ಸದಸ್ಯ:Sheethal Dechamma U N/ನನ್ನ ಪ್ರಯೋಗಪುಟ
ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಲ್ಪಡುವ ಪ್ರಾಕೃತಿಕ ಸೌಂದರ್ಯದ ರಮ್ಯತಾಣವಾದ ಪವಿತ್ರ ಕೊಡಗಿನಲ್ಲಿ ನಾನು ನನ್ನ ಮಾತಾ ಪಿತೃಗಳ ದ್ವಿತೀಯ ಪುತ್ರಿಯಾಗಿ ಜನಿಸಿರುತ್ತೇನೆ. ನನಗೆ ಒಬ್ಬಳು ಸಹೋದರಿ ಹಾಗೂ ಒಬ್ಬ ಸಹೋದರನಿದ್ದಾನೆ. ನನ್ನ ಬಾಲ್ಯದ ದಿನಗಳು ತುಂಬಾ ಸುಂದರ ಹಾಗೂ ಚಿರಸ್ಮರಣೀಯವಾಗಿತ್ತು.
ನಾನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು "ಗುಡ್ ಶಫರ್ಡ್" ಕಾನ್ವೆಂಟ್ ನಲ್ಲಿ ಪಡೆದೆನು. ಇದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಎಂಬ ಗ್ರಾಮದಲ್ಲಿದೆ. ಸುಂದರ ಪರಿಸರದ ನಡುವೆ ಇರುವ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಸ್ತು ಬಧ್ಧತೆಯಿಂದ ನಡೆದುಕೊಳ್ಳುವುದನ್ನು ನಾನು ನನ್ನ ಶಾಲಾ ದಿನಗಳಲ್ಲಿ ಮೈಗೂಡಿಸಿಕೊಂಡೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಶಾಲೆಯಲ್ಲಿ ಆದ್ಯತೆ ನೀಡಲಾಗುತ್ತಿತ್ತು. ನಾನು ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದೆ. ನಾನು ನೃತ್ಯ ಹಾಗೂ ಕರಾಟೆ ತರಬೇತಿಯನ್ನು ಪಡೆದಿರುತ್ತೇನೆ. ಒಂಭತ್ತನೇ ತರಗತಿಯಲ್ಲಿದ್ದಾಗ ಕರಾಟೆಯಲ್ಲಿ "ಬ್ಲ್ಯಾಕ್ ಬೆಲ್ಟ್" ದರ್ಜೆಯನ್ನು ತಲುಪಿದ್ದೇನೆ. ನಾನು ಏಳನೇ ತರಗತಿಯಲ್ಲಿದ್ದಾಗ ಶಾಲಾ ಉಪನಾಯಕಿಯಾಗಿಯೂ,ಒಂಭತ್ತನೇ ತರಗತಿಯಲ್ಲಿದ್ದಾಗ ಶಾಲಾ ನಾಯಕಿಯಾಗಿಯೂ ಜವಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಿರುತ್ತೇನೆ. ನಾಯಕಿಯಾಗಿ ನನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನನ್ನ ಗೆಳತಿಯರು, ಶಿಕ್ಷಕ ವೃಂದದವರು ಹಾಗೂ ನನ್ನ ಪೋಷಕರು ಸಹಕರಿಸುತ್ತಿದ್ದರು.
ನಮ್ಮ ಶಾಲೆಯಲ್ಲಿ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಒಬ್ಬವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕಲಿಕೆಯೊಂದೇ ಸಾಲದು, ಕ್ರೀಡೆಯೂ ಅತ್ಯವಶ್ಯಕ. ಹಾಗಾಗಿ ನಾನು ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದೆ. ಶಾಲಾ ಶೈಕ್ಷಣಿಕ ಪ್ರವಾಸದ ದಿನಗಳಂತೂ ಜೀವನದಲ್ಲಿ ಮರೆಯಲಾಗದಂತಹ ಕ್ಷಣಗಳು. ಸಹಪಾಠಿಗಳು ಹಾಗೂ ಶಿಕ್ಷಕ ಶಿಕ್ಷಕಿಯರೊಂದಿಗೆ ಸಂಭ್ರಮಿಸಿದ ಆ ಪ್ರವಾಸದ ದಿನಗಳು ಜೀವನದಲ್ಲಿ ಮತ್ತೆ ಮರುಕಳಿಸಲಾರವು. ಅದೊಂದು ಅದ್ಭುತ , ಅವಿಸ್ಮರಣೀಯ ಅನುಭವ.
