ಸದಸ್ಯ:Shreyanaveen/ನನ್ನ ಪ್ರಯೋಗಪುಟ
'ಡಾ. ನೋರಾ. ರಶ್ಮಿ ಸೇರಾವೋ
[ಬದಲಾಯಿಸಿ]Shreyanaveen (talk) 12:49, 31 March 2021 (UTC)
ಡಾ. ನೋರಾ ರಶ್ಮಿ ಸೇರಾವೋ ಮಾಡಲಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು. ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರದವರು. ತಾಯಿ ರೇಣುಕ, ತಂದೆ ಸಿ.ಎಲ್. ನಾಯ್ಕ. ಇವರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಸಾಗರದಲ್ಲಿಯೇ ಮುಗಿಸಿದರು. ಎಂ.ಬಿ.ಎ. ಪದವಿಧರಳಾದ ರಶ್ಮಿಯವರು ಪ್ರಸ್ತುತ ಬೆಂಗಳೂರಿನ ಐ.ಟಿ. ಕಂಪನಿಯೊಂದರಲ್ಲಿ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ್ದಾರೆ.
ಬಾಲ್ಯದಿಂದಲೂ ಮಾಡಲಿಂಗ್ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೇಬೇಕೆಂಬ ಅಚಲ ಗುರಿಯನ್ನು ಇಟ್ಟುಕೊಂಡಿದ್ದ ಇವರು ಮಾಡಲಿಂಗ್ ಗೆ ಸಂಬಂಧಿಸಿದ ಪೂರಕ ಕ್ಯಾಟ್ ವಾಕ್, ಜಿಮ್, ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಎಲ್ಲಾ ಆದ್ಯತೆಗಳನ್ನು ಹೊಂದಿಸಿಕೊಂಡು ಫ್ಯಾಷನ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.
ನಂತರ ಮೊಟ್ಟ ಮೊದಲ ಬಾರಿಗೆ 2018 ಫೆ. 10ರಂದು ಮಿಸಸ್ ಇಂಡಿಯಾ ಕರ್ನಾಟಕ ( ಆಯಾಮ್ ಪವರ್ ಫುಲ್) ಸ್ಪರ್ಧೆಯಲ್ಲಿ ಭಾಗವಹಿಸಿ ಸೆಕೆಂಡ್ ರನ್ನರ್ ಆಪ್ ಕಿರೀಟ ಧರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಯಶಸ್ಸಿನ ನಂತರ 2018ರ ಮೇ. 15ರಂದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಇಂಡಿಯಾ (ಆಯಾಮ್ ಪವರ್ ಫುಲ್) ಗ್ಲೋಬಲ್ ಯೂನಿವಸ್ಱ ಫಸ್ಟ್ ರನ್ನರ್ ಅಪ್ ಆಗಿ ಕಿರೀಟಧಾರಣೀಯಾಗಿ ಫ್ಯಾಷನ್ ಲೋಕಕ್ಕೆ ಮತ್ತಷ್ಟು ರಂಗು ತಂದರು.
ಅಲ್ಲದೇ 2018ರ ಅಕ್ಟೋಬರ್ 20ರಂದು ಸಿಂಗಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 'ದಿ. ಮೋಸ್ಟ್ ಇಂಟಲೆಕ್ಚಲ್ ಮಿಸಸ್ ಇಂಟರ್ ನೇಷನ್ 2018-19 ರ ಸಾಲಿನ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಸಫಲರಾದರು.
2019ರಲ್ಲಿ ವುಮನ್ ಎಕ್ಸ್ ಲೆನ್ಸ್ ಅಚೀವರ್ ರಾಷ್ಟ್ರಪ್ರಶಸ್ತಿಯನ್ನು ಪಡೆದು ಸಾಧನೆಯ ಮತ್ತೊಂದು ಮೆಟ್ಟಿಲನ್ನೇರಿದರು. ಇವರ ಸಾಧನೆ ಗುರುತಿಸಿದ ಅನೇಕ ಪ್ರತಿಷ್ಠಿತ ಕಂಪೆನಿಗಳು ಭಾರತ ಸೌಂದರ್ಯ ಸ್ಪರ್ಧೆಯ ರಾಯಭಾರಿಯನ್ನಾಗಿ ನೇಮಿಸಿತು. ಇದರಿಂದ ಪ್ರಭಾವಿತರಾದ ರಶ್ಮಿಯವರು ಮಾಡಲಿಂಗ್ ನಲ್ಲಿ ಆಸಕ್ತಿ ಇರುವ ಮಹಿಳೆಯರಿಗೆ ಮಾಡಲಿಂಗ್ ಗೆ ಬೇಕಾಗಿರುವ ತರಬೇತಿಯನ್ನು ನೀಡಿ, ಸ್ಪರ್ಧಾತ್ಮಕ ಫ್ಯಾಷನ್ ವೇದಿಕೆಗೆ ಅನಾವರಣಗೊಳಿಸಿದರು. ಹಾಗೂ ಹಿಂದಿ, ಇಂಗ್ಲೀಷ್, ಪತ್ರಿಕೆಗಳಿಗೆ ರಶ್ಮಿಯವರ ಭಾವಚಿತ್ರವನ್ನು ಮುಖಪುಟವನ್ನಾಗಿ ಪ್ರಕಟಿಸಿದರು. ಕನ್ನಡದ ಗೃಹಶೋಭದಲ್ಲೂ ಇವರ ಭಾವಚಿತ್ರವನ್ನು ಮುಖಪುಟಕ್ಕೆ ಅಳವಡಿಸಿಕೊಂಡಿದ್ದಾರೆ. ದೇಶದ
ಸಾಮಾಜಿಕ ಕಳಕಳಿಯನ್ನು ಹೊಂದಿರುವ ರಶ್ಮಿಯವರ ಅಪಾರ ಹೆಂಗಳೆಯರಿಗೆ ದಾರಿದೀಪವಾಗಿದ್ದಾರೆ.