪ್ಪನವರು, ತಾಯಿ ಸುಭದ್ರವ್ವ. ದಾನಿಯೇಲಪ್ಪನವರಿಗೆ ಬಹುಕಾಲ ಮಕ್ಕಳೇ ಆಗದಿದ್ದಾಗ ಅವರ ಹಾಗೂ ಅವರ ಮಡದಿಯ ಪ್ರಾರ್ಥನೆಯ ಬಲದಿಂದ ಹುಟ್ಟಿದ ಕೂಸಿಗೆ ಅಜ್ಜನಾದ ಚನ್ನಪ್ಪನವರ ಹೆಸರನ್ನೇ ಇಟ್ಟರು. ತಂದೆ ಪ್ರಾಥಮಿಕ ಶಾಲಾಶಿಕ್ಷಕರಾಗಿ ಅನಂತರ ಅನಾಥ ಬಾಲಿಕೆಯರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದರು. ಅಲ್ಲಿರುವ ಮಕ್ಕಳನ್ನು ಅತ್ಯಂತ ಆತ್ಮೀಯತೆಯಿಂದ ನೋಡಿಕೊಂಡವರು. ಉತ್ತಮ ಶಿಕ್ಷಕರಾದ ಅವರು ಒಳ್ಳೆಯ ಬಡಗಿಯೂ ಆಗಿದ್ದರು. ಯಂತ್ರಕಲಾ ಕೌಶಲ್ಯವನ್ನು ಪಡೆದ ವಿಜ್ಞಾನಪ್ರಯೋಗಪ್ರಿಯರಾಗಿದ್ದರು. ತಾಯಿಯು ಮಹಾ ಕ್ರಿಸ್ತಭಕ್ತೆಯಾಗಿದ್ದರು. ತನ್ನ ಮೊದಲ ಮಗ ಚನ್ನಪ್ಪನವರಲ್ಲಿ ಕ್ರಿಸ್ತಭಕ್ತಿ ಮೂಡಲು ಕಾರಣರಾದವರು.
===ಬಾಲ್ಯ ಜೀವನ===
*ಚನ್ನಪ್ಪನವರಲ್ಲಿ ಬಾಲ್ಯದಿಂದಲೂ ಕ್ರಿಸ್ತಭಕ್ತಿ ತಾಯಿಯಿಂದ ಬಳುವಳಿಯಾಗಿ ಬಂದಿದೆ ಎಂದು ಹೇಳಲಾಗಿದೆ, ತಂದೆಯಿಂದ ಯಂತ್ರಗಳ ಬಗ್ಗೆ ಬಹಳ ಆಸಕ್ತಿ ಬೆಳೆಯಿತು. ಮನೆಯಲ್ಲಿದ್ದ ದೊಡ್ಡ ಗಡಿಯಾರದ ಪೆಂಡುಲಂಗೆ ಕೈ ಗಡಿಯಾರವನ್ನು ತಗುಲಿ ಹಾಕಿದರೆ ಎರಡು ಗಡಿಯಾರಗಳು ತೋರಿಸುವ ಕಾಲ ಒಂದೇ ಇರಬಲ್ಲುದೆ ಎಂಬುದು ಚನ್ನಪ್ಪನವರ ಕುತೂಹಲವಾಗಿತ್ತು. ತಂದೆ ಮನೆಯಲ್ಲಿಲ್ಲದಿದ್ದಾಗ ಚಿಕ್ಕ ಗಡಿಯಾರವನ್ನು ದೊಡ್ಡ ಗಡಿಯಾರದ ಪೆಂಡುಲಂ ಮೇಲೆ ಇಟ್ಟು ಎರಡೂ ಗಡಿಯಾಗಳಲ್ಲಿ ಪರೀಕ್ಷಿಸುತ್ತ ಯಾವುದೇ ವೈತ್ಯಾಸವಿಲ್ಲದ್ದನ್ನು ಕಂಡುಕೊಂಡವರು. ಅಷ್ಟೇ ಅಲ್ಲ ಆ ಕಾಲಕ್ಕೆ ಆಗಲೇ ಬಂದಿದ್ದ ಉಗಿಬಂಡಿಯನ್ನು ನೋಡಿ ಹಬೆಯ ಶಕ್ತಿಯನ್ನು ಪರೀಕ್ಷಿಸುವ ಪ್ರಯೋಗವನ್ನು ಮನೆಯಲ್ಲಿಯೇ ಮಾಡಿ ಸಮಾಧಾನ ಪಟ್ಟುಕೊಂಡವರು ಬಹುಶ: ಈ ಯಂತ್ರ ಜ್ಞಾನದ ಮೇಲಿರುವ ತೀರ್ವವಾದ ಆಸಕ್ತಿಯೇ ಇರಬಹುದಾಗಿದೆ, ಪ್ರೇಮಗಳ ಕಾರಣವಾಗಿಯೇ ಅವರ ಮನಸ್ಸು ಓದಿನಲ್ಲಿ ಅಷ್ಟೊಂದು ಆಸಕ್ತಿ ಮೂಡಿಸಲಿಲ್ಲ.
===ವಿದ್ಯಾಭ್ಯಾಸ===
*ಉತ್ತಂಗಿಯವರೇ ಈ ಬಗ್ಗೆ ತಮಗೆ ಆ ಸಂದರ್ಭದಲ್ಲಿ ಜ್ಞಾಪಕಶಕ್ತಿ ಕಡಿಮೆ ಎಂದು ಹೇಳಿಕೊಂಡಿದ್ದಾರೆ, ಆದರೆ ಇದು ಜ್ಞಾಪಕಶಕ್ತಿ ಕೊರತೆಗಿಂತ ಅವರಲ್ಲಿದ್ದ ಯಂತ್ರಜ್ಞಾನದ ಮೇಲಿನ ಪ್ರೇಮವನ್ನು ಸೂಚಿಸುತ್ತದೆ. ತಂದೆ ದಾನಿಯೇಲಪ್ಪನವರಿಗೆ ತನ್ನ ಮಗ ಯಂತ್ರಜ್ಞಾನಿಯಾಗುವುದರಲ್ಲಿ ಆಸಕ್ತಿಯಿರುವ ಹಾಗೆ ತೋರುವುದಿಲ್ಲ. ಅವರಿಗೆ ಮಗ ಓದಲಿ ಬುದ್ಧಿವಂತನಾಗಿ ಅಧಿಕಾರ ಪಡೆಯಲಿ ಎಂದು ಆಸೆಯಿದ್ದಿರಬೇಕು. ಓದಿನಲ್ಲಿ ಹೆಚ್ಚು ಆಸಕ್ತಿ ತೋರದ ಮಗನನ್ನು ಆಗಾಗ ಹೊಡೆದದ್ದು ಉಂಟು. ಯಂತ್ರಗಳ ಬಗೆಗೆ ಒಲವು ಪಡೆದ ಚನ್ನಪ್ಪನವರು ಕನ್ನಡ ಐದನೆಯ ವರ್ಗ ತೇರ್ಗಡೆಯಾದಾಗ ಅವರಿನ್ನೂ ಹತ್ತು ವರ್ಷಮಾತ್ರ. ತಂದೆ ದಾನಿಯೇಲಪ್ಪನವರು ಮಗನಿಗೆ ಇಂಗ್ಲಿಷ್ ಕಲಿಸಲು ಬಯಸಿದರು. ಆಗಿನ ಕಾಲದಲ್ಲಿ ಕ್ರೈಸ್ತ ಬಾಲಕರಿಗೆ ಇಂಗೀಷ್ ಕಲಿಸುವುದು ಒಳ್ಳೆಯದಲ್ಲ.ಆದ್ದರಿಂದ ಅವರು ಹಾಳಾಗುತ್ತಾರೆಂಬ ಒಂದು ನಂಬಿಕೆ .ಆದರೆ ರೆ.ಝಿಗ್ಲರ್ , ರೆವನೆಂಡ್ ಅರ್ನೆಸ್ಟ್ ಮತ್ತು ರೆ. ಹರ್ಮನ್ ರಿಫೆ ಇವರುಗಳು ಈ ನಂಬಿಕೆ ತಪ್ಪೆಂದು ವಾದಿಸಿ ಕ್ರೈಸ್ತ ಯುವಕರೂ ಇಂಗ್ಲೀಷ್ ಕಲಿಯುವ ಸೌಲಭ್ಯವನ್ನು ಉಂಟುಮಾಡಿದರು.
*ಈ ಕಾರಣದಿಂದಾಗಿಯೇ ಗದಗಿನಲ್ಲಿದ್ದ ಮಾಧ್ಯಮಿಕ ಶಾಲೆಯನ್ನು ಧಾರವಾಡಕ್ಕೆ ವರ್ಗಾಯಿಸಿ ಸ್ಟೂಡೆಂಟ್ಸ್ ಹೋಮ್ ಅನ್ನು ಪ್ರಾರಂಭಿಸಿದರು. ಅದಕ್ಕೆ ಪ್ರವೇಶಾವಕಾಶ ಇದ್ದದ್ದು ಹನ್ನೆರಡು ಮಂದಿಗೆ ಮಾತ್ರವಾಗಿತ್ತು. ರೆ. ಝಿಗ್ಲರ್ ಹಾಗೂ ರೆ. ವೇಲ್ಸ್ ಅವರಿಂದ ತಮ್ಮ ಸೇವೆಗಾಗಿ ಶ್ಲಾಘಿಸಲ್ಪಟ್ಟಿದ್ದ ದಾನಿಯೇಲಪ್ಪನವರ ಮಗ ಚನ್ನಪ್ಪ ಉತ್ತಂಗಿಯವರಾಗಿದ್ದರು. ಈ ಸಂಸ್ಥೆ 1892 ರಲ್ಲಿ ಆರಂಭವಾದರೂ ಉತ್ತಂಗಿ ಚನ್ನಪ್ಪನವರು ಮನೆಯಲ್ಲಿದ್ದುಕೊಂಡೇ ಆ ಶಾಲೆಯಲ್ಲಿ ಅಧ್ಯಯನ ಮಾಡಿ 1897 ರಲ್ಲಿ ವಿದ್ಯಾರ್ಥಿನಿಲಯ ಸೇರಿದರು.ದಾರವಾಡದ ಮಿಷನ್ ಹೈಸ್ಕೂಲಿನಲ್ಲಿ ಕ್ರೈಸ್ತ ಮಕ್ಕಳಿಗೆ ಪ್ರವೇಶಾವಕಾಶ ಇಲ್ಲದ್ದರಿಂದ ಮಗ ಚನ್ನಪ್ಪ ಪ್ರಾಥಮಿಕ ವಿದ್ಯಾಭ್ಯಾಸದ ಕೊನೆಯ ಹಂತವಾದ ಮುಲ್ಕಿ ಪರೀಕ್ಷೆಯಲ್ಲಾದರೂ ತೇರ್ಗಡೆಯಾಗಲಿ ಎಂಬುದು ತಂದೆಯ ಆಸೆಯಾಗಿತ್ತು. ಹೀಗಾಗಿ ಮನೆಯಲ್ಲಿ ಮಗನಿಗೆ ಎಷ್ಟೋ ಕಲಿಸಲು ಯತ್ನಿಸಿದರೂ ಜಯಶಾಲಿಗಳಾಗಿರಲಿಲ್ಲ. ಇದನ್ನರಿತಿದ್ದ ಸ್ಟೂಡೆಂಟ್ಸ್ ಹೋಮ್ನ ಮುಖ್ಯೋಪಾಧ್ಯಾಯರಾಗಿದ್ದ ರೆವರೆಂಡ್ ರಿಷ್ ಚನ್ನಪ್ಪನವರ ಮೇಲೆ ವಿಶೇಷ ಆಸಕ್ತಿ ವಹಿಸಿದರು.
