ಸದಸ್ಯ:Shivakumara kote/sandbox1
ಬ್ರಹ್ಮಶಿವ
[ಬದಲಾಯಿಸಿ]ಪೀಠಿಕೆ
[ಬದಲಾಯಿಸಿ]ಕವಿರಾಜಮಾರ್ಗ ಕನ್ನಡದಲ್ಲಿ ಉಪಲಬ್ದವಿರುವ ಮೊದಲ ಕೃತಿ.ಇದು ಲಾಕ್ಷಣಿಕ ಗ್ರಂಥ.[೧] ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯ ಕಾವ್ಯಗಳು ಕನ್ನಡದಲ್ಲಿ ದೊರೆತ ಮೊದಲ ಮಹಾಕಾವ್ಯಗಳು.ಇವುಗಳಿಗೂ ಮುನ್ನ ಕನ್ನಡದಲ್ಲಿ ಸಾಹಿತ್ಯ ನಿರ್ಮಾಣವಾಗಿತ್ತು ಎಂಬುದಕ್ಕೆ ಪಂಪನ ಮಹಾಕಾವ್ಯಗಳಲ್ಲಿಯೇ ಉಲ್ಲೇಖಗಳು ದೊರೆಯುತ್ತವೆ.ಆದರೆ ಅವುಗಳ್ಯಾವು ದೊರೆತಿಲ್ಲವಾದುದರಿಂದ ಸಧ್ಯದ ಮಟ್ಟಿಗೆ ಪಂಪನೇ ಆದಿಕವಿ ಎಂಬುದಾಗಿ ವಿದ್ವಾಂಸರು ತೀರ್ಮಾನಿಸಿದ್ದಾರೆ. ಹಾಗೂ ಹತ್ತನೆಯ ಶತಮಾನದಿಂದ ಹನ್ನೆರಡನೆಯ ಶತಮಾನದ ಮದ್ಯಭಾಗದವರೆಗಿನ ಕಾಲವನ್ನು ಪಂಪಯುಗ ಎಂದು ಗುರುತಿಸಿದ್ದಾರೆ. ಬ್ರಹ್ಮಶಿವನನ್ನು ಈ ಯುಗದ ವ್ಯಾಪ್ತಿಯಲ್ಲಿ ಸೇರಿಸಿದ್ದಾರೆ.
ಪರಿಚಯ
[ಬದಲಾಯಿಸಿ]ಬ್ರಹ್ಮಶಿವ ಹನ್ನೆರಡನೆಯ ಶತಮಾನದ ಮಧ್ಯಭಾಗದಲ್ಲಿ ಬರುವ ಮಹತ್ವದ ಕವಿಗಳಲ್ಲಿ ಒಬ್ಬ. ಈತನ ಮೂಲ ಹೆಸರು ಬ್ರಹ್ಮದೇವ. ಇವನು ಚಾಲುಕ್ಯತ್ರೈಲೋಕ್ಯಮಲ್ಲಸುತ ಕೀರ್ತಿವರ್ಮನನ್ನು ಸ್ತುತಿಸುವುದರಿಂದ ಈತನ ಕಾಲವನ್ನು ಸು.೧೧೦೦ ಎಂಬುದಾಗಿ ಕವಿಚರಿತೆಕಾರರು ನಿರ್ಧರಿಸಿದ್ದಾರೆ.ಅಗ್ಗಳದೇವನ ಕೆಳೆಯಂ ಎಂದು ತಾನೆ ಹೇಳಿಕೊಂಡಿರುವುದರಿಂದ ಅಗ್ಗಳನ ಕಾಲ ಕ್ರಿ.ಶ.೧೧೮೯ ಆಗಿರುವುದರಿಂದ ಹನ್ನೆರಡನೆಯ ಶತಮಾನದ ಉತ್ತರಾರ್ಧದಲ್ಲಿ ಇದ್ದನೆಂಬ ಅಭಿಪ್ರಾಯವೂ ಇದೆ.ಹಾಗೆಯೆ ಬ್ರಹ್ಮಶುವ ತನ್ನ ಗುರು ಎಂದು ಹೇಳಿಕೊಂಡಿರುವ ವೀರಣಂದಿ ಸು.೧೧೫೩ರ ಹೊತ್ತಿಗೆ ಆಚಾರಸಾರ ಕರ್ನಾಟಕವೃತ್ತಿಯನ್ನು ರಚಿಸಿದ್ದರಿಂದ ಆ ಕಾಲದ ನಂತರ ಬ್ರಹ್ಮಶಿವ ಇದ್ದಿರಬೇಕೆಂದೂ ತೋರುತ್ತದೆ.ಆದರೆ ರಂ.