ಸದಸ್ಯ:Shilpa D Sataraddi/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಕಾರ[ಬದಲಾಯಿಸಿ]

 ಗಿಡವು ಕತ್ತಿಯಂತೆ ಮೊನಚಾಗಿರುವ ಎಲೆಗಳನ್ನು ಹೊಂದಿದ್ದು 2-6 ಮೀಟರ್ ಎತ್ತವಿರುತ್ತದೆ. ಕಾಂಡವು ವಾಯು ಬೇರುಗಳು ಆಧಾರದ ಮೇಲೆ ನಿಂತಿರುತ್ತದೆ. ಎಲೆಯ ಅಂಚು ಮುಳ್ಳುಗಳನ್ನು ಹೊಂದಿದ್ದು, ನಡುನರದ ಮುಳ್ಳು ಮುಂದಕ್ಕೆ ಬಾಚಿರುತ್ತವೆ. ಗಂಡು ಹೂವಿನ ಹೊಂಬಾಳೆ ಹಳದಿ ಛಾಯೆ ಹೊಂದಿದ್ದು, ಅತಿ ಪರಿಮಳಯುತವಾಗಿರುವುದು. ಹೂವುಗಳು ಸುಮಾರು ಹತ್ತು ದಳಗಳನ್ನು ಹೊಂದಿರುತ್ತದೆ.

ಉಪಯೋಗಗಳು[ಬದಲಾಯಿಸಿ]

1) ಬೇರನ್ನು ಅರೆದು ಸಿಡುಬು ಮತ್ತು ಕುಷ್ಟವ್ಯಾಧಿಯ ಹುಣ್ಣುಗಳಿಗೆ ಲೇಪಿಸಲು ಬಳಸುತ್ತಾರೆ. 2) ಬೇರನ್ನು ಅರೆದು ಲೇಪಿಸುವುದರಿಂದ ವಾತದಿಂದಾಗುವ ನೋವುಗಳು ಗುಣವಾಗುತ್ತವೆ. 3) ಒಣಗಿದ ಎಲೆಗಳ ಪುಡಿಯನ್ನು ಅಥವಾ ಚಕ್ಕೆಯ ಸುಟ್ಟ ಬೂದಿಯನ್ನು ಗಾಯಗಳಿಗೆ ಲೇಪಿಸುವುದರಿಂದ ಶೀಘ್ರ ಗುಣವಾಗುತ್ತದೆ. 4) ಎಲೆಗಳನ್ನು ಅರೆದು ಎಳ್ಳೆಣ್ಣೆಯಲ್ಲಿ ಬಿಸಿಮಾಡಿ ಹಣೆಗೆ ಪಟ್ಟಿ ಹಾಕಿದರೆ ತಲೆನೋವು ಗುಣವಾತ್ತದೆ. 5) ಎಣ್ಣೆಯನ್ನು ಸಂದಿವಾತದ ಉರಿ ಮತ್ತು ನೋವಿನ ಸಮಸ್ಯೆಗಳಿಗೆ ಲೇಪಿಸಬಹುದು. 6) ಬೇರಿನ ಕಷಾಯವನ್ನು ಅರಿಶಿನ ಕಾಮಾಲೆ ರೋಗಕ್ಕೆ ಬಳಸಲಾಗುತ್ತದೆ. 7) ಬೀಜಗಳ ಕಷಾಯವು ಕರುಳಿನ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿ.

ಆಧಾರ[ಬದಲಾಯಿಸಿ]

ಅಪೂರ್ವ ವನಸಿರಿ