ವಿಷಯಕ್ಕೆ ಹೋಗು

ಸದಸ್ಯ:Shreya. Bhaskar/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

en:ಮಂಗ್ಲಾ ರಾಯ್[]

ಮಂಗ್ಲಾ ರಾಯ್ ಅವರು ಭಾರತೀಯ ಕುಸ್ತಿಪಟು. ಇವರು ೧೯೧೬ ಅಕ್ಟೋಬರ್ ನಲ್ಲಿ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಜೋಗಾ ಮುಸಾಹಿಬ್ ಎಂಬ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರ ರಾಯ್ ಮತ್ತು ಮಾವ ರಾಧಾ ರಾಯ್ ಇಬ್ಬರು ಕುಸ್ತಿಪಟುಗಳಾಗಿದ್ದರು. ಮಂಗ್ಲಾ ರಾಯ್ ಅವರು ೧೬ ವರ್ಷ ತುಂಬಿದಾಗ ಕಾನ್ ಸ್ಟೇಬಲ್ ಆಗಿ ಪೋಲೀಸು ಸೇವೆಗೆ ಸೇರಿಕೊಂಡಿದ್ದರು.


ಕುಸ್ತಿ ಜೀವನ

[ಬದಲಾಯಿಸಿ]

ಮಂಗ್ಲಾ ರಾಯ್ ಆರು ಅಡಿ ಮೂರು ಇಂಚು ಎತ್ತರದ, ೧೬೦ಕಿಲೋ ಭಾರವನ್ನು ಹೊಂದಿದ್ದರು. ಇವರು ವಾರಣಾಸಿಯ ಹೆಸರಾಂತ ಕುಸ್ತಿ ಗುರು ಶಿವಮೂರ್ತಿ ತಿವಾರಿಯವರ ತರಬೇತಿಯಲ್ಲಿ ಆಗ್ನೇಯ ಏಷ್ಯಾದ ಕುಸ್ತಿ ಶೈಲಿಯಲ್ಲಿ ನಿಷ್ಣಾತರಾಗಿದ್ದರು. ಇವರು ಮೊದಲಿಗೆ ರಂಗೂನ್ ನ ಛಾಂಪಿಯನ್ ಗಳಾದ ಫತೇಸಿಂಗ್ ಮತ್ತು ಇಶಾನಾಥ್ ರ ಜೊತೆಗೆ ಸೆಣಸಿ ಅವರನ್ನು ಸೋಲಿಸಿದ್ದಾರೆ.ಇವರು ಪಾಕಿಸ್ತಾನದ ರುಸ್ತಮ್ ನನ್ನು ಸೋಲಿಸಿ ರುಸ್ತಮ್-ಎ -ಹಿಂದ್ ಹಾಗೂ ಹಿಂದ್ ಕೇಸರಿ ಮಂಗ್ಲಾ ರಾಯ್ ಎಂಬ ಬಿರುದು ಪಡೆದಿದ್ದಾರೆ. ಬಾಹ್ರಾಲಿ ಡಾವ್ ಎಂಬ ಪಟ್ಟು ಅವರ ನೆಚ್ಚಿನ ಪಟ್ಟಾಗಿತ್ತು.


೧೯೬೩ರಲ್ಲಿ ಇರಾನಿನ ಮೆಹರುದ್ದೀನ್ ನ ವಿರುದ್ಧ ಕೊನೆಯ ಬಾರಿಗೆ ಸೆಣಸಿ, ನಿವೃತ್ತಿ ಘೋಷಿಸಿದರು.ಇವರು ೧೯೭೬ ಜೂನ್ ೨೪ರಂದು ವಾರಣಾಸಿಯಲ್ಲಿ ನಿಧನ ಹೊಂದಿದರು.


ಉಲ್ಲೇಖಗಳು

--Shreya. Bhaskar (ಚರ್ಚೆ) ೦೮:೫೩, ೨೫ ಜೂನ್ ೨೦೨೨ (UTC)

  1. https://peoplepill.com/people/mangla-rai