ಶ್ರೀ.ಮುಗಳಿಯವರು ಈತನ ಕಾಲವನ್ನು ಹನ್ನೆರಡನೆಯ ಶತಮಾನದ ಮಧ್ಯವೇ ಈತನ ಜೇವಿತಾವದಿ ಎಂಬುದಾಗಿ ಉಲ್ಲೇಖಿಸಿದ್ದಾರೆ.[೨]ಇವನ ಮತ ಜೈನ ಧರ್ಮ ಇವನು ಮೊದಲು ಶೈವ ಪಂಥದವನಾಗಿದ್ದು ಆಮೇಲೆ ಜೈನ ಮತಾವಲಂಭಿಯಾದನೆಂಬುದಾಗಿ ಸಾಹಿತ್ಯ ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. ಇವನ ಕೃತಿಗಳಲ್ಲಿ ಎಲ್ಲಿಯೂ ವೀರಶೈವ ಮತದ ಬಗ್ಗೆ ಉಲ್ಲೇಖಗಳಿಲ್ಲ.ಅಂದಿನ ಧಾರ್ಮಿಕ ಕ್ರಾಂತಿಗೆ ಕಾರಣನಾದ ಬಸವಣ್ಣ ಮತ್ತು ಆತನ ತರುವಾಯದ ಯಾವ ವಚನಕಾರರ ಬಗ್ಗೆಯೂ ಉಲ್ಲೇಖವಿಲ್ಲದಿರುವುದರಿಂದ ಹಾಗೂ ಬಸವಣ್ಣನಿಗೂ ಹಿರಿಯನಾದ ಜೇಡರ ದಾಸೀಮಯ್ಯನ ಬಗ್ಗೆ ಉಲ್ಲೇಖವಿರುವುದರಿಂದ ಈತ ವೀರಶೈವಕ್ಕೂ ಪೂರ್ವದ ಶೈವ ಮತಕ್ಕೆ ಸೇರಿದವನಾಗಿದ್ದಯ ಅದರಲ್ಲಿ ಒಲ್ಪು ಕಾಣದೆ ಜೈನ ಮತಾವಲಂಭಿಯಾದಂಥೆ ಕಾಣುತ್ತದೆ.ಈತನ ಕಾವ್ಯಗಳಲ್ಲಿ ಅನ್ಯಮತ ವಿಡಂಬನೆ ಸ್ವ-ಮತ ಮಂಡನೆ ಪ್ರಮುಖವಾದ ಉದ್ದೇಶವಾಗಿದೆ.ಅನ್ಯಮತ ಧೂಷಣೆ ಇವನಲ್ಲಿ ಅಧಿಕವಾಗಿ ಕಾಣುತ್ತದೆ.
ಬ್ರಹ್ಮಶಿವನ ಕೃತಿಗಳು
[ಬದಲಾಯಿಸಿ]- ತ್ರೈಲೋಕ್ಯಚೂಢಾಮಣಿ ಸ್ತೋತ್ರ
- ಸಮಯಪರೀಕ್ಷೆ
- ತ್ರೈಲೋಕ್ಯಚೂಢಾಮಣಿ ಸ್ತೋತ್ರ:ಇದು ೩೬ ಸ್ತೋತ್ರಗಳನನ್ನು ಒಳಗೊಂಡಿದೆ. ಛತ್ತೀಸರತ್ನಮಾಲೆ ಎಂಬ ಇನ್ನೊಂದು ಹೆಸರೂ ಇದೆ.ಇದರಲ್ಲಿ ಅನ್ಯದೇವತಾ ನಿಂದೆ,ಅನ್ಯಮತ ವಿಡಂಬನೆ ಅಧಿಕವಾಗಿದ್ದು ಕವಿ ಉದ್ದೇಶಕ್ಕನುಗುಣವಾಗಿ ವಿಡಂಬನಾ ಸ್ವರೂಪವನ್ನು ಪಡೆದುಕೊಂಡಿದೆ.ತೀರ ಕಡಿಮೆ ಪ್ರಮಾಣದಲ್ಲಿ ಭಕ್ತಿಭಾವ ಹೊಂದಿರುವ ಪದ್ಯಗಳು ಇವೆ. ಉಳಿದಂತೆ ಗದ್ಯಗಳಲ್ಲಿ ಬರುವ ವಾದ ಸರಣಿ,ಪದ್ಯ ರೂಪ ತಾಳಿರುವ ವಿಡಂಬನೆ ವಿತಮಡವಾದಿ ಮತ್ತು ವಿಡಂಬನಾಕಾರ ಎಂಬ ಬ್ರಹ್ಮಶಿವನ ಸ್ವಭಾವಕ್ಕೆ ತಕ್ಕಂತೆ ಮೂಡಿ ಬಂದಿವೆ.
