ಸದಸ್ಯ:Shreenidhi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾಭದಾಯಕ ಫ್ಯಾಷನ್ ಕೊರಿಯೋಗ್ರಫಿ

ಬದಲಾವಣೆ ಹಾಗೂ ಬಣ‍್ಣದ ಬದುಕಿನ ಜತೆಗಿನ ‌ಒಡನಾಟ ಇಟ್ಟುಕೊ‍ಳ್ಳಬಯಸುವವರು ಮಾತ್ರ ಫ್ಯಾಷನ್ ಕೊರಿಯೋಗ್ರಫಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡರಂತೂ ಸು೦ದರ ಬದುಕಿಗೆ ಮುನ್ನುಡಿ ಹಾಕಿದಂತೆ. ಸೃಜನಶೀಲತೆ ಜತೆಗೆ ಫ್ಯಾಷನ್ ಜಗತ್ತಿನ ಕ್ರೇಜ್ ‍ಎರಡು ಕೂಡ ಫ್ಯಾಷನ್ ದುನಿಯಾವನ್ನು ಆಳ್ವಿಕೆ ನಡೆಸಿಕೊ೦ಡು ಮುಂದೆ ಬರುತ್ತಿದೆ. ಜಗತ್ತು ಬದಲಾವಣೆಯನ್ನು ಕೇಳುವುದರಿ೦ದ ಫ್ಯಾಷನ್ ಜಗತ್ತು ವಿಕಸಿತಗೊಳ್ಳುತ್ತಿದೆ. ಫ್ಯಾಷನ್ ಎ೦ದಾಕ್ಷಣ ಬರಿ ವಸ್ತ್ರವಿನ್ಯಾಸ, ಉತ್ಪಾದನೆ, ಆಭರಣಗಳಲ್ಲಿ ವಿನೂತನ ಶೈಲಿಯ ಆಳವಡಿಕೆ ಮಾತ್ರವಲ್ಲ ಅಲ್ಲೂ ಉದ್ಯೋಗ ಅವಕಾಶಗಳಿವೆ.

ಫ್ಯಾಷನ್ ಪತ್ರಿಕೋದ್ಯಮ, ಫ್ಯಾಷನ್ ಛಾಯಾಗ್ರಹಣ ಜತೆಗೆ ಫ್ಯಾಷನ್ ಕೊರಿಯೋಗ್ರಫಿ ಕೂಡ ಉದ್ಯೋಗದಲ್ಲಿ ಸ್ಥಾನಪಡೆದುಕೊಳ್ಳುತ್ತಿದೆ. ದೇಶದ ನಾನಾ ಮೆಟ್ರೋ ನಗರಗಳಲ್ಲಿ ನಡೆಯುವ ಫ್ಯಾಷನ್ ಶೋಗಳಲ್ಲಿ ಫ್ಯಾಷನ್ ಕೊರಿಯೋಗ್ರಫಿಗೆ ಸಾಕಷ್ಟು ಬೇಡಿಕೆಗಳು ಇದ್ದೇ ಇವೆ. ಮುಖ್ಯವಾಗಿ ರೂಪದರ್ಶಿಯೊಬ್ಬಳಿಗೆ ಸಂಪೂರ್ಣವಾಗಿ ತರಬೇತಿ ಕೊಟ್ಟು ರ‍್ಯಾಂಪ್ ಮೇಲೆ ನಡೆಯುವಂತೆ ಮಾಡುವ ಕೆಲಸ ಫ್ಯಾಷನ್ ಕೊರಿಯೋಗ್ರಾಫರ್ ಮೇಲಿದೆ. ಆತ ಫ್ಯಾಷನ್ ಡಿಸೈನರ್ ನ ಭಾವನೆ, ಕಲ್ಪನೆ ಹಾಗೂ ಅದನ್ನು ಪ್ರಸ್ತುತ ಪಡಿಸುವ ಕಲೆಗಾರಿಕೆಗೆ ಸಾಥ್ ಕೊಡುತ್ತಾನೆ. ಫ್ಯಾಷನ್ ಶೋ ನೋಡುವವರ ಕಣ್ಣಿಗೆ ಇಷ್ಟವಾಗಬೇಕಾದರೆ ಫ್ಯಾಷನ್ ಕೊರಿಯೋಗ್ರಾಫರ್ ನ ಪಾತ್ರ ಮಹತ್ವದ್ದು.

ಆತನಿಗೆ ನೃತ್ಯ ಜ್ಞಾನದ ಜತೆಯಲ್ಲಿ ಬದಲಾವಣೆಯ ಬಗ್ಗೆ ಕೂಡ ಹೆಚ್ಚಿನ ಅರಿವು ಇರುವುದು ಬಹಳ ಮುಖ್ಯ. ಇದೇ ಅವನ ವೃತ್ತಿ ಯಶಸ್ವಿತನಕ್ಕೆ ಸಾಕ್ಷಿ ನೀಡುತ್ತದೆ. ಫ್ಯಾಷನ್ ನೃತ್ಯ ಸಂಯೋಜನೆ ಮತ್ತು ಡಿಸೈನರ್ ದೃಷ್ಟಿ ಆಧರಿಸಿ ಫ್ಯಾಷನ್ ಪ್ರದರ್ಶನಗಳಲ್ಲಿ ಕಾರ್ಯಗತಗೊಳಿಸಲು ಫ್ಯಾಷನ್ ವಿನ್ಯಾಸಕರು ಕಾರ‍್ಯ ನಿರ್ವಹಣೆ ಮಾಡುತ್ತಾರೆ. ಇದೊಂದು ದೀರ್ಘ ಕಲಿಕಾ ಪ್ರಕ್ರಿಯೆ ಜತೆಯಲ್ಲಿ ಹೊಸ ಕೌಶಲಗಳ ಸಂಶೋಧನೆಗೆ ಸಾಕಷ್ಟು ಅವಕಾಶ ಕೂಡ ಈ ವೃತ್ತಿ ನೀಡುತ್ತದೆ.