ವಿಷಯಕ್ಕೆ ಹೋಗು

ಸದಸ್ಯ:Shivaraj Yadav/ಗೋಪಾಲನ್ ಕಸ್ತೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shivaraj Yadav/ಗೋಪಾಲನ್ ಕಸ್ತೂರಿ

ಗೋಪಾಲನ್ ಕಸ್ತೂರಿ ( ೧೭ಡಿಸೆಂಬರ್ ೧೯೨೪ - ೨೧ ಸೆಪ್ಟೆಂಬರ್ ೨೦೧೨) ಇವರು ಒಬ್ಬ ಭಾರತೀಯ ಪತ್ರಕರ್ತರಾಗಿದ್ದು, ಇವರು ೧೯೬೫ ರಿಂದ ೧೯೯೧ ರವರೆಗೆ ದಿ ಹಿಂದೂ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಇವರು ದಿ ಹಿಂದು ಪತ್ರಿಕೆಯ ಮುಖ್ಯಸ್ಥರಾಗಿದ್ದ S. ಕಸ್ತೂರಿ ರಂಗಯ್ಯ ಅಯ್ಯಂಗಾರ್ ಅವರ ಮೊಮ್ಮಗರಾಗಿದ್ದರು. ಇವರು ಚಿಕ್ಕಪ್ಪರಾಗಿದ್ದ ಎಸ್ ಪಾರ್ಥಸಾರಥಿ ಅವರ ನಿಧನದ ನಂತರ ಕಸ್ತೂರಿಯವರು ಪತ್ರಿಕೆಯ ಸಂಪಾದಕರಾದರು. ನಂತರ ಇವರು ಪತ್ರಿಕೆಯ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. [೧]

ವೈಯಕ್ತಿಕ ಜೀವನ[ಬದಲಾಯಿಸಿ]

ಕಸ್ತೂರಿಯವರು ೧೯೨೪ರ ಡಿಸೆಂಬರ್ ೧೭ರಂದು ಮದ್ರಾಸ್ ನ ಕೆ. ಗೋಪಾಲನ್ ಮತ್ತು ರಂಗನಾಯಕಿ ದಂಪತಿಗೆ ಜನಿಸಿದರು. ಈತ ಕಸ್ತೂರಿ ಕುಟುಂಬದ ಹಿರಿಯರಾದ ಎಸ್. ಕಸ್ತೂರಿ ರಂಗ ಅಯ್ಯಂಗಾರ್ ಅವರ ಮೊಮ್ಮಗ, ಇವರು ಹುಟ್ಟುವ ಒಂದು ವರ್ಷದ ಮೊದಲು ಇವರ ತಾತ ನಿಧನರಾಗಿದ್ದರು. ಇವರು ಮದ್ರಾಸ್ನ ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದು ಕುಟುಂಬದ ಪತ್ರಿಕೆಯಾದ ದಿ ಹಿಂದೂ ಅನ್ನು ಸೇರಿದರು.

ಕಸ್ತೂರಿಯವರು ಕಮಲಾ ಎಂಬುವರನ್ನು ವಿವಾಹವಾದರು ನಂತರ ಇವರಿಗೆ ಇಬ್ಬರು ಪುತ್ರರು ಮತ್ತು ಮಗಳು - ಕೆ. ಬಾಲಾಜಿ, ಕೆ. ವೇಣುಗೋಪಾಲ್ ಮತ್ತು ಲಕ್ಷ್ಮಿ ಶ್ರೀನಾಥ್. ಕಸ್ತೂರಿಯವರ ಹಿರಿಯ ಸಹೋದರಾದ ಜಿ. ನರಸಿಂಹನ್ ಅವರು ೧೯೫೯ ರಿಂದ ೧೯೭೭ ರವರೆಗೆ ದಿ ಹಿಂದೂ ಪತ್ರಿಕೆಯ ವ್ಯವಸ್ಥಾಪಕ-ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಸಂಪಾದಕತ್ವ[ಬದಲಾಯಿಸಿ]

೧೯೬೫ ರಲ್ಲಿ ದಿ ಹಿಂದೂ ಪತ್ರಿಕೆಯ ಸಂಪಾದಕರಾದ ಎಸ್. ಪಾರ್ಥಸಾರಥಿಯವರ ಮರಣದ ನಂತರ ಕಸ್ತೂರಿಯವರು ಸಂಪಾದಕರಾದರು. ಕಸ್ತೂರಿಯವರು ೧೯೬೫ ರಿಂದ ೧೯೯೧ ರವರೆಗೆ ಇದರ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿದರು. ಕಸ್ತೂರಿ ಅವರು ೧೯೯೧ ರಲ್ಲಿ ನಿವೃತ್ತರಾದರು ನಂತರ ಎನ್. ರವಿ ಎಂಬುವವರು ಪತ್ರಿಕೆಯ ಅಧಿಕಾರ ವಹಿಸಿಕೊಂಡರು.

ಸಾವು[ಬದಲಾಯಿಸಿ]

ಕಸ್ತೂರಿಯವರು ೨೧ ಸೆಪ್ಟೆಂಬರ್ ೨೦೧೨ ರಂದು ತಮ್ಮ ೮೮ ನೇ ವಯಸ್ಸಿನಲ್ಲಿ ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. [೨] ದಿ ಹಿಂದೂ ಪತ್ರಿಕೆಯ ಸ್ಥಾಪನೆಯ ೧೩೪ ನೇ ವರ್ಷದ ವಾರ್ಷಿಕೋತ್ಸವ ಆದ ಒಂದು ದಿನದ ನಂತರ ನಿಧನರಾದರು.

ಟಿಪ್ಪಣಿಗಳು[ಬದಲಾಯಿಸಿ]

  1. T. S. Subramanian (10 October 2003). "The Hindu at 125". 20 (20). Archived from the original on 4 October 2012. {{cite journal}}: Cite journal requires |journal= (help)
  2. "Former Editor G. Kasturi passes away". The Hindu. 21 September 2012. Retrieved 18 July 2018.

ಉಲ್ಲೇಖಗಳು[ಬದಲಾಯಿಸಿ]

  • Who's who in India. Guide Publications. 1966. p. 207.

[[ವರ್ಗ:೧೯೨೪ ಜನನ]]