ಹತ್ತನೇಯ ತರಗತಿಗೆ ಕಾಲಿಟ್ಟಾಗ ಹೆಚ್ಚಿನ ಜವಬ್ಧಾರಿ,ಭಯ,ಆತಂಕ. ಏಕೆಂದರೆ ಅದು ಶಾಲಾ ಜೀವನದ ಅಂತಿಮ ಘಟ್ಟ. ಮುಂದೆಂದೂ ಅನುಭವಿಸಲಾಗದಂತಹ ಒದು ಸುಂದರ ಪಯಣದ ಅವಧಿ. ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುವ ಹಂತ . ಈ ಎಲ್ಲಾ ಕಾರಣಗಳಿಂದ ಓದಿನ ಕಡೆ ಹೆಚ್ಚಿನ ಆಸಕ್ತಿ ಇತ್ತು. ಒಳ್ಳೆಯ ಕಾಲೇಜಿನಲ್ಲಿ ಸೀಟು ಪಡೆಯಬೇಕೆಂಬ ಆಸೆಯಿಂದ ಶೇಕಡ ತೊಂಭತ್ತಕ್ಕಿಂತ ಹೆಚ್ಚು ಅಂಕ ಪಡೆಯುವ ಗುರಿ ಇಟ್ಟುಕೊಂಡಿದ್ದೆ. ಫಲಿತಾಂಶ ಹೊರಬಂದಾಗ ತುಂಬಾ ಸಂತೋಷವಾಯಿತು. ನಿರೀಕ್ಷೇಗಿಂತಲೂ ಹೆಚ್ಚು ಅಂಕಗಳನ್ನು ಪಡೆದಿದ್ದೆ .
ಪದವಿ ಪೂರ್ವ ಶಿಕ್ಷಣವನ್ನು ಗೋಣಿಕೊಪ್ಪಲಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಪಡೆದುಕೊಂಡೆ. ಹತ್ತು ವರ್ಷಗಳ ಕಾಲ ಗುಡ್ ಶಫರ್ಡ್ ಶಾಲೆಯಲ್ಲಿದ್ದು, ಹೊಸ ಕಾಲೇಜಿಗೆ ಸೇರಿದಾಗ, ಅಲ್ಲಿನ ನೀತಿ ನಿಯಮಗಳಿಗೆ, ಹೊಂದಿಕೊಳ್ಳಲು ಕೆಲವು ಸಮಯ ಬೇಕಾಯಿತು. ಅಲ್ಲಿಯೂ ನನಗೆ ಒಳ್ಳೆಯ ಬೋಧಕ ವರ್ಗ, ಉತ್ತಮ ಮಾರ್ಗದರ್ಶನ ಲಭಿಸಿತು. ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು. ಕಾಲೇಜಿನ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನಲ್ಲೂ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದರು. ನಾನೂ ಪ್ರವಾಸದಲ್ಲಿ ಭಾಗಿಯಾಗಿದ್ದೆ. ನಮ್ಮನ್ನು ಉತ್ತರ ಭಾರತದ ಕುಲು, ಮನಾಲಿ ಎಂಬ ಪ್ರವಾಸಿತಾಣಕ್ಕೆ ಕರೆದುಕೊಂಡು ಹೋಗಿದ್ದರು. ಅದೊಂದು ಸುಂದರ ಕನಸಿನ ಲೋಕವೇ ಆಗಿತ್ತು. ಅಲ್ಲಿ ನನ್ನ ಜೀವನದಲ್ಲಿ ಮರೆಯಲಾಗದಂತಹ ಘಟನೆಯೊಂದು ನಡೆಯಿತು. ನಾನು ಮತ್ತು ನನ್ನ ಗೆಳತಿಯರೆಲ್ಲರೂ ಮಂಜುಗಡ್ಡೆಯ ಮೇಲೆ ಕುಳಿತುಕೊಂಡು ಅತ್ತಿಂದಿತ್ತ ಮಂಜುಗಡ್ಡೆಯನ್ನು ಎಸೆಯತ್ತಾ ಆಟ ಆಡುತ್ತಿದ್ದೆವು. ಕೆಲಹೊತ್ತಿನಲ್ಲಿ ನನ್ನ ಕೈಕಾಲುಗಳೆಲ್ಲ ಸ್ವಾಧೀನ ಕಳೆದುಕೊಂಡು ಮಂಜುಗಡ್ಡೆಯಂತಾಯಿತು. ಹೇಳಿಕೊಳ್ಳಲೂ, ಕೂಗಿಕೊಳ್ಳಲೂ ಆಗದೆ ಬಾಯಿಯಿಂದ ಮಾತೇ ಹೊರಡದಂತಹ ಸ್ಥಿತಿಗೆ ತಲುಪಿದೆ. ಪ್ರಾಯಶಃ ಅರ್ಧ ದೇಹವೇ ಮಂಜುಗಡ್ಡೆಯಂತಾಗಿ ಸಂಪೂರ್ಣ ನಿತ್ರಾಣಳಾಗಿದ್ದೆ. ಆಟ ಆಡುವ ಭರದಲ್ಲಿ ಯಾರೂ ನನ್ನನ್ನು ಗಮನಿಸಿರಲಿಲ್ಲ. ಅದೃಷ್ಟವಶಾತ್ ನನ್ನ ಪುಣ್ಯವೋ ಅಥವಾ ನನ್ನ ತಂದೆ ತಾಯಿಗಳ ಭಾಗ್ಯವೋ, ನಮ್ಮ ಉಪನ್ಯಾಸಕರೊಬ್ಬರು ನನ್ನನ್ನು ಗಮನಿಸಿ ದೇವರಂತೆ ಬಂದು ನನ್ನನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ ನನ್ನ ಜೀವ ಉಳಿಸಿದರು. ವೈದ್ಯರ ಪ್ರಕಾರ , ಆಸ್ಪತ್ರೆ ಸೇರುವುದು ಅರ್ಧ ಗಂಟೆ ತಡವಾಗಿದ್ದರೆ ನಾನು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಇತ್ತು. ನನ್ನ ಜೀವ ಉಳಿಸಿದ ಭೌತಶಾಸ್ತ್ರದ ಆ ಉಪನ್ಯಾಸಕರಿಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ.
ದ್ವಿತೀಯ ಪಿ.ಯು.ಸಿ ಆದ ನಂತರ ಒಂದು ಪ್ರತಿಷ್ಟಿತ ಕಾಲೇಜಿಗೆ ಸೇರಬೇಕೆಂಬ ಆಸೆ ನನಗೂ ನನ್ನ ಪೋಷಕರಿಗೂ ಇತ್ತು. ಹಾಗಾಗಿ "ಕ್ರೈಸ್ಟ್ ಯೂನಿವರ್ಸಿಟಿ"ಗೆ ನನ್ನನ್ನು ಸೇರಿಸಿದರು . ಮೊದಲ ಬಾರಿಗೆ ತಂದೆ ತಾಯಿಗಳಿಂದ ದೂರ ಇರುವ ಪ್ರಸಂಗ ಬಂತು . ಆದರೂ ಇದೇ ಕಾಲೇಜಿನಲ್ಲಿ ಓದು ಮುಂದುವರಿಸಬೇಕೆಂಬ ಆಸೆ.
ನನಗೆ ಡ್ರಾಯಿಂಗ್, ಪೈಂಟಿಂಗ್ ಮತ್ತು ಪುಸ್ತಕ ಓದುವ ಹವ್ಯಾಸಗಳಿವೆ. ಚೇತನ್ ಭಗತ್ ರವರ ಪುಸ್ತಕಗಳೆಂದರೆ ನನಗೆ ಇಷ್ಟ. ಬಿಡುವಿನ ವೇಳೆಯಲ್ಲಿ ಸಂಗೀತ ಕೇಳುವ ಅಭ್ಯಾಸವೂ ಇದೆ.