ಸದಸ್ಯ:Shekarpoojari/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೪೦೦ ಮೀ ಓಟದ ಸ್ಪರ್ಧೆಯಲ್ಲಿ ಮೊನ್ನೆ ಒಬ್ಬ ಓಟಗಾರ ೪೫.೪೪ ಸೆಕೆಂಡ್ ಗಳಲ್ಲಿ ಕ್ರಮಿಸಿ ೧೬ ನೇ ಓಟಗಾರನಾಗಿ ಫೈನಲ್ಸ್ ಗೆ ಅರ್ಹತೆಗಳಿಸಿದ. ಅವನು ೩೨ ಓಟಗಾರರನ್ನು ಹಿಂದಿಕ್ಕಿ ಓಡಿದ್ದ. ಕೇವಲ ಇಷ್ಟು ವಿಷಯದಿಂದ ಆತನ ಸಾಧನೆ ನಿಮಗೆ ಮನದಟ್ಟಾಗಿರಲಿಕ್ಕಿಲ್ಲ. ಆದರೆ ಇದಷ್ಟನ್ನು ಮಾಡಿದವನಿಗೆ ಎರಡು ಕಾಲುಗಳು ಇಲ್ಲ ಎಂದರೆ ಬಹುಃಶ ನೀವು ನಂಬಲಿಕ್ಕಿಲ್ಲ. ಹೌದು, ಆತನ ಹೆಸರು ಆಸ್ಕರ್ ಪಿಸ್ಟೋರಿಯಸ್, ದಕ್ಷಿಣ ಆಫ್ರಿಕಾದ ಒಲಂಪಿಕ್ಸ್ ತಂಡದ ಓಟಗಾರ. ತನ್ನ ೧೧ ನೇ ವಯಸ್ಸಿನಲ್ಲೆ ಎರಡು ಕಾಲುಗಳನ್ನು ಕಳೆದುಕೊಂಡ್ರು, ಸಾಧಿಸಲು ಬೇಕಾದ ಮನಸ್ಸನ್ನು ಬೆಳೆಸಿಕೊಂಡದ್ದು ನಿಜಕ್ಕೂ ಶ್ಲಾಘನೀಯ. ಆತನ ಸಾಧನೆಗಳು ಅಪಾರ. ಈತನ ಬಗ್ಗೆ ನಿಮಗೆ ಸಾಕಷ್ಟು ವಿಷಯಗಳು ನೆಟ್ ನಲ್ಲಿ ಲಭ್ಯ. ನನಗೆ ಅವುಗಳಲ್ಲಿ ಅತ್ಯ್ಂತ ರೋಚಕ ಎನಿಸಿದ್ದು, ಆತ ಸಾಮನ್ಯ ಕಾಯವುಳ್ಳವರ ಓಲಂಪಿಕ್ಸ್ ನಲ್ಲಿ ಭಾಗವಹಿಸಿದ್ದು. ಏಕೆಂದರೆ, ಮೊದಲು ತನ್ನ ಸಾಮರ್ಥ್ಯವನ್ನು ತಾನು ನಂಬಬೇಕು, ನಂತರ ತನ್ನ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಎಲ್ಲರನ್ನು ಮೀರಿ ನಿಲ್ಲಬೇಕು, ನಂತರ ಈತನ ಸಾಮರ್ಥ್ಯವನ್ನು ನಂಬಿ ದೇಶವನ್ನು ಪ್ರತಿನಿಧಿಸಲು ಅವಕಾಶ ಪಡೆಯಬೇಕು. ಇವೆಲ್ಲವನ್ನು ಸಾಧಿಸಿದ ಇವನ ಹಾದಿ ಸುಗಮವಾಗೆನು ಇರಲ್ಲಿಲ್ಲ. ಇವನ ಲೋಹದ ಕಾಲಿನಿಂದ ಅನಾವಶ್ಯಕ ಉಪಯೋಗವಿದೆಯೆಂದು ನಂಬಿದ ಅಂತರಾಷ್ಟ್ರೀಯ ಓಟಗಾರರ ಸಂಘ ಈತನನ್ನು ಸ್ಪರ್ಧೆಯಿಂದ ರದ್ದುಗೊಳಿಸಿತು. ಈತ ನ್ಯಾಯಲಯದ ಮೊರೆಹೊಕ್ಕು, ತೀರ್ಪು ತನ್ನ ಪರವಾಗಿ ಬಂದ ನಂತರವಷ್ಟೆ ಈತನಿಗೆ ತನ್ನ ಓಲಂಪಿಕ್ಸ್ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾದದ್ದು. ಈತನ ಈ ಸಾಧನೆ ನಮ್ಮೆಲರಿಗು ಒಂದು ಆದರ್ಶ ಎಂದರೆ ಅತಿಶಯೋಕ್ತಿಯೆನಲ್ಲ ಅಲ್ಲವೆ...

ಪ್ರೇಮಿಗಳ ದಿನವೇ ಪ್ರೇಯಸಿ ಮೇಲೆ ಗುಂಡಿನ ಸುರಿಮಳೆಗರೆದು ಕೊಂದ ವಿಶ್ವ ಖ್ಯಾತ 'ಬ್ಲೇಡ್ ರನ್ನರ್' ದಕ್ಷಿಣ ಆಫ್ರಿಕಾದ ಆಸ್ಕರ್ ಪಿಸ್ಟೋರಿಯಸ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ದಾಳಿಕೋರರೆಂದು ತಪ್ಪಾಗಿ ಗ್ರಹಿಸಿದ ಗುಂಡು ಹಾರಿಸಿದ್ದಾಗಿ ಈ ಪ್ಯಾರಾಲಿಂಪಿಯನ್ ಹೇಳಿದ್ದರೂ, ಪೊಲೀಸರು ಕೊಲೆ ಹಾಗೂ ಸಂಚಿನ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನಾಲ್ಕು ಸುತ್ತು ಗುಂಡು ಹಾರಿಸಿದ ಘಟನೆಯು ಬೆಳಗಿನಜಾವ ನಾಲ್ಕು ಗಂಟೆಗೆ ನಡೆದಿದೆ. ದಕ್ಷಿಣ ಆಫ್ರಿಕಾದ ರಾಜಧಾನಿಯಲ್ಲಿರುವ ಪಿಸ್ಟೋರಿಯಸ್ ನಿವಾಸದಲ್ಲಿಯೇ ಅವರ ಆಪ್ತ ಗೆಳತಿಯೆಂದು ಗುರುತಿಸಿಕೊಂಡಿದ್ದ ರೂಪದರ್ಶಿ ರೀವಾ ಸ್ಟೀನ್‌ಕ್ಯಾಂಪ್ ದೇಹವು ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.

30 ವರ್ಷದ ಮಹಿಳೆಯನ್ನು ಗುಂಡಿಕ್ಕಿ ಕೊಂದ ಕಾರಣ 26 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ, ಎಂದು ಪೊಲೀಸ್ ವಕ್ತಾರ ಕಾಟ್ಲೆಗೋ ಮೊಗಾಲಿ ಅವರು ಯಾವುದೇ ಹೆಸರನ್ನು ಉಲ್ಲೇಖಿಸದೇ ಪ್ರಕಟಣೆ ನೀಡಿದ್ದಾರೆ. ಕೊಲೆ ಮಾಡಿರುವುದು ಪಿಸ್ಟೋರಿಯಸ್ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆನಂತರವೇ ಆರೋಪಿಯ ಹೆಸರು ಬಹಿರಂಗಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಮಹಿಳೆಯ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಾವನ್ನಪ್ಪಿದ ಸ್ತ್ರೀ ಆರೋಪಿಯ ಪ್ರೇಯಸಿ ಎಂದು ತಿಳಿದುಬಂದಿದೆ, ಎಂದು ಮಾತ್ರ ವೊಗಾಲಿ ತಿಳಿಸಿದ್ದಾರೆ. ಪ್ರೆಟೋರಿಯಾದ ಹೊರವಲಯದಲ್ಲಿರುವ ಸಿಲ್ವರ್‌ಲೇಕ್ ವಸತಿ ಸಮುಚ್ಛಯದಲ್ಲಿನ ಪಿಸ್ಟೋರಿಯಸ್ ನಿವಾಸದಲ್ಲಿಯೇ ಕೊಲೆ ನಡೆದಿದ್ದು ಖಚಿತವಾಗಿದೆ.

ಲಂಡನ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಸ್ಕರ್ ಪಿಸ್ಟೋರಿಯಸ್ ಅವರು 4==400 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ಅಲ್ಲದೆ ಸಾಮಾನ್ಯರೊಂದಿಗೂ ಒಲಿಂಪಿಕ್ಸ್‌ನಲ್ಲ ಸ್ಪರ್ಧಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸಾಮಾನ್ಯರೊಂದಿಗೆ ಸ್ಪರ್ಧಿಸುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಅಂಗವಿಕಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಿಸ್ಟೋರಿಯಸ್ ಪಾತ್ರವಾಗಿದ್ದರು. ಕಳೆದ ವರ್ಷ 'ಟೈಮ್' ಮ್ಯಾಗಜಿನ್‌ನಲ್ಲಿ ಜಗತ್ತಿನ 100 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರೆಂದು ಇವರನ್ನು ಬಣ್ಣಿಸಲಾಗಿತ್ತು.

ಕೊಲೆಯಾದ ರೀವಾ ಸ್ಟೀನ್‌ಕ್ಯಾಂಪ್ ಅವರು ದಕ್ಷಿಣ ಆಫ್ರಿಕಾದ ಖ್ಯಾತ ರೂಪದರ್ಶಿ. ಕಳೆದ ಕೆಲವು ತಿಂಗಳಿಂದ ರೀವಾ ಹಾಗೂ ಪಿಸ್ಟೋರಿಯಸ್ ಒಟ್ಟಿಗೇ ಓಡಾಡಿಕೊಂಡಿದ್ದರು. ---

ಅಚ್ಚರಿಯ ಸಾವು ಪ್ರೇಮಿಗಳ ದಿನಕ್ಕೆ ಮುನ್ನ ರೀವಾ ಸ್ಟೀನ್‌ಕ್ಯಾಂಪ್ ಅವರು ಟ್ವೀಟರ್‌ನಲ್ಲಿ ನಾಳೆಯ ಪ್ರೇಮಿಗಳ ದಿನಕ್ಕೆ ಏನಾದರೂ ಅಚ್ಚರಿ ಇದೆಯೇ?, ಎಂದು ಕೇಳಿಕೊಂಡಿದ್ದರು. ಪ್ರೇಮಿಗಳ ದಿನದಂದು ಬೆಳಿಗ್ಗೆ ನಾಲ್ಕು ಗಂಟೆಗೆ ಪಿಸ್ಟೋರಿಯಸ್‌ಗೆ ಅಚ್ಚರಿ ನೀಡಬೇಕೆಂದು ಅವರ ಮನೆಗೆ ಆಗಮಿಸಿದ್ದರು. ಆದರೆ ಯಾರೋ ಆಗಂತುಕರು ಇರಬೇಕೆಂದು ತಿಳಿದ ಬ್ಲೇಡ್ ರನ್ನರ್ ಗುಂಡಿನ ಮಳೆಗರೆದರು ಎನ್ನಲಾಗಿದೆ. ---