ಸದಸ್ಯ:Shetty smitha/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ. ಜಯಶ್ರೀ (ಜನನ ೯ ಜೂನ್ ೧೯೫೦) ಒಬ್ಬ ಹಿರಿಯ ಭಾರತೀಯ ರಂಗಭೂಮಿ ನಟಿ, ನಿರ್ದೇಶಕಿ ಮತ್ತು ಗಾಯಕಿ. ಅವರು ಚಲನಚಿತ್ರಗಳು ಮತ್ತು ದೂರದರ್ಶನಗಳಲ್ಲಿ ನಟಿಸಿದ್ದಾರೆ ಮತ್ತು ಚಲನಚಿತ್ರಗಳಲ್ಲಿ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ೧೯೭೬ ರಲ್ಲಿ ಸ್ಥಾಪನೆಯಾದ ಬೆಂಗಳೂರು ಮೂಲದ ಹವ್ಯಾಸಿ ನಾಟಕ ಕಂಪನಿಯಾದ ಸ್ಪಂದಾನಾ ಥಿಯೇಟರಿನ ಸೃಜನಶೀಲ ನಿರ್ದೇಶಕಿ ಇವರು. ೨೦೧೦ರಲ್ಲಿ ಅವರು ರಾಜ್ಯ ಸಂಸತ್ತಿನ ರಾಜ್ಯಸಭೆಯ ಮೇಲ್ಮನೆಗೆ ನಾಮನಿರ್ದೇಶನಗೊಂಡರು.ಅವರಿಗೆ ೨೦೧೩ ರಲ್ಲಿ ಭಾರತ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ನೀಡಲಾಯಿತು.ಅವರ ಅಜ್ಜ ಗುಬ್ಬಿ ವೀರಣ್ಣ ನಟಕ ಕಂಪನಿಯನ್ನು ಸ್ಥಾಪಿಸಿದ ಪ್ರಸಿದ್ಧ ರಂಗ ನಿರ್ದೇಶಕ ಗುಬ್ಬಿ ವೀರಣ್ಣ.

ಆರಂಭಿಕ ಜೀವನ ಮತ್ತು ಹಿನ್ನೆಲೆ:

ಬೆಂಗಳೂರಿನಲ್ಲಿ ಜನಿಸಿದ ಇವರು, ೧೯೭೩ ರಲ್ಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಪದವಿ ಪಡೆದರು.ಅಲ್ಲಿ ಅವರು ಪ್ರಸಿದ್ಧ ನಾಟಕ ನಿರ್ದೇಶಕ ಮತ್ತು ಶಿಕ್ಷಕ ಇಬ್ರಾಹಿಂ ಅಲ್ಕಾಜಿ ಅವರ ಅಡಿಯಲ್ಲಿ ತರಬೇತಿ ಪಡೆದರು.

ವೃತ್ತಿ: ಹಲವು ವರ್ಷಗಳಿಂದ ಅವರು ಬಿ. ವಿ. ಕಾರಂತ್ ಸೇರಿದಂತೆ ಗಮನಾರ್ಹ ರಂಗಭೂಮಿ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದಾರೆ.