ಸದಸ್ಯ:Shobha dmello
ನನ್ನ ಹೆಸರು ಶೊಭಾ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕಿಯಾಗಿ ಕೆಲಸ ಮಾದುತ್ತೇನೆ. ಓದುವುದು ನನ್ನ ಮೆಚ್ಚಿನ ಹವ್ಯಾಸ. ಎಲ್ಲ ಭಾಶೆಯ ಪುಸ್ತಕಗಳನ್ನು ಓದುವುದು ನನಗೆ ಇಷ್ಟ. ನನ್ನ ಸೇವಾವಧಿಯಲ್ಲಿ ಅನೇಕ ಕನ್ನಡ ಮತ್ತು ಆ೦ಗ್ಲ ಭಾಷೆಯ ಪುಸ್ತಕಗಳನ್ನು ನಾನು ಓದಿದ್ದೇನೆ. ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಆರಂಭಿಸಿದ ಹವ್ಯಾಸ ಕಾಲಕ್ರಮೇಣ ಒಂದು ಚಟದಂತೆ ನನ್ನನ್ನು ಅಂಟಿಕೊಂಡಿತು. ಪ್ರತಿದಿನವೂ ಕೆಲವು ಪುಟಗಳನ್ನು ಓದದಿದ್ದರೆ ಏನನ್ನೊ ಕಳೆದುಕೊಂಡಂತೆ ಆ ದಿನ ಬಹಳ
ನೀರಸವಾದಂತೆ ಎನಿಸುತ್ತದೆ.
ಪುಸ್ತಕಗಳನ್ನು ಓದುವುದರಿಂದ ನನ್ನ ದಿನಛರಿಯಲ್ಲಿ ಬಹಳಷ್ಟು ಬದಲಾವಣೆಗಳು ನನ್ನ ಗಮನಕ್ಕೆ ಬಂದಿವೆ. ವ್ಯರ್ಥ ಮಾತುಕಥೆಯಲ್ಲಿ ಕಳೆಯುವ ಸಮಯ ಈಗ ಓದುವಿಕೆಗೆ ಮೀಸಲಾಗಿದೆ. ನನಗೇ ಅರಿವಿಲ್ಲದಂತೆ ನನ್ನ ಮನಸ್ಸು ಪುಸ್ತಕದ ಬಗ್ಗೆ ಚಿಂತಿಸುತ್ತದೆ . ನಿನ್ನೆ ಆರಂಭಿಸಿದ ಪುಸ್ತಕದ ಮುಂದಿನ ಭಾಗ ಓದುವುದು ಯಾವಾಗ ಮತ್ತು ಹೇಗೆ ಸಮಯ ಹೊಂದಿಸುವುದು ಎಂಬ ಚಿಂತೆ. ಆ ಪುಸ್ತಕವನ್ನು ಯಾವಾಗ ಪೂರ್ತಿಗೊಳಿಸುವುದು ಎಂಬ ಆಲೋಚನೆ. ಹೀಗೆ ದಿನದ ಸ್ವಲ್ಪ ಸಮಯವನ್ನು ಸಮಯ ಪುಸ್ತಕಗಳೊಂದಿಗೆ ಕಳೆಯುವ ಅವಕಾಶವನ್ನು ನಾನು ಹೇಗಾದರೂ ಹೊಂದಿಸಿಕೊಳ್ಳುತ್ತೇನೆ. ಕಥೆ, ಕಾದಂಬರಿ, ವೈಚಾರಿಕ ಲೇಖನಗಳು, ನಾಟಕಗಳು, ಪ್ರವಾಸೀ ಕಥನ, ಕವನ ಸಂಕಲನ ಹೀಗೆ ಯಾವುದೇ ಸಾಹಿತ್ಯ ಪ್ರಕಾರವಾದರೂ ಸರಿ.ಕನ್ನಡದಲ್ಲಿ ಕುವೆಂಪು, ಶಿವರಾಮ ಕಾರಂತ, ಮಾಸ್ತಿಯವರ ಸಣ್ಣ ಕಥೆಗಳು, ತೇಜಸ್ವಿಯವರ ಪರಿಸರದ ಬಗ್ಗೆ ಬರೆದ ಪುಸ್ತಕಗಳು, ಯಶವಂತ ಚಿತ್ತಲರ ಪುರುಷೋತ್ತಮ, ತ್ರಿವೇಣಿ, ಎಂ.ಕೆ.ಇಂದಿರರವರ ಕಾದಂಬರಿಗಳು, ಇಂಗ್ಲಿಷಿನಲ್ಲಿ ವಿಲಿಯಂ ಶೆಕ್ಸ್ಪಿಯರ್, ಮಿಲ್ತೊನ್, ಕೆನನ್ ಡೊಯಲ್, ಜೇನ್ ಆಸ್ಟೀನ್, ಆರುಂಧತಿ ರಾಯ್, ರೊಬಿನ್ ಸಿಂಗ್ ನಾನು ಮೆಚ್ಛಿದ ಬರಹಗಾರರು. ಇಷ್ಟೇ ಅಲ್ಲದೇ ಉದಯೋನ್ಮುಖ ಸಾಹಿತಿಗಳ ಬರಹಗಳನ್ನೂ ಓದುತ್ತೇನೆ. ಪತ್ರಿಕೆಗಳಲ್ಲಿ ಬರುವ ಕಥೆ, ದಾರಾವಹಿಗಳು,ಸಣ್ಣ ಕಥೆ, ಕವನ ಯಾವುದಾದರೂ ಆಗಬಹುದು. ಹೀಗೆ ಬಿಡುವಿನ ವೇಳೆ ಸದುಪಯೋಗವಾಗುವುದರೊಂದಿಗೆ ಅನಗತ್ಯ ಮಾತು, ಹರಟೆ, ಗಲಾಟೆ, ತಪ್ಪು ತಿಳುವಳಿಕೆ ಇಂಥವುಗಳಿಗೆ ಯಾವುದೇ ಅವಕಾಶವಿಲ್ಲ. ನನ್ನದೇ ಆದ ಪುಸ್ತಕ ಲೋಕದಲ್ಲಿ ವಿಶ್ರಮಿಸುವಾಗ ಬೇರೆ ಜಂಜಾಟಗಳು ಲೆಕ್ಕಕ್ಕಿಲ್ಲ.