ಸದಸ್ಯ:Shreeja shetty

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೈನಂದಿನ ಜೀವನದಲ್ಲಿ ಪರಿಸರ ಸಂರಕ್ಷಣೆ: ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಅದರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ, ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ದೆಸೆಯಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ವಿಮುಖರಾಗಿ ವಿವಿಧ ಅನೈಸರ್ಗಿಕ ವೃತ್ತಿಗಳಲ್ಲಿ, ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೆಲವೊಮ್ಮೆ ಇದು ಮನುಷ್ಯನ ಉದಾಸೀನತೆ, ತಿಳಿಗೇಡಿತನ ಎಂದು ಕಂಡುಬಂದರೆ ಅನೇಕ ಸಲ ಇದರಲ್ಲಿ ಜನಸಾಮಾನ್ಯನ ದೈನಂದಿನ ಆದ್ಯತೆ, ಅನಿವಾರ್ಯತೆ ಹಾಗೂ ಅಸಹಾಯಕತೆಗಳು ಎದ್ದುಕಾಣುತ್ತವೆ. ಹೀಗಿರುವಾಗ ಬಹುಪಾಲು ಜನರಿಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮ ಕಣ್ಣಮುಂದೆಯೂ, ತೆರೆಮರೆಯಲ್ಲಿಯೂ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ. ಈ ಬಗ್ಗೆ ಕಾಳಜಿ, ಚಿಂತೆ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ – ಈ ನಿಟ್ಟಿನಲ್ಲಿ ನಾವೇನು ಮಾಡಬಹುದು? ಅಥವಾ ದೊಡ್ಡ ಮಟ್ಟಿಗೆ ಏನೂ ಬದಲಾವಣೆ ತರಲಾರದ ಹತಾಶ ಸ್ಥಿತಿಗೆ ಮಾನವಕುಲ ಸಾಮೂಹಿಕವಾಗಿ ಸಿಲುಕಿಹಾಕಿಕೊಂಡಾಗಿದೆಯೇ?

ಭರವಸೆ, ಕನಸು ಇಲ್ಲದಿದ್ದರೆ, ನಾಳೆ ಇಲ್ಲ. ಮಾನವನು ಕಲ್ಪಿಸಲೂ ಅಸಾಧ್ಯವೆನಿಸಿದ ಅನೇಕ ಸಂಗತಿಗಳನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾನೆ. ಇಂಥಾದ್ದರಲ್ಲಿ ನಾವೇ ಹುಟ್ಟುಹಾಕಿದ ಸಮಸ್ಯೆಗಳನ್ನು ಮೀರಿ ನಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ ಇದೆ ಎಂಬ ನಿಲುವಿನೊಂದಿಗೆ ಮುಂದಿನ ಹೆಜ್ಜೆ ಇಡಿ ಎಂದು ನಿಮ್ಮಲ್ಲಿ ನನ್ನ ನಿವೇದನೆ. ನಮ್ಮ ಸುತ್ತಮುತ್ತಲೂ ಏನಿದೆ, ಏನು ನಡೆಯುತ್ತಿದೆ ಎಂಬುದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಚ್ಚರದಿಂದ ಗಮನಿಸಿ ಜಾಗೃತರಾಗುವುದು ಮೊತ್ತಮೊದಲ ಹೆಜ್ಜೆ. ಇವೆಲ್ಲದರಲ್ಲಿ ಪರಿಸರದ ಹಿತಾಸಕ್ತಿಯನ್ನು ಕಾಪಾಡುವ ಅಂಶಗಳನ್ನು ಎತ್ತಿಹಿಡಿದು, ಪರಿಸರವನ್ನು ಕಡೆಗಣಿಸುವ ಅಂಶಗಳನ್ನು ಕೆಳತಳ್ಳುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ ಎಂಬ ಮನೋಭಾವವನ್ನುಪರಿಸರದ ಬಗ್ಗೆ ಜಾಗೃತರಾಗುವ ದಿಕ್ಕಿನಲ್ಲಿ ಗಮನಿಸಬೇಕಾದ ಅಂಶಗಳು

ಜನರು, ಸಂಘ-ಸಂಸ್ಥೆಗಳು – ಪರಿಸರಕ್ಕೆ ಅವರ ಕೊಡುಗೆಗಳು, ಪಾತ್ರ ಹಾಗೂ ಅವರ ನೈಜ ಉದ್ದೇಶಗಳು ವಿವಿಧ ಯೋಜನೆಗಳು – ಅವುಗಳ ಹಿನ್ನೆಲೆ, ಪ್ರಸ್ತುತ ಹಂತ, ಫಲಾನುಭವಿಗಳು, ಅನಿವಾರ್ಯತೆ, ಹಿತಾಸಕ್ತಿಗಳು ತ್ಯಾಜ್ಯ – ಉತ್ಪಾದನೆ, ಸಂಸ್ಕರಣೆ ಹಾಗೂ ವಿಲೇವಾರಿ ಇಂಧನ-ಶಕ್ತಿ – ಬಳಕೆಯ ಪ್ರಮಾಣ, ನವೀಕರಣಗೊಳ್ಳುವ ಮೂಲಗಳ ಶೇಕಡಾವಾರು ಕೊಡುಗೆ ನೀರು – ಬಳಕೆಯ ಪ್ರಮಾಣ, ಮಳೆನೀರಿನ ಇಂಗುವಿಕೆಯ ಪ್ರಮಾಣ, ವಿವಿಧ ಮೂಲಗಳ ಸ್ಥಿತಿಗತಿ ಆಹಾರ, ಕೃಷಿ - ಕೀಟನಾಶಕಗಳ ಬಳಕೆ, ಸಾವಯವ ಕೃಷಿಯ ಬೆಳವಣಿಗೆ, ಪ್ರಾಣಿಮೂಲ ಆಹಾರದಿಂದ ಪರಿಸರಕ್ಕೆ ಆಗುವ ಆಘಾತ ನೆಲ - ಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು – ಕಾಡು ಕೃಷಿಭೂಮಿಯಾಗುವುದು, ಕೃಷಿಭೂಮಿ ನಿವೇಶನಗಳಾಗುವುದು ಜನಸಂಖ್ಯೆ - ಹೆಚ್ಚಳ-ಕಡಿತ ಹಾಗೂ ಅವರ ಒಟ್ಟಾರೆ ಬೇಡಿಕೆಯ ಮೇಲಿನ ಪರಿಣಾಮ ಆರ್ಥಿಕತೆ - ಏರಿಳಿತದಿಂದ ಜನರ ಜೀವನಶೈಲಿ, ಅವರ ಬೇಡಿಕೆಗಳು ಹಾಗೂ ಪರಿಸರದ ಮೇಲೆ ಆಗುವ ಪರಿಣಾಮ ಸ್ಥಳೀಯ ಸಂಸ್ಕೃತಿ, ಹಿರಿಯರ ಜೀವನಕ್ರಮ - ಅದರಲ್ಲಿರುವ ಒಳಿತು-ಕೆಡುಕುಗಳು (ಪರಿಸರದ ದೃಷ್ಟಿಯಿಂದ) ಸ್ಥಳೀಯ ಪ್ರಾಣಿ-ಪಕ್ಷಿ-ಜಲಚರಗಳು – ಅವುಗಳ ಜೀವನಕ್ರಮ, ಅವುಗಳ ಉಳಿವಿಗೆ ಅವಶ್ಯವಾದ ಪರಿಸರ ಪ್ರಕೃತಿ ಮುನಿಸಿಕೊಂಡರೆ ತಾಳಿಕೊಳ್ಳುವ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು ಎಲ್ಲರೂ ಮೈಗೂಡಿಸಿಕೊಂಡರೆ ನಿಧಾನವಾಗಿ ಈ ಸಮಸ್ಯೆಗಳು ತೀವ್ರತೆಯನ್ನು ಕಳೆದುಕೊಂಡು ಕೊನೆಗೆ ಇಲ್ಲವಾಗುವವು.