ಸದಸ್ಯ:Shravya Poojary/ನನ್ನ ಪ್ರಯೋಗಪುಟ
ಗೋಚರ
ಅರೆಯುವ ಕಲ್ಲು
[ಬದಲಾಯಿಸಿ]ಅರೆಯುವ ಕಲ್ಲು ಒಂದು ಸಾಧನವಾಗಿದೆ.ಇದನ್ನು ಮಸಾಲೆ ಪದಾರ್ಥವನ್ನು ಅರೆಯಲು ಬಳಸುತ್ತಾರೆ.ಇದನ್ನು ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಇದರ ಬಳಕೆಯನ್ನು ಪರ್ಯಾಯ ವಸ್ತುವಿನ ಉಪಯೋಗವನ್ನು ಕಡಿಮೆ ಮಾಡಲಾಗಿದೆ. ಅರೆಯುವದರಿಂದ ದೇಹಕ್ಕೆ ವ್ಯಾಯಾಮವಾಗಿ ಅರೋಗ್ಯವನ್ನು ವೃದ್ಧಿಸಲು ಸಹಾಯವಾಗುತ್ತದೆ. ಇದು ಕಡಿಮೆ ವೆಚ್ಚದಾಯಕವೂ ಹೌದು. ಇದು ಗ್ರಾಮೀಣಭಾಗದ ನಿತ್ಯ ಬಳಕೆಯ ವಸ್ತುವಾಗಿದ್ದು, ಅರೆಯುವ ಕಲ್ಲು ತುಂಬ ಮಹತ್ವವನ್ನು ಹೊಂದಿದೆ. ಇದು ತುಳುನಾಡಿನಲ್ಲಿ ಹೆಚ್ಚಾಗಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಇದರಲ್ಲಿ ವಿವಿಧ ರೀತಿಯ ಖಾದ್ಯಗಳು ಮತ್ತು ಮಸಾಲೆ ವಸ್ತುಗಳನ್ನು ಮಾಡಲು ಸುಲಭವಾಗುತ್ತದೆ ಮತ್ತು ಅರೆಯುವ ಕಲ್ಲಿನಿಂದ ತಯಾರಿಸುವ ಅಡುಗೆಂಯು ಒಳ್ಳೆಯ ರುಚಿಯನ್ನು ಹೊಂದಿದೆ, ಅಷ್ಟಲ್ಲದೇ ಆರೋಗ್ಯಕ್ಕೆ ಉತ್ತಮವಾದ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅರೆಯುವ ಕಲ್ಲಿನಿಂದ ಮಸಾಲೆಯ ಪದಾರ್ಥಗಳನ್ನು ಹುಡಿಹುಡಿಯಾಗಿ ಅರೆಯಲು ಸಾಧ್ಯವಾಗುತ್ತದೆ. ಈಗ ಕಡೆಯುವ ಕಲ್ಲು ಮೂಲೆ ಗುಂಪು ಆಗಿದೆ.