ಸದಸ್ಯ:Shravya Sharath/ನನ್ನ ಪ್ರಯೋಗಪುಟ/2
ಆಲಿಸ್ ವಾಕರ್
ಆಲಿಸ್ ಮಾಲ್ಸೆನಿಯರ್ ವಾಕರ್ (ಜನನ ಫೆಬ್ರವರಿ ೯, ೧೯೪೪) ಅಮೆರಿಕಾದ ಕಾದಂಬರಿಕಾರ್ತಿ, ಸಣ್ಣ ಕಥೆಗಾರ್ತಿ, ಕವಯಿತ್ರಿ ಮತ್ತು ಕಾರ್ಯಕರ್ತೆ. 'ದಿ ಕಲರ್ ಪರ್ಪಲ್' (೧೯೮೨) ಎಂಬ ಕಾದಂಬರಿಯನ್ನು ಅವರು ಬರೆದರು. ಇದಕ್ಕಾಗಿ ಅವರು 'ರಾಷ್ಟ್ರೀಯ ಪುಸ್ತಕ ಪ್ರಶಸ್ತಿ' ಮತ್ತು 'ಫಿಕ್ಷನ್ಗಾಗಿ ಪುಲಿಟ್ಜೆರ್ ಪ್ರಶಸ್ತಿ'ಯನ್ನು ಪಡೆದರು. 'ಮೆರಿಡಿಯನ್' (೧೯೭೬) ಮತ್ತು 'ದಿ ಥರ್ಡ್ ಲೈಫ್ ಆಫ್ ಗ್ರೇಂಜ್ ಕೋಪ್ಲ್ಯಾಂಡ್' (೧೯೭೦), ಅವರ ಇತರ ಕೃತಿಗಳು.
ವಾಕರ್ ಜಾರ್ಜಿಯಾದ ಪುಟ್ನಮ್ ಕೌಂಟಿಯಲ್ಲಿ, ಎಂಟು ಮಕ್ಕಳಲ್ಲಿ ಕಿರಿಯವರಾಗಿ, ಆಫ್ರಿಕನ್ ಅಮೇರಿಕನ್ ವಿಲ್ಲೀ ಲೀ ವಾಕರ್ ಮತ್ತು ಮಿನ್ನೀ ಲು ತಾಲುಲಾ ಗ್ರ್ಯಾಂಟ್ ಗೆ ಜನಿಸಿದರು. ಅವರ ಮಾತಿನಲ್ಲಿ, ಅವರ ತಂದೆ "ಗಣಿತದಲ್ಲಿ ಅದ್ಭುತ ಆದರೆ ಸಾಮಾನ್ಯ ಕೃಷಿಕ"; ಅವರು ವರ್ಷಕ್ಕೆ ಹೈನುಗಾರಿಕೆಯಿಂದ $೩೦೦ (೨೦೧೩ರಲ್ಲಿ $೪೦೦೦) ಗಳಿಸುತ್ತಿದ್ದರು. ಆಕೆಯ ತಾಯಿ ಮನೆ ಕೆಲಸದವರಾಗಿ ಕುಟುಂಬದ ಆದಾಯವನ್ನು ಪೂರಕಗೊಳಿಸಿದರು. ಈ ಕುಟುಂಬವು 'ನೇಟಿವ್ ಅಮೆರಿಕಾ'ದ ಸಂತತಿಯನ್ನೂ ಸಹ ಹೊಂದಿತ್ತು. ವಾಕರ್ ತಮ್ಮ ಬರಹ ಮತ್ತು ಆಧ್ಯಾತ್ಮಿಕತೆಗಳಲ್ಲಿ ಇದರಿಂದ ಪ್ರೇರಣೆಗೊಂಡರು. ಮಿನ್ನೀ ಲು ಅವರು ವಾರಕ್ಕೆ $೧೭ ಗೆ ಪ್ರತೀ ದಿನ ೧೧ ಘಂಟೆ ಕಾಲ ಕೆಲಸ ಮಾಡಿ, ಕಾಲೇಜ್ಗೆ ಹಾಜರಾಗಲು ಆಲಿಸ್ಗೆ ಹಣ ಪಾವತಿಸಲು ಸಹಾಯ ಮಾಡಿದರು.
೧೯೬೫ರಲ್ಲಿ, ವಾಕರ್ ಯಹೂದಿ ನಾಗರಿಕ ಹಕ್ಕುಗಳ ವಕೀಲ ಮೆಲ್ವಿನ್ ರೊಸೆನ್ಮನ್ ಲೆವೆನ್ತಾಲ್ ಅವರನ್ನು ಭೇಟಿಯಾದರು. ಅವರು ಮಾರ್ಚ್ ೧೭, ೧೯೬೭ರಂದು ನ್ಯೂಯಾರ್ಕ್ ನಗರದಲ್ಲಿ ಮದುವೆಯಾದರು. ಅದೇ ವರ್ಷದಲ್ಲಿ ದಂಪತಿಗಳು ಮಿಸ್ಸಿಸ್ಸಿಪ್ಪಿಯ ಜಾಕ್ಸನಲ್ಲಿ ನೆಲೆಸಿದರು. ಮಿಸ್ಸಿಸ್ಸಿಪ್ಪಿಯಲ್ಲಿ ಕಾನೂನುಬದ್ಧವಾಗಿ ವಿವಾಹವಾದ ಮೊಟ್ಟಮೊದಲ ಅಂತರ್-ಜನಾಂಗೀಯ ದಂಪತಿಗಳಾದರು. 'ಕು ಕ್ಲುಕ್ಸ್ ಕ್ಲಾನ್' ಸೇರಿದಂತೆ ಸ್ಥಳೀಯ ಬಿಳಿಯರು ಇವರಿಗೆ ಕಿರುಕುಳ ಮತ್ತು ಬೆದರಿಕೆ ಹಾಕಿದರು. ಈ ಜೋಡಿಗೆ ೧೯೬೯ರಲ್ಲಿ ರೆಬೆಕಾ ಎಂಬ ಮಗಳು ಜನಿಸಿದಳು. ವಾಕರ್ ಮತ್ತು ಅವರ ಪತಿ ೧೯೭೬ರಲ್ಲಿ ವಿಚ್ಛೇದನ ಪಡೆದರು.
ವಾಕರ್ ಅವರು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ರರನ್ನು ೧೯೬೦ರ ಆರಂಭದಲ್ಲಿ 'ಸ್ಪೆಲ್ಮನ್ ಕಾಲೇಜಿ'ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಭೇಟಿಯಾದರು. ಸಿವಿಲ್ ರೈಟ್ಸ್ ಚಳವಳಿಯಲ್ಲಿ ಕಾರ್ಯಕರ್ತರಾಗಿ ಅಮೆರಿಕಾದ ದಕ್ಷಿಣಕ್ಕೆ ಹಿಂದಿರುಗವ ತಮ್ಮ ನಿರ್ಧಾರಕ್ಕಾಗಿ ಮಾರ್ಟಿನ್ ಲೂಥರ್ ಕಿಂಗ್ ಅವರೇ ಕಾರಣ ಎನ್ನುತ್ತಾರೆ. ೧೯೬೩ರಲ್ಲಿ ಅವರು "ಮಾರ್ಚ ಆನ್ ವಾಷಿಂಗ್ಟನ್"ರಲ್ಲಿ ಭಾಗವಹಿಸಿದರು. ನಂತರ, ಅವರು ಜಾರ್ಜಿಯಾ ಮತ್ತು ಮಿಸ್ಸಿಸ್ಸಿಪ್ಪಿಯಲ್ಲಿ ಕಪ್ಪು ಮತದಾರರನ್ನು ನೋಂದಾಯಿಸಲು ಸ್ವಯಂ ಸೇವಿಕಿಯಾದರು.
ಈ ಕೆಳಕಂಡವು ಅವರ ಕೃತಿಗಳು:
~ಥರ್ಡ್ ಲೈಫ್ ಆಫ್ ಗ್ರಾಂಜ್ ಕೊಪ್ಲ್ಯಾಂಡ್ (೧೯೭೦)
~ಲವ್ ಅಂಡ್ ಟ್ರಬಲ್: ಬ್ಲಾಕ್ ಮಹಿಳೆಯರ ಕಥೆಗಳು (೧೯೭೩, "ಎವೆರಿಡೇ ಯೂಸ್" ಅನ್ನು ಒಳಗೊಂಡಿದೆ)
~ಮೆರಿಡಿಯನ್ (೧೯೭೬)
~ದ ಕಲರ್ ಪರ್ಪಲ್ (೧೯೮೨): ಇದು ಅವರ ಅತ್ಯಂತ ಪ್ರಸಿದ್ದವಾದ ಪುಸ್ತಕ.
