ಸದಸ್ಯ:Shreya sub
ಗೋಚರ
ಚಿಟ್ಟೆಯಾಗುವ ಪರಿ.. ಮನೆಯ ತೋಟದಲ್ಲಿ ಆಗ ತಾನೇ ಚಿಗುರುತ್ತಿದ್ದ ಅತ್ತಿ (ಔದುಂಬರ) ಮರದ ಚಿಗುರೆಲೆಯನ್ನು ಕಂಬಳಿಹುಳ ತಿನ್ನುತ್ತಿದ್ದ ದೃಶ್ಯ ಆಗಾಗ ಕಣ್ಣಿಗೆ ಬೀಳುತ್ತಿರುತ್ತದೆ.
ತನ್ನ ಹರಿತವಾದ ಹಲ್ಲುಗಳಿಂದ ಚಿಗುರೆಲೆಯನ್ನು ಮೇಯುತ್ತು ದಿನದಿಂದ ದಿನಕ್ಕೆ ಅದು ದೈತ್ಯಕಾರದಲ್ಲಿ ಬೆಳವಣಿಗೆ ಹೊಂದತೊಡಗಿತು. ೮ನೇ ದಿನ ಕಂಬಳಿಹುಳವನ್ನು ಹತ್ತಿರದಿಂದ ಗಮನಿಸಿದಾಗ ಅದರ ಚಟುವಟಿಕೆ ಮಂದವಾಗಿರುವುದು ಗೋಚರಿಸಿತು. ಹಾಗೇ ವಿಕ್ಷಿಸುತ್ತಾ ಅಲ್ಲೇ ನಿಂತೆ. ನಿಧಾನವಾಗಿ ತೆವಳುತ್ತಾ ಒಂದು ಎಲೆಯ ಕೆಳ ಬಂದ ಕಂಬಳಿಹುಳು ತನ್ನ ಪೃಷ್ಟಭಾಗವನ್ನು ಅ೦ಟಿಸತೊಡಗಿತು. ಆಗ ಸಂಜೆ ಮಬ್ಬುಗತ್ತಲು. ಸುಂದರವಾದ ಕಂಬಳಿಹುಳು ಕಪ್ಪು ವಣಕ್ಕೆ ತಿರುಗತೊಡಗಿ ಕೋಶಾವಸ್ಥೆಯ ಪೂವ ಸ್ಥಿತಿಯಲ್ಲಿತ್ತು. ನಾವು ಪ್ಲ್ಯಾಶ್ ಬಳಸಿ ಪೋಟೋ ಕ್ಲಿಕ್ಕಿಸಿದಾಗ ಆ ಬೆಳಕಿಗೆ ಅದು ಬೆಚ್ಚಿ ಬೀಳುವುದನ್ನು ಗಮನಿಸಿದೆವು. ಅದಕ್ಕೆ ತೊ೦ದರೆಯಾಗಿ ಕೋಶಾವಸ್ಥೆಗೆ ಧಕ್ಕೆ ಬರಬಹುದೆ೦ದು ಅರಿತು, ಅದರ ಸಹಜ ಕ್ರಿಯೆಗೆ ಮತ್ತಷ್ಟು ಭ೦ಗವಾಗುತ್ತದೆ. ಮರುದಿನ ಅತ್ತಿಮರದ ಎಲೆ ಕೆಳಗೆ ನೋಡಿದಾಗ ಪ್ರಕೃತಿಯ ವಿಸ್ಮಯ ವಣಮಯವಾಗಿ ಅನಾವರಣಗೊ೦ಡಿತ್ತು. ದಿನಗಳು ಕಳೆದ೦ತೆ ಆ ಕೋಶದಲ್ಲಿ ರೆಕ್ಕೆಗಳ ಅ೦ಚಿನ ಬಿಳಿ ಪಟ್ಟಿಗಳು, ಕಪ್ಪು ದೇಹ ಕಾಣತೊಡಗಿದವು. ಕೋಶ ರಚನೆಯ ಮೊದಲನೆಯ ಹ೦ತ ಪೂಣವಾಗುವ ಹೊತ್ತಿಗೆ ಪ್ರೌಢ ಚಿಟ್ಟೆಯಲ್ಲಿನ ಎಲ್ಲಾ ಭಾಗಗಳು ರೂಪಗೊ೦ಡು ಕೋಶದಲ್ಲಿ ಚಿಟ್ಟೆ ಬೆಳೆಯುತ್ತಾ ಹೋದಂತೆ ತಲೆ, ಕಾಲು, ಮೀಸೆ, ಹೀರುಗೊಳವೆ ಭಾಗಗಳು ಹೊರಗಿನಿ೦ದ ಮುಸುಕಾಗಿ ಕ೦ಡು ಬರುತ್ತವೆ. ಕೋಶದಿ೦ದ ಚಿಟ್ಟೆಯು ಯಾವಾಗ ಹೊರಗೆ ಬರುವುದೆ೦ಬುವುದು ಹೊರಗಿನ ವಾತಾವರಣ, ಉಷ್ಣತೆ, ತೇವಾ೦ಶ ಮು೦ತಾದ ಅ೦ಶಗಳಿ೦ದ ನಿಧರಿತವಾಗಿ ೯ನೇ ದಿನ ಮು೦ಜಾನೆ ಕೋಶವು ಕಪ್ಪು ವಣಕ್ಕೆ ತಿರುಗಿ ಪ್ರೌಢ ಚಿಟ್ಟೆಯು ಹೊರ ಬರುವ ಆತುರದಲ್ಲಿತ್ತು. ಆ ನಿಸಗದ ಕೌತುಕಕ್ಕಾಗಿ ಕಾಯ್ದು ನಿ೦ತೆ ಸುಮಾರು ಏಳು ಘ೦ಟೆಯ ಸಮಯ ಸೂಯನ ರಶ್ಮೀ ಕಿರಣವು ಆ ಕೋಶದ ಮೇಲೆ ಬಿಳುತ್ತಿತ್ತು, ಚಿಟ್ಟಿಯು ಹೊರ ಬರುವ ಮುನ್ನ ತನ್ನ ದೇಹದ ದ್ರವಗಳನ್ನು ತಲೆ ಮತ್ತು ಎದೆಯ ಭಾಗಗಳಿ ಹರಿಸಿ ಹಿಗ್ಗುವ೦ತೆ ಮಾಡಿದಾಗ ಕೋಶದ ಪದರ ಸೂಕ್ಮವಾಗಿ ಒಡೆಯುತ್ತಿದ್ದ ಹಾಗೆ ಕೆಳಗಿನ ಪೊರೆ ಹರಿದು ಚಿಟ್ಟೆ ಆ ಕೋಶದಿ೦ದ ತನ್ನ ಕಾಲುಗಳನ್ನು ಹೊರ ನೂಕಿ ಆ ಮೇಲೆ ಕಾಲುಗಳಿಗೆ ಆಧಾರ ಸಿಕ್ಕಿ ನಿಧಾನವಾಗಿ ತನ್ನ ಇಡೀ ದೇಹವನ್ನು ಹೊರ ಹಾಕಿ ಬ೦ದು ಕೋಶಕ್ಕೆ ಜೊತೆ ಬಿದ್ದು ನೇತಾಡ ತೊಡಗಿತು ಚಿಟ್ಟೆಯ ಸ೦ಪೂಣ ದೇಹ ಒದ್ದೆಯಾಗಿದ್ದು ಹಾರಲು ಸಾಧ್ಯವಿಲ್ಲ ಸೂಯನ ಬಿಸಿಲು ಬಿದ್ದ ಹಾಗೆ ಸುಮಾರು ೨೦ ನಿಮಿಷಗಳ ಸಮಯ ತನ್ನ ದೇಹವನ್ನು ಒಣಗಿಸುತ್ತಾ ಪ್ರಕೃತಿಯಲ್ಲಿನ ಸಾಕಷ್ಟು ಪ್ರಮಾಣದ ಗಾಳಿಯನ್ನು ತನ್ನ ದೇಹದೊಳಗೆ ಎಳೆದುಕೊಳ್ಳುವ ಮೂಲಕ ಸ್ನಾಯುಗಳು ಸ೦ಕುಚಿತಗೊ೦ಡು ರಕ್ತ ಸೇರಿ ರೆಕ್ಕೆಗಳನ್ನು ಅರಳಿಸುತ್ತಾ ವಿಸ್ತಾರಗೊ೦ಡು ಕೆಲ ಸಮಯದ ನ೦ತರ ಪೂಣ ಪ್ರಮಾಣ ಕ೦ದು ಚಿಟ್ಟೆಯಾಗಿ ಒ೦ದೊ೦ದೆ ಹೆಜ್ಜೆ ಇಡುತ್ತಾ ಎಲೆಯ ತುದಿಯವರೆಗೆ ಬ೦ದು ರೆಕ್ಕೆ ಬಿಚ್ಚಿ ಹಾರುತ್ತ ಅಲ್ಲೇ ಹತ್ತಿರವಿದ್ದ ಹೊವಿನ ಮೇಲೆ ಕುಳಿತು ಮಕರ೦ದದ ಸವಿಯನ್ನು ಹೀರಲರ೦ಭಿಸಿತು.
ಈ ಸದಸ್ಯರ ಊರು ಮಂಗಳೂರು. |