ಸದಸ್ಯ:Shreyanaveen/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಸ‍ರ್ಫರಾಜ್ ಚಂದ್ರಗುತ್ತಿಯವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ಚಿಕ್ಕವಣಕೊಪ್ಪ ಗ್ರಾಮದಲ್ಲಿ ಜನಿಸಿದರು. ತಂದೆ ಗೂಡೂಸಾಬ್. ತಾಯಿ ಗೋರಿಬು. ತಂದೆ-ತಾಯಿಯವರ ಹತ್ತು ಮಕ್ಕಳಲ್ಲಿ ಇವರು ಕೊನೆಯವರು. ರೈತ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಾಕೊಪ್ಪದಲ್ಲಿ ಆರಂಭವಾಯಿತು. ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಚಂದ್ರಗುತ್ತಿಯಲ್ಲಿಯೂ, ಪಿಯುಸಿ ಹಾಗೂ ಪದವಿ ವ್ಯಾಸಂಗವನ್ನು ಸಾಗರದಲ್ಲಿ ಮುಂದುವರೆಸಿ, ಸ್ನಾತಕೋತ್ತರ ವ್ಯಾಸಂಗವನ್ನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಮಾಡಿದ್ದಾರೆ. ಎಂ.ಎ. ವ್ಯಾಸಂಗ ಮುಗಿಸಿದ ನಂತರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡು ಸೊರಬದ ಸ.ಹಿ.ಪ್ರಾ. ಶಾಲೆ ಹರೀಶಿ, ಹೊಸಬಾಳೆ, ಮುಟಗುಪ್ಪೆ ಕರ್ತವ್ಯ ನಿರ್ವಹಿಸಿರುತ್ತಾರೆ. ೧೯೯೭ರಲ್ಲಿ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯಕ್ಷೇತ್ರಕ್ಕೆ ಕೊಡುಗೆ : ಇವರ ಆಸಕ್ತಿ ಕ್ಷೇತ್ರಗಳು : ಕಾದಂಬರಿ, ವಿಮರ್ಶೆ, ಜಾನಪದ, ಸಂಸ್ಕೃತಿ ವಿಮರ್ಶೆ, ಸಂಪಾದನೆ ಹಾಗೂ ಸುಗುಮ ಸಂಗೀತ.

ಕಾದಂಬರಿ : ಆಸ್ಮಾ, ಉದಯಾಸ್ತ,

ಆಸ್ಮಾ ಇವರ ಚೊಚ್ಚಲ ಕೃತಿ. ಮುಸ್ಲಿಂ ಹುಡಿಗಿ, ಹಿಂದೂ ಹುಡುಗನ ನಡುವಿನ ಪ್ರೇಮ ಕೃತಿ. ಉದಯಾಸ್ತ : ಇದೊಂದು ತ್ರೀಕೋನ ಪ್ರೇಮಕೃತಿ. 'ಈಡಿಪಸ್ ಕಾಂಪ್ಲೆಕ್ಸ್' ( ತಾಯಿ-ಮಗ, ಅಣ್ಣ-ತಂಗಿಯರು ದೈಹಿಕ ಸಂಬಂಧ ಹೊಂದಿರುವ) ಎಂದು ಕರೆಯುವ ವಸ್ತುವಿಚಾರವುಳ್ಳ ಅಪರೂಪದ ಕಾದಂಬರಿ ಉದಯಾಸ್ತ. ಇದು ಎರಡನೇ ಬಾರಿ ಮರುಮುದ್ರಣಗೊಂಡಿದೆ.

ನಾ.ಡಿಸೋಜ, ಶರಾವತಿಯ ನಾಲ್ಕು ಜಲಧಾರೆ' ಎಂಬುದು ಮಹತ್ವದ ಕೃತಿಯಾಗಿದೆ. 

ನಾ.ಡಿಸೋಜ : ಕನ್ನಡದ ಪ್ರಸಿದ್ಧ ಬರಹಗಾರರಾಗಿರುವ ನಾಡಿಸೋಜ ಅವರ ಬದುದು-ಬರಹದ ಸಮಗ್ರ ನೋಟ ಈ ಕೃತಿ ಒಳಗೊಂಡಿದೆ.

ಜನಪದ ಕ್ಷೇತ್ರ : 'ಗೋವಿನ ಹಾಡು ಮತ್ತು ಗಾಂಧಿ'ಮೊಹರಂ, ಎಂಬ ಕೃತಿ ಜಾನಪದ ಕ್ಷೇತ್ರದ್ಲಲಿರುವ ಆಳವಾದ ವಿದ್ವತ್ತನ್ನು ಪರಿಚಯಿಸುತ್ತದೆ. ಗೋವಿನಹಾಡು : ಅಹಿಂಸೆಯ ಸಂಕೇತವಾಗಿರುವ ಗೋವು ಹಿಂಸಾತ್ಮಕವಾಗಿ ಹುಲಿಯನ್ನು ಎದುರಿಸಿ ಗೆಲ್ಲುತ್ತದೆ. ಅಂತೆಯೇ ಗಾಂಧಿ ತಮ್ಮ ಅಹಿಂಸಾತ್ಮಕ ಹೋರಾಟದಿಂದ ಬ್ರೀಟಿಷ್ ವಸಹತು ಶಾಹಿಯನ್ನು ಎದುರಿಸಿ ಗೆದ್ದದ್ದು ಇಲ್ಲಿ ಅದ್ಭುತವಾಗಿ ಸಮೀಕರಿಸಿದ್ದಾರೆ. ಮೋಹರಂ : ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಭಾವನಾತ್ಮಕವಾಗಿ ಈ ಕೃತಿಯಲ್ಲಿ ಪ್ರತಿಬಿಂಬಿಸಿದ್ದಾರೆ.

ಸುಗಂ ಸಂಗೀತ : ವಿದ್ಯಾರ್ಥಿ ದಿಶೆಯಲ್ಲಿಯೇ ಒಳ್ಳೆಯ ಹಾಡುಗಾರರಾಗಿ ಹೆಸರಾದವರು. ಸಂಗೀತದಲ್ಲಿ ಅಭಿರುಚಿ ಇದ್ದ ಇವರು ೧. ಕನ್ನಡ ಭಾವಗೀತೆ ಮತ್ತು ಕಾವ್ಯಸಂಗೀತ ೨. ಸಂಗೀತದ ವಿಭಿನ್ನ ಮಾದರಿಗಳು ಮತ್ತು ಸಾಹಿತ್ಯ ೩. ಸುಗಮ ಸಂಗೀತ ಮತ್ತು ಆಧುನಿಕ ಕನ್ನಡ ಕವಿತೆ ಇವುಗಳ ಕುರಿತಾಗಿ ಕ್ಋತಿಯನ್ನು ಬರೆದಿದ್ದಾರೆ. ಲೇಖನಗಳು : ಸಿ. ಅಶ್ವತ್ಥ್