ಗ್ರಾಮೀಣ 'ಜಾರ್ಜಿಯಾ'ದಲ್ಲಿ ಹೆಚ್ಚಾಗಿ ನಡೆಯುವ ಈ ಕಥೆಯು, ೧೯೩೦ರ ದಶಕದಲ್ಲಿ ದಕ್ಷಿಣ ಅಮೆರಿಕಾದ ಸಂಸ್ಥಾನದಲ್ಲಿ ಆಫ್ರಿಕನ್-ಅಮೇರಿಕನ್ ಮಹಿಳೆಯರ ಜೀವನವನ್ನು ಚಿತ್ರೀಕರಿಸಿದೆ. ಅಮೆರಿಕಾದ ಸಾಮಾಜಿಕ ಸಂಸ್ಕೃತಿಯಲ್ಲಿ ಅವರ ಕೆಳಮಟ್ಟದ ಸ್ಥಾನಮಾನವನ್ನು ಒಳಗೊಂಡಂತೆ ಹಲವಾರು ವಿಷಯಗಳ ಬಗ್ಗೆ ಗಮನಹರಿಸುತ್ತದೆ. ಈ ಕಾದಂಬರಿಯು ಆಗಾಗ್ಗೆ ಸೆನ್ಸಾರ್ಗಳ ಗುರಿಯಾಗಿದೆ; ಮತ್ತು ವಿಶೇಷವಾಗಿ 'ಲೈಬ್ರರಿ ಅಸೋಸಿಯೇಷನ್'ನ ೨೦೦೦-೨೦೦೯ರ ೧೦೦ 'ಮೋಸ್ಟ ಚಾಲೆಂಜಿಡ್' ಪುಸ್ತಕಗಳ ಪಟ್ಟಿಯಲ್ಲಿ ಹದಿನೇಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ನಿರ್ದಿಷ್ಟವಾಗಿ ಹಿಂಸಾಚಾರದ ವಿಷಯದಲ್ಲಿ ಇದು ಹೆಚ್ಚಾದ ಗಮನವನ್ನು ಪಡೆದಿದೆ. ೨೦೦೩ರಲ್ಲಿ ಈ ಪುಸ್ತಕವು 'ಬಿಬಿಸಿ'ಯ 'ದಿ ಬಿಗ್ ರೀಡ್' ಪೋಲ್ನಲ್ಲಿ ಯು.ಕೆ.ಯ "ಅತ್ಯಂತ-ಜನಪ್ರಿಯ ಕಾದಂಬರಿಗಳು" ಪಟ್ಟಿಯಲ್ಲಿ ಸ್ಥಾನಗಳಿಸಿದೆ.
