ಸದಸ್ಯ:Shashank aithal kadri

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                           ಆಪ್ಟಿಕಲ್‌ ಫೈಬರ್ (ದ್ಯುತಿ ಎಳೆಗಳು)

ಆಪ್ಟಿಕಲ್‌ ಫೈಬರ್ (ದ್ಯುತಿ ಎಳೆಗಳು) ಎನ್ನುವುದು ಗಾಜಿನ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ, ತನ್ನ ಉದ್ದಕ್ಕೂ ಬೆಳಕನ್ನು ಒಯ್ಯಬಲ್ಲ ಒಂದು ತಂತು. ಫೈಬರ್ ಆಪ್ಟಿಕ್ಸ್‌ ಎನ್ನುವುದು ಆಪ್ಟಿಕಲ್‌ ಫೈಬರ್‌ಗಳ ವಿನ್ಯಾಸ ಮತ್ತು ಉಪಯೋಗಗಳಿಗೆ ಸಂಬಂಧಿಸಿದ ಅನ್ವಯಿತ ವಿಜ್ಞಾನ ಮತ್ತು ಇಂಜಿನಿಯರಿಂಗ್‌ನ ವಿಸ್ತರಣೆ. ಆಪ್ಟಿಕಲ್‌ ಫೈಬರ್‌ಗಳನ್ನು ಫೈಬರ್‌-ಆಪ್ಟಿಕ್‌ ಸಂವಹನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಇತರ ಸಂವಹನ ವಿಧಾನಗಳಿಗೆ ಹೋಲಿಸಿದಾಗ ಹೆಚ್ಚು ದೂರದವರೆಗೂ ಮತ್ತು ಹೆಚ್ಚಿನ ಬ್ಯಾಂಡ್‌ವಿಡ್ತ್‌ಗಳಲ್ಲಿಯೂ (ಡೇಟಾ ಪ್ರಸಾರದ ವೇಗ) ಪ್ರಸಾರ ಮಾಡಲು ಅವಕಾಶ ಕೊಡುತ್ತದೆ. ಲೋಹದ ಬದಲಿಗೆ ಫೈಬರ್‌ಅನ್ನು ಬಳಸಲಾಗುತ್ತದೆ ಏಕೆಂದರೆ ಇವುಗಳಲ್ಲಿ ಸಿಗ್ನಲ್‌ಗಳು ಚಲಿಸುವಾಗ ಕಡಿಮೆ ವ್ಯಯವಾಗುತ್ತದೆ, ಮತ್ತು ಅವುಗಳು ವಿದ್ಯುದಯಸ್ಕಾಂತೀಯ ಹಸ್ತಕ್ಷೇಪವನ್ನು ನಿರೋಧಿಸುವ ಶಕ್ತಿಯನ್ನು ಹೊಂದಿರುತ್ತವೆ. ಬೆಳಕಿನ ಅಲಂಕಾರಕ್ಕೂ ಸಹ ಫೈಬರ್‌ಗಳನ್ನು ಬಳಸಲಾಗುತ್ತದೆ, ಮತ್ತು ಚಿತ್ರಗಳನ್ನು ರವಾನಿಸಲು ಸಾಧ್ಯವಾಗುವಂತೆ ಕಟ್ಟುಗಳಲ್ಲಿಯೂ ಸುತ್ತಿಡಲಾಗುತ್ತದೆ, ಇದರಿಂದ ಒತ್ತಾದ ಕ್ಷೇತ್ರದಲ್ಲಿ ಕೂಡ ವೀಕ್ಷಣೆ ಸಾಧ್ಯವಾಗುತ್ತದೆ. ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಫೈಬರ್‌ಗಳನ್ನು ಸಂವೇದಕಗಳು ಮತ್ತು ಫೈಬರ್‌ ಲೇಸರ್‌ಗಳು ಒಳಗೊಂಡಂತೆ ಇನ್ನೂ ಅನೇಕ ಬೇರೆ ಬೇರೆ ಉಪಯೋಗಗಳಿಗಾಗಿ ಬಳಸಲಾಗುತ್ತದೆ. ಬೆಳಕನ್ನು ಸಂಪೂರ್ಣ ಆಂತರಿಕ ಪ್ರತಿಬಿಂಬದ ಸಹಾಯದಿಂದ ಆಪ್ಟಿಕಲ್‌ ಫೈಬರ್‌ನ ಅತ್ಯಂತ ಒಳಗಿನ ಪದರದಲ್ಲಿ ಇಡಲಾಗುತ್ತದೆ. ಇದು ಫೈಬರ್‌ ವೇವ್‌ಗೈಡ್‌‌ನಂತೆ ಕೆಲಸ ಮಾಡಲು ಕಾರಣವಾಗುತ್ತದೆ. ಹಲವು ಪ್ರಸಾರ-ಪಥಗಳನ್ನು ಅಥವಾ ಹಾಯ್ದುಹೋಗುವ ಮಾರ್ಗಗಳಿಗೆ ಆಧಾರ ಒದಗಿಸುವ ಫೈಬರ್‌ಗಳನ್ನು ಬಹು-ಮಾರ್ಗ ಫೈಬರ್‌ಗಳು ಎಂದು ಕರೆಯುತ್ತಾರೆ, ಹಾಗೂ ಒಂದೇ ಒಂದು ಮಾರ್ಗಕ್ಕೆ ಆಧಾರ ಒದಗಿಸುವ ಫೈಬರ್‌ಗಳನ್ನು ಏಕ-ಮಾರ್ಗ ಫೈಬರ್‌ಗಳೆಂದು ಕರೆಯುತ್ತಾರೆ. ಬಹು-ಮಾರ್ಗ ಫೈಬರ್‌ಗಳ ಅತ್ಯಂತ ಒಳಗಿನ ಪದರವು ಸಾಮಾನ್ಯವಾಗಿ ದೊಡ್ಡ ವ್ಯಾಸವನ್ನು ಹೊಂದಿರುತ್ತದೆ, ಮತ್ತು ಇವುಗಳನ್ನು ಕಡಿಮೆ ದೂರದ ಸಂವಹನ ಸಂಪರ್ಕಗಳಿಗೆ ಮತ್ತು ಅಧಿಕ-ವಿದ್ಯುಚ್ಛಕ್ತಿಯನ್ನು ರವಾನಿಸಬೇಕಾದಾಗ ಬಳಸಲಾಗುತ್ತದೆ. ಏಕ-ಮಾರ್ಗ ಫೈಬರ್‌ಗಳನ್ನು 550 meters (1,800 ft)ಗಿಂತ ಹೆಚ್ಚಿನ ಉದ್ದದ ಎಲ್ಲಾ ಸಂವಹನ ಸಂಪರ್ಕಗಳಲ್ಲಿ ಬಳಸಲಾಗುತ್ತದೆ. ಆಪ್ಟಿಕಲ್‍‌ ಫೈಬರ್‌ನ ಕೊನೆಗಳನ್ನು ಜೋಡಿಸುವ ಕೆಲಸ ವಿದ್ಯುತ್‌ ತಂತಿ ಅಥವಾ ಕೇಬಲ್‌ಗಳನ್ನು ಜೋಡಿಸುವ ಕೆಲಸಕಿಂತ ಹೆಚ್ಚು ಸಂಕೀರ್ಣ. ಫೈಬರ್‌ನ ತುದಿಗಳನ್ನು ಜಾಗ್ರತೆಯಿಂದ ಸೀಳಬೇಕು, ಆಮೇಲೆ ಯಾಂತ್ರಿಕವಾಗಿ ಇಲ್ಲವೇ ವಿದ್ಯುತ್‌ ಆರ್ಕ್‌ನ ಸಹಾಯದಿಂದ ಅವುಗಳನ್ನು ಬೆಸುಗೆ ಹಾಕಿ ಸೇರಿಸಬೇಕು. ಬಿಚ್ಚಬಹುದಾದ ಸಂಪರ್ಕಗಳನ್ನು ಮಾಡಲು ವಿಶಿಷ್ಟ ಕನೆಕ್ಟರ್‌ಗಳನ್ನು ಬಳಸಲಾಗುತ್ತದೆ.

