ಸದಸ್ಯ:Shreya. Bhaskar/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

>ಪರಿಸರ ದಿನಾಚರಣೆ[೧]

ಪರಿಸರ

ಪ್ರಾರಂಭ[ಬದಲಾಯಿಸಿ]

೧೯೭೨ರಲ್ಲಿ ಆರ್ಂಭವಾದ ಚರ್ಚೆಯು, ೧೯೭೪ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶ್ವಸಂಸ್ಥೆಯ ಅನುಮೋಧನೆಯೊಂದಿಗೆ, ಆರಂಭಿಸಲಾಯಿತು. ಪ್ರತೀ ವರ್ಷ ಜೂನ್ ೫ರಂದು ವಿಶ್ವಾದ್ಯಂತ ಪರಿಸರ ದಿನವನ್ನು ಅಚರಿಸಲಾಗುತ್ತದೆ. ಪ್ರತಿಯೊಬ್ಬರಲ್ಲಿಯೂ ಮನುಷ್ಯರಿಂದ ಉಂಟಾಗಿರುವ ವಾಯುಮಾಲಿನ್ಯ,ತಾಪಮಾನ, ಪ್ಲಾಸ್ಟಿಕ್ ನಿಂದ ಉಂಟಾಗಿರುವ ಮಾಲಿನ್ಯ, ದಿನದಿಂದ ದಿನಕ್ಕೆ ಏರುತ್ತಿರುವ ಸಮುದ್ರಮಟ್ಟ ಇವುಗಳಿಂದ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಪರಿಸರವನ್ನು ಸಂರಕ್ಷಿಸುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಜೀವಿಗಳ ಪೋಷಣೆ ಮಾಡುವಲ್ಲಿ ಪರಿಸರ ಮುಖ್ಯ ಪಾತ್ರ ವಹಿಸಿದೆ. ಪರಿಸರದ ಸಮೃದ್ಧಿಯು ಭೂಮಿಯಲ್ಲಿ ವಾಸಿಸುವ ಎಲ್ಲಾ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿದೆ. ಮಾನವ ಸೇರಿದಂತೆ ಉಳಿದೆಲ್ಲಾ ಜೀವ ಸಂಕುಲವು ತಮ್ಮ ಆಹಾರ, ಗಾಳಿ, ನೀರು, ವಸತಿ ಹಾಗೂ ಇತರೆ ಅಗತ್ಯತೆಗಳಿಗೆ ಪರಿಸರವನ್ನು ಅವಲಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರ ನಾಶವನ್ನು ಮಡುತ್ತಿದ್ದಾರೆ. ಇದರಿಂದ ಪರಿಸರದ ಗಾಳಿ,ನೀರು,ಮಣ್ಣು,ಎಲ್ಲವೂ ಮಲಿನಗೊಂಡಿದೆ.

ಆಚರಣೆ[ಬದಲಾಯಿಸಿ]

ಪರಿಸರ ದಿನಾಚರಣೆ
ಪರಿಸರ ದಿನಾಚರಣೆ

ಪರಿಸರ ದಿನವನ್ನು ಪರಿಸರದ ನಿಜವಾದ ಸ್ವರೂಪವನ್ನು ಹಾನಿಯಾಗದಂತೆ ಉಳಿಸಿಕೊಳ್ಳುವ ಅನುಕೂಲಕರವಾದ ಪ್ರಯತ್ನಗಳನ್ನು ಮಾಡುವ ಮುಖ್ಯ ಉದ್ದೇಶದಿಂದ ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವು ಪ್ರತಿಯೊಬ್ಬ ವ್ಯಕ್ತಿಗೂ ತಿಳಿಯಬೇಕೆಂಬ ಸಲುವಾಗಿ ಜಾಗತಿಕ ವೇದಿಕೆಗಳು ಬೆಳೆದಿವೆ. ೧೪೩ಕ್ಕೂ ಹೆಚ್ಚು ದೇಶಗಳು ಈ ದಿನದಲ್ಲಿ ಪ್ರತಿ ವರ್ಷವೂ ಭಾಗಿಯಾಗುತ್ತದೆ. ಪರಿಸರವನ್ನು ರಕ್ಷಿಸಲು ಪ್ರತಿಯೊಬ್ಬರು ನೀರನ್ನು ಉಳಿಸಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಬೇಕು ಹಾಗೂ ಮರುಬಳಕೆ ಮಾಡಬೇಕು, ಗಿಡಮರಗಳನ್ನು ಬೆಳೆಸಬೇಕು, ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸಬೇಕು. ೨೦೨೨ರಲ್ಲಿ [೨]ಸ್ವೀಡನ್ ದೇಶವು ವಿಶ್ವ ಪರಿಸರ ದಿನದ ಅತಿಥೇಯ. ಭಾರತವು ೨೦೧೧ರಲ್ಲಿ ಈ ದಿನದ ಅತಿಥೇಯವಾಗಿತ್ತು. ಪ್ರತೀ ವರ್ಷ ಬೇರೆ ಬೇರೆಯಾದ ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಪರಿಸರ ವ್ಯವಸ್ಥೆ ಪುನಃಸ್ಥಾಪನೆ ಯು ೨೦೨೧ರ ಧ್ಯೇಯವಾಕ್ಯ. ಜೂನ್ ೫ರಿಂದ ಜೂನ್ ೧೬ರವರೆಗೆ ಎಲ್ಲೆಡೆ ಮರಗಿಡಗಳನ್ನು ನೆಟ್ಟು ಇತರ ಪರಿಸರಕ್ಕೆಸಂಬಂಧಿಸಿದ ಅನೇಕ ರೀತಿಯ ಕೆಲಸಕಾರ್ಯಗಳನ್ನು ಮಾಡಿ ಆಚರಿಸಲಾಗುತ್ತದೆ. ಇಂಗಾಲದ ಹೆಜ್ಜೆಗುರುತು, ತ್ಯಾಜ್ಯ ವಿಲೇವಾರಿ ಮತ್ತು ಅರಣ್ಯನಾಶ ಮೊದಲಾದ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.

ಉದ್ದೇಶಗಳು[ಬದಲಾಯಿಸಿ]

  1. ಪರಿಸರದ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸುವುದು.
  2. ಗಿಡಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೇಪಿಸುವುದು.
  3. ಪರಿಸರಕ್ಕೆ ಉಂಟಾಗುವ ಸಮಸ್ಯೆಗಳ ಬಗೆಗೆ ಅರಿವನ್ನು ಮೂಡಿಸುವುದು.
  4. ಪರಿಸರ ನಾಶವನ್ನು ತಡೆಗಟ್ಟುವುದು.
  5. ಪ್ರತಿಯೊಂದು ಜೀವಸಂಕುಲಕ್ಕೆ ಪರಿಸರ ಎಷ್ಟು ಮುಖ್ಯ ಎನ್ನುವ ಕುರಿತು ಅರಿವನ್ನು ಮೂಡಿಸುವುದು.
  6. ಮಾಲಿನ್ಯವನ್ನು ತಡೆಗಟ್ಟುವುದು.
  7. ನೈಸರ್ಗಿಕ ಸಂಪನ್ಮೂಲಗಳ ಕೊರತೆಯನ್ನು ಹೋಗಲಾಡಿಸುವುದು.



ಉಲ್ಲೇಖಗಳು[ಬದಲಾಯಿಸಿ]

  1. https://www.udayavani.com/uv-fusion/environment-day-may-it-be-a-work-of-eternal-awareness
  2. https://timesofindia.indiatimes.com/home/education/news/world-environment-day-2022-theme-importance-and-significance/articleshow/91999445.cms