ಸದಸ್ಯ:Shridhar p m/sandbox1
ದೂರದರ್ಶಕ
[ಬದಲಾಯಿಸಿ]ದೂರದಲ್ಲಿರುವ ವಸ್ತುಗಳನ್ನು ಹತ್ತಿರದಿಂದ ನೋಡಲು ದೂರದರ್ಶಕವನ್ನು ಉಪಯೊಗಿಸುತ್ತೆವೆ. ದೂರದಲ್ಲಿರುವ ವಸ್ತುವಿಂದ ಹೊರಹೊಮ್ಮುವ ವಿದ್ಯುತ್ಕಾಂತಿಯ ತರಂಗಗಳನ್ನು ಬಳಸಿಕೊಂಡು ಆ ವಸ್ತುವನ್ನು ನೋಡಬಹುದು. ಮೂದಲ ಪ್ರಾಯೋಗಿಕ ದೂರದರ್ಶಕವನ್ನು ೧೭ನೇ ಶತಮಾನದ ಕೊನೆಯಲ್ಲಿ ನೆದರ್ ಲ್ಯಾಂಡ್ ನಲ್ಲಿ ತಯಾರಿಸಲಾಯಿತು. ಬಾಹ್ಯಾಕಶದಲ್ಲಿ ಮತ್ತು ಭೂಮಿಯಲ್ಲಿ ದೂರದರ್ಶಕದ ಅಪರವಾದ ಉಪಯೋಗವನ್ನು ಕಾಣಬಹುದು.
ಕನ್ನಡಿಗಳನ್ನು ಉಪಯೋಗಿಸಿಕೊಂಡು ಕೆಲವೇ ದಶಕಗಳಲ್ಲಿ ಪ್ರತಿಬಿಂಬಿಸುವ ದೂರದರ್ಶಕಗಳನ್ನು ಕಂಡುಹಿಡಿಯಲಾಯಿತು. ೨೦ನೇ ಶತಮಾನದ ಕೊನೆಯಲ್ಲಿ ರೇಡಿಯೊ ದೂರದರ್ಶಕ ಮತ್ತು ಇನ್ ಫ್ರಾರೆಡ್ ದೂರದರ್ಶಕಗಳನ್ನು ಒಳಗೊಂಡಂತೆ ಅನೇಕ ದೂರದರ್ಶಕಗಳನ್ನು ತಯಾರಿಸಲಾಯಿತು. ಅನೇಕ ರೀತಿಯ ವಿದ್ಯುತ್ಕಾಂತೀಯ ತರಂಗಗಳನ್ನು ಪತ್ತೆಮಾಡುವ ಸಾಧನಕ್ಕೆ ದೂರದರ್ಶಕವೆನ್ನುತಾರೆ - ಇದು ದೂರದರ್ಶಕದ ಆಧುನಿಕ ವ್ಯಾಖ್ಯಾನ. ದೂರದರ್ಶಕವನ್ನು ಆಂಗ್ಲ ಭಾಷೆಯಲ್ಲಿ ಟೆಲೆಸ್ಕೊಪ್ ಎನ್ನುತ್ತಾರೆ. ಈ ಪದವನ್ನು ಗ್ರೀಕ್ ಭಾಷೆಯಿಂದ ಎರವಲು ಪಡೆಯಲಾಗಿದೆ. ಟೆಲೆ ಎಂದರೆ ದೂರ ಸ್ಕೊಪಿನ್ ಎಂದರೆ ನೋಡುವುದು.
ದೂರದರ್ಶಕದ ಇತಿಹಾಸ
ಮೊದಲ ಪ್ರತಿಬಿಂಬಿಸುವ ದೂರದರ್ಶಕವನ್ನು ೧೬೦೮ರಲ್ಲಿ ನೆದರ್ ಲ್ಯಾಂಡನಲ್ಲಿ ಕಂಡುಹಿಡಿಯಲಾಯಿತು. ಇದನ್ನು ಹನ್ಸ್ ಮತ್ತು ಜೆನ್ ಸನ್ ಎಂಬುವರು ಕಂಡುಹಿಡಿದರು. ದೂರದರ್ಶಕದ ಬಗ್ಗೆ ಮಾಹಿತಿ ಸಂಗ್ರಹಿಸಿದ ಗೆಲಿಲೀಯೋ ತನ್ನದೆಯಾದ ದೂರದರ್ಶಕವನ್ನು ಒಂದು ತಿಂಗಳಿನಲ್ಲಿ ತಯಾರಿಸಿದ. ಅದೇ ವರ್ಷದಲ್ಲಿ ಆಕಾಶದತ್ತ ತನ್ನ ದೂರದರ್ಶಕವನ್ನು ತಿರುಗಿಸಿ ನಕ್ಶತ್ರಗಳನ್ನು ನೋಡಿದ ಪ್ರಥಮ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಗೆಲಿಲೀಯೋ ಪಾತ್ರನಾದನು. ಪ್ರತಿಬಿಂಬಿಸುವ ದೂರದರ್ಶಕದ ಆವಿಷ್ಕಾರದ ನಂತರ ಬೆಳಕನ್ನು ಒಗ್ಗೂಡಿಸಲು ಲೆನ್ಸ್ ಬದಲಾಗಿ ಕನ್ನಡಿಗಳನ್ನು ಉಪಯೋಗಿಸಬಹುದು ಎಂದು ವಿಜ್ನಾನಿಗಳ ಅರಿವಿಗೆ ಬಂತು. ಲಾಕ್ಷಣಿಕ ಕನ್ನಡಿಗಳ ಗೋಲಾಕಾರದ ವಿಪಥನ ಮತ್ತು ವರ್ಣೀಯ ವಿಪಥನಗಳಂತಹ ಗುಣಗಳನ್ನು ಉಪಯೋಗಿಸಿಕೊಂಡು ಪ್ರತಿಬಿಂಬಿಸುವ ದೂರದರ್ಶಕಗಳನ್ನು ತಯಾರಿಸಲು ಪ್ರಯತ್ನಿಸಲಾಯಿತು. ೧೬೬೮ರಲ್ಲಿ ನ್ಯೂಟ್ ನ್ ಮೂದಲ ಪ್ರಾಯೋಗಿಕ ಪ್ರತಿಬಿಂಬಿಸುವ ದೂರದರ್ಶಕವನ್ನು ಕಂಡುಹಿಡಿದನು. ೧೭೩೩ರಲ್ಲಿ ಆವಿಷ್ಕಾರಗೊಂಡ ಆರೊಮ್ಯಾಟಿಕ್ ದೂರದರ್ಶಕವು ಸಾಧಾರಣ ಲೆನ್ಸ್ ಕಂಡುಬರುವ ವರ್ಣ ವಿಪಥನವನ್ನು ಸರಿಪಡಿಸಿತು. ಇದರಿಂದಾಗಿ ಚಿಕ್ಕದಾದ ಮತ್ತು ಕ್ರಿಯಾತ್ಮಕ ದೂರದರ್ಶಕವನ್ನು ತಯಾರಿಸಲಾಯಿತು. ಪ್ರತಿಬಿಂಬಿಸುವ ದೂರದರ್ಶಕದ ಗಾತ್ರ ಅತೀ ಗರಿಷ್ಠವಾಗಿ ೧ ಮೀಟರ್ ೪೦ ಇಂಚ್ ಇರುತ್ತದೆ.
ದೂರದರ್ಶಕದ ವಿಧಗಳು
ವಿದ್ಯುತ್ಕಾಂತೀಯ ತರಂಗಗಳಲ್ಲಿ ಬೇರೆ ಬೇರೆ ಆವರ್ತನಗಳನ್ನು ಹೊಂದಿರುವಂತಹ ಬ್ಯಾಂಡ್ ಗಳು ಇರುತ್ತವೆ.ಬೇರೆ ಬೇರೆ ತರಂಗಾಂತರಗಳನ್ನು ಪತ್ತೆಹಚ್ಚುವ ಅಧಾರದ ಮೇಲೆ ದೂರದರ್ಶಕಗಳನ್ನು ವಿಂಗಡಿಸಲಾಗಿದೆ.
೧. ಎಕ್ಸರೆ ದೂರದರ್ಶಕ - ನೇರಳಾತೀತ ತರಂಗಗಳಿಂತ ಕಡಿಮೆ ತರಂಗಾಂತರಗಳನ್ನು ಹೊಂದಿರುವಂತಹ ತರಂಗಳನ್ನು ಉಪಯೊಗಿಸಿಕೊಂಡು ವಸ್ತುವನ್ನು ನೋಡಬಹುದು.
೨. ಆಪ್ಟಿಕಲ್ ದೂರದರ್ಶಕ - ಸಾದಾ ಬೆಳಕನ್ನು ಉಪಯೋಗಿಸಿಕೊಂಡು ವಸ್ತುವನ್ನು ನೋಡಬಹುದು.
೩. ಇನ್ಫ್ರಾರೆಡ್ ದೂರದರ್ಶಕ - ಗೋಚರ ಬೆಳಕಿಗಿಂತಹ ಹೆಚ್ಚು ತರಂಗಾಂತರಗ ಹೊಂದಿರುವಂತಹ ತರಂಗಾಂತರಗಳನ್ನು ಉಪಯೋಗಿಸಿಕೊಂಡು ನೋಡಬಹುದು.
೪. ಫ಼್ರೆಸ್ ನಲ್ ದೂರದರ್ಶಕ - ಇದು ಆಪ್ಟಿಕಸ್ ಸಹಾಯದಿಂದ ವಸ್ತುಗಳನ್ನು ಗುರುತಿಸಬಹುದು.
೫. ಎಕ್ಸ್ - ರೇ ದೂರದರ್ಶಕ - ಎಕ್ಸ್ ರೇ ತರಂಗಾತರಂಗಗಳ ಸಹಾದಿಂದ
ಇಂದಿನ ಖಗೋಳಶಾಸ್ತ್ರದಲ್ಲಿ ದೂರದರ್ಶಕದ ಉಪಯೋಗಗಳು ಅಪಾರ. ಅನೇಕ ವಿವಿಧ ರೀತಿಯ ದೂರದರ್ಶಕಗಳು ಬೇರೆ ಬೇರೆ ರೀತಿಯ ತರಂಗಾತರಂಗಳಾನ್ನು ಬಳಸಿಕೊಂಡು ವಸ್ತುಗಳನ್ನು ಗುರುತಿಸುತ್ತವೆ. ದೂರದರ್ಶಕಗಳಿಂದಾಗಿ ಅನೇಕ ಗ್ರಹಗಳನ್ನು ಕಂಡುಹಿಡಿಯಲಾಗಿದೆ. ಹೊಸ ಹೊಸ ದೂರದರ್ಶಕಗಳನ್ನು ತಯಾರಿಸಲು ಸಂಸ್ಥೆಗಳು ಪ್ರಯತ್ನವನ್ನು ನಡಿಸಿವೆ.