ಆಪ್ಟಿಕಲ್‌ ಫೈಬರ್‌ಅನ್ನು ದೂರಸಂವಹನ ಮತ್ತು ನೆಟ್‌ವರ್ಕ್‌ಮಾಡಲು ಮಾಧ್ಯಮವಾಗಿ ಬಳಸಬಹುದು ಏಕೆಂದರೆ ಅವು ಮೃದುವಾಗಿರುತ್ತದೆ ಮತ್ತು ಕೇಬಲ್‌ಗಳಂತೆ      ಕಟ್ಟುಗಳನ್ನು ಕಟ್ಟಬಹುದು. ಇದು ವಿಶೇಷವಾಗಿ ಅಧಿಕ-ಅಂತರದ ಸಂವಹನಗಳಿಗೆ ಪ್ರಯೋಜನಕಾರಿ, ಏಕೆಂದರೆ ವಿದ್ಯುತ್‌ ಕೇಬಲ್‌ಗಳಿಗೆ ಹೋಲಿಸಿದಾಗ ಅತಿ ಕಡಿಮೆ ಅಟೆನ್ಯೂಯೇಷನ್‌ನಲ್ಲಿ ಫೈಬರ್‌ನ ಮೂಲಕ ಬೆಳಕು ಹಾಯುತ್ತದೆ. ಇದು ದೂರದ ಅಂತರಗಳನ್ನೂ ಕಡಿಮೆ ಪುನರಾವರ್ತನೆಗಳಲ್ಲಿ ತಲುಪಲು ಸಾಧ್ಯಮಾಡುತ್ತದೆ. ಜೊತೆಗೇ , ಬಳಸುತ್ತಿರುವ ವ್ಯವಸ್ಥೆಗಳಲ್ಲಿ 10 ಅಥವಾ 40 ಜಿಬಿ/ಸೆ ಸಾಮಾನ್ಯವಾದರೂ[೧೪][೧೫] ಎನ್‌ಟಿಟಿಯು ಒಂದು ಚಾನಲ್‌ನಲ್ಲಿ ಪ್ರವಹಿಸುವ ಬೆಳಕಿನ ಸಿಗ್ನಲ್‌ಗಳನ್ನು ಪ್ರತಿಸೆಕೆಂಡಿಗೆ 111 ಗಿಗಾಬಿಟ್ಸ್‌ನಷ್ಟು ಹೆಚ್ಚು ಮಾಡಿದೆ[೧೬]. ಪ್ರತಿಯೊಂದು ಫೈಬರ್‌ ಹಲವಾರು ಸ್ವತಂತ್ರ ಚಾನಲ್‌ಗಳನ್ನು ಒಯ್ಯಬಹುದು, ಒಂದೊಂದು ಚಾನಲ್‌ ಬೆಳಕಿನ ಬೇರೆ ಬೇರೆ ತರಂಗಾಂತರವನ್ನು ಬಳಸುತ್ತದೆ (ವೇವ್‌ಲೆಂತ್‌-ಡಿವಿಶನ್‌ ಮಲ್ಟಿಪ್ಲೆಕ್ಸಿಂಗ್‌(WDM)). ಪ್ರತಿ ಫೈಬರ್‌ನ ನಿವ್ವಳ ಡೇಟಾ ಸಾಮರ್ಥ್ಯವೆಂದರೆ - (ಓವರ್‌ಹೆಡ್‌ ಬೈಟ್ಸ್‌ಗಳನ್ನು ಕಳೆದ ಡೇಟಾ ಸಾಮರ್ಥ್ಯ) ಎಫ್‌ಇಸಿ(FEC) ಓವರ್‌ಹೆಡ್‌ಅನ್ನು ಕಳೆದ ಪ್ರತಿ-ಚಾನಲ್‌ ಡೇಟಾ ಸಾಮರ್ಥ್ಯವನ್ನು ಚಾನಲ್‌ಗಳ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತ, (ಸಾಮಾನ್ಯವಾಗಿ ಮಾರಾಟವಾಗುವ ಡೆನ್ಸ್‌ ವೇವ್‌ಲೆಂತ್‌-ಡಿವಿಶನ್‌ ಮಲ್ಟಿಪ್ಲೆಕ್ಸಿಂಗ್‌ ವ್ಯವಸ್ಥೆಗಳಲ್ಲಿas of 2008 ಎಂಭತ್ತರವರೆಗೂ ಇರುತ್ತದೆ). ಸದ್ಯದ ಡೇಟಾ ಸಾಮರ್ಥ್ಯದ ದಾಖಲೆಯೆಂದರೆ, ವಿಲ್ಲಾರ್‌ಕ್ಯೂಕ್ಸ್‌, ಫ್ರಾನ್ಸ್‌ನ ಬೆಲ್‌ ಲ್ಯಾಬ್ಸ್‌ ಹೊಂದಿರುವ ದಾಖಲೆ. ಇದು 155 ಚಾನಲ್‌ಗಳನ್ನು ಮಲ್ಟಿಪ್ಲೆಕ್ಸಿಂಗ್‌ ಮಾಡಿದೆ, ಪ್ರತಿಯೊಂದು ಚಾನಲ್‌ 7000 ಕಿಮೀಗೂ ಅಧಿಕ ಫೈಬರ್‌ನುದ್ದ 100 ಜಿಬಿ/ಸೆ ಡೇಟಾವನ್ನು ಒಯ್ಯಬಹುದು.[೧೭] ಕಡಿಮೆ ಅಂತರದ ಉಪಯೋಗಗಳಿಗೆ, ಉದಾಹರಣೆಗೆ ಒಂದು ಕಚೇರಿಯ ಕಟ್ಟಡದ ಒಳಗೇ ನೆಟ್‌ವರ್ಕ್‌ ಮಾಡಿಕೊಳ್ಳುವಾಗ, ಕೇಬಲ್‌ ಡಕ್ಟ್‌ಗಳಲ್ಲಿ ಜಾಗವನ್ನು ಉಳಿಸಲು ಫೈಬರ್‌-ಆಪ್ಟಿಕ್‌ ಕೇಬಲ್‌ಗಳನ್ನು ಬಳಸಬಹುದು. ಇದೇಕೆಂದರೆ, ಒಂದು ಫೈಬರ್‌ ಹಲವಾರು ವಿದ್ಯುತ್‌ ಕೇಬಲ್‌ಗಳಿಗಿಂತ ಹೆಚ್ಚು ಡೇಟಾವನ್ನು ಒಯ್ಯಬಹುದು, ಉದಾಹರಣೆಗೆ 4ರ ಜೋಡಿಯ ಕ್ಯಾಟ್‌-5 ಎದರ್‌ನೆಟ್‌ ಕೇಬಲ್‌ ವ್ಯವಸ್ಥೆ.[vague] ಫೈಬರ್‌ಗೆ ವಿದ್ಯುತ್‌ ಹಸ್ತಕ್ಷೇಪವನ್ನು ನಿರೋಧಿಸುವ ಶಕ್ತಿಯೂ ಇದೆ; ಬೇರೆ ಬೇರೆ ಕೇಬಲ್‌ಗಳ ಸಿಗ್ನಲ್‌ಗಳ ನಡುವೆ ಸಂವಾದವಿಲ್ಲ ಮತ್ತು ವಾತಾವರಣದ ಶಬ್ದಗಳನ್ನು ಸೆಳೆದುಕೊಳ್ಳುವುದಿಲ್ಲ. ನಿಶ್ಶಸ್ತ್ರ ಫೈಬರ್‌ ಕೇಬಲ್‌ಗಳು ವಿದ್ಯುತ್‌ವಾಹಕಗಳಾಗಿರುವುದಿಲ್ಲ, ಇದರಿಂದ ಅಧಿಕ ವೋಲ್ಟೇಜ್‌ ಪರಿಸರಗಳಲ್ಲಿರುವ, ಮಿಂಚಿನ ಹೊಡೆತಕ್ಕೆ ಹಾಳಾಗಬಹುದಾದ ವಿದ್ಯುದಾಗಾರ ವ್ಯವಸ್ಥೆಗಳು, ಅಥವಾ ಲೋಹದ ಸಂವಹನ ರಚನೆಗಳಲ್ಲಿರುವ ಸಂವಹನ ಪರಿಕರಗಳನ್ನು ರಕ್ಷಿಸಲು ಫೈಬರ್ ಒಳ್ಳೆಯ ಪರಿಹಾರ. ಸ್ಫೋಟಕಗಳು ಇರುವಂತಹ ಪರಿಸರಗಳಲ್ಲಿಯೂ ಬೆಂಕಿ ಹತ್ತಿಕೊಳ್ಳುವ ಹೆದರಿಕೆಯಿಲ್ಲದೆ ಇದನ್ನು ಬಳಸಬಹುದು. ವೈರ್‌ಟ್ಯಾಪಿಂಗ್‌ ಇದರಲ್ಲಿ ವಿದ್ಯುತ್‌ ಸಂಪರ್ಕಗಳಿಗಿಂತ ಹೆಚ್ಚು ಕಷ್ಟ, ಮತ್ತು ಟ್ಯಾಪ್‌-ಪ್ರೂಫ್‌ಆದ ಏಕಕೇಂದ್ರೀಯ ದ್ವಿ-ಪದರಗಳನ್ನೊಳಗೊಂಡ ಫೈಬರ್‌ಗಳೂ ಇವೆಯೆಂದೂ ಹೇಳಲಾಗುತ್ತದೆ.[೧೮] ಫೈಬರ್‌ಗಳನ್ನು ಪಾರದರ್ಶಕ ಪ್ಲ್ಯಾಸ್ಟಿಕ್‌, ಗ್ಲಾಸ್‌, ಅಥವಾ ಎರಡರ ಸಮ್ಮಿಶ್ರಣದಿಂದ ಮಾಡಬಹುದಾದರೂ, ಅಧಿಕ-ಅಂತರದ ದೂರಸಂವಹನ ಉಪಯೋಗಗಳಿಗೆ ಯಾವಾಗಲೂ ಗಾಜಿನ ಫೈಬರ್‌ಗಳನ್ನೇ ಬಳಸಲಾಗುತ್ತದೆ, ಕಡಿಮೆ ಆಪ್ಟಿಕಲ್‌ ಅಟೆನ್ಯೂಯೇಷನ್‌ ಇರುವುದರಿಂದ. ಬಹು-ಮಾರ್ಗ ಮತ್ತು ಏಕ-ಮಾರ್ಗ ಫೈಬರ್‌ ಎರಡನ್ನೂ ಸಂವಹನಗಳಲ್ಲಿ ಬಳಸಲಾಗುತ್ತದೆ, ಬಹು-ಮಾರ್ಗ ಫೈಬರ್‌ಗಳನ್ನು ಹೆಚ್ಚಾಗಿ ಕಡಿಮೆ-ಅಂತರಗಳಿಗೆ, 550 ಮೀ (600 ಗಜ) ಬಳಸಿದರೆ, ಏಕ-ಮಾರ್ಗ ಫೈಬರ್‌ಗಳನ್ನು ಅಧಿಕ-ಅಂತರದ ಸಂಪರ್ಕಗಳಿಗೆ ಬಳಸಲಾಗುತ್ತದೆ. ಬೆಳಕನ್ನು ಏಕ-ಮಾರ್ಗ ಫೈಬರ್‌ಗಳಲ್ಲಿ ಮತ್ತು ಅವುಗಳ ಮಧ್ಯೆ ಸೇರಿಸಲು ಬಿಗಿಯಾದ ಧಾರಣಗಳು ಬೇಕಾಗುವುದರಿಂದ (ಕೋರ್‌ನ ವ್ಯಾಸ ಸುಮಾರು 10 ಮೈಕ್ರೊಮೀಟರ್‌ಗಳು), ಏಕ-ಮಾರ್ಗದ ವಾಹಕಗಳು, ರಿಸೀವರ್‌ಗಳು, ಆಂಪ್ಲಿಫೈಯರ್‌ಗಳು ಮತ್ತು ಇತರ ಭಾಗಗಳು ಬಹು-ಮಾರ್ಗದ ಭಾಗಗಳಿಗಿಂತ ದುಬಾರಿ.