*1897 ರಿಂದ 1900ರ ವರೆಗೆ ಮೂರು ವರುಷಗಳ ಕಾಲ ರಿಷ್ ಅವರು ಬೀರಿದ ಪ್ರಭಾವ ಚನ್ನಪ್ಪನವರಲ್ಲಿ ಅಪೂರ್ವವಾದ ರೀತಿಯಲ್ಲಿ ವಿಚಾರಶಕ್ತಿಯನ್ನು ಬೆಳೆಸಿತು. ರಿಷ್ ಅವರ ಸತತ ಪ್ರಯತ್ನ , ಪ್ರಭಾವ ಹಾಗೂ ಶ್ರಮಗಳ ಕಾರಣಕ್ಕಾಗಿ ಚನ್ನಪ್ಪನವರಿಗೆ ಬಾಸೆಲ್ ಮಿಷನ್ ಹೈಸ್ಕೂಲಿನ ಇಂಗ್ಲೀಷ್ ನಾಲ್ಕನೆಯ ವರ್ಗಕ್ಕೆ ಪ್ರವೇಶ ದೊರೆಯಿತು. ಮೊದಲಿನಿಂದಲೂ ಓದಿನಲ್ಲಿ ಆಸಕ್ತಿ ಅಷ್ಟಕ್ಕಷ್ಟೆ ಚನ್ನಪ್ಪ ಉತ್ತಂಗಿ ಅವರಿಗೆ ಇಲ್ಲಿ ಇಂಗ್ಲೀಷ್ ಶಾಲೆಗೆ ಸೇರುತ್ತಿದ್ದರಂತೆ ಪಾಠಕ್ರಮದಲ್ಲಿ ವಿಶೇಷ ಬದಲಾವಣೆಗಳಿದ್ದವು. ಒಂದೊಂದು ವಿಷಯಕ್ಕೆ ಇಬ್ಬೊಬ್ಬಪ್ರತ್ಯೇಕ ಅಧ್ಯಾಪಕರು. ಚನ್ನಪ್ಪನವರಿಗೆ ಈ ವಿಧಾನಕ್ಕೆ ಒಗ್ಗಿಕೊಳ್ಳುವುದರ ಜೊತೆಗೆ ಮತ್ತೂ ಒಂದು ಕಷ್ಟ ತೋರಿತು. ಚಿಕ್ಕಂದಿನಲ್ಲಿ ತಂದೆಯಿಂದ ಕಲಿಯುತ್ತಿದ್ದರು. ತಾಯಿ ಕ್ರಿಸ್ತನ ಬಗ್ಗೆ ಹೇಳುತ್ತಿದ್ದಳು. ಸ್ಟೂಡೆಂಟ್ಸ್ ಹೋಮ್ ಸೇರಿದಾಗ ರೆ. ರಿಷ್ರಂಥ ಪ್ರೀತಿಯ ಗುರುಗಳಿದ್ದರು.ಇಲ್ಲಿ ಕಲಿಯುವಾಗ ಭೂಮಿತಿಯ ತರಗತಿಯಲ್ಲಿ ದೊಡ್ಡ ಸಮಸ್ಯೆಯೇ ಹುಟ್ಟಿಕೊಂಡಿತು. ಒಮ್ಮೆ ಭೂಮಿಯ ಪ್ರತ್ಯಕ್ಚ ಪ್ರಮಾಣಗಳನ್ನು ಕುರಿತು ಗುರು ಹೇಳಿದರು." ಬಿಂದುವಿಗೆ ಪರಿಮಾಣವಿಲ್ಲ, ಸರಳರೇಖೆಗೆ ಉದ್ದಳತೆಯುಂಟಲ್ಲದೆ ಅಗಳತೆಯಲ್ಲ ಆದರೆ ಬಿಂದುವಿಗೆ ಪರಿಮಾಣವುಂಟು. ಅಗಳತೆಯಿಲ್ಲದೆ ಸರಳರೇಖೆಯನ್ನು ಬರೆಯಲು ಬರುವಂತಿಲ್ಲ" ಎಂದರು ಚನ್ನಪ್ಪ .
*ವ್ಯವಹಾರದ ದೃಷ್ಟಿಯಿಂದ ಹೀಗೆ ಹೇಳಬೇಕಾಗಿದ್ದರೂ,ಭಾವನೆಯಲ್ಲಿ ಇಲ್ಲವೆಂದು ತಿಳಿಯತಕ್ಕದ್ದು " ಎಂದು ಮತ್ತೆ ಗುರುಗಳ ಉತ್ತರ. ಹೀಗೆ ಪುಸ್ತಕದಲ್ಲಿ ಏಕೆ ಬರೆದಿರುವುದಿಲ್ಲ ? ಎಂದು ಮತ್ತೆ ಚನ್ನಪ್ಪನವರು ಪ್ರಶ್ನಿಸಿದಕ್ಕೆ ಚನ್ನಪ್ಪನವರು ಅದಕ್ಕೂ ಬಗ್ಗಲಿಲ್ಲ. ಎದ್ದು ನಿಂತು ಗ್ರಂಥಕರ್ತನು ಹೇಳದಿದ್ದುದನ್ನು ಶಿಕ್ಷಕರಿಗೆ ಹೇಳಲು ಅವಕಾಶವುಂಟೇ? ಎಂದು ಪ್ರಶ್ನಿಸಿದರು. ಶಿಕ್ಷಕರು ಚನ್ನಪ್ಪನವರನ್ನು ಚೆನ್ನಾಗಿ ಥಳಿಸಿದರು. ಅಂದಿನಿಂದಲೇ ಶಿಕ್ಷಕರ ಮೇಲೆ ಹಾಗು ಭೂಮಿತಿಯ ಬಗ್ಗೆ ಜಿಗುಪ್ಸೆ ಹುಟ್ಟಿತು. 1903 ರಲ್ಲಿ ಮೆಟ್ರಿಕ್ ಪರೀಕ್ಷೆಯು ಬರೆದಿದ್ದರು. ಅಂಕಗಣಿತ ಬೀಜಗಣಿತ ಪ್ರಶ್ನೆ ಪತ್ರಿಕೆಗಳಿಗೆ ಸರಿಯಾಗಿಯೇ ಉತ್ತರಿಸಿದರು. ಭೂಮಿತಿಯ ಉತ್ತರ ಪತ್ರಿಕೆಯಲ್ಲಿ ಸೊನ್ನೆಯೊಂದನ್ನು ಬರೆದರು.ಅಂಕಗಣಿತ , ಬೀಜಗಣಿತಗಳಲ್ಲಿ ಇವರು ಬರೆದಿದ್ದ ಉತ್ತರಗಳು ಎಷ್ಟು ಚೆನ್ನಾಗಿದ್ದವೆಂದರೆ ಇನ್ನು ಮೂರೇ ಅಂಕಗಳು ಭೂಮಿತಿಯ ಉತ್ತರ ಪತ್ರಿಕೆಗಳು ಮೆಟ್ರಿಕ್ ಫೇಲಾದ ಇವರ ತಂದೆಯವರಿಗೆ ದುಖ:ವಾದುದು ಸಹಜವಾಗಿತ್ತು. ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳಲು ಒತ್ತಾಯ ಮಾಡಿದರು ಆದರೆ ಚನ್ನಪ್ಪನವರ ಸ್ವಭಾವವನ್ನು ಅರಿತಿದ್ದ ಅವರ ತಂದೆ ದಾನಿಯೇಲಪ್ಪನವರು ಈ ಬಗ್ಗೆ ಹೆಚ್ಚು ಆಗ್ರಹ ಮಾಡಲಿಲ್ಲ.ಚನ್ನಪ್ಪನವರು ತನ್ನನ್ನು ತಂದೆ ಯಾವುದಾದರೂ ಯಂತ್ರ ಶಾಲೆಗೆ ಸೇರಿಸಲಿ ಅಥವಾ ತಂತ್ರಜ್ಞಾನದ ಅಧ್ಯಯನಕ್ಕೆ ನೆರವಾಗಲಿ ಎಂದು ಆಶಿಸಿದ್ದು ನಿಜವಾಗಿತ್ತು. ಆದರೆ ಕಡುಬಡವರಾಗಿದ್ದ ತಂದೆ ಇಂತಹ ನೆರವು ನೀಡುವ ಸ್ಥಿತಿಯಲ್ಲಿರಲಿಲ್ಲ. ಈ ಹಂತದಲ್ಲಿ ತಾಯಿಯೇ ಮಗನನ್ನು ಒತ್ತಾಯಿಸಿದ್ದರು. ಮಗು, ನೀನು ಹುಟ್ಟಿದರೆ ಕ್ರಿಸ್ತನಿಗೆ ಅರ್ಪಿಸುತ್ತೇನೆ ಎಂದು ನಾನು ಹರಕೆ ಹೊತ್ತಿದ್ದೆ. ಈಗಾದರೂ ನೀನು ಕ್ರೈಸ್ತ ಧರ್ಮದ ಶಾಲೆಗೆ ಸೇವೆ ಮಾಡು" ಎಂದರು.
*ಭೂಮಿತಿಯನ್ನು ಮತ್ತೆ ಓದುವುದಿಲ್ಲ ಎಂದು ನಿಶ್ಚಯ ಮಾಡಿಕೊಂಡಿದ್ದ ಚನ್ನಪ್ಪನವರಿಗೆ ಬೇರೆ ಮಾರ್ಗವೇ ಇರಲಿಲ್ಲ. ತನ್ನನ್ನು ಅತ್ಯಂತ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ತಾಯಿಯ ಮಾತನ್ನು ನಿರಾಕರಿಸಲಿಲ್ಲ. ಸ್ಟೂಡೆಂಟ್ ಹೋಮ್ ನ ಮುಖ್ಯೋಪಾಧ್ಯಾಯರೂ ಚನ್ನಪ್ಪನವರನ್ನು ತೀರ ಹತ್ತಿರದಿಂದ ಬಲ್ಲವರಾದ ರೆವರೆಂಡ್ ಹರ್ಮನ್ ರಿಷ್ ರವರ ಶಿಫಾರಸ್ಸು ಪತ್ರವನ್ನು ತಂದ ಚನ್ನಪ್ಪನವರಿಗೆ ಇಲ್ಲಿಯ ಶಿಕ್ಷಣ ಸುಮುಖವಾಗಿರಲಿಲ್ಲ. ರಿಷ್ ನಂತಹ ಮುಕ್ತ ಮನಸ್ಸಿನ ಮುಖ್ಯೋಪಾಧ್ಯಾಯರ ಬಳಿ ಬೆಳೆದಿದ್ದ ಚನ್ನಪ್ಪನವರಲ್ಲಿ ಸ್ವಾಭಿಮಾನ ವಿಚಾರಪರತೆ ತಾನೇ ತಾನಾಗಿ ಬೆಳೆದಿದ್ದವು. 24 ವರುಷವರಾಗಿದ್ದಾಗ ಮಂಗಳೂರಿನ ಶಾಲೆಗೆ ಸೇರಿದಾಗ ತಟ್ಟನೆ ಅವರಿಗೆ ಆ ಶಾಲೆಯಲ್ಲಿದ್ದ ಪರಿಸ್ಥಿತಿ ವೇದವಾಕ್ಯವಾಗಿತ್ತು. ಉತ್ತಮವಾದ ಪುಸ್ತಕ ಭಂಡಾರವಿಲ್ಲದ ಅಲ್ಲಿನ ಪಠ್ಯ ಕ್ರಮ ತೀರ ಹಳೆಯ ಕ್ರಮದಾಗಿತ್ತು. ಮಾಧ್ಯಮಿಕ ಭಾಷೆ ಜರ್ಮನ್ ಕನ್ನಡವಾಗಿದ್ದಲ್ಲದೆ ಅನಗತ್ಯವಾಗಿ ವಿದೇಶಿ ಮಿಷನರಿಗಳು ಮೇಲುಗೈ ಅಸಹ್ಯ ಹುಟ್ಟಿಸುವಂತಿತ್ತು. ಭೋದನಾಕ್ರಮ ಕೂಡ ಹಳೆಯ ವಿದ್ಯಾರ್ಥಿಗಳನ್ನು, ಹೊಸ ವಿದ್ಯಾರ್ಥಿಗಳನ್ನು ಒಂದೆಡೆ ಕೂಡಿಸಿ ಪಾಠ ಹೇಳುವ ಕ್ರಮವೇ ಅಲ್ಲದೆ ಬಿ.ಎ ಪಾಸಾದವರಾಗಿದ್ದರು. ಹೊಸದಾಗಿ ಕಲಿಯುವವರು ಎಲ್ಲರನ್ನು ಒಟ್ಟಿಗೆ ಕೂಡಿಸುತ್ತಿದ್ದರು. ಇಂಥ ಪರಿಸ್ಥಿತಿ ಬಹಳ ವರ್ಷಗಳಿಂದಲೂ ಇದ್ದರೂ ಯಾರೂ ಇದನ್ನು ಪ್ರತಿಭಟಿಸಿರಲಿಲ್ಲ. ಚನ್ನಪ್ಪನವರು ಶಾಲೆಗೆ ಸೇರಿದ ಸ್ವಲ್ಪ ದಿನಗಳಲ್ಲಿಯೇ ಈ ಅಸಂಗತ ಅಂಶಗಳನ್ನು ಗುರುತಿಸಿದರು. ತಮ್ಮ ಸಹಪಾಠಿಗಳನ್ನೆಲ್ಲ ಒಂದು ಕಡೆ ಕೂಡಿಸಿ ಅವರಿಗೆ ಈ ಬಗ್ಗೆ ವಿವರಿಸಿದರು. ಈ ವಿಷಯವನ್ನು ಪ್ರಿನ್ಸಿಪಾಲರಿಗೆ ಲಿಖಿತ ರೂಪದಲ್ಲಿಯೇ ಹೇಳಲು ಮುಂದಾಗಿ ತಾವೇ ವೈ.ಎಂ.ಸಿ.ಎ ನಲ್ಲಿ ಸಭೆ ಸೇರಿ ನಿರ್ಭಿತವಾಗಿ ಈ ವಿಷಯವನ್ನು ಪ್ರಿನ್ಸಿಪಾಲರು ಹಾಗೂ ಉಳಿದ ಪ್ರಾಧ್ಯಾಪಕರ ಮುಂದೆ ನಿವೇದಿಸಿದರು. ಅವರಲ್ಲಿ ಒಬ್ಬರು ವಿದ್ಯಾರ್ಥಿನಿಲಯದ ವ್ಯವಸ್ಥಾಪಕರೂ ಆದ ರೆವರೆಂಡ್ ಕ್ರಿಸ್ತಾನುಜವತ್ಸರಾಗಿದ್ದರು. ಉದಾರ ದೃಷ್ಟಿಯ ಪ್ರಿನ್ಸಿಪಾಲರೇನು ಚನ್ನಪ್ಪನವರ ಸೂಚನೆಗಳನ್ನು ಪರಿಶೀಲಿಸುವುದಾಗಿ ಭರವಸೆನೀಡಿದರು. ಆದರೆ ಅವರು ಹಾಗೂ ಕ್ರಿಸ್ತಾನುಜರನ್ನುಳಿದರೆ ಉಳಿದ ಇಬ್ಬರು ಅಧ್ಯಾಪಕರು ಚನ್ನಪ್ಪನವರನ್ನು ಅವಿಧೇಯರೆಂದು ತಿಳಿದರು.
====ಆದ್ಯಾತ್ಮ ಜೀವನ===
*ಬಾಲ್ಯದಿಂದ ತಮಗೆ ಜ್ಞಾಪಕಶಕ್ತಿ ಕಡಿಮೆ ಎಂದುಕೊಳ್ಳುತ್ತಿದ್ದಾಗ ಅವರ ತಾಯಿ ಎಷ್ಟೋ ಸಲ ಏಕಾಂತದಲ್ಲಿ ಕುಳಿತು ದೇವರಲ್ಲಿ ಬುದ್ಧಿ ಕೊಡೆಂದು ಪ್ರಾರ್ಥಿಸಿದರು. ಒಬ್ಬೊಬ್ಬರಿಗೆ ಒಂದೊಂದು ಕೊಠಡಿ ಕೊಡುವ ವ್ಯವಸ್ಥೆ ಅಲ್ಲಿದ್ದು ತಾವಿದ್ದ ವಿದ್ಯಾರ್ಥಿನಿಲಯದ ಬಾಗಿಲು ಚಿಲಕಗಳು ಹಳೆಯದಾಗಿದ್ದು ಸಡಿಲಗೊಂಡಿದ್ದವು. ಅದೂ ಅವರಿಗೆ ವರವಾಗಿ ಪರಿಣಮಿಸಿತು. ಒಳಗೆ ಕುಳಿತು ಹೊರಗಿನಿಂದ ಚಿಲಕ ಹಾಕಿ ಕೋಣೆಯೊಳಗೆ ಕುಳಿತು ಏಕಾಂತದಲ್ಲಿ ಆಳವಾಗಿ ಅಧ್ಯಯನ ನಡೆಸಲು ಪ್ರಾರಂಭಿಸಿದರು. ಹೀಗಾಗಿ ಇವರ ಅಧ್ಯಯನ ಅತ್ಯಂತ ಖಚಿತವು ಶಾಸ್ತಬಧ್ದವೂ ಆಗುತ್ತಾ ನಡೆಯಿತು. ಹೊರಗಿನಿಂದ ಚಿಲಕ ಹಾಕಿಕೊಂಡು ಒಳಗೆಯೇ ಕುಳಿತು ಹೀಗೆ ಎಷ್ಟೋ ಕಾಲ ಇವರು ಅದ್ಯಯನ ನಡೆಸುತ್ತಿದ್ದರು. ಹೀಗೂ ತನ್ನ ಸಹಪಾಠಿಯೊಬ್ಬರ ಗಮನಕ್ಕೆ ಬಂದು ಪ್ರಾಧ್ಯಾಪಕರವರೆಗೂ ಈ ಸುಧ್ದಿ ಹೋಗಿ ಚನ್ನಪ್ಪನವರ ಮೇಲೆ ಮೊದಲಿನಿಂದ ಅಸಹನೆಗೊಂಡಿದ್ದ ಗುರುವೊಬ್ಬರು ಕೋಣೆಯೊಳಕ್ಕೆ ಇದ್ದಕ್ಕಿದ್ದಂತೆ ನುಗ್ಗಿ ಒಳಗೆ ಬಂದು " ಒಳಗೆ ಕುಳಿತು ಏನು ನಡೆಸುತಿದ್ದಿ ?" ಎಂದು ಅನುಮಾನಿಸುತ್ತಿದ್ದಂತೆ ಚನ್ನಪ್ಪನವರು ಓದುತ್ತಿದ್ದ ಜಾನ್ ಲಾಕ್ ನ ಗ್ರಂಥದ ಕಡೆ ನೋಡಿ " ಈ ಗ್ರಂಥದೊಳಗಿನ ವಿಷಯ ನಿನಗೆ ತಿಳಿಯುತ್ತದೆಯೋ ? ಎಂದು ಗಡುಸಾಗಿ ಪ್ರಶ್ನಿಸಿದ್ದೂ ಉಂಟು ಮಹಾಅಭಿಮಾನಿಶಾಲಿಗಳಾದ ಚನ್ನಪ್ಪನವರು ಅಷ್ಟೇ ದೃಢವಾಗಿ " ನನಗೆ ತಿಳಿಯದಿದ್ರೆ ತನ್ನನ್ನು ಕೇಳುತ್ತೇನೆ" ಎಂದದಿದ್ದರು. ಈ ಘಟನೆಯನ್ನು ಉತ್ತಂಗಿ ಚನ್ನಪ್ಪನವರು ತಾವೇ ಉಲ್ಲೇಖಿಸಿದ್ದಾರೆ ಎಲ್ಲಿಯೋ ಗುರುಗಳ ಹೆಸರನ್ನು ಹೇಳಲು ಹೋಗಿಲ್ಲ. ಗುರುಗಳನ್ನು ಅವಮಾನಿಸಲು ಹೋಗಲಿಲ್ಲ. ಅದಕ್ಕೆ ಬದಲಾಗಿ ತಮ್ಮ ನಿಲುವನ್ನು ಖಚಿತ ಪಡಿಸಿದ್ದಾರೆ. ಜಾನ್ ಲಾಕ್ ನಂತ ಅತ್ಯಂತ ಕಠಿಣವೆನ್ನುವಂತೆ ತೋರುವ ತತ್ವಜ್ಞಾನಿಯ ಗ್ರಂಥಗಳನ್ನು ಓದಿ ಅರಗಿಸಿಕೊಳ್ಳುವ ಅವರ ಬುಧ್ದಿ ಮತ್ತೆ ಹಿಡಿದುದನ್ನು ಕೊನೆಯ ವರೆಗೂ ಸಾಧಿಸುವ ಮಾನಸಿಕ ಶಕ್ತಿ ಇವುಗಳು ಅಪೂರ್ವವಾದುವು.
===ಕ್ರೈಸ್ತಧರ್ಮದ ನಂಟು===
* ಕ್ರೈಸ್ತ ಧರ್ಮದ ಬಗ್ಗೆ ಅಧ್ಯಯನ ನಾಸ್ತಿಕವಾದಿಗಳ ಅಧ್ಯಯನವಾಗದೆ ಪೂರ್ಣವಾಗುವುದಿಲ್ಲ ಎಂಬುದನ್ನು ತಿಳಿದಿದ್ದರೂ ತವುಲನಿಕವಾದ ದೃಷ್ಟಿ ಇವರಿಗೆ ಸಹಜವಾಗಿ ಪ್ರಾಪ್ತವಾದದ್ದರಿಂದಲೇ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಇವರು ವಿಶ್ವದ ಧರ್ಮಗಳನ್ನು ಎಲ್ಲ ಅಷ್ಟೇ ಪ್ರೀತಿ ಅಭಿಮಾನಗಳಿಂದ ಅಭ್ಯಸಿಸಿದರು. ಪಂಪನ ಪೂರ್ವಜರು ಬ್ರಾಹ್ಮಣರು ಆದರೆ ಪಂಪನ ತಂದೆ ಹಾಗು ಪಂಪ ಜೈನರು ಎರಡು ಧರ್ಮಗಳ ತಿರುಳು ಅವನ ಕಾವ್ಯಗಳಲ್ಲಿ ಫಲಿಸಿದೆ. ಚನ್ನಪ್ಪನರ ಮೂಲಜರು ಲಿಂಗಾಯಿತರು ತಾತ ಪಾರುಪತ್ತೆದಾರ ಚನ್ನಪ್ಪ ಕೂಡ ಪಂಚ ಸಾಲಿ ಲಿಂಗಾಯಿತರು ಗಂಡ ಮಕ್ಕಳಾಗಲಿಲ್ಲ ಎಂದು ವ್ಯಥೆ ಮೊದಲ ಹೆಂಡತಿ ಮಲ್ಲವ್ವನಿಗೆ ಎರಡು ಹೆಣ್ಣುಮಕ್ಕಳಾದವು . ಗಂಡು ಮಕ್ಕಳಾಗಳಿಲ್ಲಾಗಲಿಲ್ಲ. ಎರಡನೇಯವಳನ್ನು ಮದುವೆಯಾದರು ಆಕೆಗೂ ಮಕ್ಕಳಾಗಲಿಲ್ಲ. ಅದೇ ಚಿಂತೆಯಲ್ಲಿ ಆಕೆ ಪ್ರಾಣ ಕಳೆದುಕೊಂಡಳು ವ್ಯತಿತರಾಗಿ ಚನ್ನಪ್ಪ ಊರುಬಿಟ್ಟು ಪಕ್ಕದೂರಲ್ಲಿ ಜೀತದ ಆಳಾಗಿ ದುಡಿದರು. ಚನ್ನಪ್ಪನವರ ಮನಸ್ಸು ಧರ್ಮಗ್ರಂಥಗಳ ಕಡೆ ಹೊರಳಿತು. ಇವರ ಚಿಂತೆಯನ್ನು ತಿಳಿದ ಪಾದ್ರಿಯೊಬ್ಬರು ಬೈಬಲ್ಲಿನ ಹೊಸ ಒಡಂಬಡಿಕೆ ಪ್ರತಿಯನ್ನು ಕೊಟ್ಟರು. ಅವರಲ್ಲಿ ಆಸಕ್ತಿ ಹುಟ್ಟಿದ ಚನ್ನಪ್ಪ ಅದರ ಓದಿನಲ್ಲಿ ಮುಳುಗಿದರು. ಅದರಲ್ಲಿ ನಂಬಿಕೆ ಹುಟ್ಟಿತು. ಈ ಗ್ರಂಥದ ಬಗ್ಗೆ ತನ್ನ ಗಂಡನಿಗೆ ಉಂಟಾದ ಅಭಿಮಾನ ಅದೇನೆಂದು ಕೇಳಿದಳು ಕ್ರೈಸ್ತ ಧರ್ಮದ ಗ್ರಂಥ ಈಗ ನಾನದೇ ಧರ್ಮ ನಂಬಿದ್ದೇನೆ ಕ್ರಿಶ್ಚಿಯನ್ ಆಗುತ್ತೇನೆ. ನೀ ಇಷ್ಟಪಟ್ಟರೆ ಬಾ ಇಲ್ಲದಿದ್ದರೆ ಬಿಡು ಎಂದು ಬಿಟ್ಟರು. ತಾಯ ಬಳಿ ಹೋದ ಆಕೆ ಗಂಡನನ್ನು ಹಿಂಬಳಿಸಲು ನಿಷ್ಚಯಿಸಿ ಬಂದಳು ಇಬ್ಬರು ದಾರವಾಡಕ್ಕೆ ಬಂದು ಕ್ರಿಶ್ಚಿಯನ್ ರಾಗಲು ಬಯಸಿದರು. ಪಾದ್ರಿಗಳು ಇವರ ಶ್ರಧ್ಧೆಯನ್ನು ಅನುಮಾನಿಸಿದಾಗ ಅಲ್ಲಿ ಸೇವೆಯಲ್ಲಿ ನಿಂತು ಬಿಟ್ಟರು ಅವರ ತಾತ ಕ್ರೈಸ್ತರಾದದ್ದು ಹಾಗೆ. ಅವರು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿಯ ಪಾರು ಪತ್ತೆಗಾರರಾಗಿದ್ದುದರಿಂದ ಅವರಿಗೂ ಹಾಗೂ ಅವರ ಮಗ ದಾನಿ ಏಲಪ್ಪ ಮತ್ತೆ ಅವರ ಮಗ ಚನ್ನಪ್ಪ ಇವರೆಲ್ಲರ ಹೆಸರಿನ ಜೊತೆ ಉತ್ತಂಗಿ ಸೇರಿ ಅವರು ಉತ್ತಂಗಿ ಮನೆತನದವರೆಂದು ಖ್ಯಾತರಾದವರು ತಾತ ಲಿಂಗಾಯಿತರಾಗಿದ್ದವರು ಕ್ರೈಸ್ತನಾದ ಮಕ್ಕಳು ಮೊಮ್ಮಕ್ಕಳು ಕ್ರೈಸ್ತರಾದರು. ಆದರೆ ಕ್ರೈಸ್ತರಾದ ಚನ್ನಪ್ಪನವರ ಮನಸ್ಸು ವೀರಶೈವ ಧರ್ಮ ಹಾಗೂ ಸಾಹಿತ್ಯಗಳ ಬಗ್ಗೆ ಹೊರಳಿದ್ದು ಆಶ್ಚರ್ಯಕರವಾಗಿತ್ತು. ಪ್ರಥಮ ದರ್ಜೆಯಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಂತೆ ಈ ಸಂಸ್ಥೆಯಿಂದ ಹೇಗೂ ಪಾರಾಗಿ ಕಲ್ಕತ್ತದಲ್ಲಿ ನೆಲೆಸುವ ಇವರ ಯೋಚನೆ ಅಲ್ಲಿನ ಬಿಷಪ್ ನಿಧನರಾದುದರಿಂದ ಮಣ್ಣು ಪಾಲಾಯಿತು. 27 ನೇ ವಯಸ್ಸಿನಲ್ಲಿ ಸುಭಕ್ತವ್ವಲನ್ನು ಮದುವೆಯಾದರು. ಹತ್ತು ಮಕ್ಕಳು ಹುಟ್ಟಿದರು. ಹುಟ್ಟಿದವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಎರಡು ಗಂಡು ಮಕ್ಕಳು ತೀರಿಕೊಂಡರು. ಅನಾಥ ಗಂಡುಮಕ್ಕಳ ಶಾಲೆಯ ಮುಖ್ಯಸ್ಥರಾಗಿದ್ದಾಗ ಅಲ್ಲಿನ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡರು. ದಡ್ಡರಾದವರನ್ನು ಕರೆದು ಖಾಸಗಿಯಾಗಿ ಪಾಠ ಹೇಳಿಕೊಟ್ಟು ಅವರ ಕೀಳರಿಮೆಯನ್ನು ದೂರ ಮಾಡುತ್ತಿದ್ದರು. ಭೋದನೆ ಬದುಕಿನ ನಿರ್ಧಾರವಾಗಿತ್ತು. ಅವರ ಭೋದನೆಯ ವಿಧಾನ ಅಪೂರ್ವವಾದ್ದು. ಕ್ರೈಸ್ತ ಧರ್ಮವು ನಾಗರಪಂಚಮಿ ಹಬ್ಬವೊ ಎಂಬ ಚರ್ಚಾಗೋಷ್ಠಿಯಲ್ಲಿ ಇವರು ಮಂಡಿಸಿದ ಪ್ರಬಂದವಂತೂ ಭಾಷೆ ಭಾವ ಶೈಲಿ ವಿವೇಚನಾ ರೀತಿ ಈ ದೃಷ್ಠಿಗಳಿಂದಾಗಿವೆ. ದೇಶೀಯ ಸಂತರು ಶರಣರು ಇಂತವರ ಕಥೆಗಳನ್ನು ಪ್ರಸಂಗಗಳನ್ನು ಬಳಸಿಕೊಂಡು ಭೋದಿಸುತ್ತಿದ್ದ ರೀತಿ ಪಂಡಿತ ಪಾಮರರೆಲ್ಲರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಚನ್ನಪ್ಪರು ಹುಟ್ಟು ಹೋರಾಟಗಾರರು ಅನ್ಯಾಯದ ವಿರುಧ್ಧ ಎಂದೂ ಅವರು ನಿರ್ಭಿತರಾಗಿ ಪ್ರತಿಭಟಿಸುತ್ತಿದ್ದರು. ಅಲ್ಲಿಯವರೆಗೆ ಕ್ರೈಸ್ತ ದೈವಜ್ಞಾನ ಶಾಲೆಯಲ್ಲಿ ಪ್ರಥಮ ದರ್ಜೆ ಪಡೆದವರಿಗೆ 17 ರುಪಾಯಿಗಳು ವೇತನ ನೀಡುತ್ತಿದ್ದರು. ಧರ್ಮಪ್ರಚಾರಕರಾದಾಗ ಧರ್ಮಪ್ರಚಾರಕರಲ್ಲಿ ಈ ವ್ಯತ್ಯಾಸ ಬೇಡವೆಂದು ಹೋರಾಡಿ ಗೆದ್ದರು. ಈ ಕ್ರಮವನ್ನು ವಿರೋಧಿಸಿದರು ಚೆನ್ನಪ್ಪ ಸ್ವಯಂ ಪ್ರತಿಯೊಬ್ಬರು ವೇತನ ಪಡೆದು ಅದಅಅರಲ್ಲಿ ಶೇಖಡ 2 ರಷ್ಟನ್ನು ಸಂತೋಷದಿಂದ ವಂತಿಗೆಯಾಗಿ ನೀಡುವ ಅವಕಾಶವನ್ನು ಹೋರಾಡಿ ಪಡೆದೇ ಪಡೆದರು. ಈ ಕಾರಣಗಳಿಂದಾಗಿ ರೆ ಲೂಥಿಯಂಥವರು ಚನ್ನಪ್ಪನವರ ಸ್ವತಂತ್ರ ವಿಚಾರ ಶಕ್ತಿಯನ್ನು ಅವಿಧೇಯ ಎಂದು ಸಾಕಷ್ಟು ತೊಂದರೆಗೆ ಗುರಿಮಾಡಿದ್ದೂ ಇದೆ. ಚನ್ನಪ್ಪನವರು ಯಾವುದಕ್ಕೂ ಅಂಜಲಿಲ್ಲ. ಕೆಲಸ ಹೋಗುವುದಾದರೂ ಸಿದ್ಧವಾಗಿದ್ದರು. ಅವರು ಧರ್ಮ ಪ್ರಚಾರದ ಕಾರ್ಯವನ್ನು ಆತ್ಮತೃಪ್ತಿಯಿಂದ ಮಾಡಿದರು.
===ಪ್ರಕಟಿತ ಪುಸ್ತಕಗಳು ===
*ವಿಶ್ವದ ಅನುಭಾವಿಗಳಲ್ಲಿ ಚನ್ನಪ್ಪನವರಿಗೆ ಒಂದೆ ದರ್ಶನ ಕಾಣಿಸುತ್ತಿತ್ತು. ಬಸವನಾಗಲಿ ಬುದ್ದನಾಗಲಿ ಪೈಗಂಬರ್ ಆಗಲಿ ಅವರಿಗೆ ಅಷ್ಟೇ ಗೌರವ ಸರ್ವಜ್ಞನ ವಚನಗಳನ್ನು ಒಂದೆಡೆ ಸಂಗ್ರಹಿಸುವ ಅನಂತರ ಅವುಗಳ ಪಾಠಗಳನ್ನು ಅಧ್ಯಯನ ಮಾಡಿ ಶುದ್ಧ ಮಾಡುವ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡರು.ಈ ಮದ್ಯೆ ತಂದೆಯವರು ಹೃದಯಕ್ರೀಯೆ ನಿಂತು ಉಸಿರೆಳೆದರು. ಬಡತನವಂತೂ ಕಿತ್ತು ತಿನ್ನುತಲಿತ್ತು. ಬಹು ಧೀರ್ಘ ಕಾಲದ ಅಧ್ಯಯನದ ನಂತರ ಸರ್ವಜ್ಞನ2000 ವಚನಗಳನ್ನು ಶೋಧಿಸಿ ತೆಗೆದರು. ಆಗ ಯಶವಂತ ಜಠರ ಎಂಬುವರು 3 ಭಾಗಗಳಲ್ಲಿ ಅವುಗಳನ್ನು ಪ್ರಕಟಿಸಿದರು. ಆದರೆ ಇದಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರೀಯೆ ದೊರಕಲಿಲ್ಲ. ವಿದ್ಯಾವರ್ದಕ ಸಂಘಗಳ ನೆರವಿನಿಂದ ಸಾಲದ ಹೊರೆ ಇಳಿಸಿಕೊಂಡು ಹಾವೇರಿಗೆ ಹೊರಟರು. ಇಲ್ಲಿಯೇ ಇವರ ಒಂದು ಹೆಣ್ಣು ಮಗು ಹಾಗೂ ಎರಡು ಗಂಡು ಮಕ್ಕಳು ತೀರಿಕೊಂಡದ್ದು ಬುದ್ಧಿವಂತನಾದ ಹುಡುಗನ ಸಾವು ತಾಯಿಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ಚನ್ನಪ್ಪನವರು ಸರ್ವಜ್ಞನ ವಚನಗಳನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಿದರು. ಜನಕ್ಕೆ ಈಗ ಸರ್ವಜ್ಞನ ಮೇಲೆ ನಿಜಕ್ಕೂ ಅಕ್ಕರೆ ಹುಟ್ಟಿತು. ಚೆನ್ನಪ್ಪನವರದು ವಿಫುಲವು ವ್ಯಾಪಕವೂ ಆದ ಆಳವಾದ ಅಧ್ಯಯನ. ಚನ್ನಪ್ಪನವರು ಕವಿತೆಗಳನ್ನು ರಚಿಸಿದ್ದಾರೆ ಸರ್ವಜ್ಞನನ್ನು ಕುರಿತೇ ಪದ್ಯ ಬರೆದಿದ್ದಾರೆ.ಮಹಾರಾಷ್ಟ್ರ ನಾರಾಯಣ ವಾಮನ ತಿಲಕರ ಹಾಡುಗಳನ್ನು ಅನುವಾದಿಸಿದ್ದಾರೆ. ಕಲಿಯುವುದರಲ್ಲಿ ಅಂತಹ ಆಸಕ್ತಿ ಕುತೂಹಲ ಮತ್ತು ಆನಂದ. ಕಲಿಯುವುದರಲ್ಲಿ ಭೋದಿಸುವುದರಲ್ಲಿ ತಮ್ಮ ಇಡೀ ಬದುಕನ್ನು ತೊಡಗಿಸಿಕೊಂಡ ಇವರು ಅಪೂರ್ವವಾದ ರೀತಿಯಲ್ಲಿ ಧರ್ಮ ಹಾಗೂ ಸಾಹಿತ್ಯಗಳ ಸೇವೆಯನ್ನು ಮಾಡಿದ್ದಾರೆ. ಹತ್ತು ಮಕ್ಕಳಲ್ಲಿ ಹಲವರನ್ನು ಕಳೆದುಕೊಂಡಾಗ ಕ್ರಿಸ್ತಾರ್ಪಣ ಎಂದರು.