ಸದಸ್ಯ:Shreegowri 123/sandbox
ಹೂ ಗಿಡ ಎಷ್ಟು ಪ್ರಾಚೀನ
ಪ್ರಾಚೀನತೆ ಎಷ್ಟೇ ಇರಲಿ, ಪ್ರಸ್ತುತ ಇಡೀ ಸಸ್ಯ ಸಾಮ್ರಾಜ್ಯದಲ್ಲಿ ಹೂ ಗಿಡಗಳದೇ ಗರಿಷ್ಟ ವೈವಿಧ್ಯತೆ. ಸದ್ಯದಲ್ಲಿ ಧರೆಯಲ್ಲಿ ಈವರೆಗೆ ಗುರುತಿಸಲ್ಪಟ್ಟಿರುವ ಸರ್ವ ವಿಧ ಸಸ್ಯ ಪ್ರಭೇದಗಳ ಒಟ್ಟು ಸಂಖ್ಯೆ ಸುಮರು ನಾಲ್ಕು ಲಕ್ಷ. ಆ ಪೈಕಿ ಕುಸುಮ ಸಸ್ಯ ಪ್ರಭೇದಗಳ ಸಂಖ್ಯೆ ಮುರೂವರೆ ಲಕ್ಷ. ಹಾಗೆಂದರೆ ಪ್ರತಿ ಎಂಟು ಸಸ್ಯ ಪ್ರಭೇದಗಳಲ್ಲಿ ಏಳು ಪ್ರಭೇದಗಳು ಹೂ ಗಿಡಗಳದೇ ಎಂದಾಯಿತಲ್ಲ? ಅಷ್ಟೇ ಅಲ್ಲ ಹಣ್ಣು ಗಿಡ, ಬಳ್ಳಿ ಗಿಡ, ಕಳ್ಳಿ ಗಿಡ, ಮುಳ್ಳು ಗಿಡ, ಅಪ್ಪು ಗಿಡ, ಕಳೆ ಗಿಡ, ಪೊದೆ ಗಿಡ, ಕುರುಚಲು ಗಿಡ, ಮರ ಮಹಾವೃಕ್ಷಗಳ ವರೆಗೆ ಪ್ರತಿ ವಿಧದಲ್ಲೂ ಹೂ ಗಿಡಗಳದೇ ಗರಿಷ್ಟ ಜನಸಂಖ್ಯೆ. ಗರಿಷ್ಟ ಪ್ರಬೇಧ ಸಂಖ್ಯೆ ಆದ್ದರಿಂದಲೇ ನದೀ ದಂದೆ, ಸರೋವರ ತಟ, ಕಡಲ ತೀರ, ಅಡವಿ, ಹುಲ್ಲು ಬಯಲು, ಮರುಭೂಮಿ, ಪರ್ವತ ಪ್ರದೇಶ ಇತ್ಯಾದಿ ಸಕಲ ವಿಧ ಜೀವಾವಾರಗಳಿಂದ ಹೊಲ, ಗದ್ದೆ, ತೋಟ, ಉದ್ಯಾನಗಳವರೆಗೆ ಎಲ್ಲೆಲ್ಲೂ ಹೂ ಗಿಡಗಳದೇ ಗರಿಷ್ಟ ದಟ್ಟಣೆ, ಗರಿಷ್ಟ ಆಕರ್ಷಣೆ.
ಹಾಗೆಂದು ಸಸ್ಯ ಲೋಕದಲ್ಲಿ ಹೂ ಗಿಡಗಳದೇ ಗರಿಷ್ಟ ಪ್ರಾಚೀನತೆ ಕೂಡ ಎಂದು ಭಾವಿಸಿ ಬಿಡಬೇಡಿ. ೪೫೦೦ ದಶಲಕ್ಷ ವರ್ಷಗಳ ವಯಸಿನ ನಮ್ಮ ಧರೆಯಲ್ಲಿ ಪ್ರಥಮ ಜೀವಿಗಳು ಅವತರಿಸಿದ್ದು ೩೪೦೦ ದಶಲಕ್ಷ ವರ್ಷ ಹಿಂದೆ. ಪರಿಪೂರ್ಣ ಸಸ್ಯಗಳು ಮೈ ದಳೆದದ್ದು ೪೭೫ ದಶಲಕ್ಷ ವರ್ಷ ಹಿಂದೆ. ಹೂ ರಹಿತ ಸಸ್ಯಗಳಾದ ಜಿಮ್ನೋಸ್ಪರ್ಮ್ ಗಳಿಂದ ಹೂ ಗಿಡಗಳ ಹಾದಿ ಕವಲೊಡೆದದ್ದು ಈಗ್ಗೆ ೨೪೨ ರಿಂದ ೨೦೨ ದಶಲಕ್ಷ ವರ್ಷ ಹಿಂದಿನ ಅವಧಿಯಲ್ಲಿ.
ಪಳೆಯುಳಿಕೆಗಳ ಸ್ಪಷ್ಟ ಸಾಕ್ಷ್ಯಗಳ ಪ್ರಕಾರ ನಿಚ್ಚಳ ವಿಭಿನ್ನ ಸಸ್ಯಗಳಾಗಿ ಹೂ ಗಿಡಗಳ ಅಸ್ತಿತ್ವಕ್ಕೆ ಬಂದದ್ದು ಈಗ್ಗೆ ೧೬೦ ದಶಲಕ್ಷ ವರ್ಷ ಹಿಂದೆ, ಎಂದರೆ ಧರೆಯಲ್ಲಿ ಹೂ ಗಿಡಗಳ ಪ್ರಾಚೀನತೆ ಹದಿನಾರು ಕೋಟಿ ವರ್ಷಗಳಷ್ಟು ಎಂಬುದು ಸ್ಪಷ್ಟ. ಬಹಳ ಪುಟ್ಟ ಪುಟ್ಟ ಕುಸುಮಗಳನ್ನು ಅರಳಿಸಿದ ಜಲಸಸ್ಯವೊಂದು ಪ್ರಪ್ರಥಮ ಹೂ ಗಿಡವಾಗಿ ಆಗ ಸೃಷ್ಟಿಗೊಂಡಿತ್ತು. ಆದರೆ ಆ ನಂತರ ನಲವತ್ತು ದಶಲಕ್ಷ ವರ್ಷಗಳ ಅವಧಿಯಲ್ಲಿ ಎಂದರೆ ೧೭೦ ದಶಲಕ್ಷ ವರ್ಷ ಹಿಂದಿನ ಸುಮಾರಿಗೆ ಹೂಗಿಡಗಳು ಸಂಖ್ಯೆಯಲ್ಲೂ, ವೈವಿಧ್ಯದಲ್ಲೂ ಧಾರಾಳ ವರ್ಧನೆ ಗಳಿಸಿ ಎಲ್ಲ ಜೀವಾವಾರಗಳಲ್ಲೂ ಕಿಕ್ಕಿರಿದಿದ್ದವು.
ಹೂ ಗಿಡಗಳ ಸಾರ್ವತ್ರಿಕ ಕ್ಷಿಪ್ರ ಯಶಸ್ಸಿಗೆ ಮೂಲ ಕಾರಣವಾದ ಪರಕೀಯ ಪರಾಗಸ್ಪರ್ಶ ಕ್ಕೆ ಆಕರವಾದ ಪರಾಗ ಕನಗಳು ೧೩೦ ದಶಲಕ್ಷ ವರ್ಷ ಪ್ರಾಚೀನತೆಯ ಸ್ಪಷ್ಟ ಪಳೆಯುಳಿಕೆಗಳಲ್ಲಿ ಕಾಣಸಿಕ್ಕಿವೆ. ನೆಲವಾಸಿಯಾಗಿದ್ದು ಬಹುಸಂಖ್ಯೆಯ ಕುಸುಮಗಳನ್ನು ಧರಿಸಿದ್ದ ಪರಿಪೂರ್ಣ ಹೂಗಿಡದ ಪ್ರಪ್ರಥಮ ಪಳೆಯುಳಿಕೆಯ ಪ್ರಾಚೀನತೆ ೧೨೫ ದಶಲಕ್ಷ ವರ್ಷ. ಇದೇ ಹಾದಿಯಲ್ಲೇ ಮುಂದಿನ ಹಂತವಾಗಿ ಆವತರಿಸಿದ ಪ್ರಥಮ ಕುಸುಮ ವೃಕ್ಷಗಳು ಭೂ ವದನವನ್ನು ಅಲಂಕರಿಸಿದ ಕಾಲ ಈಗ್ಗೆ ೬೦ ರಿಂದ ೧೦೦ ದಶಲಕ್ಷ ವರ್ಷ ಹಿಂದೆ.