ವಿಷಯಕ್ಕೆ ಹೋಗು

ಸದಸ್ಯ:Shridhar p m/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಂತ್ರಮಾನವ ೨೦ನೇ ಶತಮಾನದ ಅತಿ ದೊಡ್ಡ ಅನ್ವೇಷಣೆ ಯಂತ್ರಮಾನವ. ಮಾನವ ತನ್ನ ಕೆಲಸವನ್ನು ಅತಿ ಕಡಿಮೆ ಸಮಯದಲ್ಲಿ ಮುಗಿಸಲು ಕಂಡು ಹಿಡಿದ ವಸ್ತು ಯಂತ್ರಮಾನವ. ಒಂದು ನಿರ್ದಿಷ್ಟ ಕೆಲಸವನ್ನು ಮಾನವ ಒಂದು ಗಂಟೆ ತೆಗೆದುಕೊಂಡರೆ ಯಂತ್ರಮಾನವ ಒಂದು ನಿಮಿಷದಲ್ಲಿ ಮಾಡಿ ಮೂಗಿಸುತ್ತಾನೆ. ಇದರ ಅನ್ವೆಷಣೆಯಿಂದ ಮಾನವನ ಆಲಸ್ಯ ಹೆಚ್ಚಾಗುತ್ತಿದೆ. ಒಂದು ಬಗೆಯ ಕೆಲಸವನ್ನು ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಅದರಲ್ಲಿ ಅಳವಡಿಸಿದರೆ ಸಾಕು ನಿಮಿಷಗಳಲ್ಲಿ ಮಾಡಿ ಮೂಗಿಸುತ್ತದೆ.

ಯಂತ್ರದ ಉಪಯೋಗಗಳು,ತಯಾರಿಕೆ,ಕೆಲಸ ಮಾಡುವ ಪರಿಯ ಅಧ್ಯಯನ ಇವೆಲ್ಲಗಳ ಅಧ್ಯಯನವನ್ನು ರೊಬಾಟಿಕ್ಸ್ ಎಂಬ ಭಾಗದಲ್ಲಿ ಕಲಿಯಬಹುದು. ಆಂಗ್ಲದಲ್ಲಿ ರೊಬಾಟ್ ಎಂಬ ಪದವನ್ನು ಮೊದಲು ಕಂಡು ಹಿಡಿದವರು ಕೆಪೆಕ್ ಎಂಬ ಸಾಹಿತಿ. ಇವರು ತಮ್ಮ ಕಾಲ್ಪನಿಕ ಕಥೆಯೊಂದರಲ್ಲಿ ರೊಬಾಟ್ ಎಂಬ ಪದವನ್ನು ಮೊದಲಬಾರಿಗೆ ಉಪಯೋಗಿಸಿದ್ದರು. ರೊಬಾಟ್ ಗಳು ಮನುಷ್ಯ ಮಾಡಲು ಅಸಾಧ್ಯ ಕೆಲಸಗಳನ್ನು ಮಾಡುತ್ತವೆ. ಯಂತ್ರಮಾನವನನ್ನು ಇತ್ತಿಚಿಗೆ ಯುದ್ಧಗಳಲ್ಲಿ ಬಳಸುತ್ತಿದ್ದಾರೆ. ಬಾಂಬ್ ಗಳ ಸ್ಫೊಟಗಳನ್ನು ತಡೆಯಲು, ಭಾರವಾದ ಬಂದೂಕುಗಳನ್ನು ಹೊರಲು, ಮೂಂತಾದ ಕೆಲಸಗಳಲ್ಲಿ ರೊಬಾಟ್ ಗಳನ್ನು ಉಪಯೋಗಿಸಲಾಗುತ್ತದೆ. ರೊಬಾಟ್ ಗಳ ಆಗಮನದಿಂದ ನಿರುದ್ಯೊಗ ಹೆಚ್ಚಾಗುತ್ತಿದೆ. ಇತ್ತಿಚಿನ ದಿನಗಳಲ್ಲಿ ರೊಬಾಟ್ ಗಳು ಕಾರ್ಖಾನೆಗಳಲ್ಲಿ ಹಚ್ಚಾಗಿ ಬಳಕೆಯಾಗುತ್ತಿದೆ. ಒಂದು ರೊಬಟ್ ೧೦ ಮಾನವನಿಗೆ ಸಮಾನ ಇದರಿಂದಾಗಿ ನಿರುದ್ಯೊಗ ಹೆಚ್ಚಾಗುತ್ತದೆ. ರೊಬಾಟ್ ಗಳ ಸರಿಯಾದ ಉಪಯೋಗದಿಂದ ಸಮಾಜದಲ್ಲಿ ಬದಲಾವಣೆ ತರಬಹುದು.