- ಸಮಯಪರೀಕ್ಷೆ:ಇದು ಕಂದ ವೃತ್ತಗಳ ಕೇವಲ ಪದ್ಯಗಳಿಂದ ಕೂಡಿದ ಗ್ರಂಥ. ೧೫ ಅಧಿಕಾರಗಳುಳ್ಳ ಬಹು ವಿಸ್ತಾರವಾದ ಗ್ರಂಥ.ಇದು ಛಂದಸ್ಸಿನಲ್ಲಿ ಹೇಗೋ ಹಾಗೆಯೇ ವಿಷಯ ನಿರೂಪಣೆಯಲ್ಲಿಯೂ ಚಂಪೂಮಾರ್ಗಕ್ಕಿಂಥ ಭಿನ್ನವಾದುದುಇದು ಸುಸ್ಪಷ್ಟವಾಗಿ ಮತಪ್ರಚಾರಕ ಗ್ರಂಥ ಅನ್ಯ ಮತ ಪುರಾಣಗಳಲ್ಲಿ ಮತ್ತು ಲೋಕಾಚರಣೆಗಳಲ್ಲಿ ಇರುವ ದೋಷಗಳನ್ನುಎತ್ತಿಹಿಡಿದು ಜೈನಮತವೇ ಶ್ರೇಷ್ಠ ಎಂದು ಹೇಳುವುದು ಇವನ ಮುಖ್ಯ ಉದ್ದೇಶವಾಗಿದೆ.ಇದರಲ್ಲಿ ಅಷ್ಟಾದಶವರ್ಣನೆಗಳಿಲ್ಲ. ಇವನ ಪ್ರಕಾರ ಅನ್ಯಮತದ ಮೂಡ ನಂಬಿಕೆಗಳೇ ಅಷ್ಟಾದಶ ವರ್ಣನೆಗಳು. ಬ್ರಹ್ಮಶಿವನ ಸಮಯಪರೀಕ್ಷೆ ತನ್ನ ಮಿತಿಯೊಳಗೆ ತತ್ಕಾಲೀನ ಜನಜೀವನಚಿತ್ರಣವನ್ನು ಒಳಗೊಂಡಿದೆ.ಇದರಲ್ಲಿ ಅನ್ಯಮತ ವಿಡಂಬನೆ ಹಾಗೂ ಟೀಕೆ ಕಟುವಾಗಿದೆ.ಮತೀಯ ಪಕ್ಷಪಾತ ಹಾಗೂ ಅಸಹನೀಯತೆ ಎದ್ದು ಕಾಣುವ ವಿಡಂಬನಾ ಸಾಹಿತ್ಯ ಗ್ರಂಥವಾಗಿದೆ. ಈತನ ವಿಡಂಬನೆ ಮನರಂಜನಾತ್ಮಕವಾಗಿದೆ.ಅರ್ಧನಾರೀಶ್ವರನ ಪರಿಕಲ್ಪನೆ[೩]ಯನ್ನು ಕುರಿತು ಹೇಳುವಾಗ ಶಂಭು ತನ್ನ ಒಡಲಿನ ಅರ್ಧ ಭಾಗವನ್ನು ಕಾಂತೆಗೆ ಕೊಟ್ಟ, ಪಾರ್ವತಿ ತನ್ನ ಒಡಲಿನ ಅರ್ಧ ಭಾಗವನ್ನು ಶಂಭುವಿಗೆ ಕೊಟ್ಟಳು ಉಳಿದ ಇನ್ನರಡು ಅರ್ಧ ಭಾಗಗಳನ್ನು ಇಬ್ಬರೂ ಯಾರಿಗೆ ಕೊಟ್ಟರು[೪] ಎಂದು ಅನ್ಯ ಮತ ದೇವತೆಗಳನ್ನು ವಿಡಂಬಿಸಿದ್ದಾನೆ.
ಉಲ್ಲೇಖ
[ಬದಲಾಯಿಸಿ]- ↑ http://kannadamma.net
- ↑ ಮುಗಳಿ ರಂ.ಶ್ರೀ.,ಕನ್ನಡ ಸಾಹಿತ್ಯ ಚರಿತ್ರೆ,ಗೀತಾ ಬುಕ್ ಹೌಸ್:ಪ್ರಕಾಶಕರು:ಮೈಸೂರು.,ಪ್ರಥಮ ಪ್ರಕಾಶನ ೧೯೫೩,ಇಪ್ಪತ್ತ ಮೂರನೆಯ ಸಂಸ್ಕರಣ ೧೦೧೪
- ↑ http://kannada.boldsky.com/inspiration/short-story/the-concept-significance-ardhanarishvara-008526-008526.html
- ↑ ಗಂಗಾನಾಯಕ್ ಕೆ.ಎನ್.,(ಪ್ರ.ಸಂ.) ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಮೈಸೂರು ೫೭೦೦೦೬ ಪ್ರಥಮ ಮುದ್ರಣ ೨೦೧೧