~ಯು ಕ್ಯಾನ್ಟ್ ಕೀಪ್ ಎ ಗುಡ್ ವುಮನ್ ಡೌನ್: ಸ್ಟೋರೀಸ್ (೧೯೮೨)
~ಟು ಹೆಲ್ ವಿತ್ ಡೈಯಿಂಗ್ (೧೯೮೮)
~ದಿ ಟೆಂಪಲ್ ಆಫ್ ಮೈ ಫ್ಯಾಮಿಲಿಯರ್ (೧೯೮೯)
~ಫೈಂಡಿಂಗ್ ದಿ ಗ್ರೀನ್ ಸ್ಟೋನ್ (೧೯೯೧)
~ಪೋಸ್ಸೆಸಿಂಗ್ ದಿ ಸೀಕ್ರೆಟ್ ಆಫ್ ಜಾಯ್ (೧೯೯೨)
~ಕಂಪ್ಲೀಟ್ ಸ್ಟೋರೀಸ್ (೧೯೯೪)
~ದ ಲೈಟ್ ಆಫ್ ಮೈ ಫಾದರ್ಸ್ ಸ್ಮೈಲ್ (೧೯೯೮)
~ವೇ ಫಾರ್ವರ್ಡ್ ಈಸ್ ಎ ಬ್ರೋಕನ್ ಹಾರ್ಟ್ (೨೦೦೦)
ಪ್ರಶಸ್ತಿಗಳು ಮತ್ತು ಗೌರವಗಳು:
~ಮ್ಯಾಕ್ಡೊವೆಲ್ ಕಾಲೊನೀ ಫೆಲೋಶಿಪ್ಸ್ (೧೯೬೭ ಮತ್ತು ೧೯೭೪)
~ಇಂಗ್ರಾಮ್ ಮೆರಿಲ್ ಫೌಂಡೇಷನ್ ಫೆಲೋಶಿಪ್ (೧೯೬೭)
~ಕ್ಯಾಂಡೇಸ್ ಪ್ರಶಸ್ತಿ, ಕಲೆ ಮತ್ತು ಪತ್ರಗಳು, ೧೦೦ ಬ್ಲ್ಯಾಕ್ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (೧೯೮೨)
~ದ ಕಲರ್ ಪರ್ಪಲ್ ಗಾಗಿ ಫಿಕ್ಷನ್ಗಾಗಿ ಪುಲಿಟ್ಜೆರ್ ಪ್ರಶಸ್ತಿ (೧೯೮೩)
~ದಿ ಕಲರ್ ಪರ್ಪಲ್ ಗಾಗಿ ಫಿಕ್ಷನ್ಗಾಗಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ (೧೯೮೩)
~"ಕಿಂಡ್ರೆಡ್ ಸ್ಪಿರಿಟ್ಸ್" ಗಾಗಿ ಒ. ಹೆನ್ರಿ ಪ್ರಶಸ್ತಿ (೧೯೮೫)
~ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ದಿ ಆರ್ಟ್ಸ್ ಇಂದ ಗೌರವ ಪದವಿ (೧೯೯೫)
~ಅಮೇರಿಕನ್ ಹ್ಯೂಮನಿಸ್ಟ್ ಅಸೋಸಿಯೇಶನ್ ಅವರನ್ನು "ಹ್ಯೂಮನಿಸ್ಟ್ ಆಫ್ ದಿ ಇಯರ್" (೧೯೯೭) ಎಂದು ಹೆಸರಿಸಿತು.
~ಆರ್ಟ್ಸ್ ನ್ಯಾಷನಲ್ ಎಂಡೋಮೆಂಟ್ನಿಂದ ಲಿಲಿಯನ್ ಸ್ಮಿತ್ ಪ್ರಶಸ್ತಿ
~ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮತ್ತು ಲೆಟರ್ಸ್ನಿಂದ ರೊಸೆಂತಲ್ ಪ್ರಶಸ್ತಿ
~ರಾಡ್ಕ್ಲಿಫ್ ಇನ್ಸ್ಟಿಟ್ಯೂಟ್ ಫೆಲೋಶಿಪ್, ಮೆರಿಲ್ ಫೆಲೋಷಿಪ್ ಮತ್ತು ಗುಗ್ಗೆನ್ಹೇಮ್ ಫೆಲೋಷಿಪ್ನ್ಯೂ
~ಸ್ ವುಮನ್'ಸ್ ಕ್ಲಬ್ ಆಫ್ ನ್ಯೂಯಾರ್ಕ್ನಿಂದ ಅತ್ಯುತ್ತಮ ಪುರವಣಿ ಟೀಕೆಗಾಗಿ ಫ್ರಂಟ್ ಪೇಜ್ ಪ್ರಶಸ್ತಿ
~ಜಾರ್ಜಿಯಾ ಬರಹಗಾರರ ಹಾಲ್ ಆಫ್ ಫೇಮ್ಗೆ ಪ್ರವೇಶ (೨೦೦೧)
~ಕ್ಯಾಲಿಫೋರ್ನಿಯಾ ಮ್ಯೂಸಿಯಂ ಫಾರ್ ಹಿಸ್ಟರಿ, ವುಮೆನ್ ಮತ್ತು ಆರ್ಟ್ಸ್ (೨೦೦೬) ನಲ್ಲಿ ಕ್ಯಾಲಿಫೋರ್ನಿಯಾ ಹಾಲ್ ಆಫ್ ಫೇಮ್ ಗೆ ಪ್ರವೇಶ