ಸದಸ್ಯ:Shreyashetty G/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರಿ ಕುಣಿತ[ಬದಲಾಯಿಸಿ]

ಮಾರಿ ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಈ ಕುಣಿತ ಎರಡು ರೀತಿಯಲ್ಲಿ ಇರುತ್ತದೆ.ಬಲಿ ಕೊಡಲಾದ ಕೋಣದ ತಲೆಯನ್ನು ಹೊತ್ತು ಕುಣಿಯುತ್ತಾ ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸೇರುವುದುಒಂದು ಬಗೆ. ಇದು ಸಂಪೂರ್ಣವಾಗಿ ಆಚರಣೆಯ ಒಂದು ಭಾಗ.[೧] ಮಾರಿಹಬ್ಬ ಸಂದರ್ಭದಲ್ಲಿ ಕೊಂಡ ,ಬಂಡಿ ಇತ್ಯಾದಿ ಆಚರಣೆ ಮುಗಿದ ನಂತರ ಮಾರಿಯ ಪ್ರತೀಕವನ್ನು ಹೊತ್ತು ಕುಣಿಯುವುದು ಇನ್ನೊಂದು ಬಗೆ.ಕೋಣನ ತಲೆಯನ್ನು ಹೊತ್ತು ಮೆರವಣಿಗೆ ಹೊರಡುವ ಆಚರಣೆ ಭಾಗವಾಗಿ ಬರುವ ಕುಣಿತ ಎಲ್ಲರಿಗೆ ಸಂಬಂಧಿಸಿಲ್ಲ. ಈ ಆಚರಣೆ ಸಂಪೂರ್ಣಾವಾಗಿ ದಲಿತರಿಗೆ ಸೇರಿದ್ದು.ದಲಿತರಲ್ಲಿ ಕೂಡ ಮಾರಿಯ ಪೂಜರಿ ಮಾತ್ರ ಆ ತಲೆಯನ್ನು ಹೊರಬೇಕು.

ಉಲ್ಲೇಖ[ಬದಲಾಯಿಸಿ]

  1. ಕರ್ನಾಟಕ ಜನಪದ ಕಲೆಗಳ ಕೋಶ,ಸಂ.ಡಾ.ಹಿ.ಚಿ.ಬೋರಲಿಂಗಯ್ಯ,ಕನ್ನಡ ವಿಶ್ವವಿದ್ಯಾಲಯ,ಹಂಪಿ,ಎರಡನೆಯ ಮುದ